10 ವರ್ಷಗಳಿಂದ ಸಾರ್ವಜನಿಕ ಶೌಚಾಲಯದಲ್ಲೇ ವಾಸ: ಅಧಿಕಾರಿಗಳೇ ನೀಡಿದ್ರಂತೆ ಸೂಚನೆ!


Updated:August 8, 2018, 5:58 PM IST
10 ವರ್ಷಗಳಿಂದ ಸಾರ್ವಜನಿಕ ಶೌಚಾಲಯದಲ್ಲೇ ವಾಸ: ಅಧಿಕಾರಿಗಳೇ ನೀಡಿದ್ರಂತೆ ಸೂಚನೆ!

Updated: August 8, 2018, 5:58 PM IST
ನವೀನ್​, ನ್ಯೂಸ್​ 18 ಕನ್ನಡ

ಚಿಕ್ಕಬಳ್ಳಾಪುರ(ಆ.07): ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಾಸಿಸಲು ಮನೆ ಇಲ್ಲದ ಕುಟುಂಬವೊಂದು ಕಳೆದ 10 ವರ್ಷಗಳಿಂದ ಇಲ್ಲಿನ ಸಾರ್ವಜನಿಕ ಶೌಚಾಲಯದಲ್ಲಿ ನೆಲೆಸಿದ್ದು, ಹೀಗೆ ಮಾಡಲು ಅಧಿಕಾರಿಗಳೇ ಸೂಚನೆ ನೀಡಿದ್ದಾರೆಂಬುವುದು ನಿಜಕ್ಕೂ ಶಾಕಿಂಗ್​ ವಿಚಾರ.

ಹೌದು ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ನಿವಾಸಿಗಳಾದ ತಾಯಿ ಲಕ್ಷ್ಮಮ್ಮ (35) ಮಗಳು ಸುಚಿತ್ರಾ ಕಳೆದ 10 ವರ್ಷಗಳಿಂದ ಮನೆ ಇಲ್ಲದೆ. ಇಲ್ಲಿನ ಸಾರ್ವಜನಿಕ ಶೌಚಾಲಯದಲ್ಲೇ ವಾಸಿಸುತ್ತಿದ್ದಾರೆ. ಕೂಲಿ ಕೆಲಸ ಮಾಡುವ ಲಕ್ಷ್ಮಮ್ಮ ಕೂಲಿ ಕೆಲಸ ಮಾಡಿ ಮಗಳನ್ನು ಓದಿಸುತ್ತಿದ್ದಾರೆ. ಇನ್ನು ಈಕೆಯ ಗಂಡ ಮದ್ಯ ವ್ಯಸನಿಯಾಗಿದ್ದು, ಕಳೆದ 5 ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

ಯಾವುದಷೇ ನೆಲೆ ಇಲ್ಲದ ಲಕ್ಷ್ಮಮ್ಮ ಸದ್ಯ ತನ್ನ ಮಗಳೊಂದಿಗೆ ಸಾರ್ವಜನಿಕ ಶೌಚಾಲಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ತಮಗೆ ಉಳಿದುಕೊಳ್ಳಲು ಮನೆಯೊಂದನ್ನು ಕೊಡುವಂತೆ ಲಕ್ಷ್ಮಮ್ಮ ಅಧಿಕಾರಿಗಳ ಬಳಿ ಮನವಿ ಮನಾಡಿಕೊಂಡಿದ್ದು, ಈ ಸಂದರ್ಭದಲ್ಲಿ ಅಧಿಕಾರಿಗಳೇ ಆಕೆಗೆ ಈ ಶೌ ಚಾಲಯದಲ್ಲಿ ವಾಸಿಸುವಂತೆ ಸೂಚಿಸಿದ್ದರೆನ್ನಲಾಗಿದೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...