ಸಚಿವನಾಗಿ ಒಂದು ಕೆರೆ ತುಂಬಿಸೋ ಯೋಗ್ಯತೆನೂ ರೇವಣ್ಣನಿಗೆ ಇಲ್ಲ; ಸಂಸದ ಜಿ.ಎಸ್. ಬಸವರಾಜ್ ಕಿಡಿ

ಅನ್​ಫಿಟ್ ಎಂಬ ಪದದ ಅರ್ಥ ರೇವಣ್ಣನವರಿಗೆ ಗೊತ್ತಿಲ್ಲ ಎಂದು ಕಾಣಿಸುತ್ತದೆ. ಶಾಸಕನಾಗಿ ಸಚಿವನಾಗಿ ಒಂದು ಕೆರೆಯನ್ನೂ ಸಹ ತುಂಬಿಸಲು ಯೋಗ್ಯತೆ ಇಲ್ಲದ ಆತ ನಿಜವಾದ ಅನ್​ಫಿಟ್ ಎಂದು ತುಮಕೂರಿನ ಸಂಸದ ಜಿ.ಎಸ್. ಬಸವರಾಜ್ ವ್ಯಂಗ್ಯವಾಡಿದ್ದಾರೆ. ​

MAshok Kumar | news18
Updated:June 7, 2019, 10:32 AM IST
ಸಚಿವನಾಗಿ ಒಂದು ಕೆರೆ ತುಂಬಿಸೋ ಯೋಗ್ಯತೆನೂ ರೇವಣ್ಣನಿಗೆ ಇಲ್ಲ; ಸಂಸದ ಜಿ.ಎಸ್. ಬಸವರಾಜ್ ಕಿಡಿ
ಹೆಚ್​.ಡಿ. ರೇವಣ್ಣ, ಜಿ.ಎಸ್. ಬಸವರಾಜ್.
MAshok Kumar | news18
Updated: June 7, 2019, 10:32 AM IST
 ತುಮಕೂರು (ಜೂನ್.07); ಹೆಚ್​.ಡಿ. ರೇವಣ್ಣ ಶಾಸಕನಾಗಿ ಸಚಿವನಾಗಿ ಒಂದು ಕೆರೆ ತುಂಬಿಸುವ ಯೋಗ್ಯತೆಯೂ ಅವರಿಗಿಲ್ಲ. ಸಚಿವನಾಗಲು ಅವರು ಅನ್​ಫಿಟ್ ಎಂದು ತುಮಕೂರಿನ ನೂತನ ಸಂಸದ ಜಿ.ಎಸ್​. ಬಸವರಾಜ್ ಕಿಡಿಕಾರಿದ್ದಾರೆ.

ಹೇಮಾವತಿ ನದಿ ನೀರು ಹಂಚಿಕೆಗೆ ವಿಚಾರವಾಗಿ ಹೆಚ್​.ಡಿ. ರೇವಣ್ಣ ಹಾಗೂ ಜಿ.ಎಸ್​. ಬಸವರಾಜ್ ನಡುವೆ ಕಳೆದ ಕೆಲ ದಿನಗಳಿಂದ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಅಲ್ಲದೆ ಈ ಹಿಂದೆ ಹೇಳಿಕೆ ನೀಡಿದ್ದ ರೇವಣ್ಣ ಸಂಸದನಾಗಲೂ ಜಿ.ಎಸ್​. ಬಸವರಾಜ್ ಅನ್​ಫಿಟ್ ಎಂದು ಜರಿದಿದ್ದರು.

ರೇವಣ್ಣ ಅವರ ಹೇಳಿಕೆಗೆ ತುಮಕೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಸಂಸದ ಬಸವರಾಜು, “ಅನ್​ಫಿಟ್ ಎಂಬ ಪದದ ಅರ್ಥ ರೇವಣ್ಣನವರಿಗೆ ಗೊತ್ತಿಲ್ಲ ಎಂದು ಕಾಣಿಸುತ್ತದೆ. ಶಾಸಕನಾಗಿ ಸಚಿವನಾಗಿ ಒಂದು ಕೆರೆಯನ್ನೂ ಸಹ ತುಂಬಿಸಲು ಯೋಗ್ಯತೆ ಇಲ್ಲದ ಆತ ನಿಜವಾದ ಅನ್​ಫಿಟ್ ಎಂದು ವ್ಯಂಗ್ಯವಾಡಿದ್ದಾರೆ. ​

ಇದನ್ನೂ ಓದಿ : ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಿಂದಲೇ ಬರ ಪ್ರವಾಸ ಹೊರಟ ಬಿಎಸ್​ವೈ; ಕಳೆಕಟ್ಟಿದ ಮಾಜಿಗಳ ಕಾಳಗ

“ಹೇಮಾವತಿ ತುಮಕೂರಿನ ಜನರ ಕುಡಿಯುವ ನೀರಿನ ಮೂಲಾಧಾರ. ಆದರೆ ನೀರು ಹೇಗೆ ತರ್ತೀರೋ ನೋಡೋಣ ಅಂತಾನೆ, ಓರ್ವ ಸಚಿವನಾಗಿ ಕ್ಷೇತ್ರದ ಶಾಸಕನಾಗಿ ಹೀಗೆ ಹೇಳಲು ರೇವಣ್ಣನಿಗೆ ಮರ್ಯಾದೆ ಇಲ್ಲ” ಎಂದು ಕುಹಕವಾಡಿದ್ದಾರೆ. ಅಲ್ಲದೆ “ನಾನು ಅವರಂತೆ ಸ್ವಾರ್ಥಕ್ಕಾಗಿ ಮೂರ್ಖತನ ಮಾಡೋದಿಲ್ಲ. ನನಗೆ ಹೇಮಾವತಿ ಡ್ಯಾಂನ ಕೀ ಕೊಟ್ಟರೆ ಸಾಕು. ನೀರು ಬಿಡುವುದಕ್ಕಿಂತ ಉತ್ತಮ ಕೆಲಸ ಏನಿದೆ” ಎಂದು ತಿಳಿಸಿದ್ದಾರೆ.

First published:June 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...