HOME » NEWS » State » MOVIE ACTORS ARTIST AND POETS SHOULD SUPPORT THE FARMERS PROTEST SAYS SIDDARAMAIAH MAK

Farmers Protest: ದೇಶದ ರೈತ ಹೋರಾಟವನ್ನು ನಟ-ನಟಿಯರು ಕಲಾವಿದರು, ಸಾಹಿತಿಗಳು ಬೆಂಬಲಿಸಬೇಕು; ಸಿದ್ದರಾಮಯ್ಯ ಕರೆ

ಪಂಜಾಬ್ ಮತ್ತು ಹರಿಯಾಣ ರೈತರು ದೆಹಲಿಯ ಹೊರ ವಲಯದಲ್ಲಿರುವ ಸಿಂಘು ಗಡಿಯಲ್ಲಿ ಹೋರಾಟ ನಿರತರಾಗಿದ್ದಾರೆ. ಜನವರಿ 26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶ ಮಾಡಿದ್ದ ರೈತರು ಜನವರಿ.30 ರಂದು ಉಪವಾಸ ಸತ್ಯಾಗ್ರಹವನ್ನು ಆಚರಿಸಿದ್ದರು.

news18-kannada
Updated:February 4, 2021, 2:21 PM IST
Farmers Protest: ದೇಶದ ರೈತ ಹೋರಾಟವನ್ನು ನಟ-ನಟಿಯರು ಕಲಾವಿದರು, ಸಾಹಿತಿಗಳು ಬೆಂಬಲಿಸಬೇಕು; ಸಿದ್ದರಾಮಯ್ಯ ಕರೆ
ಮಾಜಿ ಸಿಎಂ ಸಿದ್ದರಾಮಯ್ಯ.
  • Share this:
ಬೆಂಗಳೂರು (ಫೆಬ್ರವರಿ 04); ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಎರಡು ತಿಂಗಳಿನಿಂದ ದೇಶದ ರೈತರು ವ್ಯಾಪಕ ಹೋರಾಟ ನಡೆಸುತ್ತಿದ್ದಾರೆ. ಆದರೆ, ಈ ಹೋರಾಟಕ್ಕೆ ಈವರೆಗೆ ಸಿನಿ ನಟ-ನಟಿಯರು, ಕಲಾವಿದರು ಮತ್ತು ಸಾಹಿತಿಗಳು ಒಮ್ಮತದ ಬೆಂಬಲ ಸೂಚಿಸಿಲ್ಲ. ಈ ನಿಟ್ಟಿನಲ್ಲಿ ಇಂದು ಟ್ವಿಟರ್ ಮೂಲಕ ಕರೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, " ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟ ಕೇವಲ ರೈತ ಸಂಘಟನೆಗಳು ಇಲ್ಲವೇ ರಾಜಕೀಯ ಪಕ್ಷಗಳದ್ದಲ್ಲ. ಈ ಮಣ್ಣಿನ ಎಲ್ಲ ಸಾಹಿತಿಗಳು, ಕಲಾವಿದರು, ವಿಶೇಷವಾಗಿ ಸಿನೆಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರನ್ನು ಬೆಂಬಲಿಸಬೇಕು.‌ ನಾವೆಲ್ಲರೂ "ರೈತರು ಬೆಳೆದ ಅನ್ನ ತಿನ್ನುವವರಲ್ಲವೇ?" ಎಂದು ಕರೆ ನೀಡಿದ್ದಾರೆ.ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಯ ವಿರುದ್ಧ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ಸತತ ಹೋರಾಟ ನಡೆಸುತ್ತಿದ್ದಾರೆ. ಇನ್ನೂ ಪಂಜಾಬ್ ಮತ್ತು ಹರಿಯಾಣ ರೈತರು ದೆಹಲಿಯ ಹೊರ ವಲಯದಲ್ಲಿರುವ ಸಿಂಘು ಗಡಿಯಲ್ಲಿ ಹೋರಾಟ ನಿರತರಾಗಿದ್ದಾರೆ. ಜನವರಿ 26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶ ಮಾಡಿದ್ದ ರೈತರು ಜನವರಿ.30 ರಂದು ಉಪವಾಸ ಸತ್ಯಾಗ್ರಹವನ್ನು ಆಚರಿಸಿದ್ದರು.

ಇದನ್ನೂ ಓದಿ: Farmers Protest: ಸೇತುವೆಗಳನ್ನು ಕಟ್ಟಿ ಗೋಡೆಗಳನ್ನಲ್ಲ; ರೈತ ಹೋರಾಟವನ್ನು ಹಣಿಯುತ್ತಿರುವ ಕೇಂದ್ರಕ್ಕೆ ರಾಹುಲ್ ಕಿವಿಮಾತು

ಇದಲ್ಲದೆ ಗಣರಾಜ್ಯೋತ್ಸವದ ಗಲಭೆ ಬೆನ್ನಿಗೆ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದಿಂದ ದೆಹಲಿಗೆ ಆಗಮಿಸುತ್ತಿರುವ ರೈತರ ಸಂಖ್ಯೆ ದಿನಿದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಹೀಗಾಗಿ ಹೆಚ್ಚಿನ ರೈತರು ಪ್ರತಿಭಟನೆಗೆ ಬಂದು ಸೇರದಂತೆ ತಡೆಯಲು ಕೇಂದ್ರ ಸರ್ಕಾರ ರಸ್ತೆಗಳನ್ನು ಅಗೆದು, ಚೂಪಾದ ಮೊಳೆಗಳನ್ನು ನೆಟ್ಟಿ, ದೊಡ್ಡ ದೊಡ್ಡ ಗೋಡೆಗಳು, ಮುಳ್ಳುತಂತಿಗಳು, ಬ್ಯಾರಿಕೇಡ್‌ಗಳನ್ನು ಹಾಕುವ ಕೆಲಸಕ್ಕೆ ಮುಂದಾಗಿದೆ.

ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಕೇಂದ್ರ ಸರ್ಕಾರದ ನಡೆಗೆ ಎಲ್ಲೆಡೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಈ ನಡುವೆ ದೇಶ-ವಿದೇಶಗಳಲ್ಲೂ ಈ ವಿಚಾರ ಚರ್ಚೆಗೆ ಈಡಾಗುತ್ತಿದೆ. ಇದರ ಬೆನ್ನಿಗೆ ಇಂದು ಬಹಿರಂಗವಾಗಿ ರೈತ ಹೋರಾಟವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಕರೆ ನೀಡಿರುವ ಸಿದ್ದರಾಮಯ್ಯ ನಟ-ನಟಿಯರು, ಕಲಾವಿದರು ಹಾಗೂ ಸಾಹಿತಿಗಳು ಈ ಹೋರಾಟವನ್ನು ಮುಕ್ತವಾಗಿ ಬೆಂಬಲಿಸಬೇಕು ಎಂದು ತಿಳಿಸಿದ್ದಾರೆ.
Published by: MAshok Kumar
First published: February 4, 2021, 2:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories