1.Rishi Sunak: ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಕೊಟ್ಟ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್!
ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy)ಅವರ ಅಳಿಯ (Son-In-Law) ಮತ್ತು ಬ್ರಿಟನ್ ಹಣಕಾಸು ಸಚಿವ (Finance) ರಿಷಿ ಸುನಕ್ ಅವರು ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ರಿಷಿ ಸುನಕ್ ರಾಜೀನಾಮೆ ನಂತರ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಅವರ ಸರ್ಕಾರ ಮಂಗಳವಾರ ರಾತ್ರಿ ಪತನದ ಅಂಚಿಗೆ ತಲುಪಿದ್ದು ವಿಶ್ವದಾದ್ಯಂತ ಈ ಬೆಳವಣಿಗೆ ಚರ್ಚೆಯಾಗಿದೆ. ರಿಷಿ ಸುನಕ್ (Rishi Sunak) ಜೊತೆಗೆ ಪಾಕಿಸ್ತಾನ ಮೂಲದ ಸಚಿವ ಸಾಜಿದ್ ಜಾವಿದ್ ಅವರು ರಾಜೀನಾಮೆ (Resigned) ನೀಡಿದ್ದಾರೆ. ಕ್ಯಾಬಿನೆಟ್ನಿಂದ ಅವಿಶ್ವಾಸ ಮತ ಪ್ರದರ್ಶಿಸುವ ಸಂಘಟಿತ ಪ್ರಯತ್ನಗಳು ಕಂಡುಬಂದ ಅರ್ಧ ಗಂಟೆಯೊಳಗೆ ಇವರು ಸರ್ಕಾರಕ್ಕೆ ರಾಜೀನಾಮೆ ನೀಡಿದ್ದಾರೆ.
2.Karnataka Weather Report: ರಾಜ್ಯದಲ್ಲಿ ಇನ್ನೈದು ದಿನ ಮಳೆ; ಈ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ (Rain) ಮುಂದುವರಿಯಲಿದ್ದು, ಕರಾವಳಿ ಪ್ರದೇಶಗಳ (Coastal Area) ಜನರು ಎಚ್ಚರಿಕೆಯಿಂದ ಇರಬೇಕು. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬಿರುಗಾಳಿ ಪ್ರತಿ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಬೀಸಲಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ (BengaluruWeather) ಇಂದು ಮತ್ತು ನಾಳೆ ಮೋಡ ಮುಸುಕಿದ ವಾತಾವರಣ (Cloudy Weather) ಇರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
3.J Manjunath: ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ಜೆ ಮಂಜುನಾಥ್
ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ (Bribe) ಪಡೆದ ಪ್ರಕರಣದಲ್ಲಿ ಬೆಂಗಳೂರು ನಗರದ ಮಾಜಿ ಡಿಸಿ ಮಂಜುನಾಥ್ (IAS Officer Manjunath) ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ (Judicial Custody) ಒಳಪಡಿಸಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ (Parappana Agrahara Jail) ಐಎಎಸ್ ಅಧಿಕಾರಿ ಕ್ವಾರಂಟೈನ್ ಸೆಲ್ (Quarantine Cell) ನಲ್ಲಿ ಸಾಮಾನ್ಯ ವಿಚಾರಣಾಧೀನಯಂತೆ ದಿನ ಕಳೆದಿದ್ದಾರೆ. ಹೌದು ಎಸಿಬಿ ಅಧಿಕಾರಿಗಳಿಂದ (ACB Officers) ಬಂಧಿತರಾಗಿರುವ ಐಎಎಸ್ ಅಧಿಕಾರಿ ಜೆ.ಮಂಜುನಾಥ್ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಸಿಸಿಎಚ್ 24 ರ ವಿಶೇಷ ಎಸಿಬಿ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮಿ ನಾರಾಯಣ ಭಟ್ ಆದೇಶಿಸಿದ್ದಾರೆ.
4. Yash: ರಾಕಿಭಾಯ್ ಯಶ್ ಬಗ್ಗೆ ಸನ್ನಿ ಲಿಯೋನ್ ಹಿಂಗ್ಯಾಕಂದ್ರು? ವಿಡಿಯೋ ಫುಲ್ ವೈರಲ್
ಕೆಜಿಎಫ್ ಸಿನಿಮಾದ ನಂತರ ರಾಕಿಂಗ್ ಸ್ಟಾರ್ ಯಶ್ ಎಲ್ಲೆಡೆ ಹೆಸರು ಗಳಿಸಿದ್ದಾರೆ. ಯಶ್ ಬಗ್ಗೆ ಗೊತ್ತಿಲ್ಲದವರು ಯಾರೂ ಇಲ್ಲ. ಯಶ್ ಎಂದರೆ ಸಾಕು ರಾಕಿಭಾಯ್ ಎನ್ನುತ್ತಾರೆ. ದಕ್ಷಿಣದಿಂದ ಹಿಡಿದು ಉತ್ತರದವರೆಗೆ ಯಶ್ ಹೆಸರು ಕೇಳಿಬರುತ್ತಿದೆ. ರಾಕಿಂಗ್ ಸ್ಟಾರ್ (Rocking Star Yash) ಯಶ್ ಎಂದರೆ ಅಭಿಮಾನಿಗಳಿಗೆ ಬಹಳ ಕ್ರೇಜ್. ಅದರಲ್ಲೂ ಕೆಜಿಎಫ್ 2 (KGF 2) ಸಿನಿಮಾ ಬಿಡುಗಡೆಯಾದ ನಂತರ ಯಶ್ ಹವಾ ಹೆಚ್ಚಾಗಿದೆ. ಇದೀಗ ಬಾಲಿವುಡ್ ತಾರೆ ಒಬ್ಬರು ಯಶ್ ಬಗ್ಗೆ ಮಾಡಿರುವ ಕಾಮೆಂಟ್ ಫುಲ್ ವೈರಲ್ ಆಗಿದೆ.
5. Gold-Silver Price Today: ಮತ್ತೆ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ; ಇಂದಿನ ಬೆಲೆಗಳು ಹೀಗಿವೆ ನೋಡಿ
ನಿನ್ನೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ (Gold Rate) 10 ರೂಪಾಯಿ ಏರಿಕೆಯಾಗಿದ್ದು ರೂ. 4,810 ಕ್ಕೆ ಹೋಗಿ ತಲುಪಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,130 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,050, ರೂ. 48,100, ರೂ. 48,100 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 48,100 ರೂ. ಆಗಿದೆ. ದೆ. ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 647, ರೂ. 6,470 ಹಾಗೂ ರೂ. 64,700 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 64,700 ಆಗಿದ್ದರೆ ದೆಹಲಿಯಲ್ಲಿ ರೂ. 58,900 ಮುಂಬೈನಲ್ಲಿ ರೂ. 58,900 ಹಾಗೂ ಕೊಲ್ಕತ್ತದಲ್ಲೂ ರೂ. 58,900 ಗಳಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ