ಕಾಂಗ್ರೆಸ್​ನವರಂತೆ ನಾವು ನೀರು ಕುಡಿಸಲ್ಲ, ಕೊಡಿಸುತ್ತೇವೆ; ಸಂಸದ ಪ್ರಹ್ಲಾದ್ ಜೋಶಿ ಲೇವಡಿ

ನರ್ಮದಾ, ಕಾವೇರಿ,ಕೃಷ್ಣಾ ನದಿ ವಿವಾದಗಳು ಅನೇಕ ವರ್ಷಗಳಿಂದ ನಡೆದಿವೆ. ಆದರೆ ಮೋದಿ ಬಂದ ಬಳಿಕ ಎಲ್ಲಾ ಅಂತಾರಾಜ್ಯ ನದಿ ನೀರು ವ್ಯಾಜ್ಯಗಳನ್ನು ಶೀಘ್ರವೇ ಮುಗಿಸಬೇಕು ಎಂದು ಸಂಕಲ್ಪ ತೊಟ್ಟಿದ್ದರು ಎಂದು ಸಂಸದ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ.

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ.

  • Share this:
    ಧಾರವಾಡ (ಮಾರ್ಚ್ 08); ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 6 ತಿಂಗಳಲ್ಲೇ ಮಹದಾಯಿ ನದಿನೀರು ಹಂಚಿಕೆ ವಿವಾದವನ್ನು ಬಗೆಹರಿಸಲಾಗಿದೆ. ನಾವು ಕಾಂಗ್ರೆಸ್ನವರಂತೆ ಕೇವಲ ಮಾತಿನಲ್ಲಿ ಕಾಲ ಕಳೆಯಲ್ಲ, ನೀರು ಕುಡಿಸಲ್ಲ. ಬದಲಿಗೆ ನೀರು ಕುಡಿಸುತ್ತೇವೆ ಎಂದು ಸಂಸದ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

    ಧಾರವಾಡ ಜಿಲ್ಲೆ ನವಲಗುಂದ ರೈತ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿರುವ ಸಂಸದ ಪ್ರಹ್ಲಾದ್ ಜೋಶಿ, “ಮಹದಾಯಿಗಾಗಿ ಹಲವಾರು ರೀತಿಯ ಹೋರಾಟಗಳು ನಡೆದವು. ನಾವು ಯಾವುದೇ ರಾಜಕಾರಣ ಮಾತನಾಡುವುದಿಲ್ಲ. ಆದರೆ, ಎಲ್ಲರೂ ವಾಸ್ತವಿಕತೆ ತಿಳಿಯಬೇಕಿದೆ. ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗಲೇ ಟ್ರಿಬ್ಯುನಲ್ ರಚನೆ ವಿಚಾರ ಬಂದಿತ್ತು. ಆದರೆ ಕಳಸಾ ಬಂಡೂರಿ ಮೋದಿ ಬಂದ ಮೇಲೆಯೇ ಹುಟ್ಟಿದೆ ಎನ್ನುವಂತೆ ಕೆಲವರು ಅಪ್ರಚಾರ ಮಾಡಿದ್ದರು” ಕಿಡಿಕಾರಿದರು.

    “ನರ್ಮದಾ, ಕಾವೇರಿ,ಕೃಷ್ಣಾ ನದಿ ವಿವಾದಗಳು ಅನೇಕ ವರ್ಷಗಳಿಂದ ನಡೆದಿವೆ. ಆದರೆ ಮೋದಿ ಬಂದ ಬಳಿಕ ಎಲ್ಲಾ ಅಂತಾರಾಜ್ಯ ನದಿ ನೀರು ವ್ಯಾಜ್ಯಗಳನ್ನು ಶೀಘ್ರವೇ ಮುಗಿಸಬೇಕು ಎಂದು ಸಂಕಲ್ಪ ತೊಟ್ಟಿದ್ದರು. ಟ್ರಿಬ್ಯುನಲ್ ಇದ್ರೂ ಆ ನೀರಿನ ಮೇಲೆ ನಮ್ಮ ಹಕ್ಕಿದೆ ಎಂಬ ವಿಶ್ವಾಸ ನಮಗಿತ್ತು. ಅದಕ್ಕಾಗಿಯೇ ನ್ಯಾಯಾಧೀಕರಣ ಮುಂದುವರೆಯಲು ನಾವು ಬಿಟ್ಟಿಲ್ಲ. ಯಡಿಯೂರಪ್ಪ ಸರ್ಕಾರ ಬಂದ ಬಳಿಕ ಸುಪ್ರಿಂ ಕೋರ್ಟಗೆ ನಾವು ಅರ್ಜಿ ಸಲ್ಲಿಸಿದ್ದೆವು.

    ಅಧಿಸೂಚನೆಗಾಗಿ ಬಿಎಸ್​ವೈ ಸರ್ಕಾರ ಕೋರ್ಟ್​ನಲ್ಲಿ ಹೋರಾಟ ಮಾಡಿತು. ಅದರ ಫಲವಾಗಿ ಪ್ರಸ್ತುತ ಅಧಿಸೂಚನೆಯಾಗಿದೆ. ನವಲಗುಂದದಲ್ಲಿ ಕೆಲವರು ಹಸಿರು ಶಾಲು ಹಾಕಿಕೊಂಡು ರಾಜಕಾರಣ ಮಾಡುವವರಿದ್ದಾರೆ. ಮಹದಾಯಿ ಕುರಿತು ಕಾಂಗ್ರೆಸ್ ನಾಯಕರು ಬಾಯಿಗೆ ಬಂದ ಹಾಗೆ ಮಾತನಾಡ್ತಾರೆ, ಜನರಿಗೆ ನೀರು ಕುಡಿಸ್ತಾರೆ. ಆದರೆ, ಬಿಜೆಪಿಯವರು ನೀರು ಕುಡಿಸಲ್ಲ, ನೀರು ಕೊಡಿಸುತ್ತೇವೆ” ಎಂದು ಲೇವಡಿ ಮಾಡಿದ್ದಾರೆ.

    ಇದನ್ನೂ ಓದಿ : ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 39ಕ್ಕೆ ಏರಿಕೆ; ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಅಂಟಿದ ವೈರಸ್
    First published: