Idgah Maidana: ಚಾಮರಾಜಪೇಟೆ ಮೈದಾನ ವಿವಾದ ಹೋರಾಟಕ್ಕೆ ಪಿ ಸಿ ಮೋಹನ್ ಎಂಟ್ರಿ

ಚಾಮರಾಜಪೇಟೆ ಆಟದ ಮೈದಾನದ ವಿಚಾರ ಮಾತನಾಡಿದ ಸಂಸದ ಪಿಸಿ ಮೋಹನ್, ಬಂದ್ ಗೆ ಕರೆ ಕೊಡಲಾಗಿತ್ತು, ಜನರೆಲ್ಲ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ರು. ಆಟದ ಮೈದಾನದ ವಿಚಾರ ಚರ್ಚೆ ಮಾಡಲು ಆಯುಕ್ತರ ಕಚೇರಿಗೆ ಬಂದಿದ್ದೇನೆ.

ಸಂಸದ ಪಿ ಸಿ ಮೋಹನ್

ಸಂಸದ ಪಿ ಸಿ ಮೋಹನ್

  • Share this:
ಬೆಂಗಳೂರು - ಚಾಮರಾಜಪೇಟೆ ಮೈದಾನ (Idgah Maidana Chamarajpet) ಕುರಿತು ಬಂದ್ ಆಯಿತು. ಅದೇ ಉತ್ಸಾಹದಲ್ಲಿ ಇದೀಗ ಮತ್ತಷ್ಟು ಹೋರಾಟಕ್ಕೆ ನಾಗರಿಕ ಒಕ್ಕೂಟ ವೇದಿಕೆ ಮುಂದಾಗಿದೆ. ಈ ಬಾರಿ ಫೀಲ್ಡಿಗೆ ಸ್ಥಳೀಯ ಸಂಸದ ಪಿ ಸಿ ಮೋಹನ್ (MP PC Mohan) ಕಣಕ್ಕಿಳಿದಿದ್ದಾರೆ. ಇಂದಾದ ಬೆಳವಣಿಗೆ ಏನು?  ಕಳೆದೊಂದು ತಿಂಗಳಿನಿಂದ ಚಾಮರಾಜಪೇಟೆ ಈದ್ಗಾ ಮೈದಾನ ಭೂ ಮಾಲೀಕತ್ವ ವಿವಾದ ಚರ್ಚೆಯಲ್ಲಿದೆ. ಸದ್ಯ ಈ ಮೈದಾನ ಯಾರಿಗೆ ಸೇರಿದ್ದು ಎಂಬ ಕುರಿತು ಬಿಬಿಎಂಪಿ ವರ್ಸಸ್ ವಕ್ಫ್ ಬೋರ್ಡ್ (BBMP vs Wakf Board) ದಾಖಲೆಗಳ ಮೇಲಾಟ ಮುಂದುರಿದಿದೆ. ಇದೀಗ ಈ ಮೈದಾನ ರಾಜಕೀಯ ತಿರುವು ಪಡೆದಿದೆ.

ಕೆಲ ದಿನಗಳ ಹಿಂದೆ ತನ್ನ ಬೆಂಬಲಿಗರ ಸಭೆ ಕರೆದ ಸ್ಥಳೀಯ ಜಮೀರ್ ಅಹ್ಮದ್ ಟಾಂಗ್ ಕೊಡುವಂತೆ ಇಂದು ನಾಗರಿಕ ಒಕ್ಕೂಟ ವೇದಿಕೆ ಜೊತೆ ಬಿಜೆಪಿ ಸಂಸದ ಪಿ ಸಿ ಮೋಹನ್ ಕಾಣಿಸಿಕೊಂಡರು. ಇಂದು ಬಿಬಿಎಂಪಿ ಕಮಿಷಿನರ್ ತುಷಾರ್ ಗಿರಿನಾಥ್ ಭೇಟಿ ಮಾಡಿ ಮೈದಾನ ಕುರಿತು ಸಂಸದ ಪಿ ಸಿ ಮೋಹನ್ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು‌‌.

ಸಂಸದ ಪಿ ಸಿ ನೋಹನ್ ಮನವಿ ಪತ್ರದಲ್ಲೇನಿದೆ?

ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರು ಇಡಲು ಮನವಿ ಮಾಡಲಾಗಿದೆ. ಚಾಮರಾಜಪೇಟೆ ಮೈದಾನಕ್ಕೆ ಕುರಿ ಮೈದಾನ, ಎಮ್ಮೆ ಮೈದಾನ ,ಈದ್ಗಾ ಮೈದಾನ ಅಂತ ಎಲ್ಲಾ ಹೆಸರಿದೆ. ಬಿಬಿಎಂಪಿ ವತಿಯಿಂದ ಒಂದು ಅಧಿಕೃತ ಹೆಸರಿಡಬೇಕು. ರಾಷ್ಟ್ರೀಯ ಹಬ್ಬ, ಧ್ವಜಾರೋಹಣ ಮಾಡಬೇಕು. ಗಣೇಶ ಹಬ್ಬ , ಶಿವರಾತ್ರಿ ಹಬ್ಬ , ದಸರಾ ಆಚರಣೆ ಮಾಡಲು ಅವಕಾಶ ನೀಡಬೇಕು.

ಇದನ್ನೂ ಓದಿ: idgah Maidan: ಈದ್ಗಾ ಮೈದಾನ ಎಂದರೇನು ಗೊತ್ತಾ? ಚಾಮರಾಜಪೇಟೆಯಲ್ಲಿ ವಿವಾದ ಉಂಟಾಗಿದ್ದೇಕೆ?

ಚಾಮರಾಜಪೇಟೆ ಆಟದ ಮೈದಾನದ ವಿಚಾರ ಮಾತನಾಡಿದ ಸಂಸದ ಪಿಸಿ ಮೋಹನ್, ಬಂದ್ ಗೆ ಕರೆ ಕೊಡಲಾಗಿತ್ತು, ಜನರೆಲ್ಲ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ರು. ಆಟದ ಮೈದಾನದ ವಿಚಾರ ಚರ್ಚೆ ಮಾಡಲು ಆಯುಕ್ತರ ಕಚೇರಿಗೆ ಬಂದಿದ್ದೇನೆ.

ಆಟದ ಮೈದಾನ ಆಟದ ಮೈದಾನವಾಗೀ ಉಳಿಯುತ್ತೆ. ‌ನಿನ್ನೆ ಸಹ ಮಕ್ಕಳು ಆಟ ಅಡಿದ್ರು, ಇಂದು ಆಡ್ತಾರೆ, ಮುಂದು ಆಟ ಆಡ್ತಾರೆ. ಯಾವ ದೊಣ್ಣೆ ನಾಯಕನ ಅಪ್ಪಣೆ ಕೂಡ ಕೇಳಲ್ಲ. ಆಗಸ್ಟ್ 15 ರಾಷ್ಟ್ರ ಧ್ವಜ ಹಾರಿಸುವುದಕ್ಕೆಗ್ಗೆ ಅಡ್ಡಿ ಪಡಿಸೋ ಹಾಗಿಲ್ಲ. ಪಾಲಿಕೆ ಆಯುಕ್ತರಿಗೆ ಈ ಬಗ್ಗೆ ಆಗ್ರಹ ಮಾಡಿದ್ದೇವೆ.

ಧ್ವಜ ಹಾರಿಸುವುದು ದೇಶ ಪ್ರೇಮ

ಗಣೇಶ ಉತ್ಸವ,ಬೇರೆ ಬೇರೆ ಉತ್ಸವ ಮಾಡಲಿಕ್ಕೆ ಅನುಮತಿ ಕೊಡಿ ಅಂತ ಬೇಡಿಕೆ ಇಟ್ಟಿದ್ದೇವೆ. ಈ ಆಟದ ಮೈದಾನವನ್ನು ಜಯ ಚಾಮರಾಜೇಂದ್ರ ಆಟದ ಮೈದಾನ ಮಾಡಿ ಅಂತ ಮನವಿ ಮಾಡಿದ್ದೇವೆ. ರಾಷ್ಟ್ರ ಧ್ವಜ ಹಾರಿಸುವುದು ದೇಶ ಪ್ರೇಮ ಮೆರೆಯುವುದು ಯಾವುದು ಕೂಡ ದೇಶ ವಿರೋಧಿ ಚಟುವಟಿಕೆ ಅಲ್ಲ. ದೇಶ ಪ್ರೇಮ ಮೆರೆಯುವಂತಹ ಕೆಲಸ.

ಈ ಬಗ್ಗೆ ಆಯುಕ್ತರು ಅನುಮತಿ ಕೊಡಬೇಕು ಇದು ಸರ್ಕಾರದ ಆಸ್ತಿ. ಹಾಗಾಗಿ ಅನುಮತಿ ಕೊಡಲೇಬೇಕು. ಆಗಸ್ಟ್ 15 ರಂದು ರಾಷ್ಟ್ರ ಧ್ವಜ ಹಾರಿಸಲು ಅನುಮತಿ‌ ಕೊಡಲೇಬೇಕು‌. ಕನ್ನಡ ರಾಜ್ಯೋತ್ಸವ, ಅಂಬೇಡ್ಕರ್ ಜಯಂತಿ, ಗಣೇಶ ಉತ್ಸವ ಮಾಡಲು ಅವಕಾಶ ಕೋರಿ ಮನವಿ ಸಲ್ಲಿಸಲಾಗಿದೆ.

ದೇಶ ವಿರೋಧಿ ಚಟುವಟಿಕೆ ಯಾರು ಮಾಡುತ್ತಿಲ್ಲ

ಇದು ಬಿಬಿಎಂಪಿ ಆಟದ ಮೈದಾನ, ಇದಕ್ಕೆ ಜಯಚಾಮರಾಜೇಂದ್ರ ಆಟದ ಮೈದಾನ ಹೆಸರಿಡಲು ನಾನು ಆಗ್ರಹಿಸಿದ್ದೇನೆ. ಇಲ್ಲಿ ದೇಶ ವಿರೋಧಿ ಚಟುವಟಿಕೆ ಯಾರು ಮಾಡುತ್ತಿಲ್ಲ. ಹೀಗಾಗಿ ನಮಗೂ ಹಬ್ಬದ ಆಚರಣೆಗೆ ಅವಕಾಶ ಕೊಡಬೇಕು.‌ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ಕಮಿಷನರ್ ಹೇಳಿದ್ದಾರೆ. ವಾರದೊಳಗೆ ತೀರ್ಮಾನ ಮಾಡುವ ಬಗ್ಗೆ ಕಮಿಷನರ್ ಭರವಸೆ ನೀಡಿದ್ದಾರೆ. ಅವಕಾಶ ಕೊಡದಿದ್ದರೂ ರಾಷ್ಟ್ರಧ್ವಜ ಹಾರಿಸಿಯೇ ತೀರುತ್ತೇವೆ. ಚಾಮರಾಜಪೇಟೆ ಆಟದ ಮೈದಾನ ಸರ್ಕಾರದ ಸ್ವತ್ತು ಎಂದರು.

ಇದನ್ನೂ ಓದಿ: idgah Maidan: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಟ್ವಿಸ್ಟ್; ತಮ್ಮ ಒಡೆತನದಲ್ಲೇ ಇದ್ರೂ ನಮ್ಮದಲ್ಲ ಅಂತಿರೋದ್ಯಾಕೆ BBMP?

ಇನ್ನು  ಜು.12ರ ಬಂದ್ ಯಶಸ್ವಿ ಹಿನ್ನೆಲೆ ಈದ್ಗಾ ಮೈದಾನ ಆಟದ ಮೈದಾನವಾಗಿಯೇ ಉಳಿಯಬೇಕೆಂದು ಒತ್ತಾಯಿಸಿ ಚಾಮರಾಜಪೇಟೆ ನಾಗರಿಕರ ವೇದಿಕೆ ವತಿಯಿಂದ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರನ್ನ ಭೇಟಿ ಮಾಡಿ ಮನವಿ ಮಾಡಿದರು.

ರಾಜಕೀಯ ಜಿದ್ದಾಜಿದ್ದಿ

ಚಾಮರಾಜಪೇಟೆ ಮೈದಾನವನ್ನು ಜಯಚಾಮರಾಜೇಂದ್ರ ಒಡೆಯರ್ ಹೆಸ್ರು ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ. ಸರ್ಕಾರ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಬಿಬಿಎಂಪಿ ಕಮಿಷಿನರ್ ತುಷಾರ್ ಗಿರಿನಾಥ್ ತಿಳಿಸಿದರು.ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಮೈದಾನ ವಿವಾದ ಮತ್ತಷ್ಟು ತೀವ್ರಗೊಳ್ಳುತ್ತಿದೆ. ನಾಗರಿಕ ಹೋರಾಟ ಇದೀಗ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿ ಮಾರ್ಪಟ್ಟಿರುವುದು ಸುಳ್ಳಲ್ಲ.
Published by:Mahmadrafik K
First published: