ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಇಳಿಸಿದವರು ಭಯೋತ್ಪಾದಕರಿಗಿಂತ ಹೆಚ್ಚು; ಸಂಸದ ಎಸ್. ಮುನಿಸ್ವಾಮಿ ಆಕ್ರೋಶ

ದುರುದ್ದೇಶಪೂರ್ವಕವಾಗಿಯೇ ಕೆಂಪುಕೋಟೆ ಮೇಲೆ ದೌರ್ಜನ್ಯ ಎಸಗಿದ್ದು ಗೊತ್ತಾಗಿದೆ. ಧ್ವಜಾರೋಹಣ ನಡೆದಿರುವ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ದೇಶದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ದೇಶದ ಜನರು ಅವರನ್ನ ಕ್ಷಮಿಸುವುದಿಲ್ಲ, ದೌರ್ಜನ್ಯ ದಬ್ಬಾಳಿಕೆ ನಡೆಸಿದವರ ವಿರುದ್ದ ಕಾನೂನು ಕ್ರಮ ಆಗಲಿ ಎಂದು ಕಿಡಿಕಾರಿದರು.

ಸಂಸದ ಮುನಿಸ್ವಾಮಿ

ಸಂಸದ ಮುನಿಸ್ವಾಮಿ

  • Share this:
ಕೋಲಾರ(ಜ.27): ಕೋಲಾರದ ಪತ್ರಕರ್ತರ  ಭವನದಲ್ಲಿ ಆಯೋಜಿಸಿದ್ದ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ  ಕಾರ್ಯಕ್ರಮ ಹಾಗೂ ನೂತನವಾಗಿ ಸಮಾಜದ ವತಿಯಿಂದ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರನ್ನ ಸಂಸದ ಎಸ್ ಮುನಿಸ್ವಾಮಿ ಹಾಗೂ ಸಮಾಜದ ನಾಯಕರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಸಭೆಯಲ್ಲಿ ಮಾತನಾಡಿದ ಸಮಾಜದ ನಾಯಕರು, ಸವಿತಾ ಸಮಾಜವನ್ನು ಸರ್ಕಾರ ಗುರ್ತಿಸಿ ಹೆಚ್ಚು ಮೀಸಲಾತಿ ನೀಡಬೇಕು. ಸಮಾಜದಲ್ಲಿ ಒಳ್ಳೆಯ ಕೆಲಸಗಳು ಆಗಬೇಕೆಂದರೆ ನಮ್ಮ ಸಮಾಜದವರು ಮೊದಲು ಎಲ್ಲಾ ಕಾರ್ಯಗಳನ್ನು ಮಾಡುವುದು ವಾಡಿಕೆ. ನಮ್ಮನ್ನು ಎಸ್ ಟಿ ಪಂಗಡಕ್ಕೆ ಸೇರಿಸಿ ಮೀಸಲಾತಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ, ಸಂಸದ ಎಸ್ ಮುನಿಸ್ವಾಮಿ ಅವರ ಮುಖಾಂತರ ಮನವಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಾಜಿ ನಗರಸಭೆ ಅಧ್ಯಕ್ಷ್ಯ ಬಿಎಂ ಮುಬಾರಕ್, ಸೇರಿ ಸವಿತಾ ಸಮಾಜದ ಮುಖಂಡರು ಭಾವಹಿಸಿದ್ದರು.

ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ಹಿಂಪಡೆಯಲು, ದೆಹಲಿಯಲ್ಲಿ ರೈತರು ಕರೆ ನೀಡಿದ್ದ ಟ್ರ್ಯಾಕ್ಟರ್ ಪೆರೇಡ್ ಹಿಂಸಾರೂಪವನ್ನ ತಾಳಿದೆ. ರೈತರು ಹಾಗೂ ದೆಹಲಿ ಪೊಲೀಸರ ಮಧ್ಯೆ ಹಗ್ಗ ಜಗ್ಗಾಟ ನಡೆದು ಪೊಲೀಸರು ಮತ್ತು ರೈತ ಹೋರಾಟಗಾರರು ಗಾಯಗೊಂಡಿದ್ದಾರೆ. ಇನ್ನು ಕೆಂಪು ಕೋಟೆ ಮೇಲೆ ಜಮಾಯಿಸಿ, ಧ್ವಜಾರೋಹಣ ಮಾಡಿದ್ದ ರಾಷ್ಟ್ರ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಬೇರೆಯ ಧ್ವಜವನ್ನ ಹಾರಿಸಿದ ಕ್ರಮವನ್ನ ಬಿಜೆಪಿ ನಾಯಕರು ವಿರೋಧಿಸಿದ್ದಾರೆ.

ತರಕಾರಿ ಬೆಳೆಯಲ್ಲಿಯೇ ಉತ್ತಮ ಆದಾಯ ಗಳಿಸುತ್ತಿದ್ದಾರೆ ಪುತ್ತೂರಿನ ಯುವ ಕೃಷಿಕರು

ಕೃಷಿ ಕಾಯ್ದೆಗಳನ್ನ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸಿದ ಹೋರಾಟ ಹಿಂಸಾರೂಪಕ್ಕೆ ತಿರುಗಿರುವ ಹಿನ್ನಲೆ, ಕೋಲಾರದಲ್ಲಿ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಹೋರಾಟಗಾರರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.  ಕೋಲಾರದ ನಿವಾಸದಲ್ಲಿ  ಮಾತನಾಡಿದ ಸಂಸದ ಎಸ್ ಮುನಿಸ್ವಾಮಿ, ರಾಷ್ಟ್ರಧ್ವಜ ಇಳಿಸಿದವರು ಭಯೋತ್ಪಾದಕರಿಗಿಂತ ಹೆಚ್ಚು, ಅಂತಹವರು ದೇಶದ್ರೋಹಿಗಳು ಎಂದರು. ಪ್ರತಿಭಟನೆಗೆ ಅವಕಾಶ ನೀಡಿದ್ದರೂ ಸಹ ಶಾಂತಿ ಕದಡುವ ಕೆಲಸವನ್ನ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದರು.

ದುರುದ್ದೇಶಪೂರ್ವಕವಾಗಿಯೇ ಕೆಂಪುಕೋಟೆ ಮೇಲೆ ದೌರ್ಜನ್ಯ ಎಸಗಿದ್ದು ಗೊತ್ತಾಗಿದೆ. ಧ್ವಜಾರೋಹಣ ನಡೆದಿರುವ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ದೇಶದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ದೇಶದ ಜನರು ಅವರನ್ನ ಕ್ಷಮಿಸುವುದಿಲ್ಲ, ದೌರ್ಜನ್ಯ ದಬ್ಬಾಳಿಕೆ ನಡೆಸಿದವರ ವಿರುದ್ದ ಕಾನೂನು ಕ್ರಮ ಆಗಲಿ ಎಂದು ಕಿಡಿಕಾರಿದರು. ಇತ್ತೀಚೆಗಷ್ಟೆ ಸುಪ್ರೀಂಕೋರ್ಟ್ ಸಮಿತಿಯೊಂದನ್ನು ರಚಿಸಿತ್ತು, ರೈತರು ಸಮಿತಿ ಜೊತೆಗೂ ಮಾತುಕತೆಗೆ ಒಪ್ಪಲಿಲ್ಲ, ಅವರಿಗೆಲ್ಲಾ ಮಾಜಿ ಸಿಎಂ ಸಿದ್ದರಾಮಯ್ಯ ಅಂತಹ  ರಾಜಕಾರಣಿಗಳ ಬೆಂಬಲವಿದೆ. ಅಂತಹವರ ಬೆಂಬಲದಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಟೀಕಿಸಿದರು.

ದೇಶದಲ್ಲಿ ಎಲ್ಲೆಡೆ ಕೃಷಿ ಕಾಯ್ದೆ ಜಾರಿಯಾದರೂ ಪ್ರತಿಭಟನೆ ನಡೆಯುತ್ತಿರುವುದು ಕೇವಲ ಎರಡು ರಾಜ್ಯದಲ್ಲಿ ಮಾತ್ರ, ಪ್ರಧಾನಿ  ನರೇಂದ್ರ ಮೋದಿಯವರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರಿಗೆ ಮಾರಕವಲ್ಲ, ಹೊರಾಟಗಾರರನ್ನು ದಿಕ್ಕು ತಪ್ಪಿಸುವ ಕೆಲಸವನ್ನ ಕಾಂಗ್ರೆಸ್ ಪಕ್ಷ ಸೇರಿ ಹಲವು ಪಕ್ಷ ಮಾಡುತ್ತಿದೆ.  ಇಂತಹ ಹಿಂಸಾತ್ಮಕ ಘಟನೆಗಳಿಂದ ನಿಜವಾದ ರೈತರು ತಲೆ ತಗ್ಗಿಸುವಂತಾಗುತ್ತದೆ ಎಂದು ಮುನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
Published by:Latha CG
First published: