Morning Digest: ಸಿಲಿಂಡರ್ ಬೆಲೆ ಇಳಿಕೆ, ಡಿಸಿ ಸಹಿ ಪೋರ್ಜರಿ ಕೇಸ್, ಚಿನ್ನದ ಬೆಲೆ, ED ಮುಂದೆ ಡಿಕೆಶಿ; ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.LPG Cylinder Prices: ತಿಂಗಳ ಮೊದಲ ದಿನವೇ ಬ್ರೇಕಿಂಗ್ ನ್ಯೂಸ್, ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ

LPG cylinder prices: ತಿಂಗಳ ಮೊದಲ ದಿನವೇ ದೇಶದ ಜನತೆಗೆ ಗುಡ್ ನ್ಯೂಸ್ ಸಿಕ್ಕಿದೆ. ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಿದ್ದು, ಇಳಿಕೆಯಾದ ದರ ಇಂದಿನಿಂದಲೇ ಜಾರಿಗೆ ಬರಲಿದೆ. ತೈಲ ಕಂಪನಿಗಳು ಪ್ರತಿ ತಿಂಗಳ 1 ರಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಂಧನ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಅದೇ ರೀತಿ ಇವತ್ತು ತೈಲ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸಹ ಪರಿಷ್ಕರಿಸಿವೆ. ಬೆಲೆ ಇಳಿಕೆಯಾಗಿದ್ದು, ಜನರ ಜೇಬಿನಲ್ಲಿರುವ ಹಣಕ್ಕೆ ಕೊಂಚ ರಿಲೀಫ್ ಸಿಕ್ಕಿದೆ. ಬೆಲೆ ಇಳಿಕೆ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಇಂದಿನಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 198 ರೂಪಾಯಿ ಇಳಿದಿದೆ. ಪ್ರದೇಶದ ಆಧಾರದ ಮೇಲೆ ಬೆಲೆಯಲ್ಲಿ ಸಣ್ಣ ವ್ಯತ್ಯಾಸಗಳು ಇರಬಹುದು.

2.Sign Forgery Case: ಜಮೀನು ಕಬಳಿಸಲು ಕೋಲಾರ ಡಿಸಿ ಸಹಿ ಪೋರ್ಜರಿ ಕೇಸ್ : ಕಚೇರಿ ಸಿಬ್ಬಂದಿಯೇ ಶಾಮೀಲು

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಸಹಿ ಪೋರ್ಜರಿ ಕೇಸ್ ನಲ್ಲಿ (Sign Forgery Case) , ಕೋಲಾರ ತಹಶೀಲ್ದಾರ್ ಕಚೇರಿಯ (Tahsildar Office) ಸಿಬ್ಬಂದಿಗಳೇ ಭಾಗಿಯಾಗಿರೊದು ಬೆಳಕಿಗೆ ಬಂದಿದೆ, ವಕ್ಕಲೇರಿ ಹೋಬಳಿಯ ರೆವಿನ್ಯು ಇನ್ಸ್ ಪೆಕ್ಟರ್ ಮಂಜುನಾಥ್ ಹಾಗು ತಹಶೀಲ್ದಾರ್ ಕಚೇರಿಯ ಕೇಸ್ ವರ್ಕರ್ ಶೈಲಜಾ ಎನ್ನುವ ಇಬ್ಬರನ್ನ ಕೋಲಾರದ ಗಲ್ ಪೇಟೆ ಪೊಲೀಸರು ಬಂದಿಸಿದ್ದು, ಈ ಪೋರ್ಜರಿ ಕೇಸ್ ನ ಪ್ರಮುಖ ಆರೋಪಿಯಾದ ತಾಲೂಕು ಕಚೇರಿಯ ಶಿರಸ್ತೇದಾರ್ ಶ್ರೀನಿವಾಸ್ ಪರಾರಿಯಾಗಿದ್ದಾರೆ. ಕೋಲಾರ ತಾಲೂಕಿನ ಆಲಹಳ್ಳಿ ಗ್ರಾಮದ ಕೋಟಿ ಕೋಟಿ ಬೆಲೆ ಬಾಳುವ, ಸರ್ವೆ ಸಂಖ್ಯೆ 127 ರಲ್ಲಿನ 3.27 ಎಕರೆಯ, ಲ್ಯಾಂಡ್ ಲಾಕ್ಡ್ ಲ್ಯಾಂಡ್ ಜಮೀನನ್ನ, ಸನ್ ಲಾಡ್ಜ್ ಪ್ರಾಪರ್ಟಿ ಎನ್ನುವ ರಿಯಲ್ ಎಸ್ಟೇಟ್ ಕಂಪನಿಗೆ, ಸರ್ಕಾರಿ ನಿಗದಿತ ದರದಲ್ಲಿಮಾರಾಟ ಮಾಡುವಂತೆ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಸಹಿಯುಳ್ಳ ಪತ್ರವಿರೊ ಪೈಲ್ ತಹಶೀಲ್ದಾರ್ ಕಚೇರಿಯಲ್ಲಿ ಪತ್ತೆಯಾಗಿತ್ತು.

3.DK Shivakumar ED Case: ಇಂದು ಇಡಿ ವಿಚಾರಣೆ, ಖುದ್ದು ಹಾಜರಾಗಲಿದ್ದಾರೆ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President DK Shivakumar) ಅವರು ಅಕ್ರಮವಾಗಿ ಹಣ ಸಂಪಾದನೆ ಮತ್ತು ವರ್ಗಾವಣೆ ನಡೆಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (Enforcement Directorate) ಆರೋಪ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ (Enforcement Directorate Special Court) ಇಂದು ವಿಚಾರಣೆ ನಡೆಯಲಿದೆ. ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಐದು ಜನ ಆರೋಪಿಗಳಿಗೆ ಸಮನ್ಸ್ ನೀಡಲಾಗಿದ್ದು ಎಲ್ಲರೂ ಇಂದಿನ‌ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಹಾಜರಿರಲಿದ್ದಾರೆ.

4.CPM Head Office: ಕೇರಳದಲ್ಲಿ ಸಿಪಿಎಂ ಹೆಡ್ ಆಫೀಸ್​ಗೆ ಬಾಂಬ್! ಹೆಚ್ಚಿದ ಆತಂಕ

ಕೇರಳದ (Kerala) ಆಡಳಿತಾರೂಢ CPI(M)ನ ರಾಜ್ಯ ಪ್ರಧಾನ ಕಛೇರಿ ಎಕೆಜಿ ಸೆಂಟರ್‌ನಲ್ಲಿ (AKG Center) ಗುರುವಾರ ರಾತ್ರಿ 11.30ರ ಸುಮಾರಿಗೆ ಕಚ್ಚಾ ಬಾಂಬ್‌ (Crude Bomb) ಎಸೆಯಲಾಯಿತು. ಪಕ್ಷದ ಕಚೇರಿಯ ಮುಖ್ಯ ಗೇಟ್ ಮುಂದೆ ಬಾಂಬ್ (Bomb) ಸ್ಫೋಟಗೊಂಡಿದೆ. ಘಟನೆಯ ನಂತರ, ಹಲವಾರು ಹಿರಿಯ ಸಿಪಿಐ(ಎಂ) ನಾಯಕರು ರಾಜ್ಯ ಕೇಂದ್ರ ಕಚೇರಿಗೆ ಧಾವಿಸಿದರು. ದಾಳಿಯ ವೇಳೆ ಹಲವು ಸಿಪಿಐ(ಎಂ) ಮುಖಂಡರು ಪಕ್ಷದ ಕಚೇರಿ (Party Office) ಬಳಿಯ ಅಪಾರ್ಟ್‌ಮೆಂಟ್‌ನಲ್ಲಿದ್ದರು (Apartment) ಎಂದು ಮೂಲಗಳು ತಿಳಿಸಿವೆ.

5.Today's Gold-Silver Price: ಸತತ 2ನೇ ದಿನವೂ ಬಂಗಾರದ ಬೆಲೆಯಲ್ಲಿ ಇಳಿಕೆ; ಬೇಗ ಬೇಗ ತಡ ಮಾಡಬೇಡಿ

ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,675 ರೂಪಾಯಿ ಇದ್ದದ್ದು, ಇಂದು ಒಂದು ಗ್ರಾಂ ಚಿನ್ನದ ಬೆಲೆ 4,665 ರೂಪಾಯಿ ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,650 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,700, ರೂ. 47,650, ರೂ. 47,650 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,650 ರೂ. ಆಗಿದೆ. 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 651, ರೂ. 6,510 ಹಾಗೂ ರೂ. 65,100 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 65,100 ಆಗಿದ್ದರೆ ದೆಹಲಿಯಲ್ಲಿ ರೂ. 58,600 ಮುಂಬೈನಲ್ಲಿ ರೂ. 58,600 ಹಾಗೂ ಕೊಲ್ಕತ್ತದಲ್ಲೂ ರೂ. 58,600 ಗಳಾಗಿದೆ.
Published by:Mahmadrafik K
First published: