• Home
  • »
  • News
  • »
  • state
  • »
  • Morning Digest: ಬಿಬಿಎಂಪಿ ಹೊಸ ರೂಲ್ಸ್, ಆಭರಣ ಪ್ರಿಯರಿಗೆ ಶಾಕ್, 20 ಕೋಟಿ ಸಿಕ್ಕಿದ್ದೆಲ್ಲಿ?; ಬೆಳಗಿನ ಟಾಪ್ ನ್ಯೂಸ್

Morning Digest: ಬಿಬಿಎಂಪಿ ಹೊಸ ರೂಲ್ಸ್, ಆಭರಣ ಪ್ರಿಯರಿಗೆ ಶಾಕ್, 20 ಕೋಟಿ ಸಿಕ್ಕಿದ್ದೆಲ್ಲಿ?; ಬೆಳಗಿನ ಟಾಪ್ ನ್ಯೂಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.BBMP New Rules: ಕಸದ ವಾಹನಗಳಿಗೆ ಪಾಲಿಕೆ ನ್ಯೂ ರೂಲ್ಸ್; ಅಪಘಾತಗಳಾದ್ರೆ ಮಾಲೀಕರೇ ಜವಾಬ್ದಾರರು


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಸದ ವಾಹನಗಳಿಗೆ (Garbage Vans) ಹೊಸ ನಿಯಮಗಳನ್ನು (New Rules) ಪ್ರಕಟಿಸಿದೆ. ಎಲ್ಲಾ ಕಸದ ವಾಹನಗಳಿಗೆ ಈ ನಿಯಮಗಳು ಅನ್ವಯ ಆಗಲಿವೆ. ಇನ್ಮುಂದೆ ಪಾಲಿಕೆ ವ್ಯಾಪ್ತಿಯ ಕಸದ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ (BBMP Name Board) ಹಾಕುವಂತಿಲ್ಲ ಗುತ್ತಿಗೆದಾರರು (Contractor) ಮೂಲಕ ಸರಬರಾಜು ಮಾಡಲಾದ ಎಲ್ಲಾ ವಾಹನಗಳಿಗೂ ಆದೇಶ ಅನ್ವಯಿಸಲಿದೆ. ಒಂದೊಮ್ಮೆ ಸದರಿ ಕಸದ ವಾಹನಗಳಿಂದ ಅಪಘಾತ (Accident) ಸಂಭವಿಸಿ ಸಾವು ನೋವಾದರೆ, ದಂಡದ ರೂಪದಲ್ಲಿ ಆ ವಾಹನ ಮಾಲೀಕರೇ ಪರಿಹಾರ ನೀಡಬೇಕು.


2.Gold and Silver Price: ಶನಿವಾರ ಆಭರಣ ಪ್ರಿಯರಿಗೆ ಶಾಕ್, ಇಂದು ದುಬಾರಿಯಾಯ್ತು ಚಿನ್ನ!


ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (Indian Market) ಚಿನ್ನದ ಬೆಲೆಯಲ್ಲಿ (Gold Price) ಸ್ವಲ್ಪ ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನದ ಬೆಲೆ 440 ರೂ. ಹೆಚ್ಚಳವಾಗಿದೆ. ದೇಶದಲ್ಲಿ ಇಂದು 24 ಕ್ಯಾರೆಟ್‌ನ 10 ಗ್ರಾಂ ಬಂಗಾರದ ಬೆಲೆ 50,620 ರೂಪಾಯಿ ಇದೆ. ಬೆಳ್ಳಿ ಬೆಲೆ ನಿನ್ನೆ 300 ರೂ. ಕುಸಿತವಾಗಿತ್ತು. ಇಂದು ಮತ್ತೆ ಬೆಳ್ಳಿ ದರದಲ್ಲಿ 200 ರೂ. ಕುಸಿತವಾಗಿದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆ 55,400 ರೂಪಾಯಿ ದಾಖಲಾಗಿದೆ.22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ ಇಂದು ಬೆಂಗಳೂರು- 46,450 ರೂಪಾಯಿ ಬೆಲೆ ಇದೆ. ಅದೇ ರೀತಿ ಮಂಗಳೂರು- 46,450 ರೂಪಾಯಿ ಹಾಗೂ ಮೈಸೂರು- 46,450 ರೂಪಾಯಿ ಬೆಲೆ ನಿಗದಿಯಾಗಿದೆ. ಇನ್ನು 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ ಇಂದು 50,670 ರೂಪಾಯಿ ಆಗಿದ್ದರೆ, ಮಂಗಳೂರು- 50.670 ರೂಪಾಯಿ ಹಾಗೂ ಮೈಸೂರು- 50,670 ರೂಪಾಯಿ ಫಿಕ್ಸ್ ಆಗಿದೆ.


3.Bengal SSC Scam: ಟಿಎಂಸಿ ಮುಖಂಡನ ಆಪ್ತನ ಮನೆಯಲ್ಲಿ ಸಿಕ್ಕಿತು 20 ಕೋಟಿ! ಹಣದ ರಾಶಿ ನೋಡಿ ಅಧಿಕಾರಿಗಳೇ ಶಾಕ್


West Bengal SSC Scam: ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಡಬ್ಲ್ಯುಬಿಎಸ್‌ಎಸ್‌ಸಿ) ಮಾಡಿದ ಅಕ್ರಮ ನೇಮಕಾತಿಗಳ ಸಮಯದಲ್ಲಿ ಪಾರ್ಥ ಚಟರ್ಜಿ ಅವರು ರಾಜ್ಯ ಸರ್ಕಾರದ ಶಿಕ್ಷಣ ಸಚಿವರಾಗಿದ್ದರು. ಆಪಾದಿತ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಆವರಣದಲ್ಲಿ ನಡೆದ ದಾಳಿಯಲ್ಲಿ 20 ಕೋಟಿ ರೂಪಾಯಿ ಮೌಲ್ಯದ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ತಿಳಿಸಿದೆ. ಈ ಹಣವು ಎಸ್‌ಎಸ್‌ಸಿ ಹಗರಣಕ್ಕೆ ಸಂಬಂಧಿಸಿದೆ ಎಂದು ಶಂಕಿಸಲಾಗಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.


4. School Students: ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಲು 132 ಕೋಟಿ ಬಿಡುಗಡೆಗೆ ರಾಜ್ಯ ಸರ್ಕಾರ ಒಪ್ಪಿಗೆ


ವಿದ್ಯಾವಿಕಾಸ ಯೋಜನೆಯಡಿಯಲ್ಲಿ ಸರ್ಕಾರಿ (Government) ಶಾಲೆ (School)ಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ (Students) ಉಚಿತ (Free) ಶೂ (shoe) ಮತ್ತು ಸಾಕ್ಸ್ ನೀಡಲಾಗುತ್ತಿತ್ತು. ಆದ್ರೆ ಹಿಂದಿನ ಎರಡು ಶೈಕ್ಷಣಿಕ ವರ್ಷಗಳಲ್ಲಿ ಅಂದ್ರೆ 2020-21 ಮತ್ತು 2021-22 ರಲ್ಲಿ ಸೂ, ಸಾಕ್ಸ್ ವಿತರಿಸಿಲ್ಲ. ಆದ ಕಾರಣ ಸರ್ಕಾರಿ ಶಾಲೆಯಲ್ಲಿ 1 ರಿಂದ 10ನೇ ತರಗತಿಯ 50 ಲಕ್ಷ ಮಕ್ಕಳು ಶೂ, ಸಾಕ್ಸ್ ವಿತರಣೆಯಿಂದ ವಂಚಿತರಾಗಿದ್ದಾರೆ. ಆದ ಕಾರಣ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಒದಗಿಸಲು 132 ಕೋಟಿ ರೂ. ಬಿಡುಗಡೆಗೆ ಅನುಮತಿ ಸಿಕ್ಕಿದೆ.


5.Suriya Birthday: ಡಬಲ್ ಸಂಭ್ರಮದಲ್ಲಿ ನಟ ಸೂರ್ಯ


Happy Birthday Suriya: ಸೌತ್ ಸ್ಟಾರ್ ಸೂರ್ಯ ತಮ್ಮ ನಟನೆ ಮತ್ತು ಡ್ಯಾಶಿಂಗ್ ಲುಕ್‌ನಿಂದ ದೊಡ್ಡ ಅಭಿಮಾನಿಗಳನ್ನು ಗಳಿಸಿದ್ದಾರೆ. 22 ನೇ ವಯಸ್ಸಿನಲ್ಲಿ ಹಾಸ್ಯ-ಥ್ರಿಲ್ಲರ್ ಸಿನಿಮಾ ನೆರುಕ್ಕು ನೇರ್‌ನೊಂದಿಗೆ ಪಾದಾರ್ಪಣೆ ಮಾಡಿದ ನಟ, ನಂದ, ಸಿಂಗಂ, ಅಯಾನ್, ಗಜಿನಿ ಮತ್ತು ಖಕ್ಕ ಖಕ್ಕ ಮುಂತಾದ ಬ್ಲಾಕ್‌ಬಸ್ಟರ್ ಚಲನಚಿತ್ರಗಳಲ್ಲಿ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸೂರ್ಯ ತಮಿಳು ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು, ಆದರೆ ಇದು ಅವರ ನಿಜವಾದ ಹೆಸರು ಅಲ್ಲ. ಹೌದು, ಈ ನಟನ ಮೊದಲ ಹೆಸರು ಸರವಣನ್ ಶಿವಕುಮಾರ್, ಅವರು ಚಿತ್ರರಂಗಕ್ಕೆ ಕಾಲಿಟ್ಟ ನಂತರ ಅದನ್ನು ಬದಲಾಯಿಸಿಕೊಂಡಿದ್ದಾರೆ.

Published by:Mahmadrafik K
First published: