• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Morning Digest: ಕೆರೂರಿನಲ್ಲಿ ಘರ್ಷಣೆ, ಲಾಲು ಆರೋಗ್ಯ ಗಂಭೀರ, ಚಿನ್ನದ ದರ ಇಳಿಕೆ; ಬೆಳಗಿನ ಟಾಪ್ ನ್ಯೂಸ್

Morning Digest: ಕೆರೂರಿನಲ್ಲಿ ಘರ್ಷಣೆ, ಲಾಲು ಆರೋಗ್ಯ ಗಂಭೀರ, ಚಿನ್ನದ ದರ ಇಳಿಕೆ; ಬೆಳಗಿನ ಟಾಪ್ ನ್ಯೂಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Bagalkot: ಕೆರೂರು ಪಟ್ಟಣದಲ್ಲಿ ಅನ್ಯಕೋಮಿನ ಗುಂಪುಗಳ ನಡುವೆ ಗಲಾಟೆ, ಇಬ್ಬರಿಗೆ ಚಾಕು ಇರಿತ


ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು (Keruru, Bagalakote) ಪಟ್ಟಣದಲ್ಲಿ ಎರಡು ಅನ್ಯಕೋಮಗಳ ಗುಂಪಿನ ನಡುವೆ (Clash between Two Groups) ಗಲಾಟೆ ಬುಧವಾರ ನಡೆದಿದೆ. ಗಲಾಟೆಯಲ್ಲಿ ಇಬ್ಬರಿಗೆ ಚೂರಿ ಇರಿತವಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಮುನ್ನೇಚ್ಚರಿಕೆ ಕ್ರಮವಾಗಿ ಕೆರೂರು ಪಟ್ಟಣದಲ್ಲಿಯ ಎಲ್ಲಾ ಶಾಲಾ ಕಾಲೇಜುಳಿಗೆ ರಜೆ (School And College Holiday) ಘೋಷಣೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಶುಕ್ರವಾರ ರಾತ್ರಿವರೆಗೂ ಕೆರೂರ ಪಟ್ಟಣದಲ್ಲಿ 144 ಕಲಂ (Section 144) ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.


2.Karnataka Weather Report: ಮೂರು ಜಿಲ್ಲೆಗೆ ರೆಡ್ ಅಲರ್ಟ್, ನಾಲ್ಕು ಜಿಲ್ಲೆಗೆ ಆರೆಂಜ್; ರಜೆ ವಿಸ್ತರಣೆ


ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಸುಸ್ತಾಗಿರುವ ಕರಾವಳಿ ಜಿಲ್ಲೆಗಳಿಗೆ (Costal District) ಹವಾಮಾನ ಇಲಾಖೆ ಶಾಕಿಂಗ್ ನ್ಯೂಸ್ ನೀಡಿದೆ. ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗುವ (Heavy Rainfall) ಸೂಚನೆ ನೀಡಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi), ಉತ್ತರ ಕನ್ನಡಕ್ಕೆ (Uttara Kannada) ರೆಡ್ ಅಲರ್ಟ್ (Red Alert) ಘೋಷಣೆ ಮಾಡಲಾಗಿದೆ. ರೆಡ್ ಅಲರ್ಟ್ ಎಂದರೆ 204 mm ಗಿಂತ ಅಧಿಕ ಮಳೆಯಾಗುವ ಮುನ್ಸೂಚನೆ ಇದೆ ಎಂದರ್ಥ. ಇನ್ನೂ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (Orange Alert) ಘೋಷಣೆ ಮಾಡಲಾಗಿದೆ. ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಸೂಚನೆ ನೀಡಲಾಗಿದೆ.


3.Lalu Prasad Yadav: ಲಾಲು ಯಾದವ್ ಆರೋಗ್ಯ ಗಂಭೀರ, ಪಾಟ್ನಾದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ಶಿಫ್ಟ್


ವರ್ಣರಂಜಿತ ರಾಜಕಾರಣಿ ಹಾಗೂ ರಾಷ್ಟ್ರೀಯ ಜನತಾದಳ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ (Rastriya Janata Dal President Lalu Prasad Yadav) ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೆಚ್ಚಿನ‌ ಚಿಕಿತ್ಸೆಗಾಗಿ ಲಾಲು ಪ್ರಸಾದ್ ಯಾದವ್‌ ಅವರನ್ನು ಬುಧವಾರ ರಾತ್ರಿ ಪಾಟ್ನಾ (Patna) ಆಸ್ಪತ್ರೆಯಿಂದ ವಿಮಾನದ ಮೂಲಕ ದೆಹಲಿಯ ಏಮ್ಸ್‌ ಆಸ್ಪತ್ರೆಗೆ (AIMS Hospital) ಸ್ಥಳಾಂತರ ಮಾಡಲಾಗಿದೆ. ಲಾಲು ಪ್ರಸಾದ್ ಯಾದವ್ ಅವರು ಇತ್ತೀಚೆಗೆ ಬಚ್ಚಲ ಮನೆಯಲ್ಲಿ ಬಿದ್ದಿದ್ದರು. ಅದರಿಂದ ಅವರ ಮೂಳೆ ಮುರಿದಿತ್ತು. ಇದಲ್ಲದೆ ಇನ್ನೂ ಹಲವು ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.


4.Gold-Silver Price Today: ಬಂಪರ್ ಸುದ್ದಿ ಇಲ್ಲಿದೆ ಕೇಳಿ, 1 ಗ್ರಾಂ ಚಿನ್ನದ ಬೆಲೆಯಲ್ಲಿ ಭಾರೀ ಇಳಿತ; ಬೆಳ್ಳಿ ಕೂಡ ಅಗ್ಗ


ನಿನ್ನೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ (Gold Rate) 50 ರೂಪಾಯಿ ಇಳಿಕೆಯಾಗಿದ್ದು ರೂ. 4,810 ಇದ್ದದ್ದು ಇಂದು ರೂ. 4,760ಕ್ಕೆ ಇಳಿದಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,630 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,400, ರೂ. 47,600, ರೂ. 47,600 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,600 ರೂ. ಆಗಿದೆ. ಬೆಂಗಳೂರಿನಲ್ಲೂ ಬೆಳ್ಳಿ ದರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಸಾಕಷ್ಟು ಇಳಿಕೆಯಾಗಿದೆ. ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 625, ರೂ. 6,250 ಹಾಗೂ ರೂ. 62,500 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 62,500 ಆಗಿದ್ದರೆ ದೆಹಲಿಯಲ್ಲಿ ರೂ. 56,900 ಮುಂಬೈನಲ್ಲಿ ರೂ. 56,900 ಹಾಗೂ ಕೊಲ್ಕತ್ತದಲ್ಲೂ ರೂ. 56,900 ಗಳಾಗಿದೆ.


5.Puttur: ಕಾರು, ಲಾರಿ, ಟಿಪ್ಪರ್ ಎಲ್ಲಾ ಓಡಿಸ್ತಾನೆ ಈ 12ರ ಪೋರ! ಈತನ ಹೊಸ ಆವಿಷ್ಕಾರಕ್ಕೆ ಜನರು ಫಿದಾ


ಕೊರೋನ ಕಾಲದಲ್ಲಿ ಶಾಲೆಯು (School) ಇಲ್ಲದೆ, ಮನೆಯಿಂದ ಹೊರಗೂ ಬಾರದೆ ಮನೆಯಲ್ಲೇ ಕೂತು ಮೊಬೈಲ್ ಚಟಕ್ಕೆ (Mobile Addict) ಮಕ್ಕಳು ಹಾಳಾದರೆಂದು ಬೊಬ್ಬಿಡುವ ಪೋಷಕರೇ ಹೆಚ್ಚು.ಇದಕ್ಕೆ ಅಪವಾದ ಎಂಬಂತೆ ಇಲ್ಲೊಬ್ಬ 12 ರ ಪೋರ (Boy) ರಜಾ ದಿನಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಹೊಸ ಆವಿಷ್ಕಾರಗಳಿಗೆ ಮಣೆ ಹಾಕಿದ್ದಾನೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಧ್ಯಾನ್ (Dhyan) ಈ ರೀತಿಯ ಆವಿಷ್ಕಾರದಲ್ಲಿ ನಿರತ ಪೋರ.

top videos
    First published: