• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Morning Digest: ಕಡಿಮೆ ಆಗ್ತಿಲ್ಲ ವರುಣನ ಆರ್ಭಟ, ಶ್ರೀಲಂಕಾ ಅಧ್ಯಕ್ಷ ಪರಾರಿ, ಇಳಿಕೆಯಾಯ್ತು ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್

Morning Digest: ಕಡಿಮೆ ಆಗ್ತಿಲ್ಲ ವರುಣನ ಆರ್ಭಟ, ಶ್ರೀಲಂಕಾ ಅಧ್ಯಕ್ಷ ಪರಾರಿ, ಇಳಿಕೆಯಾಯ್ತು ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ.

  • Share this:

1.Karnataka Weather Report: ನಿಲ್ಲುತ್ತಿಲ್ಲ ವರುಣನ ಆರ್ಭಟ, ಮುಂದಿನ ಮೂರು ದಿನ ಮಳೆ ಸಾಧ್ಯತೆ


ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ (Rainfall) ಇಂದು ಸಹ ಮುಂದುವರಿಯಲಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಜನತೆ ಹೈರಾಣು ಆಗಿದ್ದಾರೆ. ಇನ್ನು ಬಿತ್ತನೆ ಮಾಡಿರುವ ರೈತರು (Farmers) ಹೀಗೆ ಮಳೆ ಮುಂದುವರಿದ್ರೆ, ಮುಂದೆ ಬೆಳೆಗಳು (Crop) ರೋಗಕ್ಕೆ ತುತ್ತಾಗುವ ಆತಂಕದಲ್ಲಿದ್ದಾರೆ. ಮತ್ತೊಂದು ಕಡೆ ಬಿತ್ತನೆ ಮಾಡಬೇಕಿರುವ ರೈತರು ಮಳೆ ನಿಂತ್ರೆ ಸಾಕು ಅಂತ ಹೇಳುತ್ತಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಜಲಾಶಯಗಳು (Karnataka Dams) ಭರ್ತಿಯಾಗಿವೆ. ಜಲಾಶಯಗಳಿಂದ ನದಿಗೆ (River) ಸಾವಿರಾರು ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿಬಿಡಲಾಗ್ತಿದೆ. ಆದ್ದರಿಂದ ನದಿ ತೀರದ ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.


2.Pampa Sarovara: ಅಂಜನಾದ್ರಿ ಆಯ್ತು, ಈಗ ಪಂಪಾ ಸರೋವರದ ಸರದಿ; ಹೊಸ ವಿವಾದ ಸೃಷ್ಟಿಸಿದ ಗುಜರಾತ ಸರ್ಕಾರ


ಲ್ಲಿಯವರೆಗೂ ಆಂಜನೇಯನ (Lord Anjaneya) ಜನ್ಮ ಸ್ಥಳ ಅಂಜನಾದ್ರಿಯಯ (Anjanadri) ಬಗ್ಗೆ ವಿವಾದವಿತ್ತು. ಮೂರು ರಾಜ್ಯದಲ್ಲಿ ಈ ವಿವಾದವಿರುವಾಗಲೇ ಈಗ ಕಿಷ್ಕಂಧಾ ಪ್ರದೇಶದ (Kishikinda) ಪಂಪಾ ಸರೋವರ ನಮ್ಮಲ್ಲಿದೆ ಎಂಬ ವಿವಾದ ಉಂಟಾಗಿದೆ. ಗುಜರಾತ ಸರಕಾರ (Gujarat Government) ಪ್ರವಾಸೋದ್ಯಮ ಇಲಾಖೆ ವೆಬ್ ಸೈಟ್ ನಲ್ಲಿ ಪಂಪಾ ಸರೋವರ ಬಗ್ಗೆ ಉಲ್ಲೇಖಿಸಿ ಪ್ರಚಾರ ಮಾಡುತ್ತಿದ್ದಾರೆ. ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನದ (Virupakeshwara Temple Hampi) ಪಕ್ಕದ ತುಂಗಭದ್ರಾ ನದಿಯ (Tungabhadra Rivers) ಇನ್ನೊಂದು ದಡ ದಕ್ಷಿಣದಲ್ಲಿರುವ ಪುಣ್ಯ ಕ್ಷೇತ್ರವೇ ಪಂಪಾ ಸರೋವರ (Pampa Sarovara) ಎಂಬ ಪ್ರತೀತಿ ಇದೆ.


3.Sri Lanka Crisis: ಯುದ್ಧ ವಿಮಾನ ಹತ್ತಿ ಮಾಲ್ಡೀವ್ಸ್​ಗೆ ಪರಾರಿಯಾದ ಶ್ರೀಲಂಕಾ ಅಧ್ಯಕ್ಷ


ಶ್ರೀಲಂಕಾದಲ್ಲಿ (Sri Lanka) ಪ್ರತಿಭಟನೆಗಳು (Protest) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಗೊಟಾಬಯ ರಾಜಪಕ್ಸೆ (Gotabaya Rajapakse) ಅವರು ದೇಶಬಿಟ್ಟು ಪರಾರಿಯಾಗಿದ್ದಾರೆ. ಯುದ್ಧ ವಿಮಾನ ಹತ್ತಿದ್ದ ಅಧ್ಯಕ್ಷರು ಮಾಲ್ಡೀವ್ಸ್​ (Maldives) ಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಬುಧವಾರ ದೇಶದಿಂದ ಮಾಲ್ಡೀವ್ಸ್‌ಗೆ ಬಂದಿಳಿದರು. ಗೋಟಬಯ ರಾಜಪಕ್ಸೆ ಅವರು ತಮ್ಮ ಕುಟುಂಬ ದೇಶದಿಂದ ಸುರಕ್ಷಿತವಾಗಿ ನಿರ್ಗಮಿಸುವವರೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಈ ಹಿಂದೆ ಸುಳಿವು ನೀಡಿದ್ದರು. ಅವರ ಸಹೋದರ, ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಕೂಡ ಸೋಮವಾರ ದೇಶದಿಂದ ದುಬೈಗೆ ಪಲಾಯನ ಮಾಡಲು ಪ್ರಯತ್ನಿಸಿದರು. ಆದರೆ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆಯಲಾಗಿತ್ತು.


4.Gold Price: ಇಂದು ಇಳಿಕೆಯಾದ ಚಿನ್ನದ ಬೆಲೆ; ಶೀಘ್ರದಲ್ಲಿಯೇ ಏರಿಕೆಯಾಗಲಿದೆ ಬಂಗಾರದ ದರ


ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,695 ಇದ್ದದ್ದು, ಇಂದೂ ಒಂದು ಗ್ರಾಂ ಚಿನ್ನದ ಬೆಲೆ 4,680 ರೂಪಾಯಿ ಆಗಿದೆ. ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದರೆ 10 ಗ್ರಾಂ ಚಿನ್ನದ ಮೇಲೆ 150 ರೂ ಕಡಿಮೆಯಾಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46.850 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 46,700, ರೂ. 46,800, ರೂ. 46,800 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,700 ರೂ. ಆಗಿದೆ. ಕಳೆದ ತಿಂಗಳಿನಲ್ಲಿ ಅಂದರೆ ಜೂನ್ ಒಂದರಂದು ಬೆಳ್ಳಿಯ ಗರಿಷ್ಠ ಬೆಲೆ ಪ್ರತಿ ಕೆಜಿಗೆ ರೂ. 6,600 ಗೆ ತಲುಪಿತ್ತು ಹಾಗೂ ಜೂನ್ 30 ರಂದು ಕನಿಷ್ಠ ಬೆಲೆ ರೂ. 58,600ಗೆ ಕುಸಿದಿತ್ತು. ಇಂದು ಭಾರತದ ಮಾರುಕಟ್ಟೆಯಲ್ಲಿ ಬೆಳ್ಳಿ ದರ ಒಂದು ಕೆಜಿಗೆ ಬೆಳ್ಳಿ ಬೆಲೆ 62,500 ರೂ. ಆಗಿದೆ.


5.Sai Pallavi: ಸಾಯಿ ಪಲ್ಲವಿ ಡೇರಿಂಗ್ ಸ್ಟೆಪ್, ಯಾರೂ ಊಹಿಸಿರಲಿಲ್ಲ ನ್ಯಾಚುರಲ್​ ಬ್ಯೂಟಿಯ ಈ ನಿರ್ಧಾರ!


ಸಾಯಿ ಪಲ್ಲವಿ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಅಲ್ಲದೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಮೊನ್ನೆಯಷ್ಟೇ ಅವರ ಅಭಿನಯದ ವಿರಾಟ ಪರ್ವಂ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಅವರ ಮತ್ತೊಂದು ಸಿನಿಮಾ ರಿಲೀಸ್​ ಆಗಲು ಸಿದ್ದವಾಗಿದೆ. ಇದರ ನಡುವೆ ಸಾಯಿ ಪಲ್ಲವಿ ಹೇಳಿದ ಒಂದು ವಿಷಯ ಕುತೂಹಲ ಮೂಡಿಸಿದೆ. ಸಾಯಿ ಪಲ್ಲವಿ ವೈವಿಧ್ಯಮಯ ಪಾತ್ರಗಳು ಮತ್ತು ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬೆಳ್ಳಿತೆರೆಯಲ್ಲಿ ತನ್ನ ಅಭಿನಯದಿಂದ ವಿಶೇಷ ಮನ್ನಣೆ ಗಳಿಸಿದ್ದಾರೆ. ಸದ್ಯ ಗಾರ್ಗಿ ಸಿನಿಮಾ ಸಾಯಿ ಪಲ್ಲವಿಯ ಬಹುನಿರೀಕ್ಷಿತ ಸಿನಿಮಾ. ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಸ್ವಲ್ಪ ಹೆಚ್ಚು ಭರವಸೆಯನ್ನು ಈ ಚಿತ್ರದ ಮೇಲೆ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು