HOME » NEWS » State » MP DK SURESH TAUNTS JDS LEADER HD KUMARSWAMY IN RAMANAGAR CHANNAPATNA ATVR SESR

DK Suresh: ಕುಮಾರಸ್ವಾಮಿಯವರು ಹಿರಿಯರು, ಪ್ರಭಾವಿಗಳು, ಅವರ ಮಾತನ್ನ ಪಾಲಿಸುತ್ತೇವೆ: ಡಿ.ಕೆ.ಸುರೇಶ್ ವ್ಯಂಗ್ಯ 

ಬಿಜೆಪಿ ಶಿಸ್ತಿನ ಪಕ್ಷ  ಎನ್ನುತ್ತಾರೆ. ಮತ್ತೆ ಯಾಕೆ ಈಶ್ವರಪ್ಪ, ಯತ್ನಾಳ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. 

news18-kannada
Updated:April 6, 2021, 7:04 PM IST
DK Suresh: ಕುಮಾರಸ್ವಾಮಿಯವರು ಹಿರಿಯರು, ಪ್ರಭಾವಿಗಳು, ಅವರ ಮಾತನ್ನ ಪಾಲಿಸುತ್ತೇವೆ: ಡಿ.ಕೆ.ಸುರೇಶ್ ವ್ಯಂಗ್ಯ 
ಬಿಜೆಪಿ ಶಿಸ್ತಿನ ಪಕ್ಷ  ಎನ್ನುತ್ತಾರೆ. ಮತ್ತೆ ಯಾಕೆ ಈಶ್ವರಪ್ಪ, ಯತ್ನಾಳ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. 
  • Share this:
ಚನ್ನಪಟ್ಟಣ (ಏ. 6) : ರಾಜ್ಯ ಬಿಜೆಪಿ ಸರ್ಕಾರ ಸಿಡಿಯಿಂದ ಆಯ್ಕೆಯಾಗಿದೆ. ಇದು ಜನರಿಂದ ಆಯ್ಕೆಯಾದ ಸರ್ಕಾರ ಅಲ್ಲ ಎಂದು ಸಂಸದ ಡಿ.ಕೆ. ಸುರೇಶ್ ವ್ಯಂಗ್ಯವಾಡಿದ್ದಾರೆ.  ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಸರ್ಕಾರದ ಒಂದೊಂದೇ ಸಿಡಿಗಳು ಬಿಡುಗಡೆಯಾಗುತ್ತಿವೆ. ಕೆಲವರು ಮಾತನಾಡುತ್ತಿಲ್ಲ, ಮಾತನಾಡಿದರೆ ನಮ್ಮದು ಬಿಡುಗಡೆಯಾಗುತ್ತೆ ಎನ್ನುವ ಭಯವಿದೆ. ಜೊತೆಗೆ ಸ್ವತಃ ಈಶ್ವರಪ್ಪ, ಯತ್ನಾಳ್ ಸರ್ಕಾರ ಸರಿ ಇಲ್ಲ. ಮುಖ್ಯಮಂತ್ರಿ ಸರಿಯಿಲ್ಲ ಎಂದು ಆರೋಪಿಸುತ್ತಿದ್ದಾರೆ.  ಬಿಜೆಪಿ ಶಿಸ್ತಿನ ಪಕ್ಷ  ಎನ್ನುತ್ತಾರೆ. ಹಾಗಿದ್ರೆ ಈಶ್ವರಪ್ಪ, ಯತ್ನಾಳ್ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. 

ಕ್ಷೇತ್ರದ ಮೇಲೆ ಕಾಂಗ್ರೆಸ್ ನಾಯಕರ ಕ್ರೂರ ದೃಷ್ಟಿ ಇದೇ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಾವ ದೃಷ್ಟಿಯಿಂದ ನೋಡಿದ್ದಾರೊ ಗೊತ್ತಿಲ್ಲಾ ಅವರಿಗೆ ಯಾವ ಸಮಯದಲ್ಲಿ ಯಾವ ರೀತಿ ಕಾಣುತ್ತೊ ಗೊತ್ತಿಲ್ಲಾ.  ಅವರ ಮಾತನ್ನ ನಾವು ಪಾಲಿಸುತ್ತೇವೆ.  ಹಿರಿಯರು ಪ್ರಭಾವಿಗಳಾದ ಅವರ ಮಾತನ್ನ ಕೇಳುತ್ತೇವೆ ಇದು ಲೇವಡಿ ಮಾಡಿದರು.

ನಾಳಿನ ಸಾರಿಗೆ ಮುಷ್ಕರದ ಕುರಿತು ಪ್ರತಿಕ್ರಿಯಿಸಿದ ಅವರು, ಸಾರಿಗೆ ನೌಕರರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ, ಎಲ್ಲೊ ಒಂದು ಕಡೆ ಸಾರಿಗೆ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿದ್ದಾರಾ ಎಂಬ ಆತಂಕ ಇದೆ. ಹಾಗಾಗಿ ನೌಕರರಿಗೆ ಹೋರಾಟದ ಅನಿವಾರ್ಯ ಇದೆ ಎಂದರು.

ಇದನ್ನು ಓದಿ: ಬಾಯ್​ಫ್ರೆಂಡ್​ ಬೆನ್ನಲ್ಲೇ ನಟಿ ಕತ್ರಿನಾ ಕೈಫ್​ಗೂ ಕೊರೋನಾ ಸೋಂಕು ದೃಢ

ಪ್ರಮೋದ್ - ಸುನೀಲ್ ಗೆ ಸಹಕಾರ ಕೊಡಿ, ಪಕ್ಷ ಸಂಘಟನೆ ಮಾಡಿ

ಸಭೆಯಲ್ಲಿ ಚನ್ನಪಟ್ಟಣ ಬ್ಲಾಕ್ ಕಾಂಗ್ರೆಸ್ ನ ನಗರ ಅಧ್ಯಕ್ಷರಾಗಿ ಹುಲುವಾಡಿ ಸಿದ್ದೇಗೌಡರ ಮಗ ಸುನೀಲ್, ಗ್ರಾಮಾಂತರ ಅಧ್ಯಕ್ಷರಾಗಿ ಪ್ರಮೋದ್ ರವರು ಪದಗ್ರಹಣ ಮಾಡಿದರು.  ಈ ವಿಚಾರವಾಗಿ ಮಾತನಾಡಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರಿಗೆ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಸಹಕಾರ ಕೊಟ್ಟು ಪಕ್ಷ ಸಂಘಟನೆ ಮಾಡಬೇಕು. ಯಾವುದೇ ದುರುದ್ದೇಶದಿಂದ ಪಕ್ಷಕ್ಕೆ ಹಿನ್ನಡೆ ಮಾಡುವ ಕೆಲಸವಾಗಬಾರದೆಂದು  ಮನವಿ ಮಾಡಿದರು.

ಮತಕ್ಕೆ ಹೆದರಿ ಪಕ್ಷೇತರರಾಗಿ ಕಣಕ್ಕಿಳಿಸಲು ಪ್ಲಾನ್ : ಎಂಎಲ್​ಸಿ ರವಿಇನ್ನು ನಗರಸಭೆ ಚುನಾವಣೆ ಹಿನ್ನಲೆ ಚನ್ನಪಟ್ಟಣದ ಬಿಜೆಪಿ ಮುಖಂಡರು ಮುಸ್ಲಿಂ ಸಮುದಾಯದ ಮತಗಳು ಪಕ್ಷಕ್ಕೆ ಬರಲ್ಲ ಎಂದು ಭಾವಿಸಿ ಮುಸ್ಲಿಂ ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿ ನಂತರ ಗೆದ್ದರೆ ಅವರನ್ನ ಬಿಜೆಪಿ ಗೆ ಸೇರಿಸಿಕೊಳ್ಳುವ ವಾಮಮಾರ್ಗವನ್ನ ಅನುಸರಿಸಲು ಮುಂದಾಗಿದ್ದಾರೆ. ಆದರೆ ಚನ್ನಪಟ್ಟಣದ ಜನ ಬುದ್ಧಿವಂತರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಲಿದ್ದಾರೆಂದು ತಿಳಿಸಿದರು. ಜೊತೆಗೆ ಚನ್ನಪಟ್ಟಣ ನಗರಸಭೆಯ ಚುಕ್ಕಾಣಿಯನ್ನು ಕಾಂಗ್ರೆಸ್ ಹಿಡಿಯಲಿದೆ ಎಂದರು.

(ವರದಿ : ಎ.ಟಿ.ವೆಂಕಟೇಶ್)
Published by: Seema R
First published: April 6, 2021, 6:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories