ಎಐಎಂಐಎಂ ಪಕ್ಷದ ಸ್ಥಾಪಕ ಅಸಾದುದ್ದೀನ್ ಓವೈಸಿ (AIMIM Founder Asaduddin Owaisi) ಅವರು ಬೀದರ್ ಜಿಲ್ಲೆಯ ಹುಮ್ನಾಬಾದ್ (Humnabad, Bidar) ಪಟ್ಟಣದಲ್ಲಿ ನಡೆದ ಜಲಸಾ ರಹಮತುಲ್ ಅಲ್ ಅಮೀನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡುವ ವೇಳೆ ಆರ್ಎಸ್ಎಸ್ (RSS) ವಿರುದ್ಧ ಗುಡುಗಿದರು. ಕಳೆದ ಕೆಲವು ದಿನಗಳಿಂದ ಜನಸಂಖ್ಯಾ ನಿಯಂತ್ರಣದ (Population Control) ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಇದೇ ವಿಷಯವಾಗಿ ಹುಮ್ನಾಬಾದ್ನಲ್ಲಿ ಮಾತನಾಡಿ, ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಆರ್ಎಸ್ಎಸ್ನವರು ಬೇಕಾದ್ರೆ ಹೆಚ್ಚು ಮಕ್ಕಳನ್ನು ಹುಟ್ಟಿಸಲಿ. ನಾವು ಮಾತ್ರ ಹುಟ್ಟಿಸಲ್ಲ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿಗಳು ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆದು ಹಾಕುತ್ತೇವೆ ಎಂದು ಹೇಳುತ್ತಾರೆ. ಮೊದಲು ನಿಮ್ಮ ಪಕ್ಷದಲ್ಲಿ ತೆಗೆದುಕೊಳ್ಳುತ್ತಿರುವ 40 ಪರ್ಸೆಂಟ್ ಕಮಿಷನ್ (40% Commission) ತೆಗೆದುಕೊಳ್ಳುವದನ್ನು ನಿಲ್ಲಿಸಲಿ. ಕುತ್ತಿಗೆಗೆ ಬರುವ ತನಕ ತಿನ್ನೋದನ್ನು ನಿಲ್ಲಿಸಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಲ್ಲಿ ನೋಡಿದ್ರೆ ಕೊಡಿ ಕೊಡಿ ಎಂದು ಕೈ ಚಾಚುತ್ತಾರೆ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ನಾನು ತಿನ್ನುವುದಿಲ್ಲ. ಇನ್ನೊಬ್ಬರಿಗೂ ತಿನ್ನಲು ಬಿಡಲ್ಲ ಎಂದು ಹೇಳುತ್ತಾರೆ ಅಂತ ವ್ಯಂಗ್ಯವಾಡಿದರು.
ಮುಸ್ಲಿಮರೇ ಕಾಂಡೋಮ್ ಬಳಸೋದು ಹೆಚ್ಚು
ಮುಸ್ಲಿಂ ಧರ್ಮದ ಜನರೇ ಹೆಚ್ಚು ಕಾಂಡೋಮ್ಗಳನ್ನು ಬಳಸುತ್ತಿದ್ದಾರೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಮುದಾಯ ಆಧಾರಿತ ಜನಸಂಖ್ಯೆಯ ಅಸಮತೋಲನದ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೀಗೆ ಪ್ರತಿಕ್ರಿಯಿಸಿದ್ದರು. ಈಗ ಮತ್ತೆ ಬೀದರ್ನಲ್ಲಿಯೂ ಅದೇ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಮೋಹನ್ ಭಾಗವತ್ ಅವರೇ (RSS Chief Mohan Bhagwat), ಚಿಂತಿಸಬೇಡಿ, ಮುಸ್ಲಿಂ ಜನಸಂಖ್ಯೆ (Muslims Population) ಹೆಚ್ಚಾಗುತ್ತಿಲ್ಲ, ಬದಲಿಗೆ ಕುಸಿಯುತ್ತಿದೆ. ಮುಸ್ಲಿಮರ ಒಟ್ಟು ಫಲವತ್ತತೆ ದರವು ಕುಸಿದಿದೆ. ಕಾಂಡೋಮ್ ಅನ್ನು ಯಾರು ಹೆಚ್ಚು ಬಳಸುತ್ತಿದ್ದಾರೆ? ನಾವು. ಆದರೆ ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಬಹಿರಂಗವಾಗಿ ಟೀಕಿಸಿದ್ದರು.
ಇದನ್ನೂ ಓದಿ: Asaduddin Owaisi: ಭಾರತಕ್ಕೆ ದುರ್ಬಲ ಪ್ರಧಾನಿ ಸಿಗಲಿ ಎಂದ ಅಸಾದುದ್ದೀನ್ ಓವೈಸಿ
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಂದು ಭಾರತಕ್ಕೆ ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರದ ನೀತಿಯ ಅಗತ್ಯವಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಆರ್ಎಸ್ಎಸ್ ಸಂಸ್ಥಾಪನಾ ದಿನದ ನಿಮಿತ್ತ ನಾಗಪುರದಲ್ಲಿ ನಡೆದ ವಿಜಯದಶಮಿ ಹಬ್ಬದ ಉತ್ಸವದಲ್ಲಿ ಮಾತನಾಡಿದ ಅವರು, ಭಾರತದ ಜನಸಂಖ್ಯೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ದೇಶ ಒಡೆಯುವ ಭೀತಿ ಹೆಚ್ಚಾಗುವ ಕುರಿತು ಉಲ್ಲೇಖಿಸಿದ್ದರು.
ಇದನ್ನೂ ಓದಿ: Tipu Express: ಟಿಪ್ಪು ಕಂಡ್ರೆ ಬಿಜೆಪಿಗೆ ಈಗಲೂ ಹೆದರಿಕೆ: ಓವೈಸಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ