Morning Digest: ಚಿನ್ನ - ಬೆಳ್ಳಿ ಬೆಲೆಯಲ್ಲಿ ಏರಿಕೆ- ಅಕ್ಟೋಬರ್ 1 ರವರೆಗೆ ರಾಜ್ಯದಲ್ಲಿ ಭಾರೀ ಮಳೆ, ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1. Indian Railway: ಅಕ್ಟೋಬರ್ 1 ರಿಂದ 21 ರೈಲುಗಳ ಸಮಯ ಬದಲಾವಣೆ- ಇಲ್ಲಿದೆ ಟ್ರೈನ್​ಗಳ ಲಿಸ್ಟ್​ ..

ಭಾರತೀಯ ರೈಲ್ವೆಯು ಅಕ್ಟೋಬರ್ 1 ರಿಂದ ಉತ್ತರ ರೈಲ್ವೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಎರಡು ಡಜನ್‌ಗಿಂತ ಹೆಚ್ಚು ರೈಲುಗಳ ಆಗಮನ ಮತ್ತು ನಿರ್ಗಮನ ಸಮಯವನ್ನು ಬದಲಾಯಿಸಲಾಗಿದೆ. ಪ್ರಯಾಣಿಕರು ತಮ್ಮ ಮನೆಗಳಿಂದ ಹೊರಡುವ ಮುನ್ನ ರೈಲುಗಳ ಸಮಯವನ್ನು ಖಚಿತಪಡಿಸಿಕೊಳ್ಳಬೇಕು. ನಾವು 28 ರೈಲುಗಳ ಆಗಮನ ಮತ್ತು ನಿರ್ಗಮನ ಸಮಯವನ್ನು ಮರು ನಿಗದಿಪಡಿಸಿದ್ದೇವೆ  ಎಂದು ಉತ್ತರ ರೈಲ್ವೇಯ ಹಿರಿಯ ಅಧಿಕಾರಿ ಪಂಕಜ್ ಕುಮಾರ್ ಸಿಂಗ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

2. Karnatka Weather Today: ಕರ್ನಾಟಕ ಸೇರಿದಂತೆ ಈ ರಾಜ್ಯಗಳಲ್ಲಿ ಅಕ್ಟೋಬರ್ 1ರ ವರೆಗೆ ಭಾರೀ ಮಳೆ- ಇಂದಿನ ಹವಾಮಾನ ವರದಿ ಹೀಗಿದೆ..

ಕರ್ನಾಟಕದಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಇನ್ನೂ  2 ದಿನ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಇಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ರಾಮನಗರ, ತುಮಕೂರು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಅಲರ್ಟ್​ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

3. ಏರಿಕೆ ಕಂಡ ಚಿನ್ನ ಬೆಳ್ಳಿ-ಬೆಲೆ- ಬೆಂಗಳೂರಿನಲ್ಲಿ ಚಿನ್ನದ ರೇಟ್ ಹೀಗಿದೆ..

ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಈ ರಾಜ್ಯಗಳಲ್ಲಿ ಅಕ್ಟೋಬರ್ 1ರ ವರೆಗೆ ಭಾರೀ ಮಳೆ- ಇಂದಿನ ಹವಾಮಾನ ವರದಿ ಹೀಗಿದೆ..

Gold Rate on September 28 2021: ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ನಿನ್ನೆ ಸಹ ಚಿನ್ನದ ಬೆಲೆ  ಸ್ಥಿರತೆ ಕಾಯ್ದುಕೊಂಡಿತ್ತು. ಆದರೆ ಇಂದು ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದ್ದು, ಇದು ಆಭರಣ ಪ್ರಿಯರಿಗೆ ಶುಭ ಸುದ್ದಿಯಾಗಿದ್ದು, ಚಿನ್ನ ಖರೀದಿಸಲು ಇದೇ ಸಕಾಲವಾಗಿದೆ. 10 ಗ್ರಾಂ ಚಿನ್ನಕ್ಕೆ 80 ರೂಪಾಯಿ ಏರಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,240 ರೂ. ಇತ್ತು. ಇಂದು 10 ಗ್ರಾಂ ಚಿನ್ನದ ಬೆಲೆ 45,280 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯೂ  ಹೆಚ್ಚಾಗಿದೆ. ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 46,240 ರೂ. ಇತ್ತು. ಇಂದು 46,280 ರೂಪಾಯಿ ಆಗಿದೆ.

4. ರಾಜ್ಯದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಏರಿಳಿತ- ಜಿಲ್ಲಾವಾರು ತೈಲಬೆಲೆಗಳ ಮಾಹಿತಿ ಇಲ್ಲಿದೆ..

ಬೆಂಗಳೂರು (ಸೆಪ್ಟೆಂಬರ್​ 28); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Banglore) ಕಳೆದ ಎರಡು ವಾರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ (Petrol-Diesel Price) ಯಾವುದೇ ಬದಲಾವಣೆ ಆಗಿರಲಿಲ್ಲ. ಆದರೆ ಇಂದು ಸ್ವಲ್ಪ ಏರಿಳಿತ ಕಂಡಿದೆ. ಹಾಗೆಯೇ  ತೆರಿಗೆಯಲ್ಲಿನ ವ್ಯತ್ಯಾಸ ಮತ್ತು ಇನ್ನಿತರೆ ಕಾರಣಗಳಿಂದಾಗಿ ರಾಜ್ಯ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಅಲ್ಪ ಬದಲಾವಣೆ ಉಂಟಾಗಿದೆ. ಬೆಂಗಳೂರಿನಲ್ಲಿ ಒಂದು ಲಿಟರ್​ ಪೆಟ್ರೋಲ್ ಅನ್ನು 104.92 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ 95.06 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ಧೀಡಿರ್ ಬೆಲೆ ಕುಸಿತದಿಂದ ಸಂಕಷ್ಟ ಸಿಲುಕಿದ ಸೋಯಾಬಿನ್ ಬೆಳೆಗಾರರು; ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಕೈವಾಡ ಶಂಕೆ!

4. ಈಗಲ್ಟನ್ ವಿಲೇಜ್  ಮೇಲೆ ಸಿಸಿಬಿ ದಾಳಿ- 4 ಆರೋಪಿಗಳ ಬಂಧನ

ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಲ್ಟನ್ ವಿಲೇಜ್  ಮೇಲೆ ಸಿಸಿಬಿ ದಾಳಿ ಮಾಡಿದ್ದು,  ಪ್ರಕರಣ ಸಂಬಂಧ ಇಬ್ಬರು ಇರಾನಿ ವಿದೇಶಿ ಪ್ರಜೆ ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.  ಸ್ಟೂಡೆಂಟ್ ವೀಸಾದಡಿ ಭಾರತಕ್ಕೆ ಬಂದಿದ್ದ ಇಬ್ಬರು ಇರಾನ್ ದೇಶಿ ಪ್ರಜೆಗಳು, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನಗರದಲ್ಲಿ ಆರೋಪಿಗಳು ವಾಸವಿದ್ದರು.  ಡಾರ್ಕ್ ವೆಬ್ ಸೈಟ್ ನಲ್ಲಿ ಹೈಡ್ರೋ ಗಾಂಜಾ ಬೀಜಗಳನ್ನ ತರಿಸಿಕೊಂಡು  ಈಗಲ್ಟನ್ ವಿಲೇಜ್ ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಪ್ಲಾಂಟ್ಸ್ ತಯಾರಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಈ ಸಂಬಂಧ ಸೆಪ್ಟೆಂಬರ್ 26 ರಂದು ಡಿಜೆಹಳ್ಳಿಯ ಕಾವೇರಿನಗರದಲ್ಲಿ ದಾಳಿ  ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರೂ , ಆ ದಾಳಿಯಲ್ಲಿ ಬಂಧಿತರಾಗಿದ್ದ ಆರೋಪಿಗಳ  ಮಾಹಿತಿ ಮೇರೆಗೆ ನಿನ್ನೆ ಬಿಡದಿಯ ಈಗಲ್ಟನ್ ವಿಲೇಜ್ ವಿಲ್ಲಾ ಮೇಲೆ ಸಿಸಿಬಿ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 130 ಹೈಡ್ರೋ ಗಾಂಜಾ ಗಿಡಗಳು, ಯುವಿ ಲೈಟ್ಸ್, ಎಲ್.ಇ.ಡಿ ಲ್ಯಾಂಪ್ಸ್,  ಎಲೆಕ್ಟ್ರಿಕಲ್ ವೆಯ್ಟಿಂಗ್ ಮಷಿನ್, 1 ಕೋಟಿ ಬೆಲೆಯ 12 ಕೆಜಿ 850 ಗ್ರಾಂ ತೂಕದ ಹೈಡ್ರೋ ಗಾಂಜಾ, ಒಂದು ಸ್ಕೋಡಾ ಕಾರು, 4 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
Published by:Sandhya M
First published: