Congress ಹಿರಿಯ ನಾಯಕರ ಹೇಳಿಕೆಗಳು ಪಕ್ಷಕ್ಕೆ ಇರುಸು ಮುರುಸು ತರುತ್ತಿದೆ; ಡಿಕೆ ಸುರೇಶ್ ಅಸಮಾಧಾನ

ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ವಿಚಾರವಾಗಿ ಮಾತನಾಡಿದ ಅವರು ನಾವು ಶರಣಾಗತಿ ಆಗಿಲ್ಲ, ಅಲ್ಲಿ ನಮ್ಮ ಪಕ್ಷದ ಪಾತ್ರ ಇರಲಿಲ್ಲ. ಅದಕ್ಕಾಗಿ ನಾವು ಮೌನವನ್ನು ವಹಿಸಿದ್ದೇವೆ, ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ

ಡಿಕೆ ಸುರೇಶ್

ಡಿಕೆ ಸುರೇಶ್

  • Share this:
ಹಿರಿಯ ನಾಯಕರುಗಳು (Congress Senior Leaders) ಮಾಧ್ಯಮ ಮುಂದೆ ಹೇಳಿಕೆ ನೀಡುತ್ತಿರುವುದರಿಂದ ಪಕ್ಷಕ್ಕೆ ಇರುಸು ಮುರುಸು ಆಗುತ್ತಿರುವುದು ಸತ್ಯ ಎಂದು ಸಂಸದ ಡಿ.ಕೆ.ಸುರೇಶ್ (MP DK Suresh) ಹೇಳಿದ್ದಾರೆ. ಹಾಸನ ಜಿಲ್ಲೆ, ಬೇಲೂರಿನಲ್ಲಿ (Beluru, Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಎಲ್ಲಾ ರೀತಿಯ ಅವಕಾಶಗಳನ್ನು ಕೊಟ್ಟು ಆಗಿದೆ, ಕೊಡ್ತಾ ಇದ್ದಾರೆ. ಯಾರನ್ನು ಕೂಡ ಕಡೆಗಣಿಸುವಂತಹ ಪ್ರಶ್ನೆಯೇ ಇಲ್ಲ. ಅವರೆಲ್ಲ ಪಕ್ಷದ ಹಿರಿಯ ಮುಖಂಡರಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ.‌ ಅಸಮಾಧಾನ ಇದ್ದರೆ ರಾಷ್ಟ್ರೀಯ ಅಧ್ಯಕ್ಷರ ಬಳಿ ಹೇಳಬೇಕು. ಅವರ ಮನಸ್ಸಿನಲ್ಲಿ ಏನಿದೆ, ಏನು ತೊಂದರೆಯಾಗಿದೆ ಅಂತ ತಿಳಿಸಿದರೆ, ಅದನ್ನು ಅರ್ಥ ಮಾಡಿಕೊಂಡು ಅದಕ್ಕೆ ಪರಿಹಾರ ಕೊಡಲು ಸಾಧ್ಯವಾಗುತ್ತೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ (DK Shivakumar) ಹಾಗೂ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ದ ಅಸಮಾಧಾನ ಹೊರಹಾಕಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಎಚ್.ಮನಿಯಪ್ಪ (KH Muniyappa) ಹೇಳಿಕೆಗೆ ತಿರುಗೇಟು ನೀಡಿದರು.

ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್‌ಪಿ ಲೀಡರ್ ಇಬ್ಬರು ನಾಲಾಯಕ್ ಎಂಬ  ಎಂ.ಡಿ‌.ಲಕ್ಷ್ಮೀನಾರಾಯಣ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್ ಅವರು ಏತಕ್ಕೆ ಈ ಪದ ಬಳಸಿದ್ದಾರೆ, ಲಾಯಕ್ಕೋ, ನಾಲಾಯಕ್ಕೋ ನನಗೆ ಗೊತ್ತಿಲ್., ಅವರು ಇಷ್ಟು ದಿನ ಏನು ಮಾಡುತ್ತಿದ್ದರು ಅದನ್ನು ಹೇಳಲಿ ಎಂದರು.

ಶ್ರೀರಾಮುಲು ಹೇಳಿಕೆಗೆ ತಿರುಗೇಟು

ಕಾಂಗ್ರೆಸ್ ಪಕ್ಷ ಐಸಿಯುನಲ್ಲಿದೆ ಎಂಬ ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿದ ಅವರು, ನಮ್ಮ‌ ಪಕ್ಷ ಐಸಿಯುನಲ್ಲಿದೆ ಅಂತ ನಮಗೇನು ಅನ್ನಿಸುತ್ತಿಲ್ಲ. ಅವರ ಭಾವನೆಗಳು ಐಸಿಯುನಲ್ಲಿದೆ. ಭಾರತೀಯ ಜನತಾ ಪಾರ್ಟಿಯ ಭಾವನೆಗಳು, ಚಿಂತನೆಗಳು ಐಸಿಯುನಲ್ಲಿದೆ. ಅದು ಅಂತಿಮ‌ ಹಂತಕ್ಕೆ ಬಂದಿದೆ. ಇದಕ್ಕೆ ಜನ 2023, 2024 ರ ಚುನಾವಣೆಯಲ್ಲಿ ತೀರ್ಮಾನ ಮಾಡುತ್ತಾರೆ.

ಇದನ್ನೂ ಓದಿ:  CM Raceನಲ್ಲಿ ಡಿಕೆ ಶಿವಕುಮಾರ್; ಪರೋಕ್ಷವಾಗಿ ಮಠಾಧೀಶರ ಆಶೀರ್ವಾದ ಕೇಳಿದ ಕೆಪಿಸಿಸಿ ಅಧ್ಯಕ್ಷ

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಾವ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ. 2023 ಕ್ಕೆ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಕರ್ನಾಟಕ ರಾಜ್ಯದಲ್ಲಿ ಹೋರಾಟ ಮಾಡುತ್ತದೆ. ಶೀಘ್ರದಲ್ಲಿಯೇ ಹೊಸ ಜಿಲ್ಲಾಧ್ಯಕ್ಷರಗಳನ್ನು ನೇಮಕ ಮಾಡಲಾಗುವುದು. ಎಲ್ಲೆಡೆ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದು, ಇದರ ಅರ್ತ ಪಕ್ಷ ಬಲವರ್ಧನೆ ಆಗುತ್ತಿದೆ ಎಂದು ಹೇಳಿದರು.

MP DK Suresh Reacts KH Muniyappa Statements sbtv mrq
ಕಾಂಗ್ರೆಸ್ ಸಭೆ


ಮಹಾರಾಷ್ಟ್ರದಲ್ಲಿ ನಮ್ಮ ಪಾತ್ರ ಇರಲಿಲ್ಲ

ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ವಿಚಾರವಾಗಿ ಮಾತನಾಡಿದ ಅವರು ನಾವು ಶರಣಾಗತಿ ಆಗಿಲ್ಲ, ಅಲ್ಲಿ ನಮ್ಮ ಪಕ್ಷದ ಪಾತ್ರ ಇರಲಿಲ್ಲ. ಅದಕ್ಕಾಗಿ ನಾವು ಮೌನವನ್ನು ವಹಿಸಿದ್ದೇವೆ, ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಕುದುರೆ ವ್ಯಾಪಾರ ನಿರಂತರವಾಗಿ ನಡೆಯುತ್ತಿದೆ. ಕುದುರೆ ವ್ಯಾಪಾರ ನಡೆಯುತ್ತಿರುವುದನ್ನ ಈ ದೇಶದ ಜನ ಗಮನಿಸಬೇಕು ಎಂದರು.

ಸಿದ್ದರಾಮೋತ್ಸವಕ್ಕೆ ನಾವು ಹೋಗ್ತೀವಿ

ಇನ್ನೂ ಸಿದ್ದರಾಮಯ್ಯ ಹುಟ್ಟುಹಬ್ಬದ ಅಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಸಿದ್ದರಾಮೋತ್ಸವ ಆಚರಣೆ ಕುರಿತು ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಅವರಿಗೆ 75 ವರ್ಷ ಆಗಿದೆ. ಆದ್ದರಿಂದ ಅವರ ಅಭಿಮಾನಿಗಳೆಲ್ಲ ಜನ್ಮದಿನ ಆಚರಿಸಬೇಕೆಂದು ತೀರ್ಮಾನ ಮಾಡಿದ್ದು, ಈ ಸಂದರ್ಭದಲ್ಲಿ ಎಲ್ಲಾ ಪಕ್ಷದ ನಾಯಕರುಗಳನ್ನು ಕರೆದು ಕಾರ್ಯಕ್ರಮ ಮಾಡುತ್ತಿದ್ದಾರೆ.

ಇದನ್ನೂ ಓದಿ: KN Rajanna ಪರ ನಿಂತ ಅಹಿಂದ ಸಂಘಟನೆ; ರಾಜಣ್ಣ ವಿಚಾರಕ್ಕೆ ಧಕ್ಕೆ ಬಂದ್ರೆ ಸುಮ್ಮನೆ ಇರಲ್ಲ

ನನ್ನನ್ನು ಕರೆದಿದ್ದಾರೆ, ನಾವು ಎಲ್ಲಾ ಹೋಗುತ್ತೇವೆ ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಅಂದರು. ಇದಕ್ಕೂ ಮುನ್ನ ಹಾಸನ ಜಿಲ್ಲೆ, ಬೇಲೂರು ಪಟ್ಟಣದ ಪ್ಲಾಂಟರ್ಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ನವ ಸಂಕಲ್ಪ ಚಿಂತನಾ ಶಿಬಿರದ ಆರಂಭದಲ್ಲಿ ಕಾಂಗ್ರೆಸ್ ಧ್ವಜ ಹಾರಿಸಲಾಗದೆ  ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್ ಪರದಾಡಿದರು.

ಸರಿಯಾಗಿ ಧ್ವಜ ಕಟ್ಟದ ಕಾರಣ ಧ್ವಜಾರೋಹಣದ ವೇಳೆ ಎಷ್ಟೇ ಎಳೆದರೂ ಧ್ವಜಕ್ಕೆ ಕಟ್ಟಿದ ಹಗ್ಗ ಬಿಚ್ಚಿಕೊಳ್ಳಲಿಲ್ಲ.‌ ಕೊನೆಗೆ ಧ್ವಜ ಕೆಳಗಿಳಿಸಿ ಧ್ವಜ ಬಿಚ್ಚಿ ಧ್ವಜಾರೋಹಣ ನೆರವೇರಿಸಿದರು.
Published by:Mahmadrafik K
First published: