• Home
  • »
  • News
  • »
  • state
  • »
  • Mother Murdered: ಮಾತು ಮನೆ ಕೆಡಿಸಿತು, ಮೊಬೈಲ್ ಜೀವ ತೆಗೆಯಿತು! ಮಗನಿಂದ ಹೋಯ್ತು ತಾಯಿ ಪ್ರಾಣ

Mother Murdered: ಮಾತು ಮನೆ ಕೆಡಿಸಿತು, ಮೊಬೈಲ್ ಜೀವ ತೆಗೆಯಿತು! ಮಗನಿಂದ ಹೋಯ್ತು ತಾಯಿ ಪ್ರಾಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಾಯಿಯನ್ನು ಆಕೆಯ ಸೀರೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. 50 ವರ್ಷದ ಫಾತಿಮಾ ಮೇರಿ ಕೊಲೆಯಾದ ಮಹಿಳೆ, ಜೂ.1 ರಂದು ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

  • Share this:

ಬೆಂಗಳೂರು : ರಾಜ್ಯರಾಜಧಾನಿ ಬೆಂಗಳೂರಿನಲ್ಲಿ (Bengaluru) ತಾಯಿಯನ್ನ ಮಗನೇ ಕೊಂದ ಘಟನೆ ನಡೆದಿದ್ದು, ಮೊಬೈಲ್ (Mobile) ಕೊಡಿಸದ ಕಾರಣಕ್ಕೆ ಮಗನೇ ತನ್ನ ಹೆತ್ತ ತಾಯಿಯನ್ನೇ (Murder) ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಬೇಗೂರಿನ (Beguru) ಮೈಲಸಂದ್ರದಲ್ಲಿ ಘಟನೆ ನಡೆದಿದ್ದು, ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ದೀಪಕ್ (Deepak) ಎಂಬುವನು ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಮೊಬೈಲ್ ಕೊಡಿಸುವಂತೆ ದೀಪಕ್ ತನ್ನ ತಾಯಿಯನ್ನು ಪೀಡಿಸುತ್ತಿದ್ದ, ಹಣ ಇಲ್ಲವೆಂದು ಮೊಬೈಲ್ ಕೊಡಿಸಲು ತಾಯಿ ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿ ತನ್ನ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬೆಂಗಳೂರಿನಲ್ಲಿ ಮಗನಿಂದಲೇ ತಾಯಿಯ ಕೊಲೆ


ತಾಯಿಯನ್ನು ಆಕೆಯ ಸೀರೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. 50 ವರ್ಷದ ಫಾತಿಮಾ ಮೇರಿ ಕೊಲೆಯಾದ ಮಹಿಳೆ, ಜೂ.1 ರಂದು ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.  ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ದೀಪಕ್ ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ತಾಯಿಯ ಬಳಿ ಮೊಬೈಲ್ ಕೊಡಿಸುವಂತೆ ಮಗ ಪಟ್ಟು ಹಿಡಿದಿದ್ದ, ಇದೇ ವಿಚಾರವಾಗಿ ತಾಯಿ ಮಗನ ನಡುವೆ ಅನೇಕ ಬಾರಿ ಜಗಳ ಕೂಡ ನಡೆದಿತ್ತು. ಜಗಳ ತಾರಕಕ್ಕೇರಿದ್ದು, ತಾಯಿಯ ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಕಳೆದ ಕೆಲ ದಿನಗಳಿಂದ ತಾಯಿ ಬಳಿ ಮೊಬೈಲ್ ಕೇಳುತ್ತಿದ್ದ ಮಗ.


ತರಕಾರಿ ವ್ಯಾಪಾರ ಮಾಡ್ತಿದ್ದ ಫಾತಿಮಾ


ಫಾತಿಮಾ ಮೇರಿ ತರಕಾರಿ, ಸೊಪ್ಪು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ, ಜೂನ್​ 1ನೇ ತಾರೀಖಿನಂದು ಸಂಜೆ ವೇಳೆ ಮಹಿಳೆಯ ಕೊಲೆ ನಡೆದಿದೆ. ನೈಸ್ ರಸ್ತೆಯ ತೋಟವೊಂದರ ಬಳಿ ಮೇವು ತರಲು ಮಹಿಳೆ ಹೋಗಿದ್ದರು. ಈ ವೇಳೆ ಅಲ್ಲಿಗೆ ತೆರಳಿದ ದೀಪಕ್​, ತಾಯಿಯ ಜೊತೆ ಜಗಳವಾಡಿ ಕೊಲೆ ಮಾಡಿ ಬಳಿಕ ಆಕೆಯ ಬಳಿ ಇದ್ದ 700ರೂ ತೆಗೆದುಕೊಂಡು ಹೋಗಿದ್ದಾನೆ ಎಂದು ಶ್ರೀನಾಥ್ ಮಹದೇವ್ ಜೋಶಿ ಹೇಳಿದ್ದಾರೆ.


ಇದನ್ನೂ ಓದಿ: Belagavi: ತಂದೆಯ ಅನೈತಿಕ ಸಂಬಂಧ ಪ್ರಶ್ನಿಸಿದ್ದೇ ತಪ್ಪಾಯ್ತು, ಮಗನನ್ನೇ ಹೊಡೆಸಿದರಾ ಪಿಎಸ್ಐ?


ಸದ್ಯ ಆರೋಪಿಯನ್ನ ಬಂಧಿಸಿ ವಿಚಾರಣೆ


ಕೊಲೆ ಬಳಿಕ ಸ್ಥಳೀಯರು ಮಹಿಳೆ ಶವ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ರು. ತನಿಖೆ ನಡೆಸಿದಾಗ 50 ವರ್ಷದ ಮಹಿಳೆ ಕೊಲೆಯಾಗಿರೋದು ಗೊತ್ತಾಗಿದ್ದು, ಫಾತಿಮಾ ಮೇರಿ ಎಂಬಾಕೆಯನ್ನ ಕೊಲೆ ಮಾಡಲಾಗಿತ್ತು. ಮಗನೇ ಆಕೆಯನ್ನ ಕೊಲೆ ಮಾಡಿರೋದು ತನಿಖೆ ವೇಳೆ ತಿಳಿದು ಬಂದಿದೆ. 26 ವರ್ಷದ ಆರೋಪಿ ದೀಪಕ್ ತಾಯಿಯ ಬಳಿ ಮೊಬೈಲ್ ಕೇಳಿದ್ದ. ಇದೇ ವಿಚಾರವಾಗಿ ಜಗಳವಾಗಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಲಾಗಿದೆ. ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಹೇಳಿಕೆ.


ಇದನ್ನೂ ಓದಿ: Suicide: ಪುಟ್ಟ ಕಂದನ ಎದುರೇ ನೇಣಿಗೆ ಶರಣಾದ ತಾಯಿ; ಶವದ ಮುಂದೆ 2 ಗಂಟೆ ರೋಧಿಸಿದ ಮಗು


ಮಗನ ವಿರುದ್ಧ ತಾಯಿ ದೂರು


ಬಸವಗಂಗೂರಿನಲ್ಲಿ ವಾಸವಾಗಿರುವ ಮೌಸೀನ ಬಾನು ಎಂಬುವರ ಮಗ ಫೈಯಾಜ್ ಎಂಬಾತ ಮೊದಲಿನಿಂದಲೂ ಕುಡಿಯುವ ಚಟಕ್ಕೆ ಬಿದ್ದು ಮದುವೆಯಾದರೂ ಸರಿಯಾಗಿ ಬಾಳ್ವೆ ನಡೆಸದ ಹಿನ್ನೆಲೆಯಲ್ಲಿ ಆಕೆ ವಾಪಾಸ್ ತವರು ಮನೆಗೆ ಹೋಗಿದ್ದಾರೆ. ಅತಿಯಾದ ಕುಡಿತದಿಂದ ಮನೆಯ ವಸ್ತುಗಳನ್ನ ಫೈಯಾಜ್ ಹಾನಿ ಮಾಡುತ್ತಿದ್ದು ತಂದೆ ತಾಯಿ ಒಡಹುಟ್ಟಿದವರೆಂದು ನೋಡದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನು. ಮೊನ್ನೆ ರಾತ್ರಿ ಕುಡಿದುಕೊಂಡು ಬಂದ ಫೈಯಾಜ್ ಟಿವಿಯನ್ನ ಒಡೆದು ಹಾಕಿದ್ದಾನೆ.


ತಡೆಯಲು ಹೋದ ತಾಯಿಯನ್ನೇ ಒದ್ದು ಥಳಿಸಿದ್ದಾನೆ. ನಂತರ ತಾಯಿ ಕೂಗಿಕೊಂಡ ಪರಿಣಾಮ ಅಕ್ಕಪಕ್ಕದವರು ಬಂದು ತಾಯಿಯನ್ನ ಮಗನಿಂದ ರಕ್ಷಿಸಿದ್ದಾರೆ. ಕೋಪದಲ್ಲಿ ಫೈಯಾಜ್ ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಕುರಿತು ಮೌಸೀನಾ ಭಾನು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Published by:Annappa Achari
First published: