ನಿಧಿ ಆಸೆಗಾಗಿ ಮಗಳನ್ನೇ ಬಲಿ ಕೊಡಲು ಮುಂದಾದಳಾ ತಾಯಿ?; ತುಮಕೂರಿನಲ್ಲೊಂದು ಆಘಾತಕಾರಿ ಘಟನೆ

ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಹೀಗೆ ನಿಧಿಗಾಗಿ ಬಲಿ ಕೊಡುವುದು, ಅಮವಾಸ್ಯೆ ಹಾಗೂ ಹುಣ್ಣಿಮೆ ರಾತ್ರಿಗಳಲ್ಲಿ ಪೂಜೆ ಮಾಡುವುದು ಆಗಾಗ ಬೆಳಕಿಗೆ ಬರುತ್ತಿವೆ.

ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಹೀಗೆ ನಿಧಿಗಾಗಿ  ಬಲಿ ಕೊಡುವುದು, ಅಮವಾಸ್ಯೆ ಹಾಗೂ ಹುಣ್ಣಿಮೆ ರಾತ್ರಿಗಳಲ್ಲಿ ಪೂಜೆ ಮಾಡುವುದು ಆಗಾಗ ಬೆಳಕಿಗೆ ಬರುತ್ತಿವೆ.

ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಹೀಗೆ ನಿಧಿಗಾಗಿ ಬಲಿ ಕೊಡುವುದು, ಅಮವಾಸ್ಯೆ ಹಾಗೂ ಹುಣ್ಣಿಮೆ ರಾತ್ರಿಗಳಲ್ಲಿ ಪೂಜೆ ಮಾಡುವುದು ಆಗಾಗ ಬೆಳಕಿಗೆ ಬರುತ್ತಿವೆ.

  • Share this:
ತುಮಕೂರು (ಜು. 31): ಮಗಳನ್ನು ಬಲಿಕೊಟ್ಟರೆ ಅಪಾರ ಪ್ರಮಾಣದ ನಿಧಿ ಸಿಗುತ್ತದೆ. ಬೆಳಗಾವುಷ್ಟರಲ್ಲಿ ಕೋಟ್ಯಾಧಿಪತಿ ಆಗಬಹದು ಎಂದು ಹೇಳಿದ ಮಾಂತ್ರಿಕನ ಮಾತು ಕೇಳಿದ ತಾಯಿಯೊಬ್ಬಳು ಸ್ವತಃ ಮಗಳನ್ನೇ ಬಲಿಕೊಡಲು ಹೊರಟಿರುವ ಘಟನೆ ಬೆಳಕಿಗೆ ಬಂದಿದ್ದಾಳೆ. ಈ ಕುರಿತು ಖುದ್ದು ಮಗಳು ಮತ್ತು ಅಳಿಯ ಆರೋಪಿಸಿ ತಮಗೆ ರಕ್ಷಣೆ ಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಕುಣಿಗಲ್ ತಾಲೂಕಿನ ಅವರೆಗೆರೆಯಲ್ಲಿ ವಿಲಕ್ಷಣ ಘಟನೆಯೊಂದು ನಡೆಯುವ ಸಾಧ್ಯತೆ ಇದೆಯಂತೆ. ಅವರೆಗೆರೆಯ ನಿವಾಸಿ ಲಕ್ಷ್ಮೀ ಎಂಬಾಕೆ ಸ್ವತಃ ತನ್ನ ಮಗಳು ಹರಿಣಿಯನ್ನು ನಿಧಿ ಆಸೆಗಾಗಿ ಬಲಿಕೊಡಲು ಮುಂದಾಗಿದ್ದಾಳಂತೆ. ಹೀಗಂತ ಸ್ವತಃ ಹರಿಣಿಯೇ ಪೊಲೀಸರಿಗೆ ದೂರು ನೀಡಿದ್ದಾಳೆ.

ಗ್ರಾಮದಲ್ಲಿ ಲಕ್ಷ್ಮೀ ಕುಟುಂಬಕ್ಕೆ ಸೇರಿದ ಜಮೀನಿದೆ. ಅದರಲ್ಲಿ ಒಂದು ಹುತ್ತ ಇದೆಯಂತೆ. ಆ ಹುತ್ತಕ್ಕೆ ಹತ್ತಾರು ವರ್ಷಗಳಿಂದ ಲಕ್ಷ್ಮಿ ಕುಟುಂಬ ಪೂಜೆ ಸಲ್ಲಿಸಿಕೊಂಡು ಬಂದಿದ್ದಾರೆ. ಕಳೆದ ಮೂರ್‍ನಾಲ್ಕು ವರ್ಷದ ಹಿಂದೆ ಹುತ್ತ ಅಗೆದಾಗ ದೇವರ ವಿಗ್ರಹ, ಬೆಳ್ಳಿ ನಾಣ್ಯಗಳು ಸಿಕ್ಕಿತ್ತಂತೆ. ಆ ಹುತ್ತದಲ್ಲಿ ಇನ್ನೂ ಚಿನ್ನದ ನಾಣ್ಯಗಳಿದ್ದು, ಮಗಳನ್ನು ಬಲಿ ಕೊಟ್ಟರೆ ನಾಣ್ಯ ಸಿಗಲಿದೆ ಎಂದು ತಮಿಳುನಾಡಿನ ಮಾಂತ್ರಿಕನೋರ್ವ ಲಕ್ಷ್ಮಿಗೆ ತಿಳಿಸಿದ್ದಾನಂತೆ.

ಮಾಂತ್ರಿಕನ ಮಾತು ಕೇಳಿಕೊಂಡು ನಿಧಿ ಆಸೆಗಾಗಿ ಲಕ್ಷ್ಮೀ ತನ್ನ ಮಗಳು ಹರಿಣಿ ಮೇಲೆ ಮಾಟ ಮಂತ್ರ ಮಾಡಿಸಿದ್ದಾಳಂತೆ. ಅಮವಾಸ್ಯೆ, ಹುಣ್ಣಿಮೆ ಬಂದಾಗ ಹುತ್ತದ ಬಳಿ ಕರೆದುಕೊಂಡು ಹೋಗುದನ್ನು ಮಾಡುತ್ತಾಳಂತೆ. ತಾಯಿಯ ಈ ವರ್ತನೆಯಿಂದ ಭಯಭೀತಳಾದ ಹರಿಣಿ ತನ್ನ ರಕ್ಷಣೆ ಮಾಡುವಂತೆ ಪೊಲೀಸರ ಮೊರೆ ಹೋಗದ್ದಾಳೆ. ಅಂದಹಾಗೆ ಹರಿಣಿ ಈಗಾಲೇ ಕಾರ್ತೀಕ್ ಎನ್ನುವವರ ಜೊತೆ ಮದುವೆಯಾಗಿದ್ದಾಳೆ. ಇವರಿಗೆ ಒಂದು ಮಗು ಕೂಡ ಇದೆ. ಆದರೂ ತಮ್ಮ ತಾಯಿ ತನ್ನನ್ನು ಬಲಿಕೊಡಲು ಮುಂದಾಗಿದ್ದಾಳೆ ಎಂದು ಆರೋಪಿಸುತ್ತಾಳೆ. ಲಕ್ಷ್ಮೀ ಕೊಟ್ಟ ದೂರನ್ನು ಸ್ವೀಕರಿಸಿದ ತುಮಕೂರು ಎಸ್ಪಿ ರಾಹುಕ್ ಕುಮಾರ್ ತನಿಖೆಗಾಗಿ ಮಹಿಳಾ ಠಾಣೆಗೆ ದೂರನ್ನು ವರ್ಗಾಯಿಸಿದ್ದಾರೆ.

ಇದನ್ನು ಓದಿ: ಮೂರನೇ ಅಲೆ ಭೀತಿ ನಡುವೆ ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಮಾರ್ಗಸೂಚಿ ಪ್ರಕಟ

ಅಮವಾಸ್ಯೆ, ಹುಣ್ಣಿಮೆ ದಿನ ಹರಿಣಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತಿದ್ದು ತಾಯಿ ಲಕ್ಷ್ಮೀ ಮಾಟ ಮಂತ್ರ ಮಾಡಿಸಿದ್ದಾಳೆ ಎಂದು ಆರೋಪಿಸುತ್ತಾಳೆ. ಅತ್ತ ಅಳಿಯ ಕಾರ್ತಿಕ್ ನನ್ನೂ ಕೊಲೆ ಮಾಡಲು ಯತ್ನಿಸಿದ್ದರಂತೆ. ಹರಿಣಿ 8ನೇ ತರಗತಿ ಓದುತಿದ್ದಾಗಲೇ ನಿಧಿಗಾಗಿ ಕೊಲೆ ಮಾಡಲು ಪ್ರಯ್ನಿಸಿದ್ದರಂತೆ. ಆದರೆ ಹರಿಣಿ ತಪ್ಪಿಸಿಕೊಂಡಿದ್ದಳಂತೆ. ಮುದುವೆಯಾದರೆ ಗಂಡನಿಂದ ತನಗೆ ರಕ್ಷಣೆ ದೊರೆಯಬಹದು ಎಂದು ಪ್ರೀತಿಸಿ ಕಾರ್ತಿಕ್ ನನ್ನು ಮದುವೆಯಾಗಿದ್ದಾಳೆ. ಈಗ ಹರಿಣಿ ಸೇರಿದಂತೆ ಗಂಡ ಮತ್ತು ಮಗುವನ್ನೂ ಕೊಲೆ ಮಾಡಲು ಸಂಚುರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣ ಎಷ್ಟರಮಟ್ಟಿಗೆ ನಿಜವೋ ಸುಳ್ಳೋ ಅನ್ನೋದು ಪೊಲೀಸ್ ತನಿಖೆಯಿಂದ ಮಾತ್ರ ಗೊತ್ತಾಗಬೇಕಾಗಿದೆ.

ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಹೀಗೆ ನಿಧಿಗಾಗಿ ಮನುಷ್ಯರನ್ನು ಬಲಿ ಕೊಡುವುದು, ಅಮವಾಸ್ಯೆ ಹಾಗೂ ಹುಣ್ಣಿಮೆ ರಾತ್ರಿಗಳಲ್ಲಿ ಪೂಜೆ ಮಾಡುವುದು ಆಗಾಗ ಬೆಳಕಿಗೆ ಬರುತ್ತಿವೆ.  ಅಷ್ಟೇ ಅಲ್ಲದೇ ಕಳೆದ ತಿಂಗಳು ತುಮಕೂರು ತಾಲೂಕಿನ ಜಕ್ಕೇನಹಳ್ಳಿ ಸಮೀಪದ ಮಿಂಚುಕಲ್ಲು ಬೆಟ್ಟದಲ್ಲಿರೋ ಆಂಜನೇಯನ ಗುಡಿ ಮುಂದೆ ಚಿತ್ರವಿಚಿತ್ರವಾಗಿ ಪೂಜೆ ಮಾಡಿ ಮಹಿಳೆಯೊಬ್ಬರನ್ನ ಕೊಲೆ ಮಾಡಿ, ಅದೇ ಜಾಗದಲ್ಲಿ ಗುಂಡಿ ತೆಗೆಯಲಾಗಿತ್ತು.. ಗ್ರಾಮಸ್ಥರು ಹೇಳುವ ಪ್ರಕಾರ ಆ ಬೆಟ್ಟದಲ್ಲಿ ನಿಧಿ ಇದೆ. ಹೀಗಾಗಿ ಯಾರೋ ಅಲ್ಲಿ ಮಹಿಳೆಯನ್ನ ಬಲಿ ಕೊಟ್ಟು ನಿಧಿ ಶೋಧಿಸಿದ್ದಾರಂತೆ. ಈ ಪ್ರಕರಣ ಮಾಸೋ ಮುನ್ನವೇ ಹರಿಣಿ ಎಂಬ ಗೃಹಿಣಿ ತನ್ನ ತಾಯಿಯ ಮೇಲೆಯೇ ಈ ಆರೋಪ ಮಾಡಿರುವುದು ಪೊಲೀಸರನ್ನ ಕಂಗಾಲು ಮಾಡಿದೆ.
Published by:Seema R
First published: