HOME » NEWS » State » MOTHERS ILLEGAL AFFAIR LEADS TO END OF DAUGHTERS LIFE VCTV ZP

Crime News: ಅಮ್ಮನ ಅಕ್ರಮ ಸಂಬಂಧಕ್ಕೆ ಬೇಸತ್ತು ಮಗಳು ಆತ್ಮಹತ್ಯೆ..!

ಅಪ್ರಾಪ್ತ ಬಾಲಕಿಯ ಸಾವಿನ ಸುದ್ದಿ ಕೇಳಿ ಇಡೀ ಊರೇ ದಂಗಾಗಿ ಹೋಗಿದೆ. ಅದರಲ್ಲೂ ಒಬ್ಬ ತಾಯಿಯ ಅಕ್ರಮ ಸಂಬಂಧವೇ ಅಮಾಯಕ ಬಾಲಕಿಯ ಸಾವಿಗೆ ಕಾರಣವಾಯ್ತಾ ಅನ್ನೋ ಗುಸುಗುಸು ಪಿಸು ಪಿಸು ಜನರನ್ನ ಮತ್ತಷ್ಟು ದಿಗ್ಬ್ರಮೆಗೆ ಒಳಗಾಗುವಂತೆ ಮಾಡಿದೆ.

news18-kannada
Updated:March 8, 2021, 8:30 PM IST
Crime News: ಅಮ್ಮನ ಅಕ್ರಮ ಸಂಬಂಧಕ್ಕೆ ಬೇಸತ್ತು ಮಗಳು ಆತ್ಮಹತ್ಯೆ..!
ಸಾಂದರ್ಭಿಕ ಚಿತ್ರ
  • Share this:
ಚಿಕ್ಕಮಗಳೂರ : ಆಕೆ ಇನ್ನೂ ಬಾಳ ಬೇಕಾಗಿದ್ದ ಹುಡುಗಿ.. ಈಗಷ್ಟೇ SSLC ಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪೋರಿ.. ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸುಕೊಳ್ಳುವ ಸಮಯದಲ್ಲಿ ಈ ಪ್ರಪಂಚಕ್ಕೆ ಗುಡ್ ಬೈ ಹೇಳಿದ್ದಾಳೆ. ತನ್ನ ಕೈಯಾರೇ ಜೀವವನ್ನ ಬಲಿ ತೆಗೆದುಕೊಂಡು ಬಾರದ ಲೋಕಕ್ಕೆ ಪಯಣಿಸಿದ್ದಾಳೆ. ಅಷ್ಟಕ್ಕೂ ಆ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಕಾರಣ ಕೇಳಿದ್ರೆ ನಿಜಕ್ಕೂ ಇಂತಹ ತಾಯಂದಿರು ಇರುತ್ತಾರಾ ಅನಿಸಿಬಿಡುತ್ತೆ..!

ಹೌದು, ಅಮ್ಮನ ಅಕ್ರಮ ಸಂಬಂಧಕ್ಕೆ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ  ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದಲ್ಲಿ ನಡೆದಿದೆ. ಎಸ್ ಬಿದರೆ ಗ್ರಾಮದ ಲಕ್ಷ್ಮಣ ಶೆಟ್ಟಿ-ಲೀಲಾವತಿ ಎಂಬುವರ ಪುತ್ರಿ ಪೂರ್ಣಿಮ ಮೃತ ಬಾಲಕಿ. ಪೂರ್ಣಿಮ ಮನೆಯಲ್ಲಿ ಇದ್ದಕ್ಕಿದ್ದಂತೆ ಒಳಗೆ ಹೋದವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಅಷ್ಟಕ್ಕೂ ಇವಳ ಆತ್ಮಹತ್ಯೆಗೆ ಕಾರಣ ಆಕೆಯೇ ಅಮ್ಮನೇ ಅನ್ನೋದು ಪೂರ್ಣಿಮಾ ತಂದೆಯ ನೇರ ಆರೋಪ. ವಯಸ್ಸಿಗೆ ಬಂದ ಮಕ್ಕಳಿದ್ದರೂ ಕೂಡ ಲೀಲಾವತಿ ಗ್ರಾಮದ ರಂಗಸ್ವಾಮಿ ಎಂಬುವನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ.

ನನ್ನ ಹೆಂಡತಿ ಸಹವಾಸ ಬಿಡು ಅಂತಾ ಆತನಿಗೆ ಬುದ್ಧಿ ಹೇಳಿದ್ರೂ ಕೇಳದೇ ಇಬ್ಬರು ಲವ್ವಿ ಡವ್ವಿ ಮುಂದುವರಿಸಿದ್ದರು. ಇಷ್ಟೇ ಅಲ್ಲದೇ ನನ್ನ ಮಗಳಿಗೂ ಕೂಡ ಆತ ಶಾಲೆಗೆ ಹೋಗುವಾಗ-ಬರುವಾಗ ರೇಗಿಸುತ್ತಿದ್ದ. ಒಂದು ಕಡೆ ತಾಯಿಯ ಅಕ್ರಮ ಸಂಬಂಧ, ಇನ್ನೊಂದೆಡೆ ತನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯದಿಂದ ಮಗಳು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾಳೆ ಅನ್ನೋದು ಮೃತ ಪೂರ್ಣಿಮಾ ತಂದೆಯ ಗಂಭೀರ ಆರೋಪ.

ಅಷ್ಟಕ್ಕೂ ಈ ರಂಗಸ್ವಾಮಿ ಆರ್ಥಿಕವಾಗಿ ಚೆನ್ನಾಗಿರೋದ್ರಿಂದ ಅದನ್ನೇ ಬಂಡವಾಳ ಮಾಡಿಕೊಂಡು ಇದ್ದ ಬದ್ದವರ ಮೇಲೆಲ್ಲಾ ಪೌರುಷ ತೋರಿಸುತ್ತಿದ್ದನು. ಯಾವಾಗ ಲೀಲಾವತಿ-ರಂಗಸ್ವಾಮಿ ವಿಚಾರ ಗೊತ್ತಾಯ್ತೋ ಆಗ ಲಕ್ಷ್ಮಣ ಶೆಟ್ಟಿ ಅನೇಕ ಬಾರಿ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ರಂತೆ. ಇಷ್ಟಾದ್ರೂ ಇವರಿಬ್ಬರು ಅಕ್ರಮ ಸಂಬಂಧ ಮುಂದುವರಿಸಿದ್ದಲ್ಲದೇ ಮನೆಗೆ ಬರೋದು-ಹೋಗೋದು ಮಾಡ್ತಿದ್ದ.

ಈ ವೇಳೆಯಲ್ಲಿ ಪೂರ್ಣಿಮ ಮೇಲೆ ತುಂಬಾ ಕೆಟ್ಟದಾಗಿ ನಡೆದುಕೊಳುತ್ತಿದ್ದ. ಇವರಿಬ್ಬರ ನಡುವಳಿಕೆ ನನ್ನ ಮಗಳ ಮೇಲೆ ತುಂಬಾ ಪರಿಣಾಮ ಬೀರಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಅಂತಾರೆ ಮೃತಳ ತಂದೆ. ಇನ್ನೂ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರೋ ಸಖರಾಯಪಟ್ಟಣ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಪ್ರಾಪ್ತ ಬಾಲಕಿಯ ಸಾವಿನ ಸುದ್ದಿ ಕೇಳಿ ಇಡೀ ಊರೇ ದಂಗಾಗಿ ಹೋಗಿದೆ. ಅದರಲ್ಲೂ ಒಬ್ಬ ತಾಯಿಯ ಅಕ್ರಮ ಸಂಬಂಧವೇ ಅಮಾಯಕ ಬಾಲಕಿಯ ಸಾವಿಗೆ ಕಾರಣವಾಯ್ತಾ ಅನ್ನೋ ಗುಸುಗುಸು ಪಿಸು ಪಿಸು ಜನರನ್ನ ಮತ್ತಷ್ಟು ದಿಗ್ಬ್ರಮೆಗೆ ಒಳಗಾಗುವಂತೆ ಮಾಡಿದೆ. ಅದೇನೆ ಇರಲಿ, ಚಿಕ್ಕ ಮಕ್ಕಳ ಮನಸು ಚಿಕ್ಕ ಚಿಕ್ಕ ವಿಚಾರಕ್ಕೂ ತುಂಬಾ ಬೇಗನೇ ಘಾಸಿಗೊಳ್ಳುತ್ತೆ ಅನ್ನೋದು ಗೊತ್ತಿರುವ ವಿಚಾರ.. ಹೀಗಿದ್ದೂ ಅಕ್ರಮದ ವಾಸನೆ ಈ ಸಂಸಾರದಲ್ಲಿ ಸುಳಿದು ಮುಗ್ಧ ಬಾಲಕಿಯ ಪ್ರಾಣ ಪಕ್ಷಿ ಹಾರಿಹೋಗಿದ್ದು ಮಾತ್ರ ನಿಜಕ್ಕೂ ದುರಂತ.

ವರದಿ: ವೀರೇಶ್ ಹೆಚ್ ಜಿ
Published by: zahir
First published: March 8, 2021, 8:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories