• Home
  • »
  • News
  • »
  • state
  • »
  • Kodagu: ಆಸ್ಪತ್ರೆಯಲ್ಲಿ ಮಹಿಳೆಯರ ಮೃತದೇಹದ ಬೆತ್ತಲೆ ಫೋಟೋ ತೆಗೆಯುತ್ತಿದ್ದ ಕಾಮುಕ!

Kodagu: ಆಸ್ಪತ್ರೆಯಲ್ಲಿ ಮಹಿಳೆಯರ ಮೃತದೇಹದ ಬೆತ್ತಲೆ ಫೋಟೋ ತೆಗೆಯುತ್ತಿದ್ದ ಕಾಮುಕ!

ವಿಕೃತ ಕಾಮುಕ

ವಿಕೃತ ಕಾಮುಕ

ಈ ಕಾಮುಕನು ತಿಂಗಳ ಹಿಂದೆ ಮನೆಯೊಂದಕ್ಕೆ ನುಗ್ಗಲೂ ಯತ್ನಿಸಿದ್ದನಂತೆ ಈ ಸಂದರ್ಭದಲ್ಲಿ ಸಿಕ್ಕಿ ಬಿದ್ದ ಆಸಾಮಿಯು ಸ್ಥಳೀಯರ ಕೈಯಲ್ಲಿ ಧರ್ಮದೇಟು ತಿಂದಿದ್ದಾನೆ.

  • News18 Kannada
  • Last Updated :
  • Karnataka, India
  • Share this:

ಕೊಡಗು (ನ.12):  ಜಗತ್ತಿನಲ್ಲಿ ಎಂಥಾ ಜನರಿರ್ತಾರೆ ನೋಡಿ. ಇಲ್ಲೊಬ್ಬ ಕಾಮುಕ ಕಂಡು ಕೇಳರಿಯದ ಅಸಹ್ಯ ಕೃತ್ಯಯನ್ನು ಎಸಗಿದ್ದಾನೆ. ಕೊಡಗು (Kodagu) ಜಿಲ್ಲಾಸ್ಪತ್ರೆಯಲ್ಲಿ ಹೀನಾಯ ಕೃತ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ, ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿನ (Mortuary) ಅಟೆಂಡರ್‌ ಆಗಿ ಕೆಲಸ ಮಾಡ್ತಿದ್ದ ಸೈಯದ್​​ ಎಂಬಾತ ಮಹಿಳೆಯರ ಶವದ ನಗ್ನ ವಿಡಿಯೋಗಳನ್ನು  ಮಾಡಿದ್ದಾನಂತೆ.


ಈತನ ಮೊಬೈಲ್​ನಲ್ಲಿತ್ತು ಸತ್ತ ಮಹಿಳೆಯರ ನಗ್ನ ಫೋಟೋ





ಶವಾಗಾರದಲ್ಲಿನ ಅಟೆಂಡರ್‌ ಆಗಿ ಕೆಲಸ ಮಾಡಿತ್ತಿದ್ದ ಸೈಯದ್ದ  ಶವಾಗಾರಕ್ಕೆ ಪೋಸ್ಟ್​ ಮಾರ್ಟಂಗೆ ಬರುತ್ತಿದ್ದ ಸ್ತ್ರೀಯರ ಮೃತ ದೇಹದ  ನಗ್ನ ಫೋಟೋವನ್ನು ತೆಗೆದು ತನ್ನ ಬಳಿ ಇರಿಸಿಕೊಂಡಿದ್ದ. ಇದಲ್ಲದೆ ಆತ ಆಸ್ಪತ್ರೆಯಲ್ಲಿದ್ದ ಮಹಿಳಾ ಸಿಬ್ಬಂದಿಯೊಂದಿಗೂ ಇವನು ಅಕ್ರಮ ಸಂಬಂಧವನ್ನು ಹೊಂದಿದ್ದ ಎಂದು ತಿಳಿದು ಬಂದಿದೆ.




mortuary attendant illegal acts have come to light in madikeri hospital kodagu pvn


ಮಹಿಳಾ ಸಿಬ್ಬಂದಿಗೆ ಕರೆ ಮಾಡಿ ಶವಾಗಾರಕ್ಕೆ ಬರುವಂತೆ ಹೇಳಿ ಶವಾಗಾರದಲ್ಲಿ ಕಾಮದಾಟ ನಡೆಸುತ್ತಿದ್ದ ಎಂದು ತಿಳಿದು ಬಂದಿದ್ದು ಮಹಿಳಾ ಸಿಬ್ಬಂದಿಯನ್ನು ಶವಾಗಾರಕ್ಕೆ ಬರುವಂತೆ ಒತ್ತಾಯಿಸುತ್ತಿರುವ ಕಾಲ್‌ ರೆಕಾರ್ಡಗಳು  ಪೊಲೀಸರ ಕೈಗೆ ಸಿಕ್ಕಿವೆ .


ಪ್ರಕರಣ ಬೆಳಕಿಗೆ ಬಂದ ರೀತಿ





ಈ ಕಾಮುಕನು ತಿಂಗಳ ಹಿಂದೆ ಮನೆಯೊಂದಕ್ಕೆ ನುಗ್ಗಲೂ ಯತ್ನಿಸಿದ್ದನಂತೆ ಈ ಸಂದರ್ಭದಲ್ಲಿ ಸಿಕ್ಕಿ ಬಿದ್ದ ಆಸಾಮಿಯು ಸ್ಥಳೀಯರ ಕೈಯಲ್ಲಿ ಧರ್ಮದೇಟು ತಿಂದಿದ್ದಾನೆ. ನಂತರ ಸ್ಥಳಿಯರು ಈತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತನಿಕೆಯ ಸಂದರ್ಭದಲ್ಲಿ ಈ ಹೀನ ಕೃತ್ಯ ಬೆಳಕಿಗೆ ಬಂದಿದೆ.


ನಗ್ನ ವಿಡಿಯೋ ಮಾಡಿ ಬೆದರಿಕೆ


ವಿಧವೆಯರು, ವಿಚ್ಛೇದಿತ ಮಹಿಳೆಯರನ್ನು ನೌಕರಿ ಕೊಡಿಸುವುದಾಗಿ, ಆರ್ಥಿಕ ಸಹಾಯ ಮಾಡುವುದಾಗಿ ನಂಬಿಸಿ ಕರೆದೊಯ್ದು ನಗ್ನ ವೀಡಿಯೋ ಸೆರೆ ಹಿಡಿದು ಬೆದರಿಕೆ ಹಾಕಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ ಜಾಲವೊಂದು ಬೆಳಕಿಗೆ ಬಂದಿದೆ. ಈ ಗ್ಯಾಂಗ್ ನ ನಾಲ್ವರು ವ್ಯಕ್ತಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ, ಈ ಜಾಲದಲ್ಲಿ ಮಹಿಳೆಯೂ ಶಾಮೀಲಾಗಿದ್ದು, ಚಿಕ್ಕಗೊಲ್ಲರಹಟ್ಟಿಯ ಶ್ರೀನಿವಾಸ್ ಹಾಗೂ ಆತನ ಪತ್ನಿ ಮಂಗಳ ಹಾಗೂ ತುಮಕೂರಿನ ಕುಣಿಗಲ್ ನ ಶಿವಕುಮಾರ್ ಬಂಧನಕ್ಕೊಳಗಾಗಿರುವ ವ್ಯಕ್ತಿಗಳಾಗಿದ್ದಾರೆ.


ಶ್ರೀನಿವಾಸ್ ಹಾಗೂ ಶಿವಕುಮಾರ್ ಇಬ್ಬರೂ ಸಹೋದರರಾಗಿದ್ದು, ಗ್ಯಾಸ್ ಏಜೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರೋಪಿಗಳು ವಿಚ್ಛೇದಿತ ಮಹಿಳೆಯರು, ವಿಧವೆಯರು ಹಾಗೂ ಪೋಷಕರಿಂದ ದೂರ ಆಗಿರುವ ಮಹಿಳೆಯರನ್ನು ಗುರುತಿಸುತ್ತಿದ್ದರು. ಆರೋಪಿ ಮಂಗಳ, ಮಹಿಳೆಯರ ವಿವರಗಳನ್ನು ಪಡೆದು, ಅವರೊಂದಿಗೆ ಮಾತನಾಡಿ, ವಿಶ್ವಾಸ ಗಳಿಸುತ್ತಿದ್ದರು.


ಇದನ್ನೂ ಓದಿ: Suicide: ನಿನ್ನೆ 2ನೇ ಮದುವೆ ಗಲಾಟೆ, ಇಂದು ಮೊದಲನೇ ಹೆಂಡತಿ ಜೊತೆ ಆತ್ಮಹತ್ಯೆ! ಯೋಧನ ಬಾಳಲ್ಲಿ ಅಸಲಿಗೆ ನಡೆದಿದ್ದೇನು?


ಮಹಿಳೆಯರಿಂದ ಹಣಕ್ಕಾಗಿ ಬೇಡಿಕೆ


ಬಳಿಕ ನೌಕರಿ ಕೊಡಿಸುವ ನೆಪದಲ್ಲಿ ತಮ್ಮೊಂದಿಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಮಾರಕಾಸ್ತ್ರಗಳನ್ನು ತೋರಿಸಿ ನಗ್ನಗೊಳಿಸುತ್ತಿದ್ದರು, ಪ್ರತಿಭಟಿಸಿದವರ ಮೇಲೆ ಹಲ್ಲೆ ಮಾಡಿ ಅವರ ನಗ್ನ ವಿಡಿಯೋ ಸೆರೆ ಹಿಡಿಯುತ್ತಿದ್ದ ಆರೋಪಿಗಳು ಆ ಮಹಿಳೆಯರಿಂದ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಒಂದು ವೇಳೆ ಬೇಡಿಕೆ ಇಟ್ಟ ಮೊತ್ತದ ಹಣವನ್ನು ನೀಡದೇ ಇದ್ದಲ್ಲಿ ತಮ್ಮ ಬಳಿ ಇರುವ ವೀಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು.


ಬಂಧಿತರಿಂದ ಚಿನ್ನಾಭರಣ ನಗದು ವಶಕ್ಕೆ


ಭಯದಿಂದ ಈ ವರೆಗೂ ಯಾವುದೇ ಸಂತ್ರಸ್ತ ಮಹಿಳೆಯರೂ ದೂರು ನೀಡಿರಲಿಲ್ಲ. ಆದರೆ ಇತ್ತೀಚೆಗೆ ಇದೇ ಪರಿಸ್ಥಿತಿ ಎದುರಿಸಿದ್ದ ಓರ್ವ ಮಹಿಳೆ ಧೈರ್ಯದಿಂದ ದೂರು ನೀಡಿದಾಗ ಈ ವಂಚಕ, ಸುಲಿಗೆಕೋರರ ಜಾಲ ಬಯಲಾಗಿದೆ. ಪೊಲೀಸರು ಬಂಧಿತರಿಂದ 1.20 ಲಕ್ಷ ಮೌಲ್ಯದ ಚಿನ್ನಾಭರಣ, 70,000 ರೂಪಾಯಿ ನಗದು ಹಾಗೂ ಕಾರು, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

Published by:ಪಾವನ ಎಚ್ ಎಸ್
First published: