• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಒಮ್ಮೆ ಮಗು ಬಿಟ್ಟು ಬಂದಿದ್ದಳು, ನಿನ್ನೆ ಮಹಡಿಯಿಂದ ಎಸೆದು ಕೊಂದಳು! ಪಾಪಿ ತಾಯಿಯ ಪಾಪದ ಕೃತ್ಯ ಬೆಳಕಿಗೆ

Crime News: ಒಮ್ಮೆ ಮಗು ಬಿಟ್ಟು ಬಂದಿದ್ದಳು, ನಿನ್ನೆ ಮಹಡಿಯಿಂದ ಎಸೆದು ಕೊಂದಳು! ಪಾಪಿ ತಾಯಿಯ ಪಾಪದ ಕೃತ್ಯ ಬೆಳಕಿಗೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸದ್ಯ ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಸಂಪಂಗಿರಾಮನಗರ ಠಾಣೆ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ. ಮತ್ತೊಂದೆಡೆ ಆರೋಪಿ ಸುಷ್ಮಾ ಪತಿ ಕಿರಣ್ ಅವರನ್ನೂ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪತ್ನಿ ಕುರಿತಂತೆ ಕಿರಣ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

  • Share this:

ಬೆಂಗಳೂರು: ನಿನ್ನೆ ರಾಜ್ಯ ರಾಜಧಾನಿ ಬೆಂಗಳೂರು (Bengaluru) ಬೆಚ್ಚಿ ಬಿದ್ದಿತ್ತು. ಕಾರಣ ಮಹಿಳೆಯೊಬ್ಬಳು (Lady) ತನ್ನ ಮಗುವಿನ (Child) ವಿಚಾರದಲ್ಲೇ ಅಕ್ಷರಶಃ ರಾಕ್ಷಸಿಯಂತೆ ವರ್ತಿಸಿದ್ದಳು. ಬುದ್ಧಿಮಾಂಧ್ಯತೆಯಿಂದ ಬಳಲುತ್ತಿದ್ದ 4 ವರ್ಷದ ಮಗುವನ್ನು ತಾಯಿಯೇ ನಾಲ್ಕನೇ ಮಹಡಿಯಿಂದ (4th Floor) ಎಸೆದು ಭೀಕರವಾಗಿ ಕೊಲೆ (Murder) ಮಾಡಿದ್ದಳು. ಇದಾದ ಬಳಿಕ ತಾನೂ ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತೇನೆ ಅಂತ ಹೈಡ್ರಾಮಾ (High Drama) ಮಾಡಿದ್ದಳು. ಆರೋಪಿಯನ್ನು ಬಂಧಿಸಿರುವ ಪೊಲೀಸರು (Police), ಆಕೆಯ ಮೇಲೆ ಕೇಸ್ (Case) ದಾಖಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಈ ಹಿಂದೆಯೂ ಆಕೆ ಮಗುವನ್ನು ಕೊಲ್ಲಲು ಯತ್ನ ನಡೆಸಿರುವ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.


ತನ್ನ ಮಗುವನ್ನೇ ಕೊಂದಿದ್ದ ತಾಯಿ


ಬೆಂಗಳೂರಿನ ಸಂಪಂಗಿ ರಾಮ ನಗರದ ಅದ್ವಿತ್ ಅಪಾರ್ಟ್ ಮೆಂಟ್​ನಲ್ಲಿ ಮಗುವನ್ನೇ ತಾಯಿ ಕೊಂದಿರುವ ಘಟನೆ ನಡೆದಿತ್ತು. 4 ವರ್ಷದ ಬುದ್ದಿಮಾಂಧ್ಯ ಮಗುವನ್ನು ಸುಷ್ಮಾ ಎಂಬಾಕೆ ನಾಲ್ಕನೇ ಮಹಡಿಯಿಂದ ಕೆಳಗಡೆ ಎಸೆದ್ದಳು. ಈ ವೇಳೆ ಮಗು ಸ್ಥಳದಲ್ಲೇ ಮೃತಪಟ್ಟಿತ್ತು.


ಪೊಲೀಸರಿಂದ ಆರೋಪಿ ತಾಯಿ ವಿಚಾರಣೆ


ಸದ್ಯ ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಸಂಪಂಗಿರಾಮನಗರ ಠಾಣೆ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ. ಮತ್ತೊಂದೆಡೆ ಆರೋಪಿ ಸುಷ್ಮಾ ಪತಿ ಕಿರಣ್ ಅವರನ್ನೂ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪತ್ನಿ ಕುರಿತಂತೆ ಕಿರಣ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ: Bengaluru: ಕೆರಿಯರ್ ಗ್ರೋಥ್ ಆಗ್ತಿಲ್ಲ, 4ನೇ ಮಹಡಿಯಿಂದ ಮಗು ಎಸೆದ ತಾಯಿ; ಹೃದಯ ಝಲ್ ಅನ್ನೋ ದೃಶ್ಯ ಸೆರೆ


ಈ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಮಗು ಬಿಟ್ಟು ಬಂದಿದ್ದ ತಾಯಿ


ಸುಷ್ಮಾ ವೃತ್ತಿಯಿಂದ ಡೆಂಟಲ್ ಡಾಕ್ಟರ್ ಆಗಿದ್ದು, ಅವರ ಪತಿ ಕಿರಣ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಹೀಗಾಗಿ ಆರ್ಥಿಕವಾಗಿ ಏನೂ ತೊಂದರೆ ಇರಲಿಲ್ಲ ಎನ್ನಲಾಗಿದೆ. ಆದರೂ ಸುಷ್ಮಾ ಬುದ್ಧಿಮಾಂಧ್ಯ ಮಗುವನ್ನು ಸಾಕಲು ಬೇಸರ ಪಡುತ್ತಿದ್ದಳು ಎನ್ನಲಾಗಿದೆ. ಹಿಂದೊಮ್ಮೆ ಮಗುವನ್ನು ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದಳಂತೆ.


ಎನ್‌ಜಿಒ ಸಹಾಯದಿಂದ ಮಗು ಹುಡುಕಿದ್ದ ಗಂಡ


ಸುಷ್ಮಾ ಈ ಹಿಂದೆ ಕೂಡ ತನ್ನ ಮಗುವನ್ನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ, ಬೇರೆ ರೈಲು ಹತ್ತಿಸಿ ಬಂದಿದ್ದಳಂತೆ. ಆದರೆ ತಾಯಿಯೇ ಮಗುವನ್ನು ಹೇಗೆ ಬಿಡಲು ಸಾಧ್ಯ, ಎಲ್ಲೋ ದಾರಿ ತಪ್ಪಿರಬಹುದು ಎಂದುಕೊಂಡಿದ್ದ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಎನ್‌ಜಿಓ ಒಂದರ ಸಹಾಯದಿಂದ ಮಗು ಮತ್ತೆ ಪೋಷಕರ ಮನೆ ಸೇರಿತ್ತು.


ಆಟ ಆಡಿಸೋದಾಗಿ ಕರೆದೊಯ್ದು ಮಹಡಿಯಿಂದ ಎಸೆದ ತಾಯಿ


ಲಾಸ್ಟ್ ಟೈಮ್ ಅದೃಷ್ಟವೋ ಏನೋ, ಪಾಪಿ ತಾಯಿ ಕೈಯಿಂದ ಪುಟ್ಟ ಕಂದಮ್ಮ ಬಚಾವಾಗಿತ್ತು. ಮರಳಿ ಮನೆ ಸೇರಿತ್ತು. ಆದರೆ ಈ ಬಾರಿ ಮಗುವನ್ನು ಕೊಲ್ಲಲೇಬೇಕೆಂದು ಸುಷ್ಮಾ ನಿರ್ಧರಿಸಿದ್ದಳು. ನಿನ್ನೆ ಮಗು ಬಿಸಾಡುವ ಉದ್ದೇಶದಿಂದ ಅಪಾರ್‌ಟ್ಮೆಂಟ್‌ನ ಎರಡನೇ ಫ್ಲೋರ್ ನಿಂದ ನಾಲ್ಕನೇ ಫ್ಲೋರ್ ಗೆ ತೆರಳಿದ್ಳು. ಮಗುವನ್ನು ಆಟ ಆಡಿಸ್ತೇನೆಂದು ಪತಿಗೆ ಹೇಳಿ, ಮೇಲಕ್ಕೆ ಕರೆದುಕೊಂಡು ಹೋಗಿದ್ದಳು. ಆದರೆ ಆಟ ಆಡಿಸೋ ಬದಲು 4ನೇ ಮಹಡಿಯಿಂದ ಮಗುವನ್ನು ಕೆಳಕ್ಕೆ ಎಸೆದು ಬರ್ಬರವಾಗಿ ಕೊಂದಿದ್ದಾಳೆ. ಅವಳಿಗೆ ಕಷ್ಟ ಅಂತಾ ಹೇಳಿದ್ರೆ ನನ್ನ ಮಗುವನ್ನು ನಾನೆ ನೊಡಿಕೊಳ್ತಿದ್ದೆ ಅಂತ ಮಗುವಿನ ತಂದೆ ಕಿರಣ್ ಕಣ್ಣೀರು ಹಾಕಿದ್ದಾರೆ.


ಇದನ್ನೂ ಓದಿ: Belagavi: ಮಗನ ಮೇಲೆ ಚಿರತೆ ದಾಳಿಯ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು


ಪೊಲೀಸರ ತನಿಖೆಗೆ ಸಹಕರಿಸದ ತಾಯಿ


ಇನ್ನೂ ಘಟನೆ ಬಗ್ಗೆ ಗಂಡ ಕಿರಣ್ ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪಾಪಿ ತಾಯಿ ಸುಷ್ಮಾ ಪೊಲೀಸರ ವಶದಲ್ಲಿದ್ದಾರೆ. ವಿಚಾರಣೆ ವೇಳೆ ಆಕೆ ಸೂಕ್ತ ರೀತಿಯಲ್ಲಿ ಉತ್ತರ ನೀಡ್ತಿಲ್ಲ. ಹೀಗಾಗಿ ಸಂಬಂಧಪಟ್ಟ ವೈದ್ಯರಿಂದ ಕೌನ್ಸಲಿಂಗ್ ಮಾಡಿಸೋಕೆ ಪೊಲೀಸರು ಮುಂದಾಗಿದ್ದಾರೆ.

top videos
    First published: