HOME » NEWS » State » MOTHER WANDERING FOR THE RELIEF OF HER DEAD SON BBMP DOESNT GIVE PROPER COMPENSATION FOR 7 YEARS CANK MAK

ಮೃತ ಮಗನ ಪರಿಹಾರಕ್ಕಾಗಿ ತಾಯಿ ಅಲೆದಾಟ; 7 ವರ್ಷ ಕಳೆದರು ಸೂಕ್ತ ಪರಿಹಾರ ನೀಡದ ಬಿಬಿಎಂಪಿ

ಈ ವೇಳೆ ಗೊಬ್ಬರ ತಯಾರಿಸುವ ಯಂತ್ರದ ಬೆಲ್ಟ್​ಗೆ ಸಿಲುಕಿ ಬಾಲಕ ಸಾವನ್ನಪ್ಪಿದ್ದು, ಮೃತ ಬಾಲಕನ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡುವುದಾಗಿ ಅಂದು ಕೆಸಿಡಿಸಿ ಅಧಿಕಾರಿಗಳು ಭರವಸೆ ನೀಡಿದ್ದರು.

news18-kannada
Updated:February 20, 2021, 7:28 AM IST
ಮೃತ ಮಗನ ಪರಿಹಾರಕ್ಕಾಗಿ ತಾಯಿ ಅಲೆದಾಟ; 7 ವರ್ಷ ಕಳೆದರು ಸೂಕ್ತ ಪರಿಹಾರ ನೀಡದ ಬಿಬಿಎಂಪಿ
ಬಿಬಿಎಂಪಿ
  • Share this:
ಬೊಮ್ಮನಹಳ್ಳಿ; ಆತ ಸ್ನೇಹಿತರ ಜೊತೆ ಅಟವಾಡಲು ಹೋದವನು ನಾಪತ್ತೆಯಾಗಿದ್ದ. ಪೋಷಕರು ಹುಡುಕಾಟ ನಡೆಸಿದಾಗ ಸಮೀಪದ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ ಘಟಕದಲ್ಲಿ ಶವವಾಗಿ ಪತ್ತೆಯಾಗಿದ್ದ. ಕಸ ಉತ್ಪಾದಿಸುವ ಯಂತ್ರಕ್ಕೆ ಸಿಲುಕಿ ಬಾಲಕ ಸಾವನ್ನಪ್ಪಿರುವುದಾಗಿ ತಿಳಿಸಿದ್ದ ಅಧಿಕಾರಿಗಳು ಸೂಕ್ತ ಪರಿಹಾರದ ಭರವಸೆ ನೀಡಿದ್ದರು. ಆದ್ರೆ ಇಲ್ಲಿಯವರೆಗೆ ಸೂಕ್ತ ಪರಿಹಾರ ನೀಡದೆ ಬಡ ಕುಟುಂಬವನ್ನು ಬೀದಿಗೆ ತಳ್ಳಿದ್ದಾರೆ. ಅಷ್ಟಕ್ಕೂ ಮೃತ ಮಗನ ಸಾವಿನ ಪರಿಹಾರಕ್ಕಾಗಿ ಬಡ ಕುಟುಂಬ ಪರದಾಟ ನಡೆಸುತ್ತಿರುವುದು ಎಲ್ಲಿ ಅಂತೀರಾ...? ಈ ಸ್ಟೋರಿ ಓದಿ.

ಹೌದು ಹೀಗೆ ಮೃತ ಬಾಲಕನ ಸಾವಿಗೆ ಸೂಕ್ತ ಪರಿಹಾರಕ್ಕಾಗಿ ಬಡ ಕುಟುಂಬವೊಂದು ಬೀದಿಯಲ್ಲಿ ಕುಳಿತು ನ್ಯಾಯ ಕೇಳುತ್ತಿರುವ ದೃಶ್ಯ ಕಂಡು ಬಂದದ್ದು ಬೆಂಗಳೂರಿನ ಬೊಮ್ಮನಹಳ್ಳಿ ಸಮೀಪದ ಸೋಮಸುಂದರಪಾಳ್ಯದ ಕೆಸಿಡಿಸಿ ಘಟಕದ ಮುಂಭಾಗದಲ್ಲಿ. 2015 ಜೂನ್ 25 ರಂದು ಸೋಮಸುಂದರ ಪಾಳ್ಯದ ಹತ್ತು ವರ್ಷದ ಬಾಲಕ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ‌ನಿಗಮ ನಿಯಮಿತ ಘಟಕದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಘಟನೆಯಿಂದ ರೊಚ್ಚಿಗೆದ್ದಿದ್ದ ಮೃತ ಬಾಲಕನ ಕುಟುಂಬದವರು ಮತ್ತು ಸ್ಥಳೀಯರು ಮೃತ ಬಾಲಕನ ಶವವಿಟ್ಟು ಕೆಸಿಡಿಸಿ ಘಟಕದ ಮುಂಭಾಗ ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಗೊಬ್ಬರ ತಯಾರಿಸುವ ಯಂತ್ರದ ಬೆಲ್ಟ್​ಗೆ ಸಿಲುಕಿ ಬಾಲಕ ಸಾವನ್ನಪ್ಪಿದ್ದು, ಮೃತ ಬಾಲಕನ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡುವುದಾಗಿ ಅಂದು ಕೆಸಿಡಿಸಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದ್ರೆ ಐದಾರು ವರ್ಷ ಕಳೆದರು ಯಾರೊಬ್ಬರು ನೆರವು ನೀಡುತ್ತಿಲ್ಲ ಎಂದು ಮೃತನ ತಾಯಿ ವರಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.   . ಇನ್ನೂ ಬಾಲಕ ಸತ್ತು ಐದಾರು ವರ್ಷ ಕಳೆದಿದೆ. ಅಧಿಕಾರಿಗಳು ಮಾತ್ರ ಕೊಟ್ಟ ಮಾತಿನಂತೆ ಪರಿಹಾರ ನೀಡಿಲ್ಲ. ಕೆಸಿಡಿಸಿ ಕಚೆಡರಿ ಬಳಿ ಕಳೆದ ಐದಾರು ವರ್ಷಗಳಿಂದ ಅಲೆದು ಅಲೆದು ಸುಸ್ತಾಗಿದೆ.

ಇದನ್ನೂ ಓದಿ : Amit Shah: ಮಾನನಷ್ಟ ಮೊಕದ್ದಮೆ: ಸಚಿವ ಅಮಿತ್​ ಶಾಗೆ ಸಮನ್ಸ್​ ಜಾರಿ ಮಾಡಿದ ಪಶ್ಚಿಮ ಬಂಗಾಳದ ನ್ಯಾಯಾಲಯ

ಅಧಿಕಾರಿಗಳು ದಿನಕ್ಕೊಂದು ನೆಪ ಹೇಳಿ ವಾಪಸ್ ‌ಕಳುಗಿಸುತ್ತಿದ್ದಾರೆ ವಿನಃ ನಮಗೆ ಪರಿಹಾರ ಕೊಡಿಸಲು ಮುಂದಾಗುತ್ತಿಲ್ಲ. ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುವ ನಮಗೆ ಮನೆ ಬಾಡಿಗೆ ಕಟ್ಟಲು ಅಹ ಗತಿಯಿಲ್ಲವಾಗಿದೆ. ಅಧಿಕಾರಿಗಳು ನೆಪ ಹೇಳುವ ಬದಲು ನಾವು ಪರಿಹಾರದ ಹಣವನ್ನು ತಿಂದು ತೇಗಿದ್ದೆವೆ, ನಿಮಗೆ ಯಾವುದೇ ಹಣ ನೀಡುವುದಿಲ್ಲ ಎಂದರೆ ನಾವು ಕೇಳಲು ಬರುವುದಿಲ್ಲ ಎಂದು ಮೃತ ಬಾಲಕನ ಅಜ್ಜಿ ಮುನಿರತ್ನಮ್ಮ ಕೆಸಿಡಿಸಿ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಮೃತ ಬಾಲಕ ರವಿ ಸಾವಿನ ಪರಿಹಾರ ಹಣವಾಗಿ ಈಗಾಗಲೇ ಎರಡು ಲಕ್ಷ ಮೃತ ಬಾಲಕನ ಕುಟುಂಬಕ್ಕೆ ನೀಡಲಾಗಿದೆ. ಕಡತ ಸಹ ಕ್ಲೋಸ್ ಆಗಿದೆ ಎನ್ನುವ ಕೆಸಿಡಿಸಿ ಅಧಿಕಾರಿಗಳು ಹೆಚ್ಚಿನ ಮಾಹಿತಿ ಬೇಕಿದ್ದರೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾಹಿತಿ ಪಡೆದುಕೊಳ್ಳಿ ಎನ್ನುತ್ತಾರೆ. ಒಟ್ನಲ್ಲಿ ಕುಟುಂಬಕ್ಕೆ ಅಧಾರವಾಗಬೇಕಿದ್ದ ಮಗ ಮಸಣ ಸೇರಿದ್ದಾನೆ. ಆದ್ರೆ ಆತನ ಸಾವಿನ ನ್ಯಾಯ ದೊರಕದಿರುವುದು ಮಾತ್ರ ವಿಪರ್ಯಾಸ.(ವರದಿ: ಆದೂರು ಚಂದ್ರು)
Published by: MAshok Kumar
First published: February 20, 2021, 7:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories