Hassan: ನನ್ನ ಮಗಳನ್ನ ಹುಡುಕಿಕೊಡಿ: ವಿಷದ ಬಾಟೆಲ್ ಹಿಡಿದು ಜಿಲ್ಲಾಧಿಕಾರಿಗಳ ಬಳಿ ಬಂದ ತಾಯಿ

ಹದಿನೇಳು ವರ್ಷ ಪ್ರೀತಿಯಿಂದ ಸಾಕಿ ಬೆಳಸಿದ್ದ ಮಗಳು ಕಣ್ಮರೆಯಾಗಿದ್ದು ಕಳೆದ ಒಂದುವರೆ ತಿಂಗಳಿನಿಂದ‌‌ ಮಗಳಿಗಾಗಿ ಹೆತ್ತ ತಾಯಿ ಕಣ್ಣೀಡುತ್ತಿದ್ದು, ಪೋಲಿಸರು ಅಪ್ರಾಪ್ತೆಯನ್ನು ಪತ್ತೆ ಹಚ್ಚಿ ಪ್ರಕರಣವನ್ನು ಸುಖಾಂತ್ಯಗೊಳಿಸಿಸುವರೆ ಕಾದುನೋಡಬೇಕಿದೆ.

ತಾಯಿ ಪುಷ್ಪ

ತಾಯಿ ಪುಷ್ಪ

  • Share this:
ಕಾಣೆಯಾಗಿರುವ  ಮಗಳನ್ನು (Daughter) ಹುಡುಕಿಸಿ ಕೊಡುವಂತೆ ಆಕೆಯ ತಾಯಿ ವ್ಯಾನಿಟಿ ಬ್ಯಾಗ್‌ ನಲ್ಲಿ ವಿಷದ ಬಾಟಲ್ (Poison Bottle) ಹಿಡಿದು ಜಿಲ್ಲಾಧಿಕಾರಿ ಅವರನ್ನು ಭೇಟಿ‌ ಮಾಡಿ ಕಣ್ಣೀರಿಟ್ಟಿದ್ದಾರೆ. ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ಮಾರೇನಹಳ್ಳಿ (Marenahalli, Hassan) ಗ್ರಾಮದ ಸೋಮಶೇಖರ್-ಪುಷ್ಪಾ ದಂಪತಿಯ ಅಪ್ರಾಪ್ತೆ ಪುತ್ರಿ ಕಳೆದ ಒಂದೂವರೆ ತಿಂಗಳ ಹಿಂದೆ ಕಾಲೇಜಿಗೆ (College) ತೆರಳಿದ್ದ ಸಂದರ್ಭದಲ್ಲಿ  ಕಣ್ಮರೆಯಾಗಿದ್ದಾಳೆ. ಮಗಳು ಮನೆಗೆ ಬಾರದಿದ್ದಾಗ ಆಕೆಯ ಪೋಷಕರು (Parents) ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ (Channarayapattana Police Station) ದೂರು ನೀಡಿದ್ದಾರೆ. ಆದರೆ ಒಂದೂವರೆ ತಿಂಗಳು ಕಳೆದರೂ ಮಗಳು ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದರೆ ಸರಿಯಾಗಿ ಸ್ಪಂದಿಸಿಲ್ಲ‌ ಎಂದು ಪುಷ್ಪ ಆರೋಪಿಸಿದ್ದಾರೆ.

ಪುಷ್ಪ ಅವರ ಪುತ್ರಿ ಅಪ್ರಾಪ್ತೆಯಾಗಿದ್ದು ಕಳೆದ ಒಂದೂವರೆ ತಿಂಗಳಿನಿಂದ ಎಲ್ಲಿದ್ದಾಳೆ ಎಂದು ತಿಳಿದಿಲ್ಲ. ಕಾಲೇಜು ಆಡಳಿತ ಮಂಡಳಿಯವರನ್ನು ಪ್ರಶ್ನಿಸಿದರೆ ನಮಗೇನು ಗೊತ್ತಿಲ್ಲ ಎನ್ನುತ್ತಿದ್ದಾರೆ.

ಪವನ್ ಶೆಟ್ಟಿ ಎಂಬಾತನಿಂದ ಅಪಹರಣ: ಪೋಷಕರ ಆರೊಪ

ಚನ್ನರಾಯಪಟ್ಟಣದ ಪವನ್‌ ಶೆಟ್ಟಿ ಎಂಬವನು ತಮ್ಮ ಮಗಳನ್ನು ಕಿಡ್ನಾಪ್ ಮಾಡಿದ್ದಾನೆ. ಅವನ ವಿರುದ್ಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಆದರೆ ಪೊಲೀಸರು ಯಾರೋದೊ ಒತ್ತಡಕ್ಕೆ ಮಣಿದು ನಮಗೆ ನ್ಯಾಯ ಕೊಡಿಸುತ್ತಿಲ್ಲ‌ ಎಂದು ಪೋಷಕರು ಆರೋಪಿಸಿದ್ದಾರೆ.‌

ಇದನ್ನೂ ಓದಿ:  DK Shivakumar: "ಯತ್ನಾಳ್ ಏನು ಮೆಂಟಲ್ಲಾ? ಅವರನ್ನು ಮೊದಲು ವಿಚಾರಣೆ ಮಾಡಿ" - ಸರ್ಕಾರಕ್ಕೆ ಡಿಕೆಶಿ ಆಗ್ರಹ

ಮಗಳನ್ನು ಕಾಣದೇ ಕಂಗಾಲಾಗಿರುವ ಪುಷ್ಪಾ ಅವರು ಜಿಲ್ಲಾಧಿಕಾರಿ ಆರ್.ಗಿರೀಶ್ ಅವರನ್ನು ಭೇಟಿ ಮಾಡಿ ಮಗಳನ್ನು ಹುಡುಕಿಸಿ ಕೊಡುವಂತೆ ಕಣ್ಣೀರ ಮನವಿ ಮಾಡಿದರು.

ಶಾಸಕರ ಕಾಲಿಗೆ ಬಿದ್ದ ಕಣ್ಣೀರಿಟ್ಟ ತಾಯಿ

ಇದೇ ವೇಳೆ ಜಿಲ್ಲಾಧಿಕಾರಿ ಅವರನ್ನು ‌ಭೇಟಿ ಮಾಡಲು ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಮಾಜಿಶಾಸಕ ಸಿ.ಎಸ್.ಪುಟ್ಟೇಗೌಡ ಆಗಮಿಸಿದ್ದರು. ಇಬ್ಬರ ಕಾಲಿಗೆ ಬಿದ್ದ ಪುಷ್ಪ ಕಣ್ಣೀರಿಡುತ್ತಲೇ ಅಳಲು ತೋಡಿಕೊಂಡರು. ಈ ವೇಳೆ ಪುಷ್ಪ ಬಳಿ ಇರುವ ಬ್ಯಾಗ್‌ನಲ್ಲಿ ವಿಷದ ಬಾಟಲಿ ಇದೆ ಎಂದು ಪೊಲೀಸರು ತಿಳಿಸಿದ ಕೂಡಲೇ ಬ್ಯಾಗ್ ಕಸಿದುಕೊಂಡು ವಿಷದ ಬಾಟಲಿಯನ್ನು ಶಾಸಕ ಬಾಲಕೃಷ್ಣ ಕಿತ್ತುಕೊಂಡರು.

ನ್ಯಾಯ ಕೊಡಿಸುವ ಭರವಸೆ

ಈಗಲೇ ಪೊಲೀಸರಿಗೆ ನಿಮ್ಮ ಮಗಳನ್ನು ಹುಡುಕಿ ಕೊಡುವಂತೆ ಸೂಚನೆ ನೀಡುತ್ತೇನೆ. ನಿಮಗೆ ನ್ಯಾಯ ಕೊಡಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.  ಮತ್ತೊಂದೆಡೆ ‌ಸಿ.ಎಸ್.ಪುಟ್ಟೆಗೌಡ ಚನ್ನರಾಯಪಟ್ಟಣ ಇನ್ಸ್‌ ಪೆಕ್ಟರ್‌ಗೆ ಕರೆ ಮಾಡಿ ತರಾಟಗೆ ತೆಗೆದುಕೊಂಡರು.

ಒಂದೂವರೆ ತಿಂಗಳಾದರೀ ಇವರ ಮಗಳು ಸಿಗದಿರಲು ಏನು ಕಾರಣ? ನಿಮ್ಮ ಮೇಲೆ ಯಾರಾದರೂ ಒತ್ತಡ ಹಾಕಿದ್ದಾರಾ ಹೇಳಿ ಎಂದು ಪ್ರಶ್ನಿಸಿದರು. ಕೂಡಲೇ ಇವರ ಮಗಳನ್ನು ಪತ್ತೆಹಚ್ಚಿ, ಪಾರದರ್ಶಕವಾಗಿ ನಡೆದುಕೊಳ್ಳಿ ಎಂದರು.

ಮಗಳಿಗಾಗಿ ಕಣ್ಣೀರು ಹಾಕುತ್ತಿರುವ ಪೋಷಕರು

ಹದಿನೇಳು ವರ್ಷ ಪ್ರೀತಿಯಿಂದ ಸಾಕಿ ಬೆಳಸಿದ್ದ ಮಗಳು ಕಣ್ಮರೆಯಾಗಿದ್ದು ಕಳೆದ ಒಂದುವರೆ ತಿಂಗಳಿನಿಂದ‌‌ ಮಗಳಿಗಾಗಿ ಹೆತ್ತ ತಾಯಿ ಕಣ್ಣೀಡುತ್ತಿದ್ದು, ಪೋಲಿಸರು ಅಪ್ರಾಪ್ತೆಯನ್ನು ಪತ್ತೆ ಹಚ್ಚಿ ಪ್ರಕರಣವನ್ನು ಸುಖಾಂತ್ಯಗೊಳಿಸಿಸುವರೆ ಕಾದುನೋಡಬೇಕಿದೆ.

ಇದನ್ನೂ ಓದಿ:  Black Saturday: ಇಲ್ಲಿ ಅಪಘಾತಕ್ಕೆ 6 ತಿಂಗಳ ಕಂದಮ್ಮ ಸೇರಿ ಮೂವರು ಬಲಿ, ಅಲ್ಲಿ ವಿದ್ಯಾರ್ಥಿ ಸೂಸೈಡ್!

ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಗೃಹಿಣಿ

ಸೆಲ್ಫಿ (Selfie) ಹುಚ್ಚಿಗೆ ನೂರಾರು ಜನ ಬಲಿಯಾಗ್ತಾನೆ ಇದ್ದಾರೆ. ಹಾಗೇ ನಂಜನಗೂಡು (Nanjanagudu) ತಾಲೂಕಿನ ಪವಿತ್ರ ಯಾತ್ರಾ ಶ್ರೀ ಕ್ಷೇತ್ರ ಸಂಗಮದ (Sangama) ಕಪಿಲಾ ನದಿಯಲ್ಲೂ (Kapila River) ಇಂತಹದ್ದೆ ಒಂದು ಈ ದುರ್ಘಟನೆ ಜರುಗಿದೆ.

ಕಪಿಲಾ ನದಿ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮಹಿಳೆ ಸಾವನ್ನಪ್ಪಿದ್ದಾರೆ. ಚಾಮರಾಜನಗರ ಜಿಲ್ಲೆ ನಂಜದೇವನಪುರ ಗ್ರಾಮದ ಗಿರೀಶ್ ಎಂಬುವರ ಪತ್ನಿ ಕವಿತಾ (Kavitha) 38 ವರ್ಷದ ಮೃತ ಗೃಹಿಣಿಯಾಗಿದ್ದಾರೆ. ಕವಿತಾ, ಮೈಸೂರು ತಾಲೂಕಿನ ದೂರ ಗ್ರಾಮದ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾದ ಡಿ ಬಿ ನಾಗರಾಜ್ ಎಂಬುವರ ಪುತ್ರಿ ಆಗಿದ್ದಾರೆ.
Published by:Mahmadrafik K
First published: