ಮುಂಬರುವ ಚುನಾವಣೆಯಲ್ಲಿ ಕೆಜಿಎಫ್​ ಕ್ಷೇತ್ರದಿಂದ ಸಂಸದರ ಹೆಂಡತಿ ಸ್ಪರ್ಧೆ; ಅಲ್ಲಗಳೆದ ಎಸ್​ ಮುನಿಸ್ವಾಮಿ

ಗ್ರಾಮ ಪಂಚಾಯ್ತಿ ಚುನಾವಣೆ ವೇಳೆ ಕೆಜಿಎಫ್​ ಕ್ಷೇತ್ರದಲ್ಲಿಯೇ ಅಲ್ಲದೇ ಮಾಲೂರಿನ ಹಲವೆಡೆಯು ಶೈಲಜಾ ಪ್ರಚಾರ ಮಾಡಿದ್ದಾರೆ. 

ಮುನಿಸ್ವಾಮಿ ಹೆಂಡತಿ ಶೈಲಜಾ

ಮುನಿಸ್ವಾಮಿ ಹೆಂಡತಿ ಶೈಲಜಾ

  • Share this:
ಕೋಲಾರ (ಡಿ . 28): ವಿಧಾನಸಭೆ ಚುನಾವಣೆಗೆ ಇನ್ನು ಎರಡುಕಾಲು ವರ್ಷ ಬಾಕಿ ಇರುವಂತೆ ಕೆಜಿಎಫ್​ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲಿಯೂ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದ್ದು, ಹಲವು ಅಭ್ಯರ್ಥಿಗಳು ಟಿಕೆಟ್​ ಪಡೆಯಲು ಈಗಿನಿಂದಲೇ ಕಸರತ್ತು ನಡೆಸಿದ್ದಾರೆ. ಒಂದು ಕಡೆ ಮಾಜಿ ಶಾಸಕ ವೈ ಸಂಪಂಗಿ ಟಿಕೆಟ್​ ಸಿಗಲಿದೆ ಎಂಬ ಭರವಸೆಯಲ್ಲಿದ್ದರೆ, ಮತ್ತೊಂದು ಕಡೆ ಬೇತಮಂಗಲ ಮೂಲಕ ಮೋಹನ್​ ಕೃಷ್ಣ ಸಮಾಜ ಸೇವೆ ಮಾಡುವ ಮೂಲಕ ಟಿಕೆಟ್​ಗೆ ಪೈಪೋಟಿ ನಡೆಸಿದ್ದಾರೆ. ಈ ನಡುವೆ ಮತ್ತೊಬ್ಬ ಅಭ್ಯರ್ಥಿ ರಾಜಕೀಯದಲ್ಲಿ ಸಕ್ರಿಯವಾಗುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಅವರೇ  ಸಂಸದ ಎಸ್​ ಮುನಿಸ್ವಾಮಿ ಪತ್ನಿ ಶೈಲಜಾ. 

ಶೈಲಜಾ ಅವರು ಮುಂದೆ ಚುನಾವಣೆಯಲ್ಲಿ ನಿಲ್ಲುವ ಚರ್ಚೆಗಳು ಕೆಜಿಎಫ್​ನ​ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ. ಇದಕ್ಕೆ ಇಂಬು ನೀಡುವಂತೆ ಶೈಲಜಾ ಅವರು ತಾಲೂಕಿನ ವಿವಿಧೆಡೆ ಗ್ರಾಮ ಪಂಚಾಯತ್​ ಚುನಾವಣೆ ವೇಳೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ.  ಮುಂದೆ ರಾಜಕೀಯ ದೃಷ್ಟಿಕೋನದಿಂದಲೇ ಓಡಾಟ ನಡೆಸಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ.

ಇದನ್ನು ಓದಿ: ಮಗಳ ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಟ ರಮೇಶ್

ಶೈಲಾಜಾ ರಾಜಕೀಯದಲ್ಲಿ ಸಕ್ರಿಯವಾಗಿರುವ ಹಿನ್ನಲೆ ಕಿಡಿ ಕಾರಿರುವ ಮಾಜಿ ಶಾಸಕ ವೈ ಸಂಪಂಗಿ ಕಿಡಿಕಾರಿದ್ದು, ಕೆಜಿಎಫ್​ ಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ನಾವು, ಹಗಲಿರುಳು ಕಷ್ಟ ಪಟ್ಟು ಪಕ್ಷಕ್ಕಾಗಿ ದುಡಿದಿದ್ದೇವೆ. ಕ್ಷೇತ್ರದಲ್ಲಿ ಗುರುತು ಪರಿಚಯ ಇಲ್ಲದವರನ್ನು ಕರೆತರುವ ಪ್ರಯತ್ನ ನಡೆದಿದೆ. ನಾಯಕರ ವೈಯಕ್ತಿಕ ಲಾಭಾಕ್ಕಾಗಿ ಈ ರೀತಿಯ ಚಟುವಟಿಕೆ ನಡೆದಿದೆ. ಬಿಜೆಪಿ ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಪಕ್ಷ ಸಂಘಟನೆ ದೃಷ್ಟಿಕೋನದಲ್ಲಿ ನಮಗೆ ಆದ್ಯತೆ ನೀಡುವ ಆಶಾಭಾವನೆ ಇದೆಯೆಂದು ಪರೋಕ್ಷವಾಗಿ ತಮ್ಮ ವಿರೋಧಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ,

ಶೈಲಜಾ  ಸ್ಪರ್ಧೆ ಕೇವಲ ವದಂತಿ -  ಸಂಸದ ಮುನಿಸ್ವಾಮಿ

ಕೆಜಿಎಫ್​​ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪತ್ನಿ ಶೈಲಜಾ  ಕುರಿತ ಪ್ರತಿಕ್ರಿಯೆ ಸಂಸದ ಮುನಿಸ್ವಾಮಿ ನಿರಾಕರಿಸಿದ್ದಾರೆ.  ಗ್ರಾಮ ಪಂಚಾಯ್ತಿ ಚುನಾವಣೆ ವೇಳೆ ಕೆಜಿಎಫ್​ ಕ್ಷೇತ್ರದಲ್ಲಿಯೇ ಅಲ್ಲದೇ ಮಾಲೂರಿನ ಹಲವೆಡೆಯು ಶೈಲಜಾ ಪ್ರಚಾರ ಮಾಡಿದ್ದಾರೆ.  ಇದು ವಿಧಾನಸಭಾ ಚುನಾವಣೆ ಟಿಕೆಟ್ ಪಡೆಯುವ ಉದ್ದೇಶದಿಂದ ಮಾಡಿದ್ದಲ್ಲ. ಅಂತಹ ಯೋಚನೆಯನ್ನು ನಾವು ಹೊಂದಿಲ್ಲ. ಜಿಲ್ಲೆಯಲ್ಲಿ ಮುಂದೆ 6 ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಯೋಜನೆಯನ್ನು ಹೊಂದಿದ್ದು, ರಾಜ್ಯದಲ್ಲಿ ಮುಂದೆಯೂ ಬಿಜೆಪಿ ಸರ್ಕಾರ ಬರಲಿದೆ. ಜಿಲ್ಲೆಯಿಂದಲೂ ಹೆಚ್ಚು ಶಾಸಕರು ವಿಧಾನಸಭೆಗೆ ಆರಿಸಿ ಕಳಿಸಲು ಶಕ್ತಿ ಮೀರಿ ಪ್ರಯತ್ನ ಮಾಡುವೆ ಎಂದು ತಿಳಿಸಿದ್ದಾರೆ.
Published by:Seema R
First published: