Morning Digest: ಅತ್ತೆ ಮೇಲೆ ಕಣ್ಣಾಕಿದ ಗೆಳೆಯ ಫಿನಿಶ್, ದುಬಾರಿಯಾದ ಚಿನ್ನ, ಇದಪ್ಪಾ ಅದೃಷ್ಟ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿ

ಈವರೆಗಿನ ಪ್ರಮುಖ ಸುದ್ದಿ

  • Share this:
1.Mandya: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ; ಸ್ನೇಹಿತನ ಅತ್ತೆ ಮೇಲೆ ಕಣ್ಣು ಹಾಕಿದ ಗೆಳೆಯನ ಕಥೆ ಫಿನಿಶ್

ಈ ಅಕ್ರಮ ಸಂಬಂಧ (Illicit Relationship) ಅನ್ನೋದೆ ಹಾಗೆ. ಯಾವತ್ತಿದ್ದರೂ ಸಾವನ್ನ ಬೆನ್ನಿಗೆ ಕಟ್ಕೊಂಡ ರೀತಿ. ಇದೇ ರೀತಿ ಮಂಡ್ಯದ ಬೆಳಗೊಳ (Belagola, Mandya) ಗ್ರಾಮದಲ್ಲೊಬ್ಬ ವ್ಯಕ್ತಿ ಅಕ್ರಮ ಸಂಬಂಧಕ್ಕೆ ಬಲಿಯಾಗಿದ್ದಾನೆ. ಆದ್ರೆ ಆತ ಅಕ್ರಮ ಸಂಬಂಧ ಇಟ್ಕೊಂಡಿದ್ದು ಯಾರ ಜೊತೆ, ಆತ ಸತ್ತಿದ್ದಾದ್ರು ಹೇಗೆ ಅನ್ನೋದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಹೌದು ಈ ಘಟನೆ ನಡೆದಿದ್ದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Sriranagapatna) ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ. ರಾತ್ರಿ ಸುಮಾರು 9 ಗಂಟೆ ಸಂದರ್ಭದಲ್ಲಿ ಬೆಳಗೊಳ ಗ್ರಾಮದ ಸವಿತಾ ಬಾರ್ ಮುಂದೆ ಗ್ರಾಮದ 32 ವರ್ಷದ ರವಿ ಎಂಬಾತನನ್ನು ಹತ್ಯೆ (Murder) ಮಾಡಲಾಗಿದೆ. ಬಾರ್ ಮುಂದೆ ರವಿಯನ್ನ ಆತನ ಸ್ನೇಹಿತ ಶರತ್ ಅಲಿಯಾಸ್ ಅಪ್ಪಿ ರಾತ್ರಿ ಸುಮಾರು 9 ಗಂಟೆ ಸಂದರ್ಭದಲ್ಲಿ ಕುತ್ತಿಗೆಯನ್ನ ಸೀಳಿ ನಂತರ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದನು. ಬಳಿಕ ಸ್ಥಳದಲ್ಲೇ ಇದ್ದ ಜನರು ಶರತನನ್ನು ಹಿಡಿಯಲು ಪ್ರಯತ್ನಿಸಿದಾಗ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

2.Woman Luck Shines: ಕಟ್ಟಿಗೆ ಆರಿಸಲು ಕಾಡಿಗೆ ಹೋಗಿದ್ದ ಮಹಿಳೆಯ ಅದೃಷ್ಟ ಖುಲಾಯಿಸಿದ ವಜ್ರ!

ಮಧ್ಯಪ್ರದೇಶದ (Madhya Pradesh) ರತ್ನಗರ್ಭ ನಗರವೆಂದೇ (City) ಖ್ಯಾತಿ ಪಡೆದಿರುವ ಪನ್ನಾ (Panna), ಸಾಕಷ್ಟು ಜನರ ಭವಿಷ್ಯ (Future) ಬದಲಾಯಿಸಿದೆ. ಅದೃಷ್ಟ (Luck) ಖುಲಾಯಿಸಿದ ಹಾಗೂ ಬದುಕು ಬದಲಾವಣೆಯ ಸಾವಿರಾರು ಕಥೆಗಳು ಪನ್ನಾದಲ್ಲಿ ಕೇಳಲು ಸಿಗುತ್ತವೆ. ಅಂತಹುದ್ದೇ ಆದರೆ ಸ್ವಲ್ಪ ಡಿಫರೆಂಟ್ ಆಗಿರುವ ಹಾಗೂ ಮಹಿಳೆಯೊಬ್ಬರ ಅದೃಷ್ಟ ಖುಲಾಯಿಸಿದ ಕಥೆಯೊಂದು ಬೆಳಕಿಗೆ ಬಂದಿದೆ. ಬುಡಕಟ್ಟು ಮಹಿಳೆ ಅರಣ್ಯಕ್ಕೆ ಹೋದಾಗ ಸಿಕ್ಕ ಆ ಒಂದು ಬೆಲೆ ಬಾಳುವ ರತ್ನ ಮಹಿಳೆಯ ಅದೃಷ್ಟ ಖುಲಾಯಿಸಿದೆ.

3.Belagavi: ಒಂದು ಫೋಟೋ, 19 ಲಕ್ಷ; ಸೋಶಿಯಲ್ ಮೀಡಿಯಾ ಬಳಸೋ ಯುವತಿಯರೇ ಎಚ್ಚರ ಇಂಥಹವರು ಇರ್ತಾರೆ

ಸಾಮಾಜಿಕ ಜಾಲತಾಣದಿಂದ (Social Media) ರಾತ್ರೋರಾತ್ರಿ ಫೇಮಸ್ ಆಗಬೇಕು. ಫೇಸ್ ಬುಕ್, ಇನ್ಸ್ಟಾ ಗ್ರಾಮ್ ಗಳಲ್ಲಿ (Facebook And Instagram) ಫೋಟೋ ಹಾಕಿ ಅತೀ ಹೆಚ್ಚು ಲೈಕ್ ಕಮೆಂಟ್ ಬರುತ್ತದೆ ಎಂದು ಯುವತಿಯರು ತಮ್ಮ ಫೋಟೋ ಹಾಕುವುದು ಸುರಕ್ಷಿತವಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪೋಟೊ (Photo) ಅಪ್ಲೋಡ್ ಮಾಡುವ ಯುವತಿಯರೇ ಹುಷಾರ್. ಹೆಚ್ಚು ಲೈಕ್ ಬರುತ್ತವೆ, ಕಮೆಂಟ್ (Like And Comment) ಬರುತ್ತವೆ ಎಂದು ಎಂದು ತಮ್ಮ ಎಲ್ಲ ಫೋಟೋಗಳನ್ನ ಅಪ್ಲೋಡ್ ಮಾಡಿದರೆ ನಿಮ್ಮ ಪೋಟೊಗಳನ್ನೇ ಬಳಸಿಕೊಂಡು ಹಣ ಮಾಡುವ ಖದೀಮನ ಖತರ್ನಾಕ್ ಸ್ಟೋರಿಗೆ ಬೆಳಗಾವಿ ಸಿಇಎನ್ ಪೊಲೀಸರು ಫುಲ್ ಸ್ಟಾಪ್ ಇಟ್ಟಿದ್ದಾರೆ‌.

4.Gold And Silver Price: ನಿನ್ನೆ ಚಿನ್ನ ಖರೀದಿಸೋದು ಮಿಸ್ ಮಾಡ್ಕೊಂಡ್ರಾ? ಇವತ್ತಿನ ದರ ಇಲ್ಲಿದೆ ನೋಡಿ

ನಿನ್ನೆ ಒಂದು ಒಂದು ಗ್ರಾಂ ಚಿನ್ನದ ಬೆಲೆ 4,645 ರೂಪಾಯಿಗೆ ಇಳಿಕೆ ಆಗಿತ್ತು. ಆದರೆ ಇಂದು ಬಂಗಾರದ ಬೆಲೆ ಒಂದು ಗ್ರಾಂಗೆ 4,710 ರೂಪಾಯಿ ಆಗಿದ್ದು, 10 ಗ್ರಾಂ ಬಂಗಾರದ ಮೇಲೆ ಬರೋಬ್ಬರಿ 650 ರೂ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,150 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,670 ರೂ. 47,100, ರೂ. 47,100 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,250 ರೂ. ಆಗಿದೆ. ಬೆಂಗಳೂರಿನಲ್ಲೂ ಬೆಳ್ಳಿ ದರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಏರಿಕೆಯಾಗಿದೆ. ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 612, ರೂ. 6,120 ಹಾಗೂ ರೂ. 61,200 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 61,200 ಆಗಿದ್ದರೆ ದೆಹಲಿಯಲ್ಲಿ ರೂ. 56,500 ಮುಂಬೈನಲ್ಲಿ ರೂ. 56,500 ಹಾಗೂ ಕೊಲ್ಕತ್ತದಲ್ಲೂ ರೂ. 56,500 ಗಳಾಗಿದೆ.

5.Snake Eats Golf Balls: ಕೋಳಿ ಮೊಟ್ಟೆಯೆಂದು ಗಾಲ್ಫ್ ಬಾಲ್ ನುಂಗಿದ ಹಾವು! ಮತ್ತೇನಾಯ್ತು?

ಮಿಡತೆಗೆ (Grasshopper) ಹುಲ್ಲು, ಕಪ್ಪೆಗೆ ಮಿಡತೆ, ಹಾವಿಗೆ ಕಪ್ಪೆ, ಗಿಡುಗನಿಗೆ (Eagle) ಹಾವು ಹೀಗೆ ಆಹಾರ ಸರಪಳಿಯನ್ನು(Food Chain) ಗಮನಿಸಬಹುದು. ಸಾಮಾನ್ಯವಾಗಿ ಕೆಲವು ಹಾವುಗಳು (Snake) ಕೋಳಿಯ ಮೊಟ್ಟೆಯನ್ನು (Chicken Egg) ತನ್ನ ಆಹಾರವನ್ನಾಗಿ ಸೇವಿಸುತ್ತದೆ. ಇದೀಗ ಹಾವಿಗೆ (Snake) ಸಂಬಂಧಿಸಿದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಾವೊಂದು ಕೋಳಿಯ ಮೊಟ್ಟೆಗಳೆಂದು ಭಾವಿಸಿ ಗಾಲ್ಫ್ ಚೆಂಡುಗಳನ್ನು ನುಂಗಿ ಅಪಾಯಕ್ಕೆ ಸಿಲುಕಿದೆ.
Published by:Mahmadrafik K
First published: