• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Morning Digest: ಸಂಸತ್ ಮುಂಗಾರು ಅಧಿವೇಶನ, ಮದರಸಾಗಳ ಮೇಲೆ ತಿರಂಗ, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್

Morning Digest: ಸಂಸತ್ ಮುಂಗಾರು ಅಧಿವೇಶನ, ಮದರಸಾಗಳ ಮೇಲೆ ತಿರಂಗ, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Parliament Session: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ; ಮಳೆ ಹೊರಗೆ, ಗುಡುಗು-ಸಿಡಿಲು ಸದನದ ಒಳಗೆ!


ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ (Parliament Monsoon Session) ಆರಂಭವಾಗಲಿದೆ. ಆಗಸ್ಟ್ 12ರವರೆಗೆ ನಡೆಯುವ ಅಧಿವೇಶನದಲ್ಲಿ ಒಟ್ಟು 32 ಮಸೂದೆಗಳ (Bill) ಮಂಡನೆ ಆಗಲಿವೆ. ಆದರೆ ಸಮಯ ಬಹಳ‌ ಕಡಿಮೆ ಇರುವ ಕಾರಣಕ್ಕೆ ಜೊತೆಗೆ ಪ್ರತಿಪಕ್ಷಗಳು (Opposition Parties) ಬೇರೆ ಬೇರೆ ಪ್ರಮುಖ ವಿಷಯಗಳ ಬಗ್ಗೆ ವಿದ್ಯಮಾನಗಳ ಬಗ್ಗೆ ಚರ್ಚೆಗೆ ಅವಕಾಶ ಕೇಳುವುದು, ಅದಕ್ಕೆ ಆಡಳಿತ ಪಕ್ಷ (Ruling Party) ಅವಕಾಶ ನೀಡದೇ ಇರುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಂಸದೀಯ ಅಧಿವೇಶನದಲ್ಲಿ ಪ್ರತಿಪಕ್ಷಗಳು ಹಾಗೂ ಆಡಳಿತ ಪಕ್ಷದ ನಡುವೆ ಘರ್ಷಣೆಯಾಗುವ, ಪ್ರತಿಭಟನೆ, ಹರತಾಳಗಳಿಗೆ ಸಾಕ್ಷಿಯಾಗುವ ಸಂಭವ ಎದ್ದು ಕಾಣುತ್ತಿದೆ.


2.Azadi ka Amrit Mahotsav: ಎಲ್ಲಾ ಮದರಸಾಗಳ ಮೇಲೆ ತ್ರಿವರ್ಣ ಧ್ವಜ ಹಾರಲೇಬೇಕು; ಸರ್ಕಾರದಿಂದ ಖಡಕ್ ಆದೇಶ


ದೇಶಕ್ಕೆ ಸ್ವತಂತ್ರ ಬಂದು 75 ವರ್ಷದ ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಅಮೃತ ಮಹೋತ್ಸವ ಹಿನ್ನೆಲೆ ಹರ್ ಘರ್ ತಿರಂಗಾ ಅಭಿಯಾನ ನಡೆಸಲು ಕೇಂದ್ರ ಸರ್ಕಾರ ಸೂಚಿಸಿದೆ. ರಾಜ್ಯದ ಪದವಿ, ಸ್ನಾತಕೋತ್ತರ ಮತ್ತು ವಿಶ್ವ ವಿದ್ಯಾನಿಲಯಗಳಲ್ಲಿ ಕಡ್ಡಾಯವಾಗಿ ತ್ರಿವರ್ಣ ಧ್ವಜ ಹಾರಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದರ ಜೊತೆಗೆ ಶಿಕ್ಷಣ ಇಲಾಖೆಯೂ ಹೊಸ ಆದೇಶವನ್ನು ಹೊರಡಿಸಿದೆ. ಆಗಸ್ಟ್ 11 ರಿಂದ ಆಗಸ್ಟ್ 17ರವರೆಗೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆದೇ ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢ ಶಾಲೆ, ಪಿಯುಸಿ ಕಾಲೇಜು ಮತ್ತು ಮದರಸಾಗಳ ಮೇಲೆಯೂ ರಾಷ್ಟ್ರಧ್ವಜ ಹಾರಬೇಕು ಎಂದು ಶಿಕ್ಷಣ ಸಚಿವರು ಖಡಕ್ ಸೂಚನೆಯನ್ನು ನೀಡಿದ್ದಾರೆ.


3.Gold and Silver Price: ಅಲ್ಪ ಇಳಿದ ಬಂಗಾರದ ದರ, ಯಥಾ ಸ್ಥಿತಿ ಕಾಯ್ದುಕೊಂಡ ಬೆಳ್ಳಿ! ಇಂದಿನ ಬೆಲೆ ಹೀಗಿದೆ ನೋಡಿ


ನಿನ್ನೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ ಕೇವಲ ಒಂದು ರೂಪಾಯಿ ಇಳಿಕೆಯಾಗಿದ್ದು ರೂ. 4,620 ಇದ್ದದ್ದು ಇಂದು ರೂ. 4,619ಕ್ಕೆ ಇಳಿದಿದೆ. ಇಂದು ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಬೆಳ್ಳಿ ಬೆಲೆ (Silver Price) 55,600 ರೂ. ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,290 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 46,260, ರೂ. 46,190, ರೂ. 46,190 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,190 ರೂ. ಆಗಿದೆ. ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 607, ರೂ. 6,070 ಹಾಗೂ ರೂ. 60,700 ಗಳಾಗಿವೆ.


4.Weird Job: ತಬ್ಬಿಕೊಂಡು ಮುದ್ದು ಮಾಡುವುದೇ ಈತನ ಜಾಬ್! ಗಂಟೆಗೆ 7 ಸಾವಿರ ಸಂಪಾದನೆ


ಈತನಿಗೆ ಗ್ರಾಹಕರನ್ನು ತಬ್ಬಿಕೊಂಡು ಮುದ್ದು (Coddler) ಮಾಡುವುಷ್ಟೇ ಕೆಲಸ. ಗ್ರಾಹಕರನ್ನು ತಬ್ಬಿಕೊಂಡು ಅವರನ್ನು ಖುಷಿ ಪಡಿಸಿ ಈತ ಒಂದು ಗಂಟೆಗೆ ಸಂಪಾದಿಸುವುದು 7 ಸಾವಿರ ರೂಪಾಯಿ. ಜನರು ಸುರಕ್ಷಿತವಾಗಿ ಮತ್ತು ಶಾಂತವಾಗಿರಲು ಸಹಾಯ ಮಾಡುವ ಒಂದು ಗಂಟೆಯ ಅವಧಿಯ ಅಪ್ಪುಗೆಗಾಗಿ 7,000 ರೂಪಾಯಿಗಳನ್ನು ಪಾವತಿಸಲು ಅವರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅವರು ತಮ್ಮ ವ್ಯಾಪಾರದ ಎಂಬ್ರೇಸ್ ಕನೆಕ್ಷನ್ ಮೂಲಕ "ಕಡ್ಲ್ ಥೆರಪಿ" ಅನ್ನು ನೀಡುತ್ತಾರೆ.


5.Selfie Death: ಸೆಲ್ಫಿ ಹುಚ್ಚಾಟ, ನೀರಸಾಗರದಲ್ಲಿ ಕೊಚ್ಚಿ ಹೋದ ಯುವಕ


ಯುವಕನೋರ್ವ ನೀರಸಾಗರದಲ್ಲಿ ಕೊಚ್ಚಿ ಹೋಗಿದ್ದಾನೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೋರ್ವ (Selfie Death) ‌ನೀರು ಪಾಲಾದ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ನೀರಸಾಗರದ ಜಲಾಶಯದಲ್ಲಿ ನಡೆದಿದೆ. ನೀರಿನಲ್ಲಿ ಕೊಚ್ಚಿ ಹೋದ ಯುವಕನನ್ನು 22 ವರ್ಷದ ಕಿರಣ್ ರಜಪೂತ ಎಂದು ಗುರುತಿಸಲಾಗಿದೆ. ಕಿರಣ್ ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ‌ ನಿವಾಸಿಯಾಗಿದ್ದು, ಭಾನುವಾರ ಗೆಳೆಯರೊಡನೆ ಪ್ರವಾಸಕ್ಕೆಂದು ಹೋಗಿದ್ದನು.

First published: