Mother and Kids Death: ತವರು ಮನೆಗೆ ಕರೆದೊಯ್ಯದ ಗಂಡ; ಕೋಪದಲ್ಲಿ ಮಕ್ಕಳನ್ನು ಕೊಂದ ಹೆಂಡತಿ!

ಮಕ್ಕಳಾದ ಸಿಂಚನ ಮತ್ತು ಧನಂಜಯ್‌ರನ್ನ ಮಕ್ಕಳ ಆಟಿಕೆ ಸೈಕಲ್ ಮೇಲೆ ಕುಡಿಸಿ ಬಟ್ಟೆಯಿಂದ ಕಟ್ಟಿ ಹಾಕಿದ್ದಾಳೆ. ನಂತರ ಇಬ್ಬರು ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ಅದಾದ ನಂತರ ತಾನು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತ ತಾಯಿ, ಮಕ್ಕಳು

ಮೃತ ತಾಯಿ, ಮಕ್ಕಳು

 • Share this:
  ಕಲಬುರಗಿ(Kalaburagi ):  ಆ ಮಹಿಳೆ ಮುದ್ದಾದ ಇಬ್ಬರು ಮಕ್ಕಳು (two children ) ಮತ್ತು ಗಂಡನ (husband)ಜೊತೆ ಸುಖವಾಗಿ ಸಂಸಾರ ಮಾಡುತ್ತಿದ್ದಳು. ನಾನು ತವರಿಗೆ ಹೋಗಬೇಕು ನನ್ನ ಬಿಟ್ಟು ಬನ್ನಿ ಅಂತಾ ಆ ಮಹಿಳೆ ಗಂಡನಿಗೆ ಕೇಳಿದ್ದಾಳೆ. ಆದರೆ ಗಂಡ ಮಾತ್ರ ನನಗೆ ಬರೋಕೆ ಆಗಲ್ಲ. ನಿನ್ನ ತಮ್ಮನನ್ನ ಕರೆಯಿಸಿಕೊಂಡು ಹೋಗು ಅಂತಾ ಹೇಳಿ ಕೆಲಸಕ್ಕೆ ಹೋಗಿದ್ದಾನೆ. ಇಷ್ಟೇ ನೋಡಿ.. ಕೆಲವೇ ಗಂಟೆಗಳಲ್ಲಿ ಅಲ್ಲಿ ನಡೆದಿದ್ದು ಮಾತ್ರ ಘೋನಘೋರ ದುರಂತ.  ಸುಟ್ಟು ಕರಕಲಾಗಿ ಹೊತ್ತಿ ಉರಿಯುತ್ತಿರುವ ಮಹಿಳೆ.. ಮತ್ತೊಂದೆಡೆ ಆಸ್ಪತ್ರೆಯಲ್ಲಿ ಸುಟ್ಟ ದೇಹದಿಂದ ಉಸಿರು ಚೆಲ್ಲಿದ ಪುಟ್ಟ ಮಗು.. ಮತ್ತೊಂದೆಡೆ ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ..  ಗೃಹಿಣಿ ದಿಕ್ಷಾ ಹಾಗೂ ಮಕ್ಕಳಾದ 2 ವರ್ಷದ ಸಿಂಚನ ಮತ್ತು 3 ವರ್ಷದ ಧನಂಜಯ್​ ನಗರದ ಪಂಚಶೀಲ ನಗರ ಬಡಾವಣೆಯಲ್ಲಿ ವಾಸವಾಗಿದ್ದರು. ಈ ಸುಂದರ‌ ಕುಟುಂಬದ‌ ಅದ್ಯಾವ ಕೆಟ್ಟ ಕಣ್ಣು ಬಿದ್ದಿತ್ತೋ ಗೊತ್ತಿಲ್ಲ. ಈಗ ಮೂರು ಜೀವಗಳು ಬೆಂಕಿಯಲ್ಲಿ ಬೆಂದು ಹೋಗಿವೆ.

  ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ! 

  ಅಷ್ಟಕ್ಕೂ ದೀಕ್ಷಾ ತವರು ಮನೆಗೆ ಹೋಗೊದು ಇದೆ ನೀವೆ ನನ್ನನ್ನ ಬಿಟ್ಟು ಬನ್ನಿ ಅಂತಾ ಗಂಡ ವಸಂತ್‌ಗೆ ಕೇಳಿಕೊಂಡಿದ್ದಾಳೆ.. ಆಗ ವಸಂತ್, ನನಗೆ ಬೇರೆ ಕೆಲಸವಿದೆ.. ಹಾಗಾಗಿ ನೀನು ನಿನ್ನ ತಮ್ಮನನ್ನ ಕರೆಯಿಸಿಕೊಂಡು ಊರಿಗೆ ಹೋಗು ಅಂತಾ ಹೇಳಿ ಹೊರಗಡೆ ಹೋಗಿದ್ದಾನೆ.. ಇಷ್ಟೇ ನೋಡಿ.. ಮಧ್ಯಾಹ್ನ 12.30 ರ ಸುಮಾರಿಗೆ ಮಕ್ಕಳಾದ ಸಿಂಚನ ಮತ್ತು ಧನಂಜಯ್‌ರನ್ನ ಮಕ್ಕಳ ಆಟಿಕೆ ಸೈಕಲ್ ಮೇಲೆ ಕುಡಿಸಿ ಬಟ್ಟೆಯಿಂದ ಕಟ್ಟಿ ಹಾಕಿದ್ದಾಳೆ. ನಂತರ ಇಬ್ಬರು ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ಅದಾದ ನಂತರ ತಾನು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

  ತಾಯಿ, ಇಬ್ಬರು ಮಕ್ಕಳ ದುರಂತ ಅಂತ್ಯ

  ಇನ್ನೂ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ತಾನು ಬೆಂಕಿ ಹಚ್ಚಿಕೊಂಡಿದ್ದಾಳೆ.  ಮನೆಯಲ್ಲದೇ ಇಡೀ ಬಡಾವಣೆಯ ತುಂಬಾ ದಟ್ಟವಾದ ಹೊಗೆ ಆವರಿಸಿದೆ.. ಏನಾಯಿತು ಅಂತಾ ಬಡಾವಣೆ ಜನ ಓಡೋಡಿ ಬಂದು ನೋಡಿದಾಗ ತಾಯಿ ದಿಕ್ಷಾ ಬೆಂಕಿಯಲ್ಲಿ ಬೆಂದು ಸಾವನ್ನಪ್ಪಿದ್ರೆ, ಮಕ್ಕಳಾದ ಸಿಂಚನ ಮತ್ತು ಧನಂಜಯ್ ಸುಟ್ಟ ದೇಹದಿಂದ ಜೀವನ್ಮರಣದ‌ ಮದ್ಯೆ ಒದ್ದಾಡುತ್ತಿದ್ದರು. ತಕ್ಷಣವೇ ಸ್ಥಳೀಯರು ಹಾಗೂ ಕುಟುಂಬಸ್ಥರು ಸೇರಿಕೊಂಡು ಇಬ್ಬರು ಮಕ್ಕಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.. ಇನ್ನೆನು ಚಿಕಿತ್ಸೆ ನೀಡಬೇಕು ಎನ್ನುವಷ್ಟರಲ್ಲಿ ಮಗಳು ಸಿಂಚನ ಉಸಿರು ಚೆಲ್ಲಿದ್ರೆ, ಮತ್ತೊರ್ವ ಮಗ ಧನಂಜಯ್ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮತ್ತು ತಂಗಿ ಜೊತೆ ಬಾರದ ಲೋಕಕ್ಕೆ ತೆರಳಿದ್ದಾನೆ.

  ಆತ್ಮಹತ್ಯೆಗೆ ಅಕ್ರಮ ಸಂಬಂಧ ಕಾರಣವಾಯ್ತಾ? 

  ಇನ್ನು ದಿಕ್ಷಾ ಗಂಡ ವಸಂತ್‌ಗೆ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು ಜೊತೆಗೆ ಅತ್ತೆ ಮತ್ತು ಗಂಡ ಸೇರಿಕೊಂಡು ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಿದ್ದರು. ಹೀಗಾಗಿ ಹಣ ತರದಿದ್ದಾಗ ಎಲ್ಲರೂ ಸೇರಿಕೊಂಡು ನಮ್ಮ ಮಗಳಿಗೆ ಹಾಗೂ ಮೊಮ್ಮೊಕ್ಕಳಿಗೆ ಬೆಂಕಿ ಹಚ್ಚಿದ್ದಾರೆ ಅಂತಾ  ಹೆತ್ತವರು ಆರೋಪಿಸಿದ್ದಾರೆ.

  ಇದನ್ನೂ ಓದಿ: ಕೊಡಗಿಗೆ ಸ್ನೇಹಿತೆಯರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವತಿ ನಿಗೂಢ ಸಾವು; Home Stayನಲ್ಲಿ ಆಗಿದ್ದೇನು?

  ಅದೆನೇ ಇರಲಿ ಗಂಡ ಹೆಂಡತಿ ಜಗಳ ಉಂಡು ಮಲಗೋತನಕ ಅಂತಾರೆ, ಆದರೆ ಇಲ್ಲಿ ಮಾತ್ರ ಗಂಡ ಹೆಂಡತಿ ಜಗಳ ಏನು ಅರಿಯದ ಮುದ್ದಾದ ಮಕ್ಕಳ ಜೊತೆ ಹೆಂಡ್ತಿಯ ಬಲಿ ಪಡೆದಿದ್ದು ಮಾತ್ರ ದುರಂತವೇ ಸರಿ.‌. ಇನ್ನೂ ದುಡುಕಿನ‌ ನಿರ್ಧಾರ ತೆಗೆದುಕೊಂಡು ಕಲಬುರಗಿ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳ ಅಂತರದಲ್ಲಿ ಮೂವರು ತಾಯಂದಿರು ಮಕ್ಕಳ ಜೊತೆ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ತೊಗರಿಯ ಕಣಜ ಮಂದಿ ಬೆಚ್ಚಿ ಬೀಳುವಂತೆ ಮಾಡಿದ್ದು ಸುಳ್ಳಲ್ಲ.

  (ವರದಿ: ಅರುಣ್​​ ಕುಮಾರ್​) 
  Published by:Kavya V
  First published: