Morning Digest: ಆದೇಶ ಹಿಂಪಡೆದ ಸರ್ಕಾರ, ಹಾರ ಬೇಡ ಅಂದಿದ್ಯಾಕೆ ಸಿದ್ದರಾಮಯ್ಯ, ಚಿನ್ನದ ದರ ಇಳಿಕೆ; ಬೆಳಗಿನ ಟಾಪ್ ನ್ಯೂಸ್

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Siddaramaiah: ಏ ಅದನ್ನ ತರಬೇಡಪ್ಪ, ಅದರಲ್ಲಿ ಹುಳು ಇರುತ್ತೆ: ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ತಮ್ಮ ಗ್ರಾಮಗಳಿಗೆ ಬರಮಾಡಿಕೊಳ್ತಿದ್ದಾರೆ. ಅಭಿಮಾನಿಗಳು (Fans) ಮತ್ತು ಕಾಂಗ್ರೆಸ್ ಕಾರ್ಯಕರ್ತರು (Congress Activist) ಹೂವಿನ ಹಾರ ಹಾಕಿ ಬರಮಾಡಿಕೊಳ್ಳೋದು ಸಾಮನ್ಯ. ಶುಕ್ರವಾರ ಸಿದ್ದರಾಮಯ್ಯನವರು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ (Alamatti, Nidagundi) ಭೇಟಿ ನೀಡಿದ್ದರು. ಸಹಜವಾಗಿ ಹಲವರು ಹೂವಿನ ಹಾರದ (Garland) ಜೊತೆ ಆಗಮಿಸಿದ್ದರು. ಈ ವೇಳೆ ಆ ಹೂವಿನ ಹಾರ ಬೇಡರಪ್ಪ, ಅದರಲ್ಲಿ ಹುಳು ಇರುತ್ತೆ ಎಂದು ಹೇಳಿ ಮೇಜಿನ ಮೇಲೆಯೆ ಇರಿಸಿಕೊಂಡರು. ನಂತರ ಬಂದ ಮಹಿಳೆಗೂ ಹೂವಿನ ಹಾರ ಬೇಡ ಅಮ್ಮ ಎಂದು ಕೈ ಮುಗಿದರು.

2.ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ನಿಷೇಧ ಆದೇಶ ಹಿಂಪಡೆದ ಬೊಮ್ಮಾಯಿ ಸರ್ಕಾರ

ಸರ್ಕಾರಿ ಇಲಾಖೆಗಳ ಕಚೇರಿ (Government Office) ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ (Photo) ತೆಗೆಯಬಾರದು ಮತ್ತು ವಿಡಿಯೋ (Video) ಮಾಡಬಾರದು ಎಂಬ ಆದೇಶವನ್ನು ಬೊಮ್ಮಾಯಿ ಸರ್ಕಾರ (Bommai Government) ತಡರಾತ್ರಿ ಹಿಂಪಡೆದುಕೊಂಡಿದೆ. ಈ ಆದೇಶ ವಿವಾದ ಸ್ವರೂಪ ಪಡೆದ ಬೆನ್ನಲ್ಲೇ ಸರ್ಕಾರ ತನ್ನ ನಿರ್ಧಾರ ಹಿಂಪಡೆದುಕೊಂಡಿದೆ. ಈ ಆದೇಶಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇತ್ತ ವಿಪಕ್ಷಗಳು ಸರ್ಕಾರ ಭ್ರಷ್ಟಾಚಾರದಲ್ಲಿ (Corruption) ಭಾಗಿಯಾಗಿದ್ದು, ಅದನ್ನು ಮರೆ ಮಾಚಲು ಈ ಆದೇಶ ತಂದಿದೆ ಆರೋಪ ಮಾಡಿ ವಾಗ್ದಾಳಿ ನಡೆಸಿದ್ದವು.

3.Free Booster Dose: 75 ದಿನ ಉಚಿತ ಬೂಸ್ಟರ್ ಡೋಸ್ ಅಭಿಯಾನ ಶುರು, ಎಲ್ಲಿ ಸಿಗುತ್ತೆ ಲಸಿಕೆ?

ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸರ್ಕಾರದ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಕೋವಿಡ್ ಬೂಸ್ಟರ್ ಡೋಸ್‌ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಪ್ರಾರಂಭಿಸಿದ 75 ದಿನಗಳ ವಿಶೇಷ ಲಸಿಕೆ ಅಭಿಯಾನದ ಅಡಿಯಲ್ಲಿ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಇಂದಿನಿಂದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಕೋವಿಡ್ ಲಸಿಕೆಯ ಉಚಿತ ಮುನ್ನೆಚ್ಚರಿಕೆ ಡೋಸ್‌ಗಳನ್ನು ಪಡೆಯಲಿದ್ದಾರೆ. ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸರ್ಕಾರದ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಅರ್ಹ ಜನಸಂಖ್ಯೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಡೋಸ್‌ಗಳ ಆಡಳಿತವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

4.Abortion: ಮಹಿಳೆಯರೇ ಎಚ್ಚರ; ಒಪ್ಪಿಗೆಯನ್ನೇ ಪಡೆಯದೆ ಗರ್ಭಪಾತ ಮಾಡಿದ ನಕಲಿ ವೈದ್ಯ

2011 ರಲ್ಲಿ ಗರ್ಭಪಾತಕ್ಕೆ (Abortion) ಒಳಗಾದ ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಆಗ್ರಾದ ನ್ಯಾಯಾಲಯವು (Agra court) ಖಾಸಗಿ ಆಸ್ಪತ್ರೆಯ ಮಾಲೀಕ ಮತ್ತು ನಿರ್ವಾಹಕನನ್ನು ಅಪರಾಧಿ ಎಂದು ಘೋಷಿಸಿ, ಶಿಕ್ಷೆಯ ಪ್ರಮಾಣವನ್ನು ವಿಧಿಸಿದೆ. ಗರ್ಭಪಾತದ ಕಾರ್ಯವಿಧಾನವನ್ನು ನಡೆಸಿದ 55 ವರ್ಷದ ಕುಮಾರ್‌ಪಾಲ್ ಸಿಂಗ್, ವೈದ್ಯಕೀಯ ಗರ್ಭಪಾತ ಕಾಯಿದೆಯಡಿ ಮಹಿಳೆಯ ಒಪ್ಪಿಗೆಯನ್ನು ತೆಗೆದುಕೊಳ್ಳದೆ ಗರ್ಭಪಾತಕ್ಕೆ ಕಾರಣರಾಗಿದ್ದರು.

5.Gold-Silver Price: ಬಂಪರ್ ಸುದ್ದಿ, 1 ಗ್ರಾಂ ಚಿನ್ನದ ಬೆಲೆಯಲ್ಲಿ ಊಹಿದಷ್ಟು ಇಳಿಕೆ: ಒಡವೆ ಖರೀಸೋರಿಗೆ ಲಕ್ಕಿ ಡೇ

ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ (Gold Price) 4,690 ರೂ. ಇದ್ದದ್ದು ಇಂದು ಒಂದು ಗ್ರಾಂ ಚಿನ್ನದ ಬೆಲೆ 4,658 ರೂಪಾಯಿ ಇಂದು ಆಗಿದೆ. 22 ಕ್ಯಾರೆಟ್​ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ (Gold Price) 32 ರೂಪಾಯಿಗಳು ಕಡಿತಗೊಂಡಿದೆ. ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದರೆ 10 ಗ್ರಾಂ ಚಿನ್ನದ ಮೇಲೆ 370 ರೂ. ಕಡಿತಗೊಂಡಿದೆ.
Published by:Mahmadrafik K
First published: