ಬಾಗಲಕೋಟೆ: ಮೂವರು ಹೆಣ್ಣು (Baby Girl) ಮಕ್ಕಳೊಂದಿಗೆ ತಾಯಿ (Mother) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ (Bagalakote) ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ರೇಖಾ ಹಾಗೂ ಆಕೆಯ ಮಕ್ಕಳಾದ ಶ್ರೀನಿಧಿ (5) ಸಮೃದ್ಧ (3) ಸನ್ನಿದಿ( 8) ಎಂದು ಗುರುತಿಸಲಾಗಿದೆ. ಮೊದಲು ಮಕ್ಕಳಿಗೆ ವಿಷ ಉಣಿಸಿರುವ ತಾಯಿ ರೇಖಾ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜ್ಯೂಸ್ ಬಾಟಲ್ ನಲ್ಲಿ (Juice Bottle) ವಿಷ ಬೆರಸಿ ಮಕ್ಕಳಿಗೆ ನೀಡಿದ್ದಳು ಎನ್ನಲಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮೂವರು ಹೆಣ್ಣು ಮಕ್ಕಳೇ ಹುಟ್ಟಿದ್ದಕ್ಕೆ ಮನನೊಂದಿದ್ದ ತಾಯಿ ಮಕ್ಕಳಿಗೆ ವಿಷ ಉಣಿಸಿ, ನಂತರ ತಾನು ವಿಷ ಸೇವಿಸಿದ್ದಾಳೆ. ಸದ್ಯ ಮೃತ ದೇಹಗಳನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ಅಂದಹಾಗೇ, ಮೃತ ರೇಖಾರನ್ನು ಬೀಳಗಿ ತಾಲ್ಲೂಕಿನ ಸುನಗ ಗ್ರಾಮದ ಅರ್ಜುನ ಬಗಲಿ ಎಂಬಾತನಿಗೆ ನೀಡಿ ಮದುವೆ ಮಾಡಿಕೊಡಲಾಗಿತ್ತು. ಅರ್ಜುನ ಬಗಲಿ ಕಬ್ಬು ಕಟಾವ್ ಮಾಡುವ ಕೂಲಿ ಕಾರ್ಮಿಕರಾಗಿದ್ದಾರೆ. ಮದುವೆಯಾದ ಬಳಿಕ ಗಂಡ ಮಕ್ಕಳೊಂದಿಗೆ ತವರು ಗ್ರಾಮ ತಿಮ್ಮಾಪುರಕ್ಕೆ ಬಂದಿದ್ದ ರೇಖಾ, ಬಾಡಿಗೆ ಮನೆ ಪಡೆದುಕೊಂಡು ಮಕ್ಕಳು, ಗಂಡನೊಂದಿಗೆ ವಾಸಿಸುತ್ತಿದ್ದರು. ಆದರೆ ಇಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಮಕ್ಕಳಿಗೆ ವಿಷ ನೀಡಿ ಕೊಲೆಗೈದು, ಬಳಿಕ ಆಕೆಯೂ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಆತ್ಮಹತ್ಯೆ ಹಿಂದೆ ಹತ್ತಾರು ಅನುಮಾನ
ಬೆಂಗಳೂರಿನಲ್ಲಿ (Bengaluru) ಯುವ ದೇಹದಾರ್ಢ್ಯ ಪಟುವೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕೆ.ಆರ್ ಪುರಂ (KR Puram) ಬಳಿಯ ಹೀರಂಡಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಫಾರ್ಮಾ ಡಿ ಓದುತ್ತಿದ್ದ ಶ್ರೀನಾಥ್, ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದ.
ಮೂಲತಃ ಕೋಲಾರದ (Kolar) ಶ್ರೀನಾಥ್, ನಿನ್ನೆ ತನ್ನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶ್ರೀನಾಥ್ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀನಾಥ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ: Hassan: ವಿಧಿ ಆಟ ಎಂತ ಘೋರ; ಅಂದು ಅಣ್ಣ-ಇಂದು ತಮ್ಮ, ಸಹೋದರನ ವರ್ಷದ ತಿಥಿಗೆ ಬರ್ತಿದ್ದ ತಮ್ಮ ಸಾವು
ಪೊಲೀಸ್ ಅಂತ ಮಸಾಜ್ ಮಾಡಿಸಿಕೊಂಡು ಸುಲಿಗೆ
ಬೆಂಗಳೂರಲ್ಲಿ ಪೊಲೀಸರ (Bengaluru Police) ಹೆಸರಿನಲ್ಲಿ ಸಾಮಾನ್ಯ ಜನರ ಸುಲಿಗೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಮೊನ್ನೆ ಕೊಡಿಗೇಹಳ್ಳಿ (Kodigehalli) ಮಹಿಳಾ ಪೊಲೀಸ್ ಎಂದು ಮಹಿಳೆಯೊಬ್ಬಳು ಬಜ್ಜಿ ಬೋಂಡಾ ತಿಂದಿದ್ಲು. ಈಗ ಸಿಐಡಿ ಅಧಿಕಾರಿ ಅಂತ ಪ್ರದೀಪ್ ಎಂಬ ವ್ಯಕ್ತಿಯೋರ್ವ ಮಸಾಜ್ ಮಾಡಿಸಿ ದುಡ್ಡು ಕಿತ್ತುಕೊಂಡಿದ್ದಾನೆ.
ಆಯುರ್ ವೆಲ್ನೆಸ್ ಸ್ಪಾ ಆ್ಯಂಡ್ ಕ್ಲಿನಿಕ್ಗೆ ಬಂದ ಆರೋಪಿ, ಕೆಳಗಡೆ ಪೊಲೀಸ್ ವಾಹನ ನಿಂತಿದೆ. ಠಾಣೆಗೆ ಎಳೆದೊಯ್ದು ಯೂಟ್ಯೂಬ್ನಲ್ಲಿ ಅಕ್ರಮ ಬಯಲು ಮಾಡುತ್ತೀನಿ ಎಂದು ಬೆದರಿಕೆ ಹಾಕಿದ್ದಾನೆ. ಮಸಾಜ್ ಮಾಡಿಸಿಕೊಡ ಬಳಿಕ ನಕಲಿ ಐಡಿ ಕಾರ್ಡ್ ತೋರಿಸಿ 30 ಸಾವಿರ ರೂಪಾಯಿ ಸುಲಿಗೆ ಮಾಡಿದ್ದಾನೆ. ಸದ್ಯ ಮಹದೇವಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ