Morning Digest: ಗೃಹ ಪ್ರವೇಶ ಸಮಾರಂಭಕ್ಕೆ ನುಗ್ಗಿ ಮಂಗಳಮುಖಿಯರ ದಾಂಧಲೆ; ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ಸಾವು: ಬೆಳಗಿನ ಸುದ್ದಿಗಳು

Top News Today: ಈ ದಿನದ ಮುಖ್ಯ ಸುದ್ದಿಗಳೇನು ಗೊತ್ತೇ? ಇಂದು ನಡೆಯಲಿರುವ ಹಾಗೂ ನಡೆದಿರೋ ಕೆಲವು ಇಂಪಾರ್ಟೆಂಟ್ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ನಿಮಗಾಗಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗೃಹ ಪ್ರವೇಶ ಸಮಾರಂಭಕ್ಕೆ ನುಗ್ಗಿ ಮಂಗಳಮುಖಿಯರ ದಾಂಧಲೆ : ಮನೆ ಕಟ್ಟಿ ನೋಡು(New House), ಮದುವೆ ಮಾಡಿ ನೋಡು ಎಂದು ಸುಮ್ಮನೆ ಹೇಳಿಲ್ಲ. ಸ್ವಂತದ್ದು ಅಂತ ಒಂದು ಮನೆ ಕಟ್ಟುವುದು ಅದೆಷ್ಟೋ ಜನರ ಕನಸ್ಸು-ತಪಸ್ಸು ಎಂದೇ ಹೇಳಬಹುದು. ಕಷ್ಟಪಟ್ಟು ಮನೆ ಕಟ್ಟಿ ಗೃಹ ಪ್ರವೇಶ (Gruhapravesh Function) ದಿನದಂದು ನೆಮ್ಮದಿಯ ನಿಟ್ಟುಸಿರು ಬಿಡಲು ಕಾಯುತ್ತಿರುತ್ತಾರೆ. ಹೊಸ ಮನೆಯಲ್ಲಿ ಸಂಭ್ರಮ ಕಳೆಗಟ್ಟಬೇಕು. ಆದರೆ ದಾಂಧಲೆ, ಗಲಾಟೆ ಆದರೆ ಆ ಮನೆಯವರ ಪರಿಸ್ಥಿತಿ ಹೇಗಿರಬೇಕು. ಈ ರೀತಿ ಗೃಹಪ್ರವೇಶ ಸಂಭ್ರಮಕ್ಕೆ‌ ಕೊಳ್ಳಿ ಇಟ್ಟವರು ಮಂಗಳಮುಖಿಯರು. ಜೂ.23ರಂದು ಬೆಂಗಳೂರಿನ ಕಲ್ಕೆರೆ ಚೆನ್ನಸಂದ್ರದಲ್ಲಿ ಲೋಕೇಶ್​ ಎಂಬುವರು ತಮ್ಮ ಮನೆಯ ಗೃಹ ಪ್ರವೇಶವನ್ನು ನಡೆಸುತ್ತಿದ್ದರು. ಬೆಳಗ್ಗೆ ಪೂಜೆಯ ವೇಳೆಗೆ ಹೊಸ ಮನೆಗೆ ಎಂಟ್ರಿ ಕೊಟ್ಟ ಮಂಗಳಮುಖಿಯರ ಗುಂಪು (Transgenders Group) ಹಣಕ್ಕಾಗಿ ಗಲಾಟೆ (Created uproar for money) ಮಾಡಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Bengaluru Transgenders : ಗೃಹ ಪ್ರವೇಶ ಸಮಾರಂಭಕ್ಕೆ ನುಗ್ಗಿ ಹಣಕ್ಕಾಗಿ ಮಂಗಳಮುಖಿಯರ ದಾಂಧಲೆ, ಮನೆಯವರ ಮೇಲೆ ಹಲ್ಲೆ

ಬಸ್ ಚಾಲಕನ ಮಗ ಈಗ IPS ಅಧಿಕಾರಿ

ಇತ್ತೀಚೆಗಷ್ಟೇ UPSC ಫಲಿತಾಂಶಗಳು ಹೊರ ಬಿದ್ದಿವೆ. ಅನೇಕ ಅಭ್ಯರ್ಥಿಗಳು ತಮ್ಮ ಕಠಿಣ ಪರಿಶ್ರಮದಿಂದ ಪರೀಕ್ಷೆಯಲ್ಲಿ (UPSC Exam) ತೇರ್ಗಡೆಯಾಗಿ ಉನ್ನತ ಹುದ್ದೆಗೇರಲಿದ್ದಾರೆ. ಒಬ್ಬೊಬ್ಬ ಸಾಧಕರ ಹಿಂದೆಯೂ ಒಂದು ಕಥೆಯಿದೆ (Inspiring Stories). ಅದು ಅನೇಕರಿಗೆ ಸ್ಪೂರ್ತಿಯಾಗುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ ಸಹ ಅಂತಹದ್ದೇ ಕಷ್ಟಗಳ ಮಧ್ಯೆ ಪ್ರಜ್ವಲವಾಗಿ ಬೆಳಗಿದ ಪ್ರತಿಭೆ ಬಗ್ಗೆ ಪರಿಚಯಿಸುತ್ತಿದ್ದೇವೆ. ಅವರ ಹೆಸರು ಅನುರಾಗ್ ದಾರು (Anurag Daru). ಉತ್ತರ ಕರ್ನಾಟಕದ ಬೀದರ್‌ ಜಿಲ್ಲೆಯ ಭಾಲ್ಕಿಯಲ್ಲಿ ಬೆಳೆದ ಇವರು ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಪಿಎಸ್ ಟೋಪಿ ಧರಿಸಲು ಹೊರಟಿದ್ದಾರೆ. ಆ ಮೂಲಕ ಕುಟುಂಬಸ್ಥರು, ಹುಟ್ಟೂರಿನ ಜನರಲ್ಲಿ ಕಣ್ಮಣಿಯಾಗಿದ್ದಾರೆ. UPSC ನಾಗರಿಕ ಸೇವಾ ಪರೀಕ್ಷೆಯಲ್ಲಿ 569 ನೇ ರ್ಯಾಂಕ್ ಗಳಿಸಿದ ನಂತರ, ಅನುರಾಗ್ ದಾರು IPS ಆಗಲು ಸಜ್ಜಾಗಿದ್ದಾರೆ.

ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ಸಾವು

ಲಂಕಾದಲ್ಲಿ ಆರ್ಥಿಕ ಸಮಸ್ಯೆಗಳ ಮಧ್ಯೆ ಇಂಧನ ಕೊರತೆಯ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಶ್ರೀಲಂಕಾದ ಬಂಕ್ ಮುಂದೆ 5 ದಿನ ಕ್ಯೂನಲ್ಲಿ ಕಾದು ನಿಂತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಶ್ರೀಲಂಕಾದಲ್ಲಿ 63 ವರ್ಷದ ಟ್ರಕ್ ಚಾಲಕರೊಬ್ಬರು ದೇಶದ ಪಶ್ಚಿಮ ಪ್ರಾಂತ್ಯದ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಐದು ದಿನಗಳ ಕಾಲ ಸರತಿ ಸಾಲಿನಲ್ಲಿ ನಿಂತು ಸಾವನ್ನಪ್ಪಿದ್ದಾರೆ. ಇಂಧನ ತುಂಬಿಸಲು ದೀರ್ಘಕಾಲ ಕಾಯುತ್ತಿದ್ದ ಕಾರಣ 10 ನೇ ಸಾವು ವರದಿಯಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರವು ತನ್ನ ಸ್ವಾತಂತ್ರ್ಯದ ನಂತರ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಇಂದಿನ ಚಿನ್ನದ ದರ

ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Price) ಮೊನ್ನೆಯ ಮತ್ತೆ ಯಥಾಸ್ಥಿತಿಗೆ ಮರಳಿದ್ದು ಪ್ರತಿ ಗ್ರಾಂಗೆ 20 ರೂ. ಏರಿಕೆಯಾಗಿದೆ. ನಿನ್ನೆಗೆ ಒಂದು ಗ್ರಾಂ ಆಭರಣ (Jewellery) ಚಿನ್ನದ ಬೆಲೆ ರೂ. 4,745 ಇದ್ದದ್ದು ಇಂದು 4,765 ರೂಪಾಯಿಗಳಿಗೆ ಮತ್ತೆ ಏರಿದೆ. ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ (Gold Rate) ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಮಾರುಕಟ್ಟೆ ಸಂಬಂಧಿತ ವಿದ್ಯಮಾನಗಳು ಹಾಗೂ ಕಚ್ಚಾ ತೈಲದಲ್ಲಾಗಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ.

PU ಫಲಿತಾಂಶದಲ್ಲಿ ಚಿತ್ರದುರ್ಗ ಲಾಸ್ಟ್!

ತ್ತೀಚೆಗೆ ಬಂದ ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶದಲ್ಲಿ (PUC Result) ಕೋಟೆನಾಡು ಚಿತ್ರದುರ್ಗ (Chitradurga) ಜಿಲ್ಲೆ ಕೊನೆಯ ಸ್ಥಾನ ಪಡೆದಿದ್ದು ಜಿಲ್ಲೆ ಜನಪ್ರತಿನಿಧಿಗಳಲ್ಲಿ ಕಳವಳ ಉಂಟಾಗಿದೆ. ಇದಕ್ಕೆ ಕಾರಣವೇನು ಅನ್ನೋದರ ಕುರಿತು ವಿಧಾನ ಪರಿಷತ್ ಸದಸ್ಯ ಕೆಎಸ್ ನವೀನ್ ಕಾಲೇಜು ಪ್ರಾಂಶುಪಾಲರ  ಆತ್ಮಾವಲೋಕನ ಸಭೆ ಮಾಡಿದ್ದಾರೆ‌. ಪ್ರಸಕ್ತ ವರ್ಷದ ದ್ವೀತಿಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ (Result) ಶೈಕ್ಷಣಿಕ ಸಾಧನೆ ಕುಸಿತದ ಬಗ್ಗೆ  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಪಿ.ಯು. ಕಾಲೇಜು ಪ್ರಾಂಶುಪಾಲರ ಆತ್ಮಾವಲೋಕ ಸಭೆ ನಡೆಸಿ ಮುಂದಿನ ವರ್ಷದ ಪಿ.ಯು. ಫಲಿತಾಂಶ ಸುಧಾರಣೆ ಮಾರ್ಗೋಪಾಯಗಳ ಕುರಿತು ಚಿಂತನ ಮಂಥನ ಮಾಡಿದ್ದಾರೆ.
Published by:Kavya V
First published: