ಇದು ಸಿಡಿಗಳ ಸರ್ಕಾರ; ಆರೋಪಿಯ ರಕ್ಷಣೆ ಮಾಡಲು ಮುಂದಾಗಿದೆ; ಸಂಸದ ಡಿಕೆ ಸುರೇಶ್ ವಾಗ್ದಾಳಿ

ಅವಾಚ್ಯ ಶಬ್ದಕ್ಕೆ, ಆಯಪ್ಪಾ ಎದುರು ಸಿಕ್ಕಾಗ ಏನು ಹೇಳಬೇಕೋ ಅದನ್ನು ಹೇಳ್ತೇನೆ. ಮಾಧ್ಯಮದ ಎದುರು ಹೇಳಲ್ಲ. ಕನಕಪುರಕ್ಕಾದ್ರೂ ಬರಲಿ, ಬೆಂಗಳೂರಿಗಾದ್ರೂ ಬರಲಿ ಬಂದಾಗ ನೋಡೋಣ ಎಂದು ಹೇಳಿದರು.

ಸಂಸದ ಡಿ ಕೆ ಸುರೇಶ್

ಸಂಸದ ಡಿ ಕೆ ಸುರೇಶ್

 • Share this:
  ಬೆಂಗಳೂರು(ಮಾ.28): ರಮೇಶ್​ ಜಾರಕಿಹೊಳಿ ಸಿಡಿ ಕೇಸ್ ವಿಚಾರವಾಗಿ ಸರ್ಕಾರ ಎಲ್ಲವನ್ನೂ ಎಸ್ ಐ ಟಿ ಯಿಂದ ತನಿಖೆ ಮಾಡುತ್ತೇವೆ ಅಂತ ಹೇಳಿ ದಿಕ್ಕು ತಪ್ಪಿಸುವಂತ ಕೆಲಸ ಮಾಡುತ್ತಿದೆ.  ಆರೋಪಿಯನ್ನ ರಕ್ಷಣೆ ಮಾಡಲು ಮುಂದಾಗಿದೆ. ಇದು ಸಿಡಿಗಳ ಸರ್ಕಾರ. ಸಿಡಿಗಳ ಸರ್ಕಾರಕ್ಕೆ ಹಿಂದೆ-ಮುಂದೆ ಏನು ಇಲ್ಲ ಅನ್ಸುತ್ತೆ.  ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅವರ ಶಾಸಕರು, ಸಚಿವರು ಕಿತ್ತಾಡಿದನ್ನ ನೋಡಿದ್ದೇವೆ. ಇನ್ನು ಕೆಲವರು ತಮ್ಮ ವಿಡಿಯೋವನ್ನು ಪ್ರಸಾರ ಮಾಡಬಾರದು ಅಂತ ತಡೆಯಾಜ್ಞೆ ತಂದಿದ್ದಾರೆ.  ಮಾನ ಉಳಿಸಿಕೊಳ್ಳಲು ನ್ಯಾಯಲಯದ ಮೊರೆ ಹೋಗಿ ಈಗ ಕಾಂಗ್ರೆಸ್ ಮೇಲೆ ಎತ್ತಾಕ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್​ ಕಿಡಿಕಾರಿದ್ದಾರೆ. 

  ಮುಂದುವರೆದ ಅವರು, ಸರ್ಕಾರದಲ್ಲಿ ಸಿಎಂ ಇಲ್ಲ, ಗೃಹ ಮಂತ್ರಿಗಳೂ ಕೂಡ ಇಲ್ಲ. ಸರ್ಕಾರ ತಂದವರು ಇವರೇ, ಸರ್ಕಾರ ಬೀಳಿಸೋದು ಇವರೇ ಅಲ್ವಾ.  ಇವರಿಂದ ಇಡೀ ಬಿಜೆಪಿಗೆ ಆತಂಕ ಇದೆ. ಬಹುಶಃ ಇದೊಂದು ಹಾಸ್ಯಾಸ್ಪದ ಎನಿಸುತ್ತದೆ. ಜನರಿಗೆ ಸರ್ಕಾರದ ಕಡೆಯಿಂದ ಒಂದು ಸಂದೇಶ ಹೋಗಬೇಕಾಗಿತ್ತು. ಆದ್ರೆ ಇನ್ಮುಂದೆ ಮಹಿಳೆಯರ ರಕ್ಷಣೆಗೆ ಸರ್ಕಾರ ಇಲ್ಲ ಅಂತ ಆಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

  ಇನ್ನು, ಅಕ್ರಮ ಚಟುವಟಿಕೆಗಳನ್ನು ಮುಚ್ಚಿಕೊಂಡು ಸರ್ಕಾರ ಅವರನ್ನೇ ರಕ್ಷಣೆ ಮಾಡ್ತಿದೆ. ಯುವತಿಯನ್ನು ಡಿಕೆಶಿ ನಿಯಂತ್ರಣ ಮಾಡ್ತಿದಾರೋ, ಎಸ್ಐಟಿ ರಕ್ಷಣೆ ಮಾಡ್ತಿದೆಯೋ ಗೊತ್ತಿಲ್ಲ ನನಗೆ.  ಎಸ್ಐಟಿ ಫ್ರೇಮ್ ವರ್ಕ್ ಏನು? ಯುವತಿಯ ಹೇಳಿಕೆ ಮೇಲೆ ಇದುವರೆಗೆ ವಿಚಾರಣೆಯೇ ನಡೆಯಲಿಲ್ವಲ್ಲ. ಸರ್ಕಾರ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡುತ್ತಿದೆ. ಹೀಗಾಗಿ ನಾವೂ ಕೂಡ ಯುವತಿಯ ರಕ್ಷಣೆ ಮಾಡಲು ನಿಲ್ಲಬೇಕಾಗುತ್ತದೆ.  ಗೃಹ ಸಚಿವರು ಕಾನೂನು ಸುರಕ್ಷತೆ ಕೈ ಚೆಲ್ಲಿ ಕೂತಿದ್ದಾರೆ ಎಂದರು.

  ರಾಯಚೂರು: ಕೊರೋನಾ ಹೆಚ್ಚಾದ ಹಿನ್ನಲೆ ಅಮರೇಶ್ವರ ಜಾತ್ರೆ ರದ್ದು ಮಾಡಿದ ಜಿಲ್ಲಾಡಳಿತ

  ಅವಾಚ್ಯ ಶಬ್ದಕ್ಕೆ, ಆಯಪ್ಪಾ ಎದುರು ಸಿಕ್ಕಾಗ ಏನು ಹೇಳಬೇಕೋ ಅದನ್ನು ಹೇಳ್ತೇನೆ. ಮಾಧ್ಯಮದ ಎದುರು ಹೇಳಲ್ಲ. ಕನಕಪುರಕ್ಕಾದ್ರೂ ಬರಲಿ, ಬೆಂಗಳೂರಿಗಾದ್ರೂ ಬರಲಿ ಬಂದಾಗ ನೋಡೋಣ ಎಂದು ಹೇಳಿದರು.

  ಅವರದೇ ಪಕ್ಷದ ಶಾಸಕರು ಸಿಡಿ ವಿಚಾರವಾಗಿ ಕಿತ್ತಾಡಿದ್ದನ್ನು ನೋಡಿದ್ದೇವೆ.  ಇದು ಕಾಂಗ್ರೆಸ್ ನವರು ಮಾಡಿದ್ದಲ್ಲ. ಅವರದೇ ಶಾಸಕರು ಅವರ ಮಾನ ಮುಚ್ಕೊಳೋಕೆ ಕೋರ್ಟ್ ಮೊರೆ ಹೋದರು. ಎಲ್ಲೋ ಬಿಟ್ಟಿದ್ದ ಮಾನವನ್ನು ಮುಚ್ಕೊಳೋಕೆ ಹೋದವರು ಅವರೇ.  ಇದನ್ನು ಕಾಂಗ್ರೆಸ್ ನವರ ಮೇಲೆ ಎತ್ತಿಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ಗಂಭಿರವಾಗಿ ಆರೋಪ ಮಾಡಿದರು.

  ಸಿಡಿ ಸರ್ಕಾರದ ಪ್ರಾಸ್ತಾವಿಕ ಡ್ರಾಮಾ ನಡೆಯುತ್ತಿರುವುದೇ ಹೊರತು, ಒಬ್ಬ ಮಗಳ ವಯಸ್ಸಿನ ಹೆಣ್ಣುಮಗಳನ್ನು ಬೆತ್ತಲು ಮಾಡಿದವರ ಬಗ್ಗೆ ಎಲ್ಲೂ ಕೂಡ ಚರ್ಚೆ ಮಾಡ್ತಿಲ್ಲ. ಇಂಥವರ ರಕ್ಷಣೆ ಮಾಡುವುದಕ್ಕೆ ರಾಷ್ಟ್ರೀಯ ಪಕ್ಷ ನಿಂತಿರುವುದನ್ನು ನೋಡಿದ್ರೆ, ಇದು ಸಿಡಿಯಿಂದ ನಿಂತಿರುವ ಸರ್ಕಾರ ಹೊರತು ಬೇರೆಯದರಿಂದ ನಿಂತಿಲ್ಲ ಎಂದರು.
  Published by:Latha CG
  First published: