• Home
  • »
  • News
  • »
  • state
  • »
  • Tiger State: 2022ರಲ್ಲಿ ಮಧ್ಯಪ್ರದೇಶದಲ್ಲಿಯೇ ಹೆಚ್ಚು ಹುಲಿಗಳ ಸಾವು; ಕರ್ನಾಟಕಕ್ಕೆ ಸಿಗುತ್ತಾ ಹುಲಿಗಳ ರಾಜ್ಯ ಟ್ಯಾಗ್?

Tiger State: 2022ರಲ್ಲಿ ಮಧ್ಯಪ್ರದೇಶದಲ್ಲಿಯೇ ಹೆಚ್ಚು ಹುಲಿಗಳ ಸಾವು; ಕರ್ನಾಟಕಕ್ಕೆ ಸಿಗುತ್ತಾ ಹುಲಿಗಳ ರಾಜ್ಯ ಟ್ಯಾಗ್?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2022 ರಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಹುಲಿ ಸಾವುಗಳಿಗೆ ಕಾರಣವಾದ ಬಾಂಧವಘಡ್ ಹೆಚ್ಚು ಸಂಖ್ಯೆಯ ಹುಲಿಗಳನ್ನು ಹೊಂದಿದೆ ಮತ್ತು ಉಮರಿಯಾ ಜಿಲ್ಲೆಯ ವಿಂಧ್ಯಾ ಬೆಟ್ಟದಲ್ಲಿರುವ ಮೀಸಲು ಪ್ರದೇಶವು ಸಹ ಒಂದು ದೊಡ್ಡ ಪ್ರವಾಸಿ ಆಕರ್ಷಣೆಯಾಗಿದೆ ಎಂದು ದುಬೆ ಹೇಳಿದರು.

  • Trending Desk
  • Last Updated :
  • Karnataka, India
  • Share this:

ಭಾರತದ "ಹುಲಿಗಳ ರಾಜ್ಯ" (Tiger State) ಎಂಬ ಖ್ಯಾತಿಯನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ (Madhya pradesh) ಕಳೆದ ವರ್ಷದಲ್ಲಿ ಸಾವನ್ನಪ್ಪಿದ ಹುಲಿಗಳ ಸಂಖ್ಯೆಯನ್ನು ನೋಡಿದರೆ ಒಂದು ಕ್ಷಣ ಯಾರಿಗಾದರೂ ಮಧ್ಯಪ್ರದೇಶ “ಹುಲಿಗಳ ರಾಜ್ಯ” ಎಂಬ ಖ್ಯಾತಿಯನ್ನು ಮುಂದಿನ ದಿನಗಳಲ್ಲಿ ಕಳೆದುಕೊಳ್ಳುತ್ತದೆಯೇ ಅಂತ ಸಂದೇಹ ಹುಟ್ಟುವುದಂತೂ ಗ್ಯಾರೆಂಟಿ ಅಂತ ಹೇಳಬಹುದು. ಹೌದು, ನಮ್ಮಲ್ಲಿ ಹುಲಿ (Tiger), ಆನೆ (Elephant) ಮತ್ತು ಇನ್ನಿತರೆ ಕಾಡು ಪ್ರಾಣಿಗಳು (Wild Animals) ಸಾವನ್ನಪ್ಪುತ್ತಿರುವುದಕ್ಕೆ ಅನೇಕ ರೀತಿಯ ಕಾರಣಗಳಿರುತ್ತವೆ ಅಂತ ಹೇಳಬಹುದು.


“ಹುಲಿಗಳ ರಾಜ್ಯ” ಎಂಬ ಆ ಟ್ಯಾಗ್ ಅನ್ನು ಉಳಿಸಿಕೊಳ್ಳುವ ಸವಾಲನ್ನು ಎದುರಿಸುತ್ತಿರುವ ಮಧ್ಯಪ್ರದೇಶವು 2022 ರಲ್ಲಿ 34 ಹುಲಿಗಳನ್ನು ಕಳೆದುಕೊಂಡಿದೆ ಅಂತ ಹೇಳಲಾಗುತ್ತಿದೆ.


ಮಧ್ಯಪ್ರದೇಶದಲ್ಲಿ  ಹೆಚ್ಚು ಹುಲಿಗಳ ಸಾವು


ಕರ್ನಾಟಕ ರಾಜ್ಯಕ್ಕೆ ಹೊಲಿಸಿದರೆ ಮಧ್ಯಪ್ರದೇಶದಲ್ಲಿ ಸಾವನ್ನಪ್ಪಿದ ಹುಲಿಗಳ ಸಂಖ್ಯೆ ದುಪ್ಪಟ್ಟು ಅಂತಾನೆ ಹೇಳಬಹುದು. ಕರ್ನಾಟಕದಲ್ಲಿ 2022 ರಲ್ಲಿ ಸುಮಾರು 15 ಹುಲಿಗಳು ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದೆ.


ಇದರ ಜೊತೆಗೆ ಈಗ ದೇಶದಲ್ಲಿ ಹುಲಿಗಳ ಸಂಖ್ಯೆಯನ್ನು ಹೊಂದುವಲ್ಲಿ ಕರ್ನಾಟಕವು ಮಧ್ಯಪ್ರದೇಶ ರಾಜ್ಯದ ಹತ್ತಿರದ ಪ್ರತಿಸ್ಪರ್ಧಿಯಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.


ಹುಲಿಗಳ ಸಾವಿನ ಬಗ್ಗೆ ಏನ್ ಹೇಳ್ತಾರೆ ಅರಣ್ಯ ಇಲಾಖೆಯ ಅಧಿಕಾರಿ?


2018 ರ ಎಣಿಕೆಯ ಪ್ರಕಾರ ಎರಡೂ ರಾಜ್ಯಗಳು ಸರಿ ಸುಮಾರಾಗಿ ಒಂದೇ ಸಂಖ್ಯೆಯಲ್ಲಿ ಹುಲಿಗಳನ್ನು ಹೊಂದಿದ್ದವು, ಆದರೆ ಮಧ್ಯಪ್ರದೇಶವು ದಕ್ಷಿಣ ರಾಜ್ಯಕ್ಕಿಂತ ಹೆಚ್ಚಿನ ಹುಲಿ ಸಾವುಗಳನ್ನು ಏಕೆ ದಾಖಲಿಸಿದೆ ಎಂಬುದು ಪ್ರಶ್ನಾರ್ಥಕವಾಗಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


2018 ರ ಜನಗಣತಿಯ ಪ್ರಕಾರ 524 ಹುಲಿಗಳನ್ನು ಹೊಂದಿರುವ ಕರ್ನಾಟಕವು ಭಾರತದ 'ಹುಲಿ ರಾಜ್ಯ' ಎಂಬ ಟ್ಯಾಗ್ ಗಾಗಿ ಮಧ್ಯಪ್ರದೇಶ (526) ದೊಂದಿಗೆ ಸ್ಪರ್ಧಿಸುತ್ತಿದೆ ಅಂತ ಹೇಳಬಹುದು.


most tigers die in madhya pradesh stg mrq
ಸಾಂಕೇತಿಕ ಚಿತ್ರ


4 ವರ್ಷಗಳಿಗೊಮ್ಮೆ ಹುಲಿ ಗಣತಿ


ರಾಷ್ಟ್ರೀಯ ಹುಲಿ ಗಣತಿಯನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಇತ್ತೀಚಿನ ಅಖಿಲ ಭಾರತ ಹುಲಿ ಅಂದಾಜು (ಎಐಟಿಇ) ಅನ್ನು 2022 ರಲ್ಲಿ ನಡೆಸಲಾಯಿತು ಮತ್ತು ಅದರ ವರದಿಯನ್ನು ಈ ವರ್ಷ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಹುಲಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಯಾವ ರಾಜ್ಯ ಯಾವ ಸ್ಥಾನದಲ್ಲಿದೆ ಎಂದು ತಿಳಿಯಲು ಚತುಷ್ಕೋನ ಎಣಿಕೆಯ ಆವಿಷ್ಕಾರಗಳನ್ನು ದೇಶವು ಕುತೂಹಲದಿಂದ ಕಾಯುತ್ತಿರುವಾಗ, ಈಗಷ್ಟೇ ಕಳೆದ ವರ್ಷದಲ್ಲಿ ಭಾರತವು ಎಷ್ಟು ಹುಲಿಗಳನ್ನು ಕಳೆದುಕೊಂಡಿದೆ ಎಂಬ ಅಂಕಿ ಅಂಶಗಳು ಈಗ ಲಭ್ಯವಿವೆ.


ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ವೆಬ್‌ಸೈಟ್ ನಲ್ಲಿ ಅಪ್ಲೋಡ್ ಮಾಡಿದ ದತ್ತಾಂಶದ ಪ್ರಕಾರ, ಮಧ್ಯಪ್ರದೇಶವು 2022 ರಲ್ಲಿ 34 ಹುಲಿಗಳನ್ನು ಕಳೆದು ಕೊಂಡಿದ್ದರೆ, "ಹುಲಿಗಳ ರಾಜ್ಯ" ಸ್ಥಾನಮಾನಕ್ಕೆ ಅದರ ಹತ್ತಿರದ ಪ್ರತಿಸ್ಪರ್ಧಿಯಾದ ಕರ್ನಾಟಕವು 15 ದೊಡ್ಡ ಬೆಕ್ಕುಗಳ ಸಾವನ್ನು ದಾಖಲಿಸಿದೆ.


ಈ ಹುಲಿಗಳ ಸಾವುಗಳಿಗೆ ಕಾರಣಗಳನ್ನು ಉಲ್ಲೇಖಿಸಲಾಗಿಲ್ಲ


ಹುಲಿ ಸಂರಕ್ಷಣೆಯನ್ನು ಬಲಪಡಿಸಲು ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ರಚಿಸಲಾದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿ ಎನ್‌ಟಿಸಿಎ ಒಂದು ಶಾಸನಬದ್ಧ ಸಂಸ್ಥೆಯಾಗಿದೆ. ಎನ್‌ಟಿಸಿಎ ವೆಬ್‌ಸೈಟ್ ಪ್ರಕಾರ, ಹಿಂದಿನ ವರ್ಷದಲ್ಲಿ ಭಾರತದಲ್ಲಿ ಒಟ್ಟು ಹುಲಿ ಸಾವುಗಳು 117 ಆಗಿತ್ತು.


"ನಾವು ಗರಿಷ್ಠ ಸಂಖ್ಯೆಯ ಹುಲಿಗಳನ್ನು ಹೊಂದಿದ್ದೇವೆ ಮತ್ತು ನಮ್ಮ ರಾಜ್ಯದಲ್ಲಿ ಕಂಡು ಬರುವ ಎಲ್ಲಾ ಹುಲಿಗಳ ಸಾವುಗಳ ಸಂಖ್ಯೆಯನ್ನು ನಾವು ಗಣನೆಗೆ ತೆಗೆದುಕೊಳ್ಳುತ್ತೇವೆ.


ಹುಲಿಗಳ ಸಂಖ್ಯೆ ಬಹುತೇಕ ಒಂದೇ ಆಗಿರುವಾಗ ಕರ್ನಾಟಕದಲ್ಲಿ ಕಡಿಮೆ ಹುಲಿಗಳ ಸಾವು ಏಕೆ ವರದಿಯಾಗಿದೆ ಎಂಬುದು ನಮಗೆ ನಿಗೂಢವಾಗಿದೆ" ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಜೆ.ಎಸ್.ಚೌಹಾಣ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.


most tigers die in madhya pradesh stg mrq
ಸಾಂಕೇತಿಕ ಚಿತ್ರ


ಹುಲಿಗಳ ಸರಾಸರಿ ವಯಸ್ಸು 12 ರಿಂದ 18 ವರ್ಷಗಳು ಎಂದು ಅವರು ಹೇಳಿದರು. ದೀರ್ಘಾಯುಷ್ಯ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡರೆ, 2018 ರಲ್ಲಿ ನಡೆಸಿದ ಕೊನೆಯ ಅಂದಾಜಿನಲ್ಲಿ ರಾಜ್ಯವು 526 ಹುಲಿಗಳ ಉಪಸ್ಥಿತಿಯನ್ನು ದಾಖಲಿಸಿರುವುದರಿಂದ ವಾರ್ಷಿಕವಾಗಿ ಸುಮಾರು 40 ಸಾವುಗಳನ್ನು ನೈಸರ್ಗಿಕವೆಂದು ಪರಿಗಣಿಸಬೇಕು ಎಂದು ಅವರು ಹೇಳಿದರು.


2021 ರಲ್ಲಿ, ಮಧ್ಯಪ್ರದೇಶವು ಆ ವರ್ಷ ದೇಶದಲ್ಲಿ ದಾಖಲಾದ 127 ಸಾವುಗಳಲ್ಲಿ 42 ಹುಲಿಗಳನ್ನು ಕಳೆದುಕೊಂಡಿದೆ ಅಂತ ಹೇಳಲಾಗುತ್ತಿದೆ.


ಪ್ರತಿ ಹುಲಿ ಸಾವಿನ ಬಗ್ಗೆ ತನಿಖೆ


"ಇತರ ರಾಜ್ಯಗಳ ಬಗ್ಗೆ ನನಗೆ ತಿಳಿದಿಲ್ಲ, ಆದರೆ ಮಧ್ಯಪ್ರದೇಶದಲ್ಲಿ ಯಾವುದೇ ಹುಲಿ ಸಾವು ವರದಿಯಾಗಿಲ್ಲ. ಹುಲಿ ಸಾವಿನ ಪ್ರತಿಯೊಂದು ಪ್ರಕರಣವನ್ನು ನಾವು ತನಿಖೆ ಮಾಡುತ್ತೇವೆ ಮತ್ತು ಅನುಮಾನಾಸ್ಪದವಾಗಿ ಏನಾದರೂ ಕಂಡು ಬಂದರೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಹೇಳಿದರು.


“ಕೆಲವೊಮ್ಮೆ ಈ ಹುಲಿಗಳು ನೈಸರ್ಗಿಕವಾಗಿ ಕಾಡುಗಳು ಮತ್ತು ಗುಹೆಗಳ ಆಳದಲ್ಲಿ ಹೋಗಿ, ಅಲ್ಲಿಯೇ ಸಾವನ್ನಪ್ಪುತ್ತವೆ, ಆಗ ಅವುಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.


ಎಲ್ಲೆಲ್ಲಿ ಎಷ್ಟು ಎಷ್ಟು ಹುಲಿಗಳು ಸಾವನ್ನಪ್ಪಿವೆ?


ಕನ್ಹಾ, ಬಾಂಧವಗಡ್, ಪೆಂಚ್, ಸತ್ಪುರ, ಪನ್ನಾ ಮತ್ತು ಸಂಜಯ್-ದುಬ್ರಿ ಎಂಬ ಆರು ಹುಲಿ ಮೀಸಲು ಪ್ರದೇಶಗಳಿಗೆ ನೆಲೆಯಾಗಿರುವ ಮಧ್ಯಪ್ರದೇಶದಲ್ಲಿ ವಾರ್ಷಿಕವಾಗಿ ಸುಮಾರು 250 ಹುಲಿಯ ಮರಿಗಳು ಜನಿಸುತ್ತವೆ ಎಂದು ಅರಣ್ಯ ಅಧಿಕಾರಿ ಹೇಳಿದರು.


2022 ರಲ್ಲಿ ಮಧ್ಯಪ್ರದೇಶದಲ್ಲಿ ದಾಖಲಾದ 34 ಹುಲಿ ಸಾವುಗಳಲ್ಲಿ, ಬಾಂಧವಗಡ್ ಹುಲಿ ಮೀಸಲು ಪ್ರದೇಶವು ಅತಿ ಹೆಚ್ಚು ನಷ್ಟವನ್ನು ಅನುಭವಿಸಿದೆ, ಅಲ್ಲಿ 12 ತಿಂಗಳ ಅವಧಿಯಲ್ಲಿ ಒಂಬತ್ತು ಹುಲಿಗಳು ಸಾವನ್ನಪ್ಪಿವೆ, ನಂತರ ಪೆಂಚ್ (ಐದು) ಮತ್ತು ಕನ್ಹಾ (ನಾಲ್ಕು) ನಂತರದ ಸ್ಥಾನಗಳಲ್ಲಿವೆ ಎಂದು ಎನ್‌ಟಿಸಿಎ ವೆಬ್‌ಸೈಟ್ ತಿಳಿಸಿದೆ.


ಮಧ್ಯಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಹುಲಿಗಳ ಸಾವಿನ ಬಗ್ಗೆ ಕೇಳಿದಾಗ, ವನ್ಯಜೀವಿ ಕಾರ್ಯಕರ್ತ ಅಜಯ್ ದುಬೆ, ಕಳೆದ ದಶಕದಿಂದ ಹುಲಿಗಳು ನೈಸರ್ಗಿಕ ಮತ್ತು ಅಸ್ವಾಭಾವಿಕ ಸಾವಿನಲ್ಲಿ ಈ ರಾಜ್ಯವು ದೇಶದಲ್ಲಿಯೇ ತುಂಬಾನೇ ಹೆಚ್ಚು ಹುಲಿಗಳು ಕಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.


"ಹುಲಿಗಳ ಸಾವಿನಲ್ಲಿ ಅಧಿಕಾರಿಗಳ ಉತ್ತರದಾಯಿತ್ವವನ್ನು ನಿಗದಿಪಡಿಸದ ಕಾರಣ ಮತ್ತು ಅವರ ಗುಪ್ತಚರ ಜಾಲವು ಕಳಪೆಯಾಗಿರುವುದರಿಂದ ರಾಜ್ಯವು ಇಂತಹ ಒಂದು ದೊಡ್ಡ ಸಾವಿನ ಸಂಖ್ಯೆಯನ್ನು ನೋಡುತ್ತಿದೆ.


ಇಷ್ಟೇ ಅಲ್ಲದೆ ಕಳ್ಳಬೇಟೆ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಮತ್ತು ಶಿಕ್ಷೆ ಕಳಪೆಯಾಗಿರುವುದು ಇನ್ನೂ ಬೇರೆ ಬೇರೆ ಕಾರಣಗಳಾಗಿವೆ ಅಂತ ಹೇಳಬಹುದು ಎಂದು ಅಜಯ್ ದುಬೆ ಹೇಳುತ್ತಾರೆ.


ಈ ಹಿಂದೆ ಹುಲಿಗಳ ಸಂಖ್ಯೆ ಯಾವ ಯಾವ ರಾಜ್ಯದಲ್ಲಿ ಎಷ್ಟಿತ್ತು?


2022 ರಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಹುಲಿ ಸಾವುಗಳಿಗೆ ಕಾರಣವಾದ ಬಾಂಧವಘಡ್ ಹೆಚ್ಚು ಸಂಖ್ಯೆಯ ಹುಲಿಗಳನ್ನು ಹೊಂದಿದೆ ಮತ್ತು ಉಮರಿಯಾ ಜಿಲ್ಲೆಯ ವಿಂಧ್ಯಾ ಬೆಟ್ಟದಲ್ಲಿರುವ ಮೀಸಲು ಪ್ರದೇಶವು ಸಹ ಒಂದು ದೊಡ್ಡ ಪ್ರವಾಸಿ ಆಕರ್ಷಣೆಯಾಗಿದೆ ಎಂದು ದುಬೆ ಹೇಳಿದರು.


ವೆಬ್‌ಸೈಟ್ ನ ಪ್ರಕಾರ, 2012 ರಿಂದ ಜುಲೈ 2022 ರ ಅವಧಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಹುಲಿಗಳ ಸಾವು ಬಾಂಧವಘಡ್ (66) ಮತ್ತು ಕನ್ಹಾ (55) ಎಂಬ ಸ್ಥಳಗಳಲ್ಲಿ ದಾಖಲಾಗಿವೆ ಅಂತ ಹೇಳಬಹುದು.


2010ರ ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆಯಲ್ಲಿ ಮಧ್ಯಪ್ರದೇಶ (257 ಹುಲಿಗಳು) 'ಹುಲಿಗಳ ರಾಜ್ಯ' ಎಂಬ ಟ್ಯಾಗ್ ಅನ್ನು ಕರ್ನಾಟಕದ ಎದುರು (300) ಕಳೆದುಕೊಂಡಿತ್ತು.


2006 ರಲ್ಲಿ ಮಧ್ಯಪ್ರದೇಶವು 300 ಹುಲಿಗಳನ್ನು ಹೊಂದಿರುವುದರಿಂದ 'ಹುಲಿಗಳ ರಾಜ್ಯ' ಎಂಬ ಟ್ಯಾಗ್ ಅನ್ನು ಪಡೆದುಕೊಂಡಿದ್ದರೆ, ಕರ್ನಾಟಕವು 290 ಹುಲಿಗಳನ್ನು ಹೊಂದಿತ್ತು ಎಂದು ಹೇಳಲಾಗುತ್ತಿದೆ.


2010 ರ ಜನಗಣತಿಯ ಸಮಯದಲ್ಲಿ ಕೇಂದ್ರ ರಾಜ್ಯದಲ್ಲಿ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ನಂಬಿದ್ದು, ಮುಖ್ಯವಾಗಿ ಪನ್ನಾ ಅಭಯಾರಣ್ಯದಲ್ಲಿ ಬೇಟೆಯಾಡಲಾಗಿದೆ ಎಂದು ಆರೋಪಿಸಲಾಗಿದೆ.


2009 ಮತ್ತು 2014ರ ಗಣತಿ


ಇದು 2009 ರಲ್ಲಿ ತನ್ನ ಎಲ್ಲಾ ಹುಲಿಗಳನ್ನು ಕಳೆದುಕೊಂಡಿದೆ. ಒಂದು ದಶಕದಷ್ಟು ದೀರ್ಘಕಾಲದ ಮರು ಪರಿಚಯ ಕಾರ್ಯಕ್ರಮದ ನಂತರ ಪನ್ನಾ ಈಗ ಸುಮಾರು 70 ಹುಲಿಗಳನ್ನಷ್ಟೇ ಹೊಂದಿದೆ ಎಂದು ಅಂದಾಜಿಸಲಾಗಿದೆ.


2014 ರ ಜನಗಣತಿಯಲ್ಲಿ, ಉತ್ತರಾಖಂಡ (340) ಮತ್ತು ಕರ್ನಾಟಕ (406) ನಂತರ ಮಧ್ಯಪ್ರದೇಶವು 308 ಹುಲಿಗಳ ಜನಸಂಖ್ಯೆಯೊಂದಿಗೆ ದೇಶದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿತ್ತು.


ಇದನ್ನೂ ಓದಿ:  Namma Metro Tragedy: ಜಗತ್ತಿಗೆ ಜೊತೆಯಾಗಿ ಬಂದ ಮಕ್ಕಳನ್ನ ಬೇರ್ಪಡಿಸಿದ ಮೆಟ್ರೋ ಪಿಲ್ಲರ್


2018ರ ಗಣತಿ


2018 ರ ಹುಲಿ ಗಣತಿಯಲ್ಲಿ ಮಧ್ಯಪ್ರದೇಶವು 526 ಹುಲಿಗಳಿಗೆ ನೆಲೆಯಾಗಿದೆ ಎಂದು ಕಂಡು ಬಂದ ನಂತರ ಮೊದಲ ಸ್ಥಾನವನ್ನು ಮರಳಿ ಪಡೆಯಿತು, ಇದು ಕರ್ನಾಟಕ (524) ಗಿಂತ ಹೆಚ್ಚಾಗಿದೆ ಅಂತ ಹೇಳಬಹುದು. ಉತ್ತರಾಖಂಡ್ 442 ಹುಲಿಗಳ ಸಂಖ್ಯೆಯೊಂದಿಗೆ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ.


ಭಾರತದಲ್ಲಿ ಹುಲಿಗಳ ಸಂಖ್ಯೆ 2006 ರಲ್ಲಿ 1,411 ರಿಂದ 2018 ರಲ್ಲಿ 2,967 ಕ್ಕೆ ಏರಿದೆ ಎಂದು ಕಳೆದ ಹುಲಿ ಗಣತಿ ವರದಿ ತಿಳಿಸಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು