ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಇಂದು ಮತ್ತು ನಾಳೆ ರಾಜ್ಯದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಗಳಿವೆ ಎಂದು ಹವಾಮಾನ ಇಲಾಖೆ ಸುಳಿವು ನೀಡಿದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಎಂದಿನಂತೆ ಸಾಧಾರಣದಿಂದ ಮಳೆಯಾಗುತ್ತಿದ್ದು, ಇದು ಮುಂದಿನ ಎರಡು ದಿನ ಬಿರುಸು ಪಡೆದುಕೊಳ್ಳುವ ಸಾಧ್ಯತೆಗಳಿವೆ. ರಾಜ್ಯದ 10ಕ್ಕೂ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ನದಿ ಪಾತ್ರ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗುತ್ತಿದೆ. ಯಾವ ಸಮಯದಲ್ಲಾದ್ರೂ ಹರಿವು ಹೆಚ್ಚಳವಾಗುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಮಳೆಯಾಗಲಿದೆ. ಇಂದು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ
ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಭಜರಂಗಿ ಭಾಯಿಜಾನ್ ಸಿನಿಮಾ ನಿಮಗೆ ನೆನಪು ಇರಬೇಕು. ಚಿತ್ರದಲ್ಲಿ ಪಾಕಿಸ್ತಾನದ ಮುನ್ನಿ ಗೂಡ್ಸ್ ರೈಲು ಹತ್ತಿ ತಲುಪುತ್ತಾಳೆ. ನಂತರ ಭಾಯಿಜಾನ್ ಸಹಾಯದಿಂದ ಅಮ್ಮನ ಮಡಿಲು ಸೇರುತ್ತಾಳೆ. ಇಂತಹುವುದೇ ಪ್ರಕರಣ ಬೆಂಗಳೂರಿನಲ್ಲಿನ ನಡೆದಿದೆ. ಇಲ್ಲಿ ಕಣ್ಣಾ ಮುಚ್ಚಾಲೆ ಆಟ ಆಡುತ್ತಾ ಪಶ್ಚಿಮ ಬಂಗಾಳ ಮೂಲದ ಬಾಲಕ ಗೂಡ್ಸ್ ಟ್ರೈನ್ ಹತ್ತಿದ್ದಾನೆ. ನಂತರ ರಾಜ್ಯಗಳನ್ನು ದಾಟಿ ಕೊನೆಗೆ ಬೆಂಗಳೂರು ಸೇರಿದ್ದನು. ಬೆಂಗಳೂರಿನ ಯುವಕರು ಭಜರಂಗಿ ಬಾಯಿಜಾನ್ ನಂತೆ ಕೆಲಸ ಮಾಡಿ ಬಾಲಕನ ಪೋಷಕರನ್ನು ಪತ್ತೆ ಮಾಡಿದ್ದಾರೆ. ಪುತ್ರನ ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿದ್ದ ತಾಯಿ ಮಗನನ್ನು ಕಾಣಲು ಬೆಂಗಳೂರಿಗೆ ದೌಡಾಯಿಸಿದ್ದರು. ಒಂದು ವರ್ಷದಿಂದ ಕಾಣೆಯಾಗಿದ್ದ ಮಗನನ್ನು ಕಾಣುತ್ತಲೇ ಭಾವುಕರಾದ ತಾಯಿ, ಕಂದನನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು. ತಮ್ಮ ಮಗನ ಮಾಹಿತಿ ನೀಡಿದ ಯುವಕರಿಗೆ ಎರಡು ಕರಗಳನ್ನ ಜೋಡಿಸಿ ನಮಸ್ಕರಿಸಿದರು.
ಕೇಂದ್ರ ಸರ್ಕಾರದ (Central Government) ಮಹತ್ವಾಕಾಂಕ್ಷಿ ಅಗ್ನಿಪಥ್ ಯೋಜನೆಯ (Agnipath Scheme) ಪರ ಹಾಗೂ ವಿರೋಧ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಅಗ್ನಿಪಥ್ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ (Protest) ಮುಂದುವರೆದಿದೆ. ಈ ನಡುವೆಯೇ ಭಾರತೀಯ ವಾಯು ಸೇನೆ (IAF) ಅಗ್ನಿಪಥ್ ಯೋಜನೆಗಾಗಿ ಅಗ್ನಿವೀರರ (Agniveer) ನೇಮಕಾತಿ ಪ್ರಕ್ರಿಯೆಗೆ (Recruitment) ನಿನ್ನೆಯಿಂದ ಚಾಲನೆ ನೀಡಿದೆ. ಭಾರತೀಯ ವಾಯುಪಡೆ ಅಗ್ನಿಪಥ್ ಯೋಜನೆಯಡಿ ನೇಮಕಾತಿಗೆ ನೋಂದಣಿ (Registration) ಆರಂಭಿಸುವ ಮೂಲಕ ಹೊಸ ನೇಮಕಾತಿ ಪ್ರಕ್ರಿಯೆಗೆ ನಿನ್ನೆ ಚಾಲನೆ ನೀಡಿದೆ. ಅಗ್ನಿವೀರ್ಗೆ ಅರ್ಜಿ (Apply) ಸಲ್ಲಿಸಲು ನೋಂದಣಿ ವಿಂಡೋ ತೆರೆಯಲಾಗಿದ್ದು, ಶುಕ್ರವಾರ ಬೆಳಗ್ಗೆ 10 ರಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಐಎಎಫ್ (IAF) ಟ್ವಿಟ್ (Tweet) ಮಾಡಿದೆ.
ಕೇರಳ ರಾಜ್ಯದ ಕೊಡುಮೊನ್-ಅಂಗಡಿಕಲ್ ರಸ್ತೆಯ ಬಳಿ ಆಸಕ್ತಿದಾಯಕ ಫ್ಲೆಕ್ಸ್ ಬೋರ್ಡ್ ಅಳವಡಿಸಲಾಗಿದೆ. 'ಇತಿಹಾಸವು ಕೆಲವು ಜನರಿಗೆ ದಾರಿ ಮಾಡಿಕೊಡುತ್ತದೆ' ಅಂತ ಫೋಟೋದ ಕೆಳಗೆ ಬರೆಯಲಾಗಿದೆ. ಇದು ಎಸ್ಎಸ್ಎಲ್ಸಿ ವಿದ್ಯಾರ್ಥಿ ಕುಂಜುಕ್ಕು ಅಕಾ ಜಿಷ್ಣು ಎಂಬ ವಿದ್ಯಾರ್ಥಿ ತನಗೆ ತಾನೇ ಅಭಿನಂದನೆ ಸಲ್ಲಿಸಿಕೊಂಡು ಹಾಕಿಸಿಕೊಂಡ ಫ್ಲೆಕ್ಸ್. 2022 ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಭಾಗವಹಿಸಿದ್ದಕ್ಕಾಗಿ ಕುಂಜಕ್ಕು ಅಕಾ ಅವರಿಗೆ ಅಂದರೆ ನನಗೆ ನನ್ನ ಅಭಿನಂದನೆಗಳು ಅಂತ ಫ್ಲೆಕ್ಸ್ನಲ್ಲಿ ಬರೆಯಲಾಗಿದೆ. ಅಂಗಡಿಕಲ್ ಮೂಲದ ಓಮನಕುಟ್ಟನ್ ಮತ್ತು ದೀಪಾ ದಂಪತಿಯ ಪುತ್ರ ಕುಂಜಕ್ಕು ಅಕಾ ಜಿಷ್ಣು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು, ಪಾಸ್ ಆಗಿದ್ದಾನೆ. ತನ್ನನ್ನು ಅಪಹಾಸ್ಯ ಮಾಡಿದವರಿಗೆ ತಿರುಗೇಟು ನೀಡಲು ವಿದ್ಯಾರ್ಥಿ ಈ ರೀತಿಯ ಫ್ಲೆಕ್ಸ್ ಹಾಕಿಕೊಂಡಿದ್ದಾನೆ ಎನ್ನಲಾಗಿದೆ.
ಕೊಡಗು ಜಿಲ್ಲೆ 2018 ರಿಂದಲೂ ಪ್ರಾಕೃತಿಕ ವಿಕೋಪಗಳನ್ನು ಎದುರಿಸಿತ್ತು. ಕಳೆದ ವರ್ಷ ಅಂತಹ ಯಾವುದೇ ಅಪಾಯ ಎದುರಾಗಲಿಲ್ಲ ಎಂದು ಜಿಲ್ಲೆಯ ಜನರು ಒಂದಷ್ಟು ನಿಟ್ಟುಸಿರು ಬಿಟ್ಟಿದ್ದರು. ಆದರೆ ಇತ್ತೀಚೆಗೆ ಕೊಡನಲ್ಲಿ (Kodagu) ಮುಂಜಾನೆ ಭೂಕಂಪನವಾಗಿದ್ದು (Earthquake) ಇದು ಅಪಾಯ ಮುನ್ಸೂಚನೆಯೇ ಎಂಬ ಆತಂಕ, ಪ್ರಶ್ನೆಯನ್ನು ಹುಟ್ಟುಹಾಕಿದೆ. ಭೂಕಂಪನವಾಗಿದ್ದು ಅಪಾಯದ (Danger) ಮುನ್ಸೂಚನೆ ಯಾಕೆ ಎಂದರೆ ಇದು ಕೊಡಗು ಜಿಲ್ಲೆಯ ಮಟ್ಟಿಗೆ ಒಮ್ಮೆಗೆ ಆಗಿರುವ ಅನುಭವ. 2018 ರಲ್ಲಿ ಕೊಡಗಿನಲ್ಲಿ ಎಂದೂ ಕಂಡು ಕೇಳರಿಯಂತಹ ಭೂಕುಸಿತ, ಪ್ರವಾಹ (Flood) ಎದುರಾಗಿತ್ತು. ಆದರೆ ಅದಕ್ಕೂ ಮೊದಲೆ ಜಿಲ್ಲೆಯಲ್ಲಿ 3.7 ತೀವ್ರತೆಯ ಭೂಕಂಪನವಾಗಿತ್ತು. 2018 ರ ಜೂನ್ ತಿಂಗಳಲ್ಲಿ ಆದ ಈ ಭೂಕಂಪನದಿಂದ ಸಡಿಲಗೊಂಡಿದ್ದ ಭೂಮಿ ನಂತರ ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಬರೋಬ್ಬರಿ 36 ಗ್ರಾಮ ಪಂಚಾಯಿತಿಗಳಲ್ಲಿ ಭೂಕುಸಿತವಾಗಿತ್ತು.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ