ಗದಗ (ಜು.31): ಕೊರೋನಾ ಹಾವಳಿಯಿಂದ ಟಿವಿ ಹಾಗೂ ಮೊಬೈಲ್ ಮೇಲೆ ಶಿಕ್ಷಣ ಅವಲಂಬನೆಯಾಗಿದೆ. ಉಳ್ಳವರ ಮಕ್ಕಳು ಮೂಬೈಲ್ ಮೂಲಕ ದೊಡ್ಡ ಟಿವಿ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಆದರೇ ಬಡ, ಮದ್ಯಮ ವರ್ಗದ ಜನರಿಗೆ ಇದೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಅದರಲ್ಲೂ ಬಡ ಕುಟುಂಬಗಳಿಗೆ ಟಿವಿ ಖರೀದಿ ಮಾಡೋದು ಸವಾಲಿನ ಕೆಲಸವೇ ಸರಿ. ಹೌದು ಇಲ್ಲೊರ್ವ ತಾಯಿ ಮಕ್ಕಳ ಶಿಕ್ಷಣಕ್ಕಾಗಿ ತನ್ನ ತಾಳಿಯನ್ನಯ ಅಡವಿಟ್ಟು ಮಕ್ಕಳಿಗೆ ಟಿವಿ ಕೊಡಿಸಿದ್ದಾಳೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ್ ನಾಗನೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಸ್ತೂರಿ ಅನ್ನೋ ಮಹಿಳೆಯ ತನ್ನ ಇಬ್ಬರು ಮಕ್ಕಳು ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಓರ್ವ ವಿದ್ಯಾರ್ಥಿನಿ 8 ನೇ ತರಗತಿಯಲ್ಲಿ ಇನ್ನೋರ್ವ 7 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನ ಕೇಳಲು ಪ್ರತಿದಿನ ಟಿವಿ ನೋಡುವಂತೆ ಶಿಕ್ಷಕರು ಹೇಳಿದ್ದರು. ಜೊತೆಗೆ ಅದರಲ್ಲಿ ಬರುವ ಪಾಠಗಳ ಬಗ್ಗೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳುತ್ತಿದ್ದರು.
ಆದರೆ ಈ ಮಕ್ಕಳಿಗೆ ಮನೆಯಲ್ಲಿ ಟಿವಿ ಇಲ್ಲದ ಕಾರಣ ಟಿವಿ ನೋಡೋದಕ್ಕೆ ಆಗುತ್ತಿರಲಿಲ್ಲ. ಜೊತೆಗೆ ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಲು ಮಕ್ಕಳಿಗೆ ಸಾಧ್ಯವಾಗುತ್ತಿರಲಿಲ್ಲ. ಇವರ ಮನೆಯಲ್ಲಿ ಈ ಮೊದಲು ಇದ್ದ ಟಿವಿ ಸುಟ್ಟು ಹೋಗಿತ್ತು. ಹೀಗಾಗಿ ಮಕ್ಕಳು ಟಿವಿ ನೋಡಲು ಕಷ್ಟ ಪಡುತ್ತಿದ್ದರಯ. ಬೇರೆಯವರ ಮನೆಗೆ ಹೋದ್ರೆ ಅವರು ಸಿನಿಮಾ ಇನ್ನಿತರ ಕಾರ್ಯಕ್ರಮಗಳನ್ನು ನೋಡ್ತಿದ್ರು, ಹೀಗಾಗಿ ತಾಯಿ ತನ್ನ ತಾಳಿಯನು ಅಡವಿಟ್ಟು ಟಿವಿ ಖರೀದಿ ಕೊಡಿಸಿದ್ದಾಳೆ. ಈವಾಗ ಮಕ್ಕಳು ನಿತ್ಯ ಚಂದನ ಟಿವಿಯಲ್ಲಿ ಪಾಠವನ್ನು ಕೇಳುತ್ತಿದ್ದಾರೆ.
ಗ್ರಾಮದಲ್ಲಿ ಅಕ್ಕಪಕ್ಕದ ಮನೆಯವರನ್ನು ಸಾಲ ಕೇಳಿದ್ರೆ ಕರೋನಾ ಹಾವಳಿ ನಡುವೆ ಸಾಲವನ್ನು ಹೀಗೆ ಹಿಂದುರುಗಿಸುತ್ತಿರಿ ಎಂದು ಸಾಲ ಕೊಡಲು ಯಾರು ಮುಂದೆ ಬಂದಿಲ್ಲಾ. ಇವರಿಗೆ ನಾಲ್ಕು ಜನ ಮಕ್ಕಳಿದ್ದು, ಓರ್ವ ಹೆಣ್ಣು ಮಗಳನ್ನ ಈಗಾಗಲೇ ಮದುವೆ ಮಾಡಿ ಕೊಟ್ಟಿದ್ದಾರೆ. ಅವಳ ಮದುವೆಗಾಗಿ 1 ಲಕ್ಷ ರೂ. ಸಹ ಸಾಲ ಮಾಡಿಕೊಂಡಿದ್ದಾರೆ. ಹೀಗಾಗಿ ಗದಗ ನಗರಕ್ಕೆ ಬಂದು ತನ್ನ ತಾಳಿಯನ್ನು 20 ಸಾವಿರ ರೂಪಾಯಿ ಅಡವಿಟ್ಟು 14 ಸಾವಿರ ರೂಪಾಯಿ 32 ಇಂಚಿನ ಟಿವಿ ಖರೀದಿ ಮಾಡಿದ್ದಾರೆ.
ಕಸ್ತೂರಿ ಪತಿ ಕೂಲಿ ಕೆಲಸ ಮಾಡುತ್ತಾರೆ. ಇಬ್ಬರು ಕೂಲಿ ಮಾಡಿಯೇ ಕುಟುಂಬ ಸಾಗಿಸ್ತಾರೆ. ಆದ್ರೆ ಮೊದಲೇ ಕೂಲಿ ಕೆಲಸ ಇಲ್ಲದೆ ಕಂಗಾಲಾಗಿದ್ದ ದಂಪತಿಗೆ ಟಿವಿ ತರುವುದು ದೊಡ್ಡ ಸಮಸ್ಯೆಯಾಗಿ ಕಾಡಿತ್ತು. ಮಕ್ಕಳು ಚೆನ್ನಾಗಿ ಕಲಿತರೆ ಸಾಕು. ಹಂತಹಂತವಾಗಿ ಹಣ ಕಟ್ಟಿ ತಾಳಿ ಬಿಡಿಸಿಕೊಳ್ಳಬಹುದು ಅಂತ ವಿದ್ಯಾರ್ಥಿನಿಯ ತಾಯಿ ವಿಚಾರ. ಕೊರೊನಾ ಹಾವಳಿಯಿಂದ ಇಡೀ ಮಾನವ ಕುಲವೇ ಸಂಕಷ್ಟ ಎದುರಿಸುತ್ತಿದೆ. ಅದರಲ್ಲೂ ಬಡ ಕುಟುಂಬಗಳು ಜೀವನ ನಡೆಸೋದೆ ಕಷ್ಟವಾಗಿದೆ.ಅಂತದರಲ್ಲಿ ಆನ್ ಲೈನ್ ಶಿಕ್ಷಣ ಕೊಡಿಸೋದು ಬಡ ಕುಟುಂಬಕ್ಕೆ ಸವಾಲಾಗಿ ಪರಿಣಮಿಸಿದೆ. ಆದ್ರೆ, ತನ್ನ ಮಕ್ಕಳ ಶಿಕ್ಷಣಕ್ಕಾಗಿ ತನ್ನ ತಾಳಿಯನ್ನು ಅಡವಿಟ್ಟು ಮಾದರಿಯಾಗಿದ್ದಾರೆ.
ಗ್ರಾಮದಲ್ಲಿ ಅಕ್ಕಪಕ್ಕದ ಮನೆಯವರನ್ನು ಸಾಲ ಕೇಳಿದ್ರೆ ಕರೋನಾ ಹಾವಳಿ ನಡುವೆ ಸಾಲವನ್ನು ಹೀಗೆ ಹಿಂದುರುಗಿಸುತ್ತಿರಿ ಎಂದು ಸಾಲ ಕೊಡಲು ಯಾರು ಮುಂದೆ ಬಂದಿಲ್ಲಾ. ಇವರಿಗೆ ನಾಲ್ಕು ಜನ ಮಕ್ಕಳಿದ್ದು, ಓರ್ವ ಹೆಣ್ಣು ಮಗಳನ್ನ ಈಗಾಗಲೇ ಮದುವೆ ಮಾಡಿ ಕೊಟ್ಟಿದ್ದಾರೆ. ಅವಳ ಮದುವೆಗಾಗಿ 1 ಲಕ್ಷ ರೂ. ಸಹ ಸಾಲ ಮಾಡಿಕೊಂಡಿದ್ದಾರೆ. ಹೀಗಾಗಿ ಗದಗ ನಗರಕ್ಕೆ ಬಂದು ತನ್ನ ತಾಳಿಯನ್ನು 20 ಸಾವಿರ ರೂಪಾಯಿ ಅಡವಿಟ್ಟು 14 ಸಾವಿರ ರೂಪಾಯಿ 32 ಇಂಚಿನ ಟಿವಿ ಖರೀದಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ