Rohini Sindhuri: ಯೂಟರ್ನ್​ ಹೊಡೆದ ಪ್ರತಾಪ್​ ಸಿಂಹ; ಫೇಸ್​ಬುಕ್​ ಲೈವ್​ನಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪ?

ಮೈಸೂರನ್ನು ಕಟಕಟೆಗೆ ತಂದು ನಿಲ್ಲಿಸಬಾರದು, ಮೈಸೂರು, ಚಾಮರಾಜನಗರ, ಮಂಡ್ಯ ಮಧ್ಯ ಜಗಳವಾಗುತ್ತೆ ಎಂದು ಮೈಸೂರು ಜಿಲ್ಲಾಧಿಕಾರಿ ಅವರನ್ನು ಡಿಫೆಂಡ್ ಮಾಡಿಕೊಂಡಿದ್ದೆ ಎಂದು ಪ್ರತಾಪ್​ ಸಿಂಹ ಇಂದು ಫೇಸ್​ಬುಕ್ ಲೈವ್​​​​ನಲ್ಲಿ ಹೇಳಿಕೊಂಡಿದ್ದಾರೆ.

ರೋಹಿಣಿ ಸಿಂಧೂರಿ-ಪ್ರತಾಪ್​ ಸಿಂಹ

ರೋಹಿಣಿ ಸಿಂಧೂರಿ-ಪ್ರತಾಪ್​ ಸಿಂಹ

  • Share this:
ಚಾಮರಾಜನಗರ ( ಜೂ. 06): ಚಾಮರಾಜನಗರ ಜಿಲ್ಲಾಸ್ಪತ್ರೆಯ  ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ  ಸಿಂಧೂರಿ ವಿರುದ್ದ ಆರೋಪ ಕೇಳಿ ಬಂದಿದ್ದಾಗ ರೋಹಿಣಿ ಸಿಂಧೂರಿ ಪರ ಬ್ಯಾಟಿಂಗ್ ಮಾಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಇದೀಗ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಆ ಮೂಲಕ ಅಂದು ಆಕ್ಸಿಜನ್ ಕೊರತೆಯಾಗಲು  ಯಾರು ಕಾರಣ  ಎಂಬುದನ್ನು  ಫೇಸ್ ಬುಕ್​ ಲೈವ್ ನಲ್ಲಿ ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ.

ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಮಾಡದಂತೆ  ರೋಹಿಣಿ ಸಿಂಧೂರಿ ಮೌಖಿಕ ನಿರ್ದೇಶನ ನೀಡುವ ಮೂಲಕ ಅಡ್ಡಿಪಡಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.  ಅಂದು ಮೈಸೂರು ಜಿಲ್ಲಾಡಳಿದ ಕ್ರಮವನ್ನು ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದರು.

ಈಗ ರೋಹಿಣಿ ಸಿಂಧೂರಿ ವಿರುದ್ದ ತಿರುಗಿಬಿದ್ದಿರುವ ಅವರು ಚಾಮರಾಜನಗರಕ್ಕೆ ಆಕ್ಸಿಜನ್ ಕೊಡದಿರಲು ಮೈಸೂರು ಜಿಲ್ಲಾಧಿಕಾರಿ‌ ರೋಹಿಣಿ ಸಿಂಧೂರಿ ಅವರ ಮೌಖಿಕ ನಿರ್ದೇಶನ ಇತ್ತೆಂಬ ಅರ್ಥದ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:Actress Surekha Passed Away: ಡಾ.ರಾಜ್​​ ಜೊತೆ ನಟಿಸಿದ್ದ ಸ್ಯಾಂಡಲ್​​ವುಡ್​ ಹಿರಿಯ ನಟಿ ಸುರೇಖಾ ಇನ್ನಿಲ್ಲ..!

ಅಂದು  ಏನು ತಪ್ಪಾಗಿದೆ ಎಂಬುದು ನ‌ನಗೆ ಗೊತ್ತಿದೆ. ಆದರೆ  ಕೆಲವು ವಿಚಾರಗಳನ್ನು ಹೇಳುವುದಕ್ಕಾಗಲ್ಲ. ಅಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸಹ ಮೈಸೂರು   ಜಿಲ್ಲಾಧಿಕಾರಿ ವಿರುದ್ಧ ದೂರಿದ್ದರು. ರಾಜ್ಯದಲ್ಲಿ  ನಮ್ಮದೇ ಸರ್ಕಾರ ಆಡಳಿತ ನಡೆಸುತ್ತಿದೆ. ಡಿಸಿ, ಡೀನ್, ಡಿಹೆಚ್ಒ ಎಲ್ಲರೂ ನಮ್ಮ‌ ಸರ್ಕಾರದ ಅಧೀನದಲ್ಲೇ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ಮೈಸೂರನ್ನು ಕಟಕಟೆಗೆ ತಂದು ನಿಲ್ಲಿಸಬಾರದು, ಮೈಸೂರು, ಚಾಮರಾಜನಗರ, ಮಂಡ್ಯ ಮಧ್ಯ ಜಗಳವಾಗುತ್ತೆ ಎಂದು ಮೈಸೂರು ಜಿಲ್ಲಾಧಿಕಾರಿ ಅವರನ್ನು ಡಿಫೆಂಡ್ ಮಾಡಿಕೊಂಡಿದ್ದೆ.

ಆದರೆ ಸತ್ಯಾಸತ್ಯತೆ ಏನು ಎಂಬುದು ನನಗೆ ಗೊತ್ತಿದೆ, ಮೌಖಿಕ ನಿರ್ದೇಶನ  ಏನಿತ್ತು, ಯಾಕಾಗಿ ಅಂದು ಚಾಮರಾಜನಗರಕ್ಕೆ ಆಕ್ಸಿಜನ್ ಸಿಲಿಂಡರ್ ಗಳು ಹೋಗಲಿಲ್ಲ ಎಂಬುದು ಗೊತ್ತಿದೆ. ಈಗ ಪ್ರಾಥಮಿಕ ವರದಿ ಬಂದಿದೆ ಅಷ್ಟೆ.  ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಯುತ್ತಿದ್ದು ಪೂರ್ಣ ತನಿಖೆ ಆದ ನಂತರ ಸತ್ಯಾಸತ್ಯತೆ ಏನೆಂಬುದು ಗೊತ್ತಾಗಲಿದೆ ಎಂದು ಹೇಳಿದ್ದಾರೆ. ಈಗ ತಾಂತ್ರಿಕ ಸಾಕ್ಷಿಗಳು ಸಿಗದೆ ಹೋದರೂ ಒಳಗೆ ಏನೇನು ನಡೆದಿದೆ ಎಂಬುದು ಗೊತ್ತಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಇದನ್ನೂ ಓದಿ:Rohini Sindhuri: ಟ್ರಾನ್ಸ್​ಫರ್ ಕ್ಯಾನ್ಸಲ್ ಮಾಡುವಂತೆ ರೋಹಿಣಿ ಸಿಂಧೂರಿ ಮನವಿ; ಬಿಲ್​ಕುಲ್ ಆಗಲ್ಲ ಎಂದ ಸಿಎಂ

ಅಂದು ಏನು ನಡೆಯಿತು ಎಂಬುದು ಮೈಸೂರಿಗನಾದ ನನಗೆ  ಗೊತ್ತಿದೆ. ಯಾಕೆ ಚಾಮರಾಜನಗರಕ್ಕೆ ಆಕ್ಸಿಜನ್ ಕೊಡಲಿಲ್ಲ ಎಂದು ಮೈಸೂರಿನ ಪದಕಿ ಏಜೆನ್ಸಿಯ ಅನಿಲ್ ಪದಕಿಯನ್ನು ಕೇಳಿದರೆ ನಿಮಗೆ  ಗೊತ್ತಾಗುತ್ತದೆ. ಸುಮ್ಮನೆ ಸೋಶಿಯಲ್ ಮೀಡಿಯಾಗಳಲ್ಲಿ ಯಾರಿಗೋ ಧಿಕ್ಕಾರ ಹಾಕುತ್ತೀರಾ, ಇನ್ಯಾರಿಗೋ ಜಯಕಾರ ಹಾಕುತ್ತೀರಾ ಎಂದು ನೆಟ್ಟಿಗರನ್ನು  ಕುರಿತು ಮಾತನಾಡಿರುವ ಪ್ರತಾಪ್ ಸಿಂಹ, ನಾನು ಪತ್ರಕರ್ತನಾಗಿ ನಿಷ್ಠುರವಾಗಿ  ನೇರವಾಗಿ ಬರೆದರೆ ಅದನ್ನು  ಡ್ಯಾಶಿಂಗ್  ಎಂದು ಇಷ್ಟಪಡುತ್ತೀರಾ . ಆದರೆ ನೇರವಾಗಿ ನಿಷ್ಠುರವಾಗಿ ಹೇಳಿದರೆ ಅದನ್ನು ಆರೋಪ ಅಂತೀರಾ. ಪತ್ರಕರ್ತರನ್ನು ಹಾಗೂ ರಾಜಕಾರಣಿಗಳನ್ನು ನೋಡೋ ದೃಷ್ಟಿಕೋನ ಬೇರೆಬೇರೆ ಆಗಿರುತ್ತದೆ ಎಂದು ಪ್ರತಾಪ್ ಸಿಂಹ ತಮ್ಮ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Latha CG
First published: