Motamma: ಮತ್ತೆ ಸಿದ್ದರಾಮಯ್ಯ ವಿರುದ್ಧ ಮೋಟಮ್ಮ ಸಿಡಿಮಿಡಿ; ಅವ್ರೇ ಸಚಿವ ಸ್ಥಾನ ತಪ್ಪಿಸಿದ್ದು

ನಮ್ಮಂತಹರವರು ಚುನಾವಣೆ ಎದುರಿಸೋದು ಕಷ್ಟ, ಕಳೆದ ಚುನಾವಣೆಯಲ್ಲಿ ಸಾಕಷ್ಟು ನೊಂದಿದ್ದೇನೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ, ನನ್ನ ಮಗಳಿಗೆ ಟಿಕೆಟ್ ಕೊಡಲು ಕೇಳಿದ್ದೇನೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವೆ ಮೋಟಮ್ಮ ತಿಳಿಸಿದ್ದಾರೆ.

ಮಾಜಿ ಸಚಿವೆ ಮೋಟಮ್ಮ

ಮಾಜಿ ಸಚಿವೆ ಮೋಟಮ್ಮ

  • Share this:
ಚಿಕ್ಕಮಗಳೂರು (ಜೂ 15) : ನಮ್ಮಂತಹರವರು ಚುನಾವಣೆ ಎದುರಿಸೋದು ಕಷ್ಟ, ಕಳೆದ ಚುನಾವಣೆಯಲ್ಲಿ (Election) ಸಾಕಷ್ಟು ನೊಂದಿದ್ದೇನೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ, ನನ್ನ ಮಗಳಿಗೆ ಟಿಕೆಟ್ ಕೊಡಲು ಕೇಳಿದ್ದೇನೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವೆ ಮೋಟಮ್ಮ (Motamma) ತಿಳಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ (Chikkamagaluru) ಮಾತಾನಾಡಿದ ಅವರು ಮೂಡಿಗೆರೆ ಕ್ಷೇತ್ರದ ಟಿಕೆಟ್​ನನ್ನು ಮಗಳು ನಯನಗೆ (Daughter Nayana) ಟಿಕೆಟ್ (Ticket)​ ನೀಡುವಂತೆ ಪಕ್ಷದ ಮುಖಂಡರನ್ನು ಒತ್ತಾಯಿಸಲಾಗುವುದು ಎಂದರು. ಸಿದ್ದರಾಮಯ್ಯ ನನಗೆ ಮೋಸ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ನೀಡಬಹುದಿತ್ತು ನೀಡದೇ ನನಗೆ ಮೋಸ ಮಾಡಿದರು ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದ್ದಾರೆ. 

ನನಗೆ ಬೇಡ ನನ್ನ ಮಗಳಿಗೆ ಟಿಕೆಟ್ ಕೊಡಿ

ಕಳೆದ ಚುನಾವಣೆಯಲ್ಲಿ ಸೋತ ಬಳಿಕ ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದೆ. ಈಗ ಮಗಳಿಗೆ ಟಿಕೆಟ್ ಕೊಡುವಂತೆ ಕೇಳಿಕೊಳ್ಳಲಾಗುವುದು. ಒಂದು ವೇಳೆ ಟಿಕೆಟ್ ದೊರೆಯದಿದ್ದರೆ, ಯಾರಿಗೆ ಟಿಕೆಟ್ ನೀಡುತ್ತಾರೋ ಅವರ ಗೆಲುವಿಗೆ ಶ್ರಮಿಸುವೆ ಎಂದರು. ಕಾಂಗ್ರೆಸ್ ಜಿಲ್ಲಾ ವಕ್ತಾರ ಹಿರೇಮಗಳೂರು ಟಿಕೆಟ್ ಆಕಾಂಕ್ಷಿ ಎಂದು ಹೇಳಿದಾಗ ಅರ್ಜಿಹಾಕಲಿ ಅದಕ್ಕೆ ವಿರೋಧವಿಲ್ಲ, ಯಾರ ಹಣೆಯಲ್ಲಿ ಏನು ಬರೆದಿರುತ್ತೋ ಅದು ಆಗೇ ಆಗುತ್ತೆ ಎಂದರು.

ಜಿಲ್ಲಾ ಪಂಚಾಯಿತಿಗೆ ಟಿಕೆಟ್ ಆಕಾಂಕ್ಷಿ ನಾನಲ್ಲ

ಆಗ ನಾನು ಟಿಕೆಟ್ ಆಕಾಂಕ್ಷಿಯಲ್ಲ, ಜಿಲ್ಲಾ ಪಂಚಾಯಿತಿಗೆ ಟಿಕೆಟ್ ಕೇಳುತ್ತಿರುವೆ ಎಂದು ಊಹಾ ಪೋಹಕ್ಕೆ ಮಾಜಿ ಸಚಿವರ ಎದುರೇ ಮೋಟಮ್ಮ ತೆರೆ ಎಳೆದಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಇದೆ. ಕ್ಷೇತ್ರದಾದ್ಯಂತ ಓಡಾಡಲು ಸಾಧ್ಯವಿಲ್ಲ, ಚುನಾವಣೆ ದುಸ್ಥರ ಎನಿಸಿದೆ. ಕಳೆದ ಚುನಾವಣೆಯಲ್ಲಿ ನೊಂದಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಡಾಲರ್ಸ್ ಕಾಲೋನಿಯಲ್ಲಿರುವ ಮನೆಯನ್ನು ಲೀಸ್‍ಗೆ ನೀಡಿ ಮೂರು ಕೊಠಡಿ ಹೊಂದಿರುವ ಪ್ಲಾಟ್‍ನಲ್ಲಿ ವಾಸಿಸುತ್ತಿದ್ದೇನೆಂದು ಮೋಟಮ್ಮ ನೊಂದು ಮಾತಾಡಿದ್ದಾರೆ.

ಇದನ್ನೂ ಓದಿ: 2nd PUC Result 2022: ದ್ವಿತೀಯ ಪಿಯುಸಿ ಫಲಿತಾಂಶ; ಹೀಗೆ ಮೆಸೇಜ್ ಬಂದರೆ ನಂಬಬೇಡಿ

ಮುಂದಿನ ದಿನಗಳಲ್ಲೂ ಪಕ್ಷಕ್ಕಾಗಿ ದುಡಿಯುವೆ

ಇದನ್ನೆಲ್ಲ ಗಮನಿಸಿದೆ ನೋವು, ಸಂಕಟವಾಗುತ್ತದೆ. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತೆ ದುಡಿಯುತ್ತೇನೆ. ನಾನು ಮಹಿಳಾ ಮತ್ತು ಮಕ್ಕಳ ಸಚಿವೆಯಾದಾಗ ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗುವಂತೆ ಮಾಡಿದ್ದೇನೆ. ಅದನ್ನೆಲ್ಲ ಮಹಿಳಾ ಮತದಾರರಿಗೆ ಮನವರಿಕೆ ಮಾಡಿಕೊಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೋರುತ್ತೇನೆ ಎಂದರು.

ಎಂ.ಪಿ.ಕುಮಾರಸ್ವಾಮಿ ಸೇರ್ಪಡೆಗೆ ವಿರೋಧ

ಶಾಸಕ ಎಂ.ಪಿ.ಕುಮಾರಸ್ವಾಮಿ ಪಕ್ಷಕ್ಕೆ ಬರುವುದನ್ನು ವಿರೋಧಿಸುತ್ತೇನೆ. ಬೂತ್‍ ಮಟ್ಟದಲ್ಲಿ ಕೆಲಸ ಮಾಡಿದವರಿಗೆ ಕೊಡಿ ಎಂದು ಹೇಳುತ್ತೇನೆ. ಶಾಸಕರ ಕಾರ್ಯವೈಖರಿ  ಸಿದ್ಧರಾಮಯ್ಯನವರಿಗೆ ತಿಳಿದಿದೆ. ತಕ್ಷಣ ಅವರು ಒಪ್ಪಿಕೊಳ್ಳಲಾರರು ಎಂಬ ನಂಬಿಕೆ ಇದೆ ಎಂದು ತಿಳಿಸಿ, ಮೂಡಿಗೆರೆ ಕ್ಷೇತ್ರದಲ್ಲಿ ಎರಡನೇ ಹಂತದ ನಾಯಕರನ್ನು ಬೆಳೆಸಲಿಲ್ಲವಲ್ಲ ಎಂದಾಗ, ಅದಕ್ಕೇನು ಗೊಬ್ಬರ ನೀರು ಹಾಕಿ ಬೆಳೆಸಬೇಕೆ? ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸಿ ಮುಂದೆ ಬಂದಾಗ ನಾಯಕರಾಗಲು ಸಾಧ್ಯವೆಂದರು.

ಇದನ್ನೂ ಓದಿ: Basavaraj Bommai: ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿದ ಸಿಎಂ ಬೊಮ್ಮಾಯಿ

ಸಚಿವೆ ಸ್ಥಾನ ನೀಡಲಿಲ್ಲವೆಂದು ಅಸಮಾಧಾನ

ಆತ್ಮಕಥನ ಬಿದಿರೆ ನೀನ್ಯಾರಿಗಲ್ಲದವಳು ಅದರಲ್ಲಿ ಸಿದ್ದರಾಮಯ್ಯ ಅವರನ್ನು ನಡೆಯನ್ನು ಟೀಕಿಸಿರುವ ಕುರಿತು ಹೇಳಿದಾಗ, ಮನಸ್ಸಿಗೆ ಹೊಳೆದಿದ್ದನ್ನು ಅಕ್ಷರ ರೂಪಕ್ಕೆ ಇಳಿಸಿದ್ದೇನೆ. ಟೀಕಿಸಿಲ್ಲ, ಅವರು ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದಾಗ ಅವರ ಮನೆಗೆ ಹೋಗಿ ಧೈರ್ಯ ತುಂಬಿದ್ದೆ. ಆದರೆ ಪಕ್ಷ ಅಧಿಕಾರಕ್ಕೆ ಬಂದಾಗ ಮೇಲ್ಮನೆ ವಿರೋಧ ಪಕ್ಷದ ನಾಯಕರಾಗಿ, ಸಚಿವೆಯಾಗಿ, ಶಾಸಕರಾಗಿ, ಸಿಡ್ಲ್ಯುಸಿ ಸದಸ್ಯೆಯಾಗಿ ನಿರ್ವಹಿಸಿದ ಕೆಲಸವನ್ನು ಗಮನಿಸಿದ ಮುಖ್ಯ ಮಂತ್ರಿಯಾಗಿದ್ದಾಗ ಸಚಿವೆ ಸ್ಥಾನ ನೀಡದಿರುವ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದೇನೆ ಅಷ್ಟೆ ಎಂದು ಉತ್ತರಿಸಿದರು.
Published by:Pavana HS
First published: