• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Morning Digest: ಜಮೀರ್ ನಿವಾಸದ ಮೇಲೆ ACB ದಾಳಿ, ಮಳೆ ಅಲರ್ಟ್, ಏರಿಕೆಯಾದ ಚಿನ್ನ; ಬೆಳಗಿನ ಟಾಪ್ ನ್ಯೂಸ್

Morning Digest: ಜಮೀರ್ ನಿವಾಸದ ಮೇಲೆ ACB ದಾಳಿ, ಮಳೆ ಅಲರ್ಟ್, ಏರಿಕೆಯಾದ ಚಿನ್ನ; ಬೆಳಗಿನ ಟಾಪ್ ನ್ಯೂಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.ACB Raid: ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಎಸಿಬಿ ದಾಳಿ


ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಯಲಹಂಕ ಸಬ್ ಡಿವಿಷನ್ ಎಸಿಪಿ ಸೇರಿ ಪೊಲೀಸರಿಂದ ಭದ್ರತೆ ನೀಡಲಾಗಿದೆ. ಬೆಂಗಳೂರಿನ ಬಂಬೂ ಬಜಾರ್ ನಲ್ಲಿರೋ ಮನೆಯ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿಯೇ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಸಮತೋಲನ ಆಸ್ತಿ ಗಳಿಕೆ ಹಿನ್ನೆಲೆ ಸರ್ಚ್ ವಾರೆಂಟ್ ಪಡೆದು ಎಸಿಬಿ ತಂಡ ದಾಳಿ ನಡೆಸಿದೆ. ದಾಳಿ ಹಿನ್ನೆಲೆ ಶಾಸಕರ ನಿವಾಸ, ಕಚೇರಿಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ 5 ಕಡೆ ದಾಳಿ ನಡೆಸಿದ್ದಾರೆ.


2. Koppal Teacher: ವಿಡಿಯೋಗಳನ್ನು ಮಾಡಿದ್ದು ನಾನೇ; ತಪ್ಪೊಪ್ಪಿಕೊಂಡ ಕಾಮುಕ ಶಿಕ್ಷಕ


ಬಂಧಿತನಾಗಿರುವ ಕೊಪ್ಪಳ ಜಿಲ್ಲೆಯ ಕಾರಟಗಿಯ (Karatagi, koppala) ಕಾಮುಕ ಶಿಕ್ಷಕ (Teacher) ಮಹಮ್ಮದ್ ಅಜರುದ್ದೀನ್ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ವಿಡಿಯೋ ವೈರಲ್ (Viral Video) ಬೆನ್ನಲ್ಲೇ ಶಿಕ್ಷಕ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡು ಗೋವಾದಲ್ಲಿ ತಲೆಮರೆಸಿಕೊಂಡಿದ್ದನು. ಸದ್ಯ ಆರೋಪಿ ಶಿಕ್ಷಕ ನ್ಯಾಯಾಂಗ ಬಂಧನದಲ್ಲಿದ್ದಾನೆ (Judicial Cutody). ಗೊರೇಬಾಳ ವಲಯ ಶಿಕ್ಷಣ ಸಂಯೋಜಕರ ವಿಚಾರಣೆಯ ವೇಳೆ ಶಿಕ್ಷಕ ಮಹಮ್ಮದ್ ಅಜರುದ್ದೀನ್ ತಪ್ಪೊಪ್ಪಿಕೊಂಡಿದ್ದಾನೆ. ಮೂರು ವರ್ಷದ ಹಿಂದೆ ನನ್ನ ಮನೆಯಲ್ಲಿ ಮಹಿಳೆಯೊಂದಿಗಿನ ವಿಡಿಯೋ ಮತ್ತು ಪಕ್ಕದ್ಮನೆ ವಿವಾಹಿತೆ ಜೊತೆಗಿನ ವಿಡಿಯೋ ಮಾಡಿಕೊಂಡಿದ್ದೆ ಎಂದು ಹೇಳಿದ್ದಾನೆ.


3.ಹತ್ಯೆಯ ಬಳಿಕ ಕಾರಿನಲ್ಲಿ ಗನ್ ತೋರಿಸುತ್ತಾ ಸಂಭ್ರಮಿಸಿರುವ ಮೂಸೆವಾಲಾ ಹಂತಕರು, ವಿಡಿಯೋ ಬಯಲು


ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ (Sidhu Moose Wala) ಭೀಕರ ಹತ್ಯೆಗೆ ದೇಶವೇ ಬೆಚ್ಚಿಬಿದ್ದಿತ್ತು. ಪ್ರಕರಣದ ತನಿಖೆ ವೇಗವಾಗಿ ಸಾಗುತ್ತಿದೆ. ಇದೀಗ ಪ್ರಕರಣದ ಆರೋಪಿಗಳ (Shooters) ವಿಡಿಯೋ ಬಯಲಾಗಿದೆ. ಸಿಧು ಅವರನ್ನು ಹತ್ಯೆಗೈದ ಶೂಟರ್‌ಗಳು ಕಾರಿನಲ್ಲಿ ಬಂದೂಕು ತೋರಿಸುತ್ತಾ ಸಂಭ್ರಮಾಚರಣೆ (Celebrating In Car) ನಡೆಸುತ್ತಿರುವುದು ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬಂದಿದೆ. ಶೂಟರ್‌ಗಳಲ್ಲಿ ಒಬ್ಬನ ಫೋನ್‌ನಲ್ಲಿ ಈ ವೀಡಿಯೊ ಸಿಕ್ಕಿದೆ ಎನ್ನಲಾಗ್ತಿದೆ. ಹತ್ಯೆ ಬಳಿಕ ಕಾರಿನಲ್ಲಿ ಪರಾರಿಯಾಗುವಾಗ ಆರೋಪಿಗಳು ಹೀಗೆ ಸಂಭ್ರಮಾಚರಣೆ ನಡೆಸಿದ್ದಾರಂತೆ. ಹಂತಕರ ಈ ಸೆಲೆಬ್ರೆಷನ್​ ವಿಡಿಯೋ ಸಿಧು ಅಭಿಮಾನಿಗಳನ್ನು ಕೆರಳಿಸಿದೆ. ವಿಡಿಯೋವನ್ನು ಕಾರಿನಲ್ಲಿ ಚಿತ್ರಿಕರಿಸಲಾಗಿದೆ, ಒಟ್ಟು ಐವರನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.


4.Kaali Poster: ಕೆನಡಾದಲ್ಲಿ ಸಿಗರೇಟ್ ಸೇದುವ ಕಾಳಿಮಾತೆ ಪೋಸ್ಟರ್! ತಕ್ಷಣ ತೆಗೆಯುವಂತೆ ಭಾರತ ಸೂಚನೆ


ಉತ್ತರ ಅಮೆರಿಕಾದ (America) ಟೊರೊಂಟೊದಲ್ಲಿರುವ ಅಗಾ ಖಾನ್ ಮ್ಯೂಸಿಯಂನಿಂದ ಚಲನಚಿತ್ರ ನಿರ್ಮಾಪಕಿ (Film Producer) ಲೀನಾ ಮಣಿಮೇಕಲೈ ಅವರ ಅಭಿನಯದ ಸಾಕ್ಷ್ಯಚಿತ್ರ ‘ಕಾಳಿ’ ಯ ಪೋಸ್ಟರ್ (Kaali Poster) ಅನ್ನು ತೆಗೆದುಹಾಕುವಂತೆ ಭಾರತವು ಕೆನಡಾವನ್ನು ಒತ್ತಾಯಿಸಿದೆ. ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನ್ ಕೆನಡಾ ಸರ್ಕಾರ (Canada Govt) ಮತ್ತು ಮ್ಯೂಸಿಯಂನಲ್ಲಿ ನಡೆಯುತ್ತಿರುವ 'ಅಂಡರ್ ದಿ ಟೆಂಟ್' ಕಾರ್ಯಕ್ರಮದ ಆಯೋಜಕರು ಕಾಳಿ ದೇವಿಯ ವೇಷ ಧರಿಸಿದ ಮಹಿಳೆ ಕಾಮನಬಿಲ್ಲಿನೊಂದಿಗೆ ಸಿಗರೇಟ್ ಸೇದುತ್ತಿರುವಂತೆ ತೋರಿಸುವ ಚಿತ್ರದ ಪೋಸ್ಟರ್ (Poster) ಅನ್ನು ರಿಮೂವ್ ಮಾಡುವಂತೆ ಒತ್ತಾಯಿಸಿದರು.


5.Gold-Silver Price Today: 10 ಗ್ರಾಂ ಚಿನ್ನದ ಮೇಲೆ 1,200 ರೂ. ಏರಿಕೆ; ಈಗ 1 ಗ್ರಾಂ ಬೆಲೆ ಎಷ್ಟಿದೆ ನೋಡಿ


ಜುಲೈ ಒಂದಕ್ಕೆ ಹತ್ತು ಗ್ರಾಂ ಆಭರಣ ಚಿನ್ನದ ಬೆಲೆ (Gold Rate)ಭಾರತದ ಮಾರುಕಟ್ಟೆಯಲ್ಲಿ 1200 ರೂಪಾಯಿಗಷ್ಟು ಏರಿತ್ತು. ಇಂದು ಸಹ ನಿನ್ನೆಯ ಬೆಲೆ ಅಂದರೆ ಒಂದು ಗ್ರಾಂ ಆಭರಣದ ಚಿನ್ನದ ಬೆಲೆ ರೂ. 4,800 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,050 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,100, ರೂ. 48,000, ರೂ. 48,000 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 48,000 ರೂ. ಆಗಿದೆ.

Published by:Mahmadrafik K
First published: