Morning Digest: ಬೆಳ್ಳಂಬೆಳಗ್ಗೆ ಕರ್ನಾಟಕದಲ್ಲಿ ಭೂಕಂಪನ: ಇಂದು ಚಿನ್ನ-ಬೆಳ್ಳಿ ದರ, ಪೆಟ್ರೋಲ್-ಡಿಸೇಲ್ ಬೆಲೆ ಎಷ್ಟು? ಬೆಳಗಿನ ಪ್ರಮುಖ ಸುದ್ದಿಗಳು

Top News Today: ಈ ದಿನದ ಮುಖ್ಯ ಸುದ್ದಿಗಳೇನು ಗೊತ್ತೇ? ಇಂದು ನಡೆಯಲಿರುವ ಹಾಗೂ ನಡೆದಿರೋ ಕೆಲವು ಇಂಪಾರ್ಟೆಂಟ್ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ನಿಮಗಾಗಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳ್ಳಂಬೆಳಗ್ಗೆ ಕರ್ನಾಟಕದಲ್ಲಿ ಭೂಕಂಪನ: ಇಂದು ಬೆಳಗಿನ ಜಾವ ಹಾಸನ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದೆ. ಅರಕಲಗೂಡು ತಾಲೂಕಿನ ಹನೆಮಾರನಹಳ್ಳಿ, ಕಾರಹಳ್ಳಿ, ಗ್ರಾಮಗಳಲ್ಲಿ ಲಘು ಭೂಕಂಪ ಆಗಿದೆ. ಇಂದು ಬೆಳಗಿನ ಜಾವ 4.38 ರಲ್ಲಿ ಭೂಮಿ ಕಂಪಿಸಿದ ಅನುಭವವಾಗಿ. ನಿದ್ದೆಯಲ್ಲಿದ್ದ ಜನ ಗಾಬರಿಯಿಂದ ಮನೆಯಿಂದ ಹೊರ ಓಡಿ ಬಂದಿರುವ ಘಟನೆ ನಡೆದಿದೆ. ನಿದ್ರೆಯಲ್ಲಿದ್ದವರಿಗೆ ಲಘು ಭೂಕಂಪನ ಶಾಕ್ ನೀಡಿದೆ. ಹೊಳೆನರಸೀಪುರ, ಅರಕಲಗೂಡು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭೂ ಕಂಪನ ಆಗಿದೆ. ದೊಡ್ಡ ರೀತಿಯ ಶಬ್ಧ ಬಂದ ಬಳಿಕ 4.38 ರಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ತಾಲ್ಲೂಕಿನ ಮುದ್ದನಹಳ್ಳಿ, ಅರಕಲಗೂಡು ಪಟ್ಟಣ, ಹನೆಮಾರನಹಳ್ಳಿ, ಕಾರಳ್ಳಿ ಗ್ರಾಮಗಳಲ್ಲಿ ಕಂಪನ ಉಂಟಾಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Hassan Earthquake: ಹಾಸನದಲ್ಲಿ ಬೆಳಗಿನ ಜಾವ ಕಂಪಿಸಿದ ಭೂಮಿ; ನಿದ್ದೆಯಲ್ಲಿದ್ದ ಜನಕ್ಕೆ ಶಾಕ್!

 ಚಿನ್ನ-ಬೆಳ್ಳಿ ದರ

ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Price) ಮತ್ತೆ ಕುಸಿದಿದ್ದು ಚಿನ್ನದ ಆಭರಣಗಳನ್ನು ಕೊಳ್ಳಲು ಇದು ಉತ್ತಮ ಅವಕಾಶವೆಂದೇ ಹೇಳಬಹುದು. ನಿನ್ನೆಗೆ ಒಂದು ಗ್ರಾಂ ಆಭರಣದ (Jewellery) ಚಿನ್ನದ ಬೆಲೆ (Gold Rate) ರೂ. 4,765 ಇದ್ದದ್ದು ಇಂದು 4,745 ರೂಪಾಯಿಗಳಿಗೆ ಕುಸಿದಿದ್ದು ಪ್ರತಿ ಗ್ರಾಂಗೆ 20 ರೂ. ಇಳಿದಿದೆ. ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಮಾರುಕಟ್ಟೆ ಸಂಬಂಧಿತ ವಿದ್ಯಮಾನಗಳು ಹಾಗೂ ಕಚ್ಚಾ ತೈಲದಲ್ಲಾಗಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ. ಚಿನ್ನದಂತೆ ಸಾಮಾನ್ಯವಾಗಿ ಬೆಳ್ಳಿ ದರಗಳಲ್ಲೂ ವ್ಯತ್ಯಾಸ ಆಗುತ್ತಲೇ ಇರುತ್ತದೆ. ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ಮತ್ತೆ ಸ್ವಲ್ಪ ಅಗ್ಗವಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಬೆಳ್ಳಿ ಬೆಲೆ 60,500 ರೂ. ಆಗಿದೆ.

ಇಂದಿನ ಪೆಟ್ರೋಲ್ ದರಗಳು

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಜೂನ್ 23 ರಿಂದ 26 ರವರೆಗೆ ಕರೆಂಟ್ ಇರಲ್ಲ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ನಿರ್ವಹಣೆ, ದುರಸ್ತಿ ಮತ್ತು ಕೆಲವು ಯೋಜನಾ ಕಾರ್ಯಗಳನ್ನು ಕೈಗೊಳ್ಳಲು ಯೋಜಿಸಿದೆ. ಹೀಗಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜೂನ್ 23 ರಿಂದ ಜೂನ್ 26ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ. ಮಳೆಯಿಂದ ಬಿಡುವು ಸಿಕ್ಕಾಗಲೆಲ್ಲ ಓವರ್ ಹೆಡ್ ಕೇಬಲ್​ಗಳನ್ನು ನೆಲದಡಿಗೆ ಸ್ಥಳಾಂತರಿಸುವ ಕೆಲಸವನ್ನೂ ಬೆಸ್ಕಾಂ ಮಾಡುತ್ತಿದೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಾಮಗಾರಿ ನಡೆಯಲಿದೆ. ಬೆಂಗಳೂರಿನ ಯಾವ ಭಾಗಗಳಲ್ಲಿ ಜೂನ್ 23 ರಿಂದ ಜೂನ್ 26ರವರೆಗೆ ವಿದ್ಯುತ್ ಕಡಿತ (Bengaluru Power Cut) ಉಂಟಾಗಲಿದೆ? ಎಲ್ಲ ವಿವರ ನಿಮಗಾಗಿಯೇ ಇಲ್ಲಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Bengaluru Power Cut: ಬೆಂಗಳೂರಿನ ಜನರೇ, ಈ ಏರಿಯಾಗಳಲ್ಲಿ ಜೂನ್ 23 ರಿಂದ 26 ರವರೆಗೆ ಕರೆಂಟ್ ಇರಲ್ಲ

ಸಂಗೀತ ಲೋಕದ ನಾದಬ್ರಹ್ಮನಿಗೆ ಹುಟ್ಟುಹಬ್ಬದ ಸಂಭ್ರಮ

ಸ್ಯಾಂಡಲ್​ವುಡ್​ನ ನಾದಬ್ರಹ್ಮ ಖ್ಯಾತಿ ಹಂಸಲೇಖ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಇವರ ಹಾಡಿಗೆ ತಲೆ ದೂಗದವರೇ ಇಲ್ಲ. ಅಂದಿನ ಪ್ರೇಮಲೋಕದಿಂದ ಇಂದಿನ ಸರೆಗಮಪ ಶೋ ವರೆಗೂ ಅವರ ಖ್ಯಾತಿ ಅಷ್ಟೇ ಇದೆ ಎಂದರೂ ತಪ್ಪಾಗಲಾರದು. ಸ್ಯಾಂಡಲ್​ವುಡ್​ನ ನಾದಬ್ರಹ್ಮ ಖ್ಯಾತಿ ಹಂಸಲೇಖ ಅವರಿಗೆ ಇಂದು 71ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಇವರ ಹಾಡಿಗೆ ತಲೆ ದೂಗದವರೇ ಇಲ್ಲ. ಅಂದಿನ ಪ್ರೇಮಲೋಕದಿಂದ ಇಂದಿನ ಸರೆಗಮಪ ಶೋ ವರೆಗೂ ಅವರ ಖ್ಯಾತಿ ಅಷ್ಟೇ ಇದೆ ಎಂದರೂ ತಪ್ಪಾಗಲಾರದು.
Published by:Kavya V
First published: