Crime News: ಪರಪುರುಷನ ಜೊತೆ 4 ಮಕ್ಕಳ ತಾಯಿ ಪರಾರಿ; ಇಬ್ಬರು ಮಕ್ಕಳನ್ನು ಕೊಂದು ಪೊಲೀಸರಿಗೆ ಶರಣಾದ ತಂದೆ!

 ಪತ್ನಿ ಪರಪುರುಷನ ಜೊತೆ ಓಡಿಹೋಗಿದ್ದಕ್ಕೆ ನಾಲ್ವರು ಮಕ್ಕಳು ಅಜ್ಜಿ ಹತ್ತಿರ ಆಶ್ರಯ ಪಡೆದಿದ್ದರು. ನಿನ್ನೆ ನಾಲ್ವರು ಮಕ್ಕಳ ಪೈಕಿ ಸೋನಿ ಮತ್ತು ಮಯೂರಿಯನ್ನ ತಿಂಡಿ ಕೊಡಿಸ್ತಿನಿ ಬನ್ನಿ ಮಕ್ಕಳೆ ಅಂತಾ ಲಕ್ಷ್ಮೀಕಾಂತ್ ಆಟೋದಲ್ಲಿ ಕೂಡಿಸಿಕೊಂಡು ಹೋಗಿ ಕೊಲೆ ಮಾಡಿದ್ದಾನೆ.

 ಲಕ್ಷ್ಮೀಕಾಂತ್

ಲಕ್ಷ್ಮೀಕಾಂತ್

 • Share this:
  ಕಲಬುರಗಿ: ಆತ ಬೆಟ್ಟದಷ್ಟು ಕಷ್ಟವಿದ್ದರೂ ಪತ್ನಿ (Wife) ಮತ್ತು ಮುದ್ದಾದ ನಾಲ್ವರು ಮಕ್ಕಳ (Children) ಜೊತೆ ಸುಖವಾಗಿ ಸಂಸಾರ ಮಾಡುತ್ತಿದ್ದನು. ದಿನವಿಡೀ ಆಟೋ ಓಡಿಸಿ ಮನೆಗೆ ಬಂದು ಮಕ್ಕಳ ಮುಖ ನೋಡಿ ಊಟ ಮಾಡಿ ಸುಖನಿದ್ರೆಗೆ ಜಾರುತ್ತಿದ್ದ. ಆದ್ರೆ ಖುಷಿಯಲ್ಲಿ ತೇಲಾಡ್ತಿರುವಾಗಲೇ ಆತನ ಪತ್ನಿ ಮಾತ್ರ ಪರಪುರುಷನ ಜೊತೆ ಪಲ್ಲಂಗಾದಾಟವಾಡಿ ಓಡಿಹೋಗಿದ್ದಳು. ಇದರಿಂದ ಬೇಸತ್ತ ಆತ ಕೈಗೊಂಡ ನಿರ್ಧಾರ ಮಾತ್ರ ಘನಘೋರ. ಹೆಂಡತಿ ಪರಪುರಷನೊಂದಿಗೆ ಪಾರಾರಿಯಾಗಿದ್ದರಿಂದ ಮನನೊಂದ ಪತಿ ತನ್ನ ಮಕ್ಕಳನ್ನು ಕತ್ತು ಹಿಸುಕಿ ಕೊಂದು (MURDER) ಪೊಲೀಸರಿಗೆ ಶರಣಾಗಿದ್ದಾರೆ. ಕಲಬುರಗಿ ನಗರದ ಭೋವಿ ಗಲ್ಲಿ ನಿವಾಸಿಯಾದ ಲಕ್ಷ್ಮೀಕಾಂತ್ ಮತ್ತು ಅಂಜಲಿ ದಂಪತಿಯ ಮಕ್ಕಳು ಶವವಾಗಿದ್ದಾರೆ. ಸೋನಿ (11), ಮಯೂರಿ (10) ಮೃತಪಟ್ಟಿದ್ದಾರೆ.

  ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಲಕ್ಷ್ಮೀಕಾಂತ್​

  ಲಕ್ಷ್ಮೀಕಾಂತ್ ಮತ್ತು ಅಂಜಲಿ ದಂಪತಿಗಳು ಮೂವರು ಹೆಣ್ಣುಮಕ್ಕಳು ಮತ್ತು ಓರ್ವ ಮಗನ ಜೊತೆ ಸುಖವಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಕೆಲ ಪತ್ನಿ ಮಾತ್ರ ಪರಪುರುಷನ ಜೊತೆ ಸಂಬಂಧ ಇಟ್ಟುಕೊಂಡು ಚಕ್ಕಂದಾ ಆಡುತ್ತಿದ್ದಳು. ಸಾಕಷ್ಟು ಬಾರಿ ಪತಿ ಲಕ್ಷ್ಮೀಕಾಂತ್ ಪತ್ನಿ ಅಂಜಲಿಗೆ ಬುದ್ದಿವಾದ ಹೇಳಿದ್ದನು. ಆದರೂ ಅಂಜಲಿ ಪರಪುರುಷನ ಜೊತೆ ಓಡಿಹೋಗಿದ್ದಳು. ಇದರಿಂದ ಲಕ್ಷ್ಮೀಕಾಂತ್ ತೀವ್ರ ಮಾನಸಿಕ ಸ್ಥಿಮಿತ ಕಳೆದುಕೊಂಡು, ಸೋನಿ ಮತ್ತು ಮಯೂರಿಯನ್ನ ಆಟೋದಲ್ಲಿ ಕರೆದುಕೊಂಡು ಹೋಗಿ ನಗರದ ವಿರೇಂದ್ರ ಪಾಟೀಲ್ ಬಡಾವಣೆಯಲ್ಲಿ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ‌.

  ತಿಂಡಿ ಕೊಡಿಸೋದಾಗಿ ಕರೆದು ಕತ್ತು ಹಿಸುಕಿದ

  ಪತ್ನಿ ಪರಪುರುಷನ ಜೊತೆ ಓಡಿಹೋಗಿದ್ದಕ್ಕೆ ನಾಲ್ವರು ಮಕ್ಕಳು ಅಜ್ಜಿ ಹತ್ತಿರ ಆಶ್ರಯ ಪಡೆದಿದ್ದರು. ನಿನ್ನೆ ನಾಲ್ವರು ಮಕ್ಕಳ ಪೈಕಿ ಸೋನಿ ಮತ್ತು ಮಯೂರಿಯನ್ನ ತಿಂಡಿ ಕೊಡಿಸ್ತಿನಿ ಬನ್ನಿ ಮಕ್ಕಳೆ ಅಂತಾ ಲಕ್ಷ್ಮೀಕಾಂತ್ ಆಟೋದಲ್ಲಿ ಕೂಡಿಸಿಕೊಂಡು ಹೋಗಿದ್ದಾನೆ. ನಿನ್ನೆ ತಿಂಡಿ ಕೊಡಿಸಿ ದಿನವೀಡಿ ಆಟೋದಲ್ಲಿ ಓಡಾಡಿಸಿದ್ದಾನೆ. ನಂತರ ಸೋನಿ ಮತ್ತು ಮಯೂರಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನ ಪ್ರಯಾಣಿಕರು ಕೂಡುವ ಸೀಟಿನ ಹಿಂಬದಿ ಹಾಕಿದ್ದಾನೆ. ನಂತರ ಮನೆಗೆ ಬಂದು ಇನ್ನಿಬ್ಬರ ಮಕ್ಕಳನ್ನ ಆಟೋದಲ್ಲಿ ಕೂಡಿಸಿಕೊಂಡು ನೇರವಾಗಿ ನಗರದ ಎಂಬಿ ನಗರ ಪೊಲೀಸ್ ಠಾಣೆಗೆ ಬಂದು ಇಬ್ಬರ ಮೃತದೇಹ ಮತ್ತು ಇನ್ನಿಬ್ಬರ ಮಕ್ಕಳ ಸಮೇತ ಬಂದು ಪೊಲೀಸರಿಗೆ ಶರಣಾಗಿದ್ದಾನೆ.

  ಇದನ್ನೂ ಓದಿ: Chitradurga: ಮತಾಂತರ ಆರೋಪ, ಬೈಬಲ್ ಪ್ರತಿಗಳನ್ನು ಸುಟ್ಟ ಭಜರಂಗ ದಳ ಕಾರ್ಯಕರ್ತರು

  ಅದೆನೇ ಇರಲಿ ಮುದ್ದಾದ ನಾಲ್ವರು ಹೆಣ್ಮಕ್ಕಳ ಜೊತೆ ಸಂಸಾರ ಮಾಡುವುದನ್ನ ಬಿಟ್ಟು, ಪತ್ನಿ ಪರಪುರುಷನ ಜೊತೆ ಓಡಿಹೋಗಿದ್ರೆ, ಇತ್ತ ಮಾನಸಿಕನಾಗಿ ತಂದೆ ಮುದ್ದಾದ ಹೆಣ್ಣು ಮಕ್ಕಳಿಬ್ಬರನ್ನ ಕೊಂದು ಜೈಲು ಪಾಲಾಗಿರುವುದು ಮಾತ್ರ ದುರಂತವೇ ಸರಿ.

  ಮತ್ತೊಂದು ಅಪರಾಧ ಸುದ್ದಿ 

  ಯಾದಗಿರಿಯಲ್ಲಿ ಹೆಣ್ಣು ಕೊಟ್ಟ ಮಾವ  ಕಣ್ಣು ಕೊಟ್ಟ ದೇವರಿಗೆ  ಸಮಾನ ಅಂತಾರೆ. ಆದ್ರೆ ಇಲ್ಲಿ ಬುದ್ದಿ ಮಾತು ಹೇಳಿದ ಮಾವನ ಜೊತೆಗೆ ಸಂಬಂಧಿಕರಿಗೆ  ಪಾಪಿ ಅಳಿಯ  ಬೆಂಕಿ ಹಚ್ಚಿ ಪಾಪಿ ಕೃತ್ಯ ಎಸಗಿದ್ದಾನೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಛಾಯಾ ಕಾಲೋನಿಯಲ್ಲಿ ಇಂತಹ ಅಮಾನವೀಯ ಕೃತ್ಯ ಜರುಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ನಿವಾಸಿ ಶರಣಪ್ಪ , ತಮ್ಮ ಸಂಬಂಧಿಕಳಾದ ಹುಲಿಗೆಮ್ಮಳನ್ನು 2005 ರಲ್ಲಿ ವಿವಾಹವಾಗಿದ್ದನು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳನ ನಿವಾಸಿಯಾದ ಹುಲಿಗೆಮ್ಮ ಬೆಂಗಳೂರಿನಲ್ಲಿ 2005 ರಲ್ಲಿ ಬಿಎಂಟಿಸಿಯಲ್ಲಿ (BMTC) ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದಳು. ನಾರಾಯಣಪುರ ಗ್ರಾಮದ ನಿವಾಸಿ ಶರಣಪ್ಪ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ನಂತರ ತಮ್ಮ ಜಿಲ್ಲೆಗೆ ಸಮೀಪವಾಗಲಿ ಎಂದು ಶರಣಪ್ಪ ಹೆಂಡತಿ ಹುಲಿಗೆಮ್ಮ ನೌಕರಿಯನ್ನು ಲಿಂಗಸುಗೂರುಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.

  ವರದಿ: ಅರುಣಕುಮಾರ ಕದಂ  
  Published by:Kavya V
  First published: