ಗಂಡಸ್ತನ ಇದೆಯಾ ಎಂದು ಕರೆಯೋದು BJPಯ ಸಂಸ್ಕೃತಿಯಾ? DK Suresh ಪ್ರಶ್ನೆ

ಮುಖ್ಯಮಂತ್ರಿಗಳೇ ಸಚಿವರಿಗೆ ಬಾಷಣ ಮಾಡಿದ್ದು ಸಾಕು ಎಂದು ಸೂಚನೆ ಮಾಡಿದ್ರು. ಆದರೂ ಅವರು ನಿಲ್ಲಿಸಲಿಲ್ಲ. ಇದು ರಾಜ್ಯದ ಜನಕ್ಕೆ ಅವಮಾನ ಬರುವ ರೀತಿಯ ವರ್ತನೆ. ಒಬ್ಬ  ಮಂತ್ರಿ ಅನವಶ್ಯಕವಾಗಿ ಸಭೆಯನ್ನು ಹೊರತು ಪಡಿಸಿ ಮಾತಾಡಿದ್ರು

ಸಂಸದ ಡಿ.ಕೆ.ಸುರೇಶ್

ಸಂಸದ ಡಿ.ಕೆ.ಸುರೇಶ್

  • Share this:
ಸೋಮವಾರ ರಾಮನಗರದಲ್ಲಿ ಸಚಿವ ಅಶ್ವತ್ಥ ನಾರಾಯಣ್ ((Minister Ashwath Narayan)  ಮತ್ತು ಸಂಸದ ಡಿ.ಕೆ.ಸುರೇಶ್ (MP DK Suresh) ಅವರ ನಡುವಿನ ವಾಕ್ಸಮರ ಇಂದು ಸಹ ಮುಂದುವರಿದಿದೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಸುರೇಶ್ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿಯ (BJP) ಕಾರ್ಯಕರ್ತರಿಗೆ ಅಭಿನಂಧನೆ ಸಲ್ಲಿಸುತ್ತೇನೆ. ಮುಖ್ಯಮಂತ್ರಿಗಳ ಮುಂದೆ ಸಚಿವರ ನಡವಳಿಕೆ ಮಾಡಿದ್ದನ್ನು ಸಮರ್ಥನೆ ಮಾಡಿಕೊಳ್ತಿದಾರೆ. ಮುಖ್ಯಮಂತ್ರಿಗಳೇ ಸಚಿವರಿಗೆ ಬಾಷಣ ಮಾಡಿದ್ದು ಸಾಕು ಎಂದು ಸೂಚನೆ ಮಾಡಿದ್ರು. ಆದರೂ ಅವರು ನಿಲ್ಲಿಸಲಿಲ್ಲ. ಇದು ರಾಜ್ಯದ ಜನಕ್ಕೆ ಅವಮಾನ ಬರುವ ರೀತಿಯ ವರ್ತನೆ. ಒಬ್ಬ  ಮಂತ್ರಿ ಅನವಶ್ಯಕವಾಗಿ ಸಭೆಯನ್ನು ಹೊರತು ಪಡಿಸಿ ಮಾತಾಡಿದ್ರು. ನಾವು ಬಿಜೆಪಿಯವರು, ನಾವು ಆಡೋದೇ ಹಿಂಗೆ, ಗಂಡಸಿದ್ರೆ ಬನ್ನಿ ಅಂತಾ ಮಾತಾಡ್ತಾರೆ. ಇದು ನನಗೆ ಮಾಡಿದ ಅಪಮಾನ ಅಲ್ಲ. ರಾಮನಗರ ಜನಕ್ಕೆ (Ramanagara) ಮಾಡಿದ ಅಪಮಾನ, ನಾಡಪ್ರಭು ಕೆಂಪೇಗೌಡರಿಗೆ (Nadaprabhu Kempe gowda) ಮಾಡಿದ ಅವಮಾನ ಎಂದು ಸಚಿವ ಅಶ್ವತ್ಥ ನಾರಾಯಣ್ (Minister Ashwath Narayan) ಅವರ ಹೇಳಿಕೆಯನ್ನು ಸಂಸದ ಡಿ.ಕೆ.ಸುರೇಶ್ (MP DK Suresh) ಖಂಡಿಸಿದರು.

ಸರ್ಕಾರದ ಕಾರ್ಯಕ್ರಮದಲ್ಲಿ ಇಂತಾ ಮಾತುಗಳು ಸರಿಯೇ ಎಂದು ಬಿಜೆಪಿ ಅವರ ರಾಜ್ಯದ ಅಧ್ಯಕ್ಷರಿಗೆ ನಾನು ಕೇಳಲು ಬಯಸುತ್ತೇನೆ. ಒಬ್ಬ ಸಿಎಂ ಮುಂದೆ, ಆ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಮುಂದೆ ಅವರು ಮಾಡಿದ್ದು ಸರಿಯೇ ಎಂದು ಡಿ.ಕೆ.ಸುರೇಶ್ ಪ್ರಶ್ನೆ ಮಾಡಿದರು.

ಕುಮಾರಸ್ವಾಮಿ ಅವರ ಮಾತುಗಳ ಮೇಲೆ ನಂಬಿಕೆ ಇಲ್ಲ

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಮಾತುಗಳ ಮೇಲೆ ನಂಬಿಕೆ ಇಲ್ಲ. ಅವರು ಒಬ್ರು ಮಾಜಿ ಮುಖ್ಯಮಂತ್ರಿ ಗಳು ಅವರಿಗೆ ಮುಂದೆ ಸಂದರ್ಭ ಬರುತ್ತೆ, ಅವಾಗ ಸೂಕ್ತ ಉತ್ತರ ನೀಡುತ್ತೇನೆ ಎಂದರು. ದೇಶದಲ್ಲಿ ಓಮೈಕ್ರಾನ್ ಹೆಚ್ಚಾಗುತ್ತಿದೆ. ಪ್ರಧಾನ ಮಂತ್ರಿ ಗಳಿಗೆ ಮನವಿ ಮಾಡಿ ದೇಶದಲ್ಲಿ ನಡೆಯುತ್ತಿರುವ ಎಲ್ಲ ರ್ಯಾಲಿ ಗಳನ್ನು ನಿಲ್ಲಿಸಲಿ ಎಂದು ಆರೋಗ್ಯ ಸಚಿವರ ಹೇಳಿಕೆಗ ಸಂಸದ ಸುರೇಶ್ ಕುಮಾರ್ ತಿರುಗೇಟು ನೀಡಿದರು.

ಇದನ್ನೂ ಓದಿ:  ಕಲ್ಲು ಬಂಡೆಗಳನ್ನು ನುಂಗಿ ಮಣ್ಣು ಬಗೆದ ಡಿಸೈನ್ ವೀರರಿಗೆ ನೆಲ, ಜಲ ಈಗ ನೆನಪಿಗೆ ಬಂದಿದೆ: DK Brothersಗೆ HDK ಗುದ್ದು

ಗಂಡಸ್ತನದ ಮಾತು ಯಾಕೆ ಬರುತ್ತೆ..?

ರಾಮನಗರದಲ್ಲಿ ನಡೆದ ಕಾರ್ಯಕ್ರಮ ಬಿಜೆಪಿಯದ್ದಲ್ಲ, ಅದು ಒಂದು ಸರ್ಕಾರಿ ಕಾರ್ಯಕ್ರಮ. ಆ ಕಾರ್ಯಕ್ರಮದಲ್ಲಿ ಆವೇಶವಾಗಿ ಅಶ್ವಥ್ ನಾರಾಯಣ್ ಗಂಡಸ್ತನದ ಬಗ್ಗೆ ಮಾತಾಡಿದರು. ಒಬ್ಬ ರಾಜ್ಯದ ಮಂತ್ರಿಯಾಗಿ, ಅವರ ಮಾತಿನಲ್ಲಿ ಗಂಡಸ್ತನದ ಮಾತು ಯಾಕೆ ಬರುತ್ತೆ..? ಗಂಡಸ್ತನ ಇದೆಯಾ ಎಂದು ಕರೆಯೋದು ಬಿಜೆಪಿಯ ಸಂಸ್ಕೃತಿಯಾ..? ನಾನೊಬ್ಬ ಜಿಲ್ಲೆಯ ಸಂಸದನಾಗಿ ಅವರ ಮಾತನ್ನು ತಡೆಯುವ ಕೆಲಸ ಮಾಡಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಪ್ರಚೋದನೆ ಹಾಗೂ ಭಾವನಾತ್ಮಕ ವಿಷಯಗಳು ಬಿಜೆಪಿಯ ಅಜೆಂಡಾ

ರಾಮನಗರ ಜನರ ಗೌರವ ಉಳಿಸಲು ನಾನು ಅಲ್ಲಿ ಪ್ರತಿಭಟನೆ ಮಾಡಿದ್ಸೇನೆ. ಗಂಡಸ್ತನ ಬಗ್ಗೆ ಚರ್ಚೆ ಮಾಡೋಕೆ ಸಮಯ ನಿಗಧಿ ಮಾಡಿ ಎಂದು ಅಲ್ಲಿಯೇ ಹೇಳಿದ್ದೇನೆ. ನಾನು ಪಲಾಯನ ಮಾಡುವ ಡಿಕೆ ಸುರೇಶ್ ಅಲ್ಲ. ಪ್ರಚೋದನೆ ಹಾಗೂ ಭಾವನಾತ್ಮಕ ವಿಷಯಗಳು ಬಿಜೆಪಿಯ ಅಜೆಂಡಾ. ಇವರೆಡಿಂದಲೇ ರಾಜಕಾರಣ ಮಾಡಿಕೊಂಡು, ದೇಶ ಹೊಡೆಯುವ ಹಾಗೂ ಯುವಕರನ್ನು ಕೆರಳಿಸುವ ಕೆಲಸ ಆಗ್ತಿದೆ. ಇದಕ್ಕೆ ಶೀಘ್ರವೇ ಅಂತ್ಯದ ದಿನಗಳು ಬರಲಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ‘ಕನಕಪುರದ ರೌಡಿ’ಯಿಂದ ಅಟ್ಟಹಾಸ.. ವೇದಿಕೆ ಮೇಲಿನ ಕಿತ್ತಾಟ Tweet War ಮೂಲಕ ಮುಂದುವರಿಕೆ..

ರಾಮನಗರದಲ್ಲಿ  ನಿನ್ನೆ ನಡೆದಿದ್ದೇನು?:

ಸಚಿವ ಡಾ.ಸಿ.ಎನ್.ಅಶ್ವಥ್​ ನಾರಾಯಣ ಹಾಗೂ ಸಂಸದ ಡಿಕೆ ಸುರೇಶ್​ ಮಧ್ಯೆ ವೇದಿಕೆ ಮೇಲೆಯೇ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಅಷ್ಟರಲ್ಲಿ ವೇದಿಕೆಯಲ್ಲಿದ್ದ ಇತರರು, ಪೊಲೀಸರು ಬಂದು ಇಬ್ಬರನ್ನು ತಡೆದರು. ಸಚಿವ ಅಶ್ವಥ್​ ನಾರಾಯಣ ಭಾಷಣ ಮಾಡುತ್ತಿದ್ದಾಗ ಅವರ ಮಾತಿಗೆ ಕೆರಳಿದ ಸಂಸದ ಡಿಕೆ ಸುರೇಶ್​ ಅವರ ಬಳಿಯೇ ಬಂದು ಸಾಕು ಮಾಡು ನಿನ್ನ ಮಾತು ಎಂದು ಗದರಿದರು. ಇಬ್ಬರ ಮಧ್ಯೆ ಜಟಾಪಟಿ ನಡೆಯಿತು. ಇಬ್ಬರನ್ನು ನೆರೆದಿದ್ದವರು ತಡೆದರು.
Published by:Mahmadrafik K
First published: