1.Accident: ಆಂಧ್ರದಲ್ಲಿ ಕರ್ನಾಟಕ ಪೊಲೀಸರ ವಾಹನ ಅಪಘಾತ; ಶಿವಾಜಿನಗರ ಪಿಎಸ್ಐ, ಕಾನ್ಸ್‌ಟೇಬಲ್ ಸೇರಿ ಮೂವರ ದುರ್ಮರಣ
ಗಾಂಜಾ ಪ್ರಕರಣ (Ganja Case) ಸಂಬಂಧ ಅಪರಾಧಿಗಳನ್ನು ಹಿಡಿಯಲು ಹೋಗಿದ್ದ ಬೆಂಗಳೂರಿನ (Bengaluru) ಶಿವಾಜಿನಗರ ಠಾಣೆ ಪೊಲೀಸರ (Shivajinagar Police Station) ವಾಹನ ಆಂಧ್ರ ಪ್ರದೇಶದ(Andhra Pradesh) ಚಿತ್ತೂರು (Chittoor) ಬಳಿ ಭೀಕರ ಅಪಘಾತಕ್ಕೆ (Accident) ಒಳಗಾಗಿದೆ. ಪರಿಣಾಮ ಶಿವಾಜಿನಗರ ಠಾಣೆ ಪಿಎಸ್ಐ (PSI), ಕಾನ್ಸ್‌ಟೇಬಲ್ (Constable) ಹಾಗೂ ವಾಹನ ಚಾಲಕ (Driver) ಮೃತಪಟ್ಟಿದ್ದಾರೆ. ಗಾಂಜಾ ಕೇಸ್ ಆರೋಪಿಗಳನ್ನು ಬಂಧಿಸಲು ಶಿವಾಜಿನಗರ ಠಾಣೆ ಪೊಲೀಸರು ಖಾಸಗಿ ಇನೋವಾ ಕಾರು ಬಾಡಿಗೆಗೆ ಪಡೆದು, ಓರ್ವ ಪಿಎಸ್ಐ ಸೇರಿ ಆರು ಮಂದಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಚಿತ್ತೂರು ಬಳಿಯ ಪೂತಲಪಟ್ಟು ಮಂಡಲ, ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ಅಪಘಾತವಾಗಿದೆ. ಪರಿಣಾಮ ಮೂವರು ಮೃತಪಟ್ಟಿದ್ದಾರೆ.
2.Accident: ಬರ್ತ್ ಡೇ ಪಾರ್ಟಿಗೆ ಹೋದವರಿಗಾಗಿ ಕಾದಿದ್ದ ಜವರಾಯ! ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು
ಸಂಬಂಧಿಗಳ (Relatives) ಮನೆಯಲ್ಲಿ ಮಗುವಿನ ಹುಟ್ಟ ಹಬ್ಬ (Birthday) ಇತ್ತು. ಹೀಗಾಗಿ ಅವರೆಲ್ಲ ಈ ಹುಟ್ಟು ಹಬ್ಬ ಆಚರಿಸಿದ ನಂತರ ಊಟ ಮಾಡಿ ತಮ್ಮ ಸ್ವಗ್ರಾಮಕ್ಕೆ ಹೊರಟಿದ್ದರು. ಆದರೆ ವಿಧಿ ಅವರನ್ನು ಸೇರಿಸಿದ್ದು ಮಾತ್ರ ಮಸಣಕ್ಕೆ. ಬರ್ತ್ ಡೇ ಮುಗಿಸಿಕೊಂಡು ಸ್ಕಾರ್ಪಿಯೋದಲ್ಲಿ (Scorpio) ಊರಿಗೆ ಹೊರಟಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ 5 ಜನರು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಕೊಪ್ಪಳ (Koppal) ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರದ ಬಳಿ ನಿನ್ನೆ ರಾತ್ರಿ 10.30 ರ ಸುಮಾರಿಗೆ ಭೀಕರ ಅಪಘಾತವೊಂದು (Accident) ಸಂಭವಿಸಿದೆ. ಅಪರಿಚಿತ ವಾಹನವೊಂದು ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಕಾರ್ಪಿಯೋ ದಲ್ಲಿದ್ದ 9 ಜನರ ಪೈಕಿ ಐದು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನುಳಿದ ನಾಲ್ಕು ಜನರು ಗಾಯಾಳು ಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
3.Condom Sale Hike: ಡ್ರಗ್ಸ್ ಅಲ್ಲ ಕಾಂಡೋಮ್ಗೆ ದಾಸರಾದ ಯುವಕರು! ಮಾರಾಟದಲ್ಲಿ ದಿಢೀರ್ ಹೆಚ್ಚಳ
Spike In Condom Sale: ಪಶ್ಚಿಮ ಬಂಗಾಳದಲ್ಲಿ ಯುವಕರು ಮುಗಿಬಿದ್ದು ಕಾಂಡೋಮ್ ಖರೀದಿಸುತ್ತಿದ್ದಾರೆ. ಭಾರೀ ಏರಿಕೆ ಕಂಡಿರುವ ಫ್ಲೇವರ್ಡ್ ಕಾಂಡೋಮ್- ಮಾರಾಟ ಯುವಕರ ಕ್ರೇಜ್ ಆಗಿ ಬದಲಾಗಿದೆ. ಕೊಲ್ಕತ್ತಾ ದುರ್ಗಾಪುರದಲ್ಲಿ ನೆಲೆಸಿರುವ ಬೆರಳೆಣಿಕೆಯ ಯುವಕರು ವಿಚಿತ್ರ ವ್ಯಸನದ ದಾಸರಾಗಿದ್ದಾರೆ. ಎಲ್ಲರಿಗೂ ಆಘಾತ ನೀಡುವಂತೆ, ಕಳೆದ ಕೆಲವು ದಿನಗಳಲ್ಲಿ ದುರ್ಗಾಪುರದ ವಿವಿಧ ಭಾಗಗಳಾದ ದುರ್ಗಾಪುರ ಸಿಟಿ ಸೆಂಟರ್, ಬಿಧಾನನಗರ, ಬೆನಚಿಟಿ ಮತ್ತು ಮುಚಿಪಾರ, ಸಿ ವಲಯ, ಎ ವಲಯಗಳಲ್ಲಿ ಸುವಾಸನೆಯ ಕಾಂಡೋಮ್‌ಗಳ ಮಾರಾಟವು ತೀವ್ರವಾಗಿ ಹೆಚ್ಚಾಗಿದೆ.
4.Akshay Kumar: ನವವಿವಾಹಿತ ಬಾಲಿವುಡ್ ಜೋಡಿಗಳಿಗೆ ಹಿರಿಯಣ್ಣ ಅಕ್ಷಯ್ ಕುಮಾರ್ ನೀಡಿದ ಸಲಹೆಗಳಿವು!
ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ (Karan Johar)ಅವರು ನಡೆಸಿಕೊಡುವಂತಹ ‘ಕಾಫಿ ವಿತ್ ಕರಣ್’ ನ ಸೀಸನ್ 7 ರಲ್ಲಿ (Koffee With Karan Season 7) ಅತಿಥಿಯಾಗಿ ಬಂದಿದ್ದು, ಅನೇಕ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ‘ಕಾಫಿ ವಿತ್ ಕರಣ್’ ಸೀಸನ್ 7 ರಲ್ಲಿ ನಿರ್ಮಾಪಕ ಕರಣ್ ಜೋಹರ್ ಅವರ ಇತ್ತೀಚಿನ ಅತಿಥಿಯಾಗಿದ್ದ ಅಕ್ಷಯ್ ಕುಮಾರ್ ರ್‍ಯಾಪಿಡ್ ಫೈರ್ ಸುತ್ತಿನಲ್ಲಿ ವಿಜಯಶಾಲಿ ಆದರು. ಈ ಶೋ ನಲ್ಲಿ ಅನುಭವಿಯಾಗಿರುವ ಅಕ್ಷಯ್ ಅವರೊಂದಿಗೆ ತೆಲುಗು ನಟಿ ಸಮಂತಾ ರುತ್ ಪ್ರಭು ಕೂಡ ಇದ್ದರು. ಸೂಪರ್-ಮೋಜಿನ ರ್‍ಯಾಪಿಡ್ ಫೈರ್ ಸುತ್ತಿನಲ್ಲಿ, ನಟ ಅಕ್ಷಯ್ ಕುಮಾರ್ ಅವರನ್ನು ನವವಿವಾಹಿತ ಬಾಲಿವುಡ್ ನಟ ಮತ್ತು ನಟಿಯರಿಗೆ ಏನಾದರೂ ಮದುವೆಯ ಸಲಹೆ ನೀಡುವಂತೆ ಕೇಳಲಾಯಿತು.
5.Digital Jyot: ಡಿಜಿಟಲ್ ಜ್ಯೋತಿ ಅಭಿಯಾನ! ದೆಹಲಿ ಪಾರ್ಕ್‌ನಲ್ಲಿ ಬೆಳಗಿದ ಬೀಮ್ ಲೈಟ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಸ್ಥಾಪಿಸಲಾದ ಸ್ಕೈ ಬೀಮ್ ಲೈಟ್‌ಗಳ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಡಿಜಿಟಲ್ ಜ್ಯೋತ್. ಇದು ನಮ್ಮ ಸ್ವಾತಂತ್ರ್ಯ ಹೋರಾಟದ ವೀರರಿಗೆ ಗೌರವವಾಗಿದೆ ಎಂದು ಅವರು ಹೇಳಿದರು. ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ. ನೀವು ಸಲ್ಲಿಸುವ ಪ್ರತಿಯೊಂದು ಶ್ರದ್ಧಾಂಜಲಿಯು ಡಿಜಿಟಲ್ ಜ್ಯೋತ್‌ನ ಪ್ರಕಾಶವನ್ನು ತೀವ್ರಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಈ ಉಪಕ್ರಮವು ಆಜಾದಿ ಕಾ ಅಮೃತ್ ಮಹೋತ್ಸವದ ಒಂದು ಭಾಗವಾಗಿದೆ, ಇದು ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ