ಕೌಟುಂಬಿಕ ಕಲಹ: ಚಿಕ್ಕಮಗಳೂರಿನಲ್ಲಿ ಗಂಡನ ಕಿರುಕುಳ ತಾಳಲಾರದೆ ಕೆರೆಗೆ ಹಾರಿ ತಾಯಿ, ಮಕ್ಕಳು ಸಾವು

ಎರಡು ಪುಟ್ಟ ಮಕ್ಕಳ ಮೃತದೇಹವನ್ನ ಕಂಡ ಸ್ಥಳೀಯರು ಕೂಡ ಕಣ್ಣೀರಿಟ್ಟಿದ್ದಾರೆ. ಒಟ್ಟಾರೆ, ಗಂಡ ಹೆಂಡತಿಯರ ಜಗಳ ಮೂರು ಜೀವಗಳನ್ನ ಬಲಿತೆಗೆದುಕೊಂಡಿದೆ. ಪ್ರಪಂಚದ ಹರಿವೆ ತಿಳಿಯದ ಪುಟ್ಟ ಕಂದಮ್ಮಗಳು ಕೂಡ ಬಲಿಯಾಗಿರೋದು ವಿಪರ್ಯಾಸವೇ ಸರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕಮಗಳೂರು(ಆ.03): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಜೊತೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹುಣಸೇಕೊಪ್ಪ ಗ್ರಾಮದಲ್ಲಿ ನಡೆದಿದೆ. 

ಮೃತರನ್ನು 35 ವರ್ಷದ ಲಕ್ಷ್ಮಿ, 5 ವರ್ಷದ ಸೌಜನ್ಯ ಹಾಗೂ 2 ವರ್ಷದ ಆದ್ಯಾ ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ತಾಯಿ, ಮಕ್ಕಳು ನಾಪತ್ತೆಯಾಗಿದ್ದರು. ನಿನ್ನೆ ಭಾನುವಾರ ಹುಣಸೇಕೊಪ್ಪದ  ಕಾಫಿ ತೋಟವೊಂದರ ಕೆರೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ.

ಮೂವರ ಸಾವಿಗೆ ಕೌಟುಂಬಿಕ ಕಲಹವೇ ಕಾರಣ ಎಂದು ಹೇಳಲಾಗಿದೆ. ಮೃತ ಲಕ್ಷ್ಮೀ ಗಂಡ ಆಗಾಗ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ. ಪದೇ ಪದೇ ಲಕ್ಷ್ಮಿ ತವರು ಮನೆಗೆ ಹೋಗುತ್ತಿದ್ದ ಕಾರಣ ಲಕ್ಷ್ಮಿ ಜೊತೆ ಗಂಡ ಜಗಳವಾಡುತ್ತಿದ್ರು. ಈ ಹಿನ್ನೆಲೆ ಬೇಸತ್ತು ಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿಬಹುದು ಎನ್ನುತ್ತಾರೆ ಸ್ಥಳೀಯರು.

ಸ್ಥಳಕ್ಕೆ ಭೇಟಿ ನೀಡಿರೋ ಬಾಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೃತ ಲಕ್ಷ್ಮಿಯ ಗಂಡನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಮೃತ ಲಕ್ಷ್ಮಿಯ ಮನೆಯವರು ಗಂಡನ ಕಿರುಕುಳ ಎಂದು ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಸಂಕಷ್ಟದಿಂದ ಪಾರು ಮಾಡಲು ಬಂದ ಕೊರೋನಾ ಗಣೇಶ - ಹೇಗಿದ್ದಾನೆ ಗೊತ್ತಾ?

ಎರಡು ಪುಟ್ಟ ಮಕ್ಕಳ ಮೃತದೇಹವನ್ನ ಕಂಡ ಸ್ಥಳೀಯರು ಕೂಡ ಕಣ್ಣೀರಿಟ್ಟಿದ್ದಾರೆ. ಒಟ್ಟಾರೆ, ಗಂಡ ಹೆಂಡತಿಯರ ಜಗಳ ಮೂರು ಜೀವಗಳನ್ನ ಬಲಿತೆಗೆದುಕೊಂಡಿದೆ. ಪ್ರಪಂಚದ ಹರಿವೆ ತಿಳಿಯದ ಪುಟ್ಟ ಕಂದಮ್ಮಗಳು ಕೂಡ ಬಲಿಯಾಗಿರೋದು ವಿಪರ್ಯಾಸವೇ ಸರಿ.
Published by:Ganesh Nachikethu
First published: