• Home
  • »
  • News
  • »
  • state
  • »
  • Sudhakar: ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಸಾವು ಕೇಸ್​; ಮೊದಲ ಪುತ್ರಿ ಹೆಸರಲ್ಲಿ 10 ಲಕ್ಷ ಎಫ್​ಡಿ- ಸುಧಾಕರ್​

Sudhakar: ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಸಾವು ಕೇಸ್​; ಮೊದಲ ಪುತ್ರಿ ಹೆಸರಲ್ಲಿ 10 ಲಕ್ಷ ಎಫ್​ಡಿ- ಸುಧಾಕರ್​

ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ತಾಯಿಯ ಸಾವಿನಿಂದ ಅನಾಥವಾದ ಬಾಲಕಿಗೆ ನೆರವು ನೀಡಿದ್ದು, ಬಾಲಕಿ ಶಂಕರಿಗೆ ಇಲಾಖೆಯಿಂದ ₹10 ಲಕ್ಷ ಎಫ್​ಡಿ ಇಟ್ಟಿದ್ದೇವೆ ಎಂದು ಸಚಿವ ಡಾ.ಕೆ.ಸುಧಾಕರ್​ ಹೇಳಿದ್ದಾರೆ. 

  • News18 Kannada
  • Last Updated :
  • Karnataka, India
  • Share this:

ತುಮಕೂರು (ನ.16): ಜಿಲ್ಲಾಸ್ಪತ್ರೆಯಲ್ಲಿ  ವೈದ್ಯರ ನಿರ್ಲಕ್ಷ್ಯಕ್ಕೆ (Doctor Negligence) ತಾಯಿ ಮತ್ತು ಇಬ್ಬರು ಅವಳಿ ಮಕ್ಕಳು ಸಾವು ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸಚಿವ ಸುಧಾಕರ್ (Minister Sudhakar) ಅವರ ರಾಜೀನಾಮೆಗೂ ವಿಪಕ್ಷಗಳು ಆಗ್ರಹಿಸಿದ್ವು. ಇದೀಗ ಸಚಿವರು ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ತುಮಕೂರಿನ ಅಮರಜ್ಯೋತಿ ನಗರದಲ್ಲಿರುವ ಸರ್ಕಾರಿ ಬಾಲಮಂದಿರಕ್ಕೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ (K Sudhakar) ಮೃತ ಕಸ್ತೂರಿ ಪುತ್ರಿ ಶಂಕರಿಗೆ ಸರ್ಕಾರದಿಂದ 10 ಲಕ್ಷ ರೂ. ಚೆಕ್ ವಿತರಣೆ ಮಾಡಿದರು. ಬಾಲಕಿ ಹೆಸರಿನಲ್ಲಿ ಎಫ್​ಡಿ (FD) ಮಾಡುವುದಾಗಿ ಸಚಿವರು ಭರವಸೆ ನೀಡಿದರು. ಇದೇ ವೇಳೆ 5 ವರ್ಷದ ಪುತ್ರಿ ಶಂಕರಿಗೆ ಧೈರ್ಯ ಹೇಳಿದ್ದಾರೆ.


ಕಮಿಷನರ್ ದರ್ಜೆ ಅಧಿಕಾರಿ ನೇತೃತ್ವದಲ್ಲಿ ತನಿಖೆ


ಕಾರ್ಯಕ್ರಮದ ಬಳಿಕ ಮಾತನಾಡ  ಸುಧಾಕರ್ ಅವರು, ಸಿಸಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದ್ದೇವೆ.​ ಒಟಿಯಲ್ಲಿ ರೋಗಿ, ಡಾ.ಉಷಾ ಇಬ್ಬರೂ ಮಾತಾಡೋದು ಇದೆ. ಕಮಿಷನರ್ ದರ್ಜೆ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ತಾಯಿಯ ಸಾವಿನಿಂದ ಅನಾಥವಾದ ಬಾಲಕಿಗೆ ನೆರವು ನೀಡಿದ್ದು, ಬಾಲಕಿ ಶಂಕರಿಗೆ ಇಲಾಖೆಯಿಂದ ₹10 ಲಕ್ಷ ಎಫ್​ಡಿ ಇಟ್ಟಿದ್ದೇವೆ ಎಂದು ಸಚಿವ ಡಾ.ಕೆ.ಸುಧಾಕರ್​ ಹೇಳಿದ್ರು.


Mother, twins died due to doctor's negligence; 10 lakh FD in the name of first daughter- Sudhakar
ಸಚಿವ ಸುಧಾಕರ್​


ಘಟನೆ ಹಿನ್ನೆಲೆ


ವೈದ್ಯರ ನಿರ್ಲಕ್ಷಕ್ಕೆ ಅವಳಿ ಮಕ್ಕಳು (Twins) ಹಾಗೂ ತಾಯಿ ಮೃತಪಟ್ಟಿರುವ ( (Mother Death) ) ಘಟನೆ ತುಮಕೂರಿನಲ್ಲಿ ನಡೆದಿತ್ತು.  ಜಿಲ್ಲೆಯ ಭಾರತಿನಗರದ ಅಭಯ ಆಂಜನೇಯನ ಸ್ವಾಮಿ ದೇವಸ್ಥಾನದ (Anjaneyaswamy Temple) ಬಳಿ ವಾಸವಿದ್ದ ಅನಾಥ ಬಾಣಂತಿ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ (District Hospital) ದಾಖಲಿಸಿದ್ರು . ಮಹಿಳೆಯೊಂದಿಗೆ (Women) ಪಕ್ಕದ ಮನೆಯ ವೃದ್ಧೆಯೊಬ್ಬರು ತೆರಳಿದ್ದರು.


ತಾಯಿ ಕಾರ್ಡ್ ಇಲ್ಲ ಎಂದು ಚಿಕಿತ್ಸೆ ನೀಡಿಲ್ಲ

 ಜಿಲ್ಲಾಸ್ಪತ್ರೆಯಲ್ಲಿ ತಾಯಿ ಕಾರ್ಡ್ ಇಲ್ಲ ಎಂಬ ಕಾರಣ ನೀಡಿ ಆಸ್ಪತ್ರೆಯಿಂದ ವಾಪಸ್‌ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ವೈದ್ಯೆಯ ಬಳಿ ಅಂಗಲಾಚಿ ಕೇಳಿದ್ರೂ ಚಿಕಿತ್ಸೆ ಕೊಡದೆ ವೈದ್ಯೆ ನಿರ್ಲಕ್ಷ್ಯ ಮಾಡಿದ್ದರಿಂದ  ಮಕ್ಕಳು ಹಾಗೂ ತಾಯಿ ಸೇರಿ ಮೂವರೂ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿತ್ತು.


ಬಲಿಯಾಯ್ತು ಮೂರು ಜೀವ




ಇದಷ್ಟೇ ಅಲ್ಲದೇ ತಾವು ಚಿಕಿತ್ಸೆ ಕೊಡುವ ಬದಲು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಡುತ್ತೇವೆ ಅಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಮಹಿಳೆಗೆ ಹೇಳಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ತಮ್ಮ ಬಳಿ ಹಣ ಇಲ್ಲದ ಕಾರಣ ಮಹಿಳೆ ಮನೆಗೆ ವಾಪಸ್‌ ಬಂದಿದ್ದರು. ಈ ಘಟನೆ ಬಳಿಕ ಬೆಳಗಿನ ಜಾವ ಮಹಿಳೆ ಅನಾರೋಗ್ಯದ ನಡುವೆ ಒಂದು ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ. ಬಳಿಕ, ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿ 3 ಜೀವಗಳು ಬಲಿಯಾಗಿವೆ.


ಇದನ್ನೂ ಓದಿ: Police Complaint: ಮತಾಂತರಗೊಂಡ್ರಷ್ಟೇ ಸಂಸಾರ ಅಂತಾಳೆ ನನ್ನ ಹೆಂಡತಿ! ಪತ್ನಿ ವಿರುದ್ಧವೇ ದೂರು ಕೊಟ್ಟ ಪತಿ


ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ


ಮೃತ ಮಹಿಳೆಯನ್ನು ಕಸ್ತೂರಿ  ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಕಸ್ತೂರಿ ಆಸ್ಪತ್ರೆಗೆ ದಾಖಲಾಗಬೇಕಾದರೆ ತಾಯಿ ಕಾರ್ಡ್, ಆಧಾರ್ ಕಾರ್ಡ್ ಕೊಡುವಂತೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರು. ಆದರೆ ಅವರ ಬಳಿ ತಾಯಿ ಕಾರ್ಡ್‌ ಇರಲಿಲ್ಲ. ಈ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಜಿಲ್ಲಾಸ್ಪತ್ರೆ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಕಸ್ತೂರಿ ತಮಿಳುನಾಡು ಮೂಲದವರಾಗಿದ್ದು, ಕಳೆದ ಒಂದು ತಿಂಗಳಿನಿಂದ ಭಾರತಿ ನಗರದಲ್ಲಿ ವಾಸವಿದ್ದರು. ಗರ್ಭಿಣಿ ಹಾಗೂ ಇಬ್ಬರು ಮಕ್ಕಳ ಸಾವಿಗೆ ತುಮಕೂರು ಜಿಲ್ಲಾಸ್ಪತ್ರೆ ವೈದ್ಯರೇ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದರು.


Published by:ಪಾವನ ಎಚ್ ಎಸ್
First published: