ಕುಣಿಯಲಾರದ ಹೆಂಗಸು ಅಂತಾರಲ್ಲ ಹಾಗಾಯ್ತು ಎಂಟಿಬಿ ನಾಗರಾಜ್ ಆರೋಪ; ಕಿಡಿಕಾರಿದ ಸಂಸದ ಬಚ್ಚೇಗೌಡ

ಶರತ್ ಸ್ವತಃ ವರ್ಚಸ್ಸಿನಿಂದ ಗೆದ್ದಿದ್ದಾನೆ. ಬಿಜೆಪಿಯಿಂದ ಆತನಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಆತ ಸ್ಥಳೀಯ ನಾಯಕರ ಒತ್ತಾಯದ ಮೇರೆಗೆ ಸ್ವತಂತ್ರ್ಯವಾಗಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ಧಾನೆ. ಇದು ಮತದಾರರ ತೀರ್ಪು ಇದನ್ನು ಸ್ವಾಗತಿಸಬೇಕು ಎಂದು ಸಂಸದ ಬಿ.ಎನ್. ಬಚ್ಚೇಗೌಡ ಅಭಿಪ್ರಾಯಪಟ್ಟಿದ್ದಾರೆ.

MAshok Kumar | news18-kannada
Updated:December 9, 2019, 3:26 PM IST
ಕುಣಿಯಲಾರದ ಹೆಂಗಸು ಅಂತಾರಲ್ಲ ಹಾಗಾಯ್ತು ಎಂಟಿಬಿ ನಾಗರಾಜ್ ಆರೋಪ; ಕಿಡಿಕಾರಿದ ಸಂಸದ ಬಚ್ಚೇಗೌಡ
ಬಿಎನ್ ಬಚ್ಚೇಗೌಡ, ಎಂಟಿಬಿ ನಾಗರಾಜ್.
  • Share this:
ಬೆಂಗಳೂರು (ಡಿಸೆಂಬರ್ 09); ಹೊಸಕೋಟೆ ಕ್ಷೇತ್ರದಿಂದ ಯುವ ನಾಯಕ ಶರತ್ ಬಚ್ಚೇಗೌಡ ಸ್ವಯಂ ವರ್ಚಸ್ಸಿನಿಂದ, ಸ್ವಾಭಿಮಾನಿ ವೇದಿಕೆಯಿಂದ ಸ್ಪರ್ಧಿಸಿದ್ದಾರೆ. ಹೀಗಾಗಿ, “ಶರತ್ ಬೆಚ್ಚೇಗೌಡ ಗೆಲುವಿಗೆ ನಾನು ಸಹಕಾರ ನೀಡಿದೆ” ಎಂಬ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರ ಟೀಕೆ ಸರಿಯಲ್ಲ. ಈ ಟೀಕೆ ಕುಣಿಯಲಾರದ ಹೆಂಗಸು ಅಂತಾರಲ್ಲ ಹಾಗಾಯ್ತು ಎಂದು ಸಂಸದ ಬಿ.ಎನ್. ಬಚ್ಚೇಗೌಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಶರತ್ ಬಚ್ಚೇಗೌಡ ಹೊಸಕೋಟೆ ಕಣ ಪ್ರವೇಶಿಸಿದ ದಿನದಿಂದ ಎಂಟಿಬಿ ನಾಗರಾಜ್ ಬಿಜೆಪಿ ರಾಜ್ಯ ನಾಯಕರಿಗೆ ಕರೆ ಮಾಡಿ ಶರತ್ ಬಚ್ಚೇಗೌಡ ಅವರನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಲು ಒತ್ತಡ ಹೇರಿದ್ದರು. ಆದರೆ, ಯಾರ ಒತ್ತಡಕ್ಕೂ ಮಣಿಯದ ಶರತ್ ಬಚ್ಚೇಗೌಡ ಕೊನೆಗೂ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಹೀಗಾಗಿ ಹೊಸಕೋಟೆ ಸೋಲಿನ ಕುರಿತು ಎಂಟಿಬಿ ನಾಗರಾಜ್ ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, “ಶರತ್ ಬಚ್ಚೇಗೌಡ ಗೆಲುವಿಗೆ ಅವರ ತಂದೆ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಸಹಾಯ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ. ಆದರೆ, ಈ ಎಲ್ಲಾ ಆರೋಪಗಳಿಗೆ ಇಂದು ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದ ಬಿ.ಎಸ್. ಬಚ್ಚೇಗೌಡ,

“ಶರತ್ ಸ್ವತಃ ವರ್ಚಸ್ಸಿನಿಂದ ಗೆದ್ದಿದ್ದಾನೆ. ಬಿಜೆಪಿಯಿಂದ ಆತನಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಆತ ಸ್ಥಳೀಯ ನಾಯಕರ ಒತ್ತಾಯದ ಮೇರೆಗೆ ಸ್ವತಂತ್ರ್ಯವಾಗಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ಧಾನೆ. ಇದು ಮತದಾರರ ತೀರ್ಪು ಇದನ್ನು ಸ್ವಾಗತಿಸಬೇಕು" ಎಂದಿದ್ದಾರೆ.

"ಚುನಾವಣಾ ಸಂದರ್ಭದಲ್ಲಿ ಶರತ್ ನನ್ನ ಮಗ ಎಂದು ನಾನು ಎಲ್ಲಿಯೂ ಪ್ರಚಾರ ಮಾಡಿಲ್ಲ. ಆರೋಗ್ಯ ಹದಗೆಟ್ಟಿದ್ದ ಕಾರಣ ಕಳೆದ 40 ದಿನಗಳಿಂದ ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ಇದೇ ಕಾರಣಕ್ಕೆ ಚಿಕ್ಕಬಳ್ಳಾಪುರ ಉಸ್ತುವಾರಿ ಹೊತ್ತಿದ್ರೂ ನಾನು ಹೋಗಲು ಸಾಧ್ಯವಾಗಲಿಲ್ಲ. ಅನರ್ಹ ಶಾಸಕರಿಗೆ ಟಿಕೇಟ್ ನೀಡುವುದು ಹೈಕಮಾಂಡ್ ಅದೇಶ ಅದನ್ನ ಯಾರು ಪ್ರಶ್ನೆ ಮಾಡುವಂತಿಲ್ಲ. ನಾನು ಪಕ್ಷದ ಈ ನಿರ್ಧಾರವನ್ನು ಪ್ರಶ್ನೆ ಮಾಡಿರಲಿಲ್ಲ. ಆದರೆ, ಎಂಟಿಬಿ ಈಗ ನನ್ನ ವಿರುದ್ಧವೇ ಬಿಎಸ್​ವೈ ಗೆ ದೂರು ನೀಡಿದ್ದಾರೆ.

ನಾನು ಚುನಾವಣೆಯಲ್ಲಿ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಶರತ್ ಗೆ ಬೆಂಬಲ ನೀಡಿಲ್ಲ. ಎರಡು ಲಕ್ಷ ಮತದಾರನಿಗೆ ನಾನು ಹೇಗೆ ಪರೋಕ್ಷವಾಗಿ ಮಾತನಾಡಲಿ. ಎಲ್ಲೂ ಪಾಂಪ್ಲೇಟ್ ಮಾಡಿ ಹಂಚಿಲ್ಲ. ಆದರೆ, ಸೋಲಿನ ನಂತರ ಎಂಟಿಬಿ ನಡೆದುಕೊಂಡ ವರ್ತನೆ ಸರಿ ಇಲ್ಲ. 1200 ಕೋಟಿ ಹಣ ಇದೆ ಅಂತ ಅವರು ಅಹಂ ತೋರಿಸಿದ್ರು. ಅಲ್ಲದೆ, ಸಿದ್ದರಾಮಯ್ಯ ಅವರಿಗೆ ಎಂಟಿಬಿ ನಾಗರಾಜ್ ಮೇಲೆ ಕೋಪ ಇತ್ತು. ಹೀಗಾಗಿ ಕುರುಬರ ಓಟುಗಳು ಇಬ್ಬಾಗ ಆಗಿದೆ. ಇದೇ ಕಾರಣಕ್ಕೆ ಎಂಟಿಬಿ ಸೋಲನ್ನಪ್ಪಿದ್ದಾರೆ" ಎಂದು ಬಚ್ಚೇಗೌಡ ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ, ಹೈಕಮಾಂಡ್​ ಕ್ರಮದ ಬಗ್ಗೆಯೂ ಮಾತನಾಡಿರುವ ಅವರು, "ನಾನು ಯಾರಿಗೂ ಸಹಾಯ ಮಾಡಿಲ್ಲ ಎಂದ ಮೇಲೆ ಹೈಕಮಾಂಡ್ ನನ್ನ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತದೆ?, ಸಂಸದರ ಮೇಲೆ ಹೇಗೆ ಕ್ರಮ ತೆಗೆದುಕೊಳ್ಳುತ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿರುವ ತಮ್ಮ ಮಗ ಶರತ್ ಬಚ್ಚೇಗೌಡ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.ಇದನ್ನೂ ಓದಿ : ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ; ಉಪ ಮುಖ್ಯಮಂತ್ರಿ ಆಗ್ತಾರ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ?
First published: December 9, 2019, 3:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading