Belagavi: ಮಗುವಿಗೆ ಹುಷಾರಿಲ್ಲ ಎಂದು ಜೀಸಸ್ ಮುಂದೆ ಇಟ್ಟ ತಾಯಿ!

ವೈದ್ಯರು ಮಗು ಬದುಕುಳಿಯುವುದಿಲ್ಲ ಹೆಚ್ಚು ಅಂದ್ರೆ ಅರ್ಧ ಗಂಟೆ ಅಷ್ಟೇ  ಎಂದ ಮೇಲೆ ಮಗನನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡ ತಾಯಿ, ಅಲ್ಲಿಂದ ನೇರವಾಗಿ ನಂದಗಡಗೆ ಕರೆ ತಂದು ಜೀಸಸ್ ಶಿಲುಬೆಯ ಮುಂದೆ ಮಗನನ್ನು ಮಲಗಿಸಿ ಪರಿ ಪರಿಯಾಗಿ ಪ್ರಾರ್ಥಿಸಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ (ಜೂನ್,22):  ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗನನ್ನು ಬದುಕಿಸಿಕೊಡುವಂತೆ ಪ್ರಾರ್ಥಿಸಿ ನೊಂದ ತಾಯಿಯೊಬ್ಬರು ಜೀಸಸ್ ಮೊರೆ ಹೋಗಿದ್ದಾರೆ. ಜೀಸಸ್‌ ಶಿಲುಬೆಯ ಮುಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗನನ್ನು ಮಲಗಿಸಿರುವ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ತನ್ನ ಮಗನನ್ನು ಬದುಕಿಸಿಕೊಡುವಂತೆ ದೇವರಲ್ಲಿ ಅಂಗಲಾಚುವ ದೃಶ್ಯ ಎಲ್ಲರ ಕರುಳು ಚುರ್ ಎನ್ನುವಂತಿದೆ. ಜೀಸಸ್ ಶಿಲುಬೆ (Jesus Christ Cross)ಮುಂದೆ ಕೋಮಾದಲ್ಲಿ ಮಲಗಿರುವ ಪುಟ್ಟ ಬಾಲಕ, ತನ್ನ ಮಗನನ್ನು ಬದುಕಿಸಿಕೊಡುವಂತೆ ಕಣ್ಣೀರಿಟ್ಟ ಪೋಷಕರು ಇಂತಹದೊಂದು ಕರುಳು ಹಿಂಡುವ ಘಟನೆ ನಡೆದಿದ್ದು,   ಬೆಳಗಾವಿ ಜಿಲ್ಲೆ (Belagavi) ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಮಿರಾಕಲ್ ಕ್ರಾಸ್ ಎಂಬ ಕ್ರಿಶ್ಚಿಯನ್ ದೇಗುಲದಲ್ಲಿ.

ಉತ್ತರ ಕನ್ನಡ ಜಿಲ್ಲೆ, ಜೋಯಿಡಾ ತಾಲೂಕಿನ ಅಂಬರಡಾ ಗ್ರಾಮದ ಎಂಟು ವರ್ಷದ ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಶೈಲೇಶ್​ನನ್ನು ಶಿಲುಬೆಯ ಮುಂದೆ ಮಲಗಿಸಿರುವ ದೃಶ್ಯ ಹಾಗೂ ಆ ಹೆತ್ತ ಕರುಳಿನ ಕಣ್ಣಿರು, ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿದೆ. ಇ‌ನ್ನು ಬಾಲಕ ಶೈಲೇಶ್​ನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹೆಚ್ಚು ಅಂದ್ರೆ ಅರ್ಧ ಗಂಟೆ ಬದುಕುತ್ತಾನೆ..
ಆದರೆ ವೈದ್ಯರ ಚಿಕಿತ್ಸೆ ಫಲಿಸದೇ,  ಮೆದುಳು ಜ್ವರದಿಂದ ಬಾಲಕ ಶೈಲೇಶ್ ಗೆ ಪ್ಯಾರಾಲೈಸಿಸ್ ಅಟ್ಯಾಕ್ ಆಗಿದ್ದು, ಕೋಮಾಗೆ ಜಾರಿದ್ದಾನೆ. ಕೊನೆಗೆ ವೈದ್ಯರು ಮಗು ಬದುಕುಳಿಯುವುದಿಲ್ಲ ಹೆಚ್ಚು ಅಂದ್ರೆ ಅರ್ಧ ಗಂಟೆ ಅಷ್ಟೇ  ಎಂದ ಮೇಲೆ ಮಗನನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡ ತಾಯಿ, ಅಲ್ಲಿಂದ ನೇರವಾಗಿ ನಂದಗಡಗೆ ಕರೆ ತಂದು ಜೀಸಸ್ ಶಿಲುಬೆಯ ಮುಂದೆ ಮಗನನ್ನು ಮಲಗಿಸಿ ಪರಿ ಪರಿಯಾಗಿ ಪ್ರಾರ್ಥಿಸಿದ್ದಾಳೆ.

ಜೀಸಸ್ ನನ್ನ ಮಗುವನ್ನು ಬದುಕಿಸು...
ಜೀಸಸ್ ನನ್ನ ಮಗುವನ್ನು ಬದುಕಿಸು ಎಂದು ಕಣ್ಣೀರಿಡುತ್ತಿರುವ ಆ ತಾಯಿಯ ಸಂಕಟ, ರೋಧನೆ ಮಾತ್ರ ಕರುಳು ಹಿಂಡುವಂತಿದೆ. ನಂದಗಡ ಗ್ರಾಮದ  ಹೊರವಲಯದಲ್ಲಿರುವ ಮಿರಾಕಲ್ ಕ್ರಾಸ್ ಎಂಬ ಲಾರ್ಡ್ ಜೀಸಸ್ ಪುಣ್ಯಕ್ಷೇತ್ರದ ಬಗ್ಗೆ ಹಲವರಿಗೆ ನಂಬಿಕೆಯಿದೆ, ಇಲ್ಲಿ ಪ್ರಾರ್ಥಿಸಿದರೆ ಫಲ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಈ ಭಾಗದಲ್ಲಿ ಮನೆ ಮಾಡಿದೆ. 

ಇದನ್ನೂ ಓದಿ: Belagavi: ಕ್ಯಾಮರಾ ಆಕಾರದ ಮನೆ ನೋಡಿದ್ದೀರಾ? ಇಲ್ಲಿದೆ ವಿಡಿಯೋ!

ಬೆಳಗಾವಿಯ ಯಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಹೀಗಾಗಿ ಪ್ರಜ್ಞಾಹೀನ ಮಗನನ್ನು ಕರೆತಂದ ತಾಯಿ ಜೀಸಸ್ ಮಡಿಲಿಗೆ ಹಾಕಿದ್ದಾಳ.  ಈ ಪುಟ್ಟ ಬಾಲಕನ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸ್ಪಂದಿಸಿದ ಬೆಳಗಾವಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯವ್ರು ತಮ್ಮದೇ ಅಂಬ್ಯುಲೆನ್ಸ್ ಮೂಲಕ ಬಾಲಕ ಶೈಲೇಶ್​ನನ್ನು ಕರೆತಂದು ಬೆಳಗಾವಿಯ ಯಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಇದನ್ನೂ ಓದಿ: Belagavi: 3 ಬಣ್ಣಗಳಾಗಿ ಬದಲಾಗುತ್ತೆ ಪಾರ್ಶ್ವನಾಥ ತೀರ್ಥಂಕರರ‌ ಪ್ರತಿಮೆ! ಮೂರ್ತಿಯ ಮೇಲಿದೆ ಕನ್ನಡ ಶಾಸನ

ಮಿರಾಕಲ್ ಕ್ರಾಸ್​ನಲ್ಲಿ ಮಿರಾಕಲ್
ಮಿರಾಕಲ್ ಕ್ರಾಸ್​ನಲ್ಲಿ ಮಿರಾಕಲ್ ಎಂಬಂತೆ, ಕೆ.ಎಲ್.ಇ ವೈದ್ಯರು ಸ್ಪಂದಿಸಿದ್ದು, ಸೂಕ್ತ ಚಿಕಿತ್ಸೆ ನೀಡುವ ಮೂಲಕ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಬಾಲಕ‌ ಶೈಲೇಶ್​ನನ್ನು ಬದುಕಿಸಲಿ ಎಂಬುದು ನಮ್ಮ ಆಶಯ. ಈಗಾಗಲೇ 13 ಲಕ್ಷಕ್ಕೂ ಹೆಚ್ಚು ಹಣವನ್ನು ಪೋಷಕರು ಖರ್ಚು ಮಾಡಿದ್ದಾರೆ. ಈಗ ಜಿಲ್ಲಾಧಿಕಾರಿ ಆಯುಷ್ಮಾನ್ ಭಾರತ ಯೋಜನೆಯನ್ನು ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ.
Published by:guruganesh bhat
First published: