• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Morning Digest: ತಾಯಿ-ಮಗಳ ಮೇಲೆ ಗ್ಯಾಂಗ್​ರೇಪ್​​, BRTSಗೆ ಮತ್ತೆ 70 ಕೋಟಿ, ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್‌ಗಳು

Morning Digest: ತಾಯಿ-ಮಗಳ ಮೇಲೆ ಗ್ಯಾಂಗ್​ರೇಪ್​​, BRTSಗೆ ಮತ್ತೆ 70 ಕೋಟಿ, ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್‌ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Uttarakhand Gangrape: ಲಿಫ್ಟ್ ನೀಡುವುದಾಗಿ ತಾಯಿ, 6 ವರ್ಷದ ಮಗಳ ಮೇಲೆ ಚಲಿಸುವ ಕಾರಲ್ಲಿ ಗ್ಯಾಂಗ್​ರೇಪ್​​


ಲಿಫ್ಟ್​ ನೀಡುವುದಾಗಿ ತಾಯಿ ಮತ್ತು ಆಕೆ ಮಗಳ ಮೇಲೆ ಚಲಿಸುವ ಕಾರಿನಲ್ಲೇ ಕಾಮುಕರು ಗ್ಯಾಂಗ್​ ರೇಪ್​ ಮಾಡಿದ್ದಾರೆ. ಮತ್ತೊಮ್ಮೆ ನಾಗರಿಕ ಸಮಾಜ ಬೆಚ್ಚಿ ಬೀಳುವ ಘಟನೆ ಉತ್ತರಾಖಂಡ ರಾಜ್ಯದಲ್ಲಿ ವರದಿಯಾಗಿದೆ. ಹರಿದ್ವಾರದ ರೂರ್ಕಿಯಲ್ಲಿ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗಳನ್ನು ತನ್ನ ಕಾರಿನಲ್ಲಿ ಲಿಫ್ಟ್ ನೀಡಿದ ನಂತರ ವ್ಯಕ್ತಿ ಮತ್ತು ಅವನ ಸ್ನೇಹಿತರು ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಮಹಿಳೆ ತನ್ನ ಆರು ವರ್ಷದ ಮಗಳೊಂದಿಗೆ ಮುಸ್ಲಿಂ ಧಾರ್ಮಿಕ ಸ್ಥಳವಾದ ಪಿರಾನ್ ಕಲಿಯಾರ್‌ನಿಂದ ಮನೆಗೆ ಹೋಗುತ್ತಿದ್ದಾಗ, ಸೋನು ಎಂಬ ವ್ಯಕ್ತಿ ಲಿಫ್ಟ್ ಅನ್ನು ನೀಡಿದ್ದಾನೆ. ನಂತರ ಆತ ಗೆಳೆಯೊಂದಿಗೆ ಸೇರಿಕೊಂಡು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


2.Maharashtra Politics Crisis: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು; ಇಂದು ವಿಚಾರಣೆ


ದಿನದಿಂದ ದಿನಕ್ಕೆ ಕುತೂಹಲ ಘಟ್ಟ ತಲುಪುತ್ತಿರುವ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು (Maharashtra Political Crisis) ಈಗ ಮತ್ತೊಂದು ಮಗ್ಗಲು ಬದಲಿಸಿದೆ. ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಈಗ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದೆ. ಶಿವಸೇನೆಯ ವಿರುದ್ಧ ಬಂಡೆದ್ದು ಸುಮಾರು 50 ಶಾಸಕರೊಂದಿಗೆ ಗೌಹಾಟಿಯಲ್ಲಿ ಠಿಕಾಣಿ ಹೂಡಿರುವ ಏಕನಾಥ್ ಶಿಂಧೆ (Ekanath Shindhe) ಸುಪ್ರೀಂ ಕೋರ್ಟಿನಲ್ಲಿ ಶಿವಸೇನೆ ಪಕ್ಷದ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Chief Minister Uddhav Thackeray) ಹಾಗೂ ಮಹಾರಾಷ್ಟ್ರ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ವಿರುದ್ಧ ಅರ್ಜಿ ಸಲ್ಲಿಸಿದ್ದು ಇಂದು ಮಹತ್ವದ ವಿಚಾರಣೆ ನಡೆಯಲಿದೆ‌.


3.BRTS Chigari: ಬರೋಬ್ಬರಿ ₹970 ಕೋಟಿ ಖರ್ಚು ಮಾಡಿ ರಸ್ತೆ ಮಾಡಿದ್ರು, ಮೂರೇ ವರ್ಷದಲ್ಲಿ ಮತ್ತೆ 70 ಕೋಟಿ ವೆಚ್ಚ!


ಹುಬ್ಬಳ್ಳಿ-ಧಾರವಾಡ (Hubballi Dharwad) ಅವಳಿ ನಗರದ ಮಧ್ಯೆ ತ್ವರಿತಗತಿ ಬಸ್ ಸೇವೆ (Bus Service) ನೀಡುವ ಬಿ.ಆರ್.ಟಿ.ಎಸ್.ನ ಚಿಗರಿ ಬಸ್ (BRTS Chigari Service) ಸೇವೆ ಉದ್ಘಾಟನೆಗೊಂಡು ಈಗ ಮೂರು ವರ್ಷ. ಯಾವುದೇ ಒಂದು ಯೋಜನೆ ಉದ್ಘಾಟನೆಗೊಂಡ ಬಳಿಕ ಅದು ಜನರಿಂದ ಶ್ಲಾಘನೆಯೆ ಒಳಗಾಗುವಂತಿರಬೇಕು. ಆದ್ರೆ ಈ ಯೋಜನೆಗೆ ಸದಾ ಕಾಲ ಜನ ಶಪಿಸುವಂತಾಗಿದೆ. ಸುಉಗಮ ಸಂಚಾರ ಬದಲು ಕಿರಿಕಿರಿ ಸಂಚಾರವಾಗಿ ಸೃಷ್ಟಿಯಾಗಿರೊ ಈ BRTS ಮೂಲ ಕಾರಿಡಾರ್ (BRTS Corridor) ಬದಲಿಸೋಕೆ ಈಗ ಮುಂದಾಗಿದ್ದಾರೆ. ಒಂದೆಡೆ ಕಿರಿದಾದ ರಸ್ತೆಯಲ್ಲಿ ಕಿಕ್ಕಿರಿದು ನಿಂತಿರುವ ವಾಹನಗಳ ಟ್ರಾಫಿಕ್ ಜಾಮ್. ಮಗದೊಂದು ಕಡೆ ವಾಹನಗಳ ಓಡಾಟವೇ ಇಲ್ಲದೇ ಖಾಲಿಯಾಗಿರೋ ವಿಶಾಲ ರಸ್ತೆ. ಇದು ಹುಬ್ಬಳ್ಳಿ-ಧಾರವಾಡ ಮಧ್ಯೆ ತ್ವರತಗತಿಯಲ್ಲಿ ಚಿಗರಿ ಬಸ್ ಓಡಿಸೊ ಬಿ.ಆರ್.ಟಿ.ಎಸ್ ಯೋಜನೆ.


4.Anekal: ಅಕ್ರಮ ಬಂಧನದಲ್ಲಿದ್ದ 50 ಗೋವುಗಳ ರಕ್ಷಣೆ


ಅದು ನೋಡಲು ಹೊಲದೊಳಗೆ ನಿರ್ಮಿಸಿದ ಕೋಳಿ ಫಾರಂನತ್ತಿತ್ತು (Poultry). ಅಲ್ಲಿ ಕೋಳಿ ಸಾಕಾಣಿಕೆ ಮಾಡಲಾಗುತ್ತಿದೆ ಅಂತ ಎಲ್ಲರೂ ಭಾವಿಸಿದ್ದರು. ಆದ್ರೆ ಅಲ್ಲಿ ಅಕ್ರಮವಾಗಿ ಗೋವುಗಳನ್ನು (Cow Shelter) ಕೂಡಿ ಹಾಕಲಾಗಿದೆ ಎಂಬ ಆರೋಪದ ಮೇಲೆ ಇಂದು ಆನೇಕಲ್ ಪೊಲೀಸರು (Anekal Police) ದಾಳಿ ನಡೆಸಿದ್ದು, ಅನುಮಾನದ ಮೇಲೆ ಐವತ್ತಕ್ಕೂ ಅಧಿಕ ಗೋವುಗಳನ್ನು (Cows) ವಶಕ್ಕೆ ಪಡೆಯಲಾಗಿದೆ. ಹೌದು ಖಸಾಯಿಖಾನೆಗೆ ಸಾಗಿಸಲು ಗೋವುಗಳನ್ನು ಆಕ್ರಮವಾಗಿ ಕೂಡಿ ಹಾಕಲಾಗಿದೆ ಎಂಬ ಆರೋಪ ಹಿನ್ನೆಲೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಗೌರೇನಹಳ್ಳಿ ಬಳಿಯ ಕೋಳಿಫಾರಂನಂತಹ ಶೆಡ್ ಮೇಲೆ ಆನೇಕಲ್ ಪೊಲೀಸರು ಮತ್ತು ಗೋ ಗ್ಯಾನ್ ಪ್ರಾಣಿ ದಯಾ ಸಂಘದವರು ದಾಳಿ ನಡೆಸಿದ್ದಾರೆ.


5.Today's Gold-Silver Price: ವಾರದ ಆರಂಭದಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ? ಸಂಪೂರ್ಣ ಮಾಹಿತಿ ಇಲ್ಲಿದೆ


ನಿನ್ನೆಯಂತೆಯೇ ಬಂಗಾರ ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು ಒಂದು ಗ್ರಾಂ ಚಿನ್ನದ ಬೆಲೆ 4,755 ರೂಪಾಯಿಯಿದೆ.ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 657, ರೂ. 6,570 ಹಾಗೂ ರೂ. 65,700 ಗಳಾಗಿವೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,700 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,700, ರೂ. 47,650, ರೂ. 47,650 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,650 ರೂ. ಆಗಿದೆ.

top videos
    First published: