Morning Digest: ನಿನ್ನೆಯ ಕೆಲ ಪ್ರಮುಖ ವಿಚಾರಗಳು, ಇಂದು ಗಮನಿಸಲೇಬೇಕಾದ ಸುದ್ದಿಗಳು

ನಿನ್ನೆ ಸಂಜೆಯ ಮೇಲೆ ನಡೆದ ಬೆಳವಣಿಗೆಗಳು, ಇಂದು ಗಮನ ಹರಿಸಲೇಬೇಕಾದ ಸುದ್ದಿಗಳು. ಅವುಗಳ ಬಗ್ಗೆ ಚಿಕ್ಕದಾಗಿ ಬರೆದು ನಿಮ್ಮ ಮುಂದಿಡುತ್ತಿದ್ದೇವೆ. ಒಮ್ಮೆ ಗಮನ ಹರಿಸಿ.

news18
Updated:March 22, 2019, 11:13 AM IST
Morning Digest: ನಿನ್ನೆಯ ಕೆಲ ಪ್ರಮುಖ ವಿಚಾರಗಳು, ಇಂದು ಗಮನಿಸಲೇಬೇಕಾದ ಸುದ್ದಿಗಳು
ಸಾಂದರ್ಭಿಕ ಚಿತ್ರ
news18
Updated: March 22, 2019, 11:13 AM IST
ಇಂದು ಗಮನಿಸಲೇಬೇಕಾದ ಸುದ್ದಿಗಳು:

ನಾಮಪತ್ರ ಸಲ್ಲಿಕೆ:

ಪ್ರಜ್ವಲ್​ ರೇವಣ್ಣ ಅವರು ಇಂದು ಲೋಕಸಭಾ ಚುನಾವಣೆಗೆ ಹಾಸನದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅವರಿಗೆ ಸ್ಪರ್ಧಿಯಾಗಿ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ಎ. ಮಂಜು ಇದ್ದಾರೆ. ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ರೇವಣ್ಣ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರಕಾಶ್​ ರಾಜ್​ ಬೆಂಗಳೂರು ಕೇಂದ್ರದಿಂದ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಬಿಜೆಪಿ ಸೇರಲಿದ್ದಾರೆ ಕಾಂಗ್ರೆಸ್​ ಹಿರಿಯ ನಾಯಕ ಎ.ಬಿ.ಮಾಲಕರೆಡ್ಡಿ:

ನಿರೀಕ್ಷೆಯಂತೆ ಕಾಂಗ್ರೆಸ್​ ಹಿರಿಯ ಮುಖಂಡ, ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿ ಕಾಂಗ್ರೆಸ್​ ತೊರೆದಿದ್ದಾರೆ. ಇಂದು ಅವರು ಬಿಜೆಪಿ ಸೇರಲಿದ್ದಾರೆ.  ಕಾಂಗ್ರೆಸ್​ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರಿಗೆ ಮಾಲಕರೆಡ್ಡಿ ಪತ್ರ ಬರೆದಿದ್ದಾರೆ. ಇಂದು ಅಧಿಕೃತವಾಗಿ ಬಿ.ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ನಿನ್ನೆ ಸಂಜೆಯಮೇಲೆ ಏನೆಲ್ಲ ಆಯ್ತು?:ಬಿಜೆಪಿ ಮೊದಲ ಪಟ್ಟಿ ಬಿಡುಗಡೆ: ಕರ್ನಾಟಕದ 21 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟ:


ಲೋಕಸಭೆ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಪ್ರಕಟವಾಗಿದೆ. ದೇಶಾದ್ಯಂತ 184 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಪ್ರಕಟಿಸಿದೆ. ಇದರಲ್ಲಿ ಕರ್ನಾಟಕದ 20 ಕ್ಷೇತ್ರಗಳೂ ಒಳಗೊಂಡಿವೆ. ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಇನ್ನೂ ಅಂಗೀಕಾರ ಪಡೆದ ಉಮೇಶ್ ಜಾಧವ್ ಅವರ ಹೆಸರನ್ನೂ ಈ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ. ದೆಹಲಿಯಲ್ಲಿ ಇವತ್ತು ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಈ ಪಟ್ಟಿ ಪ್ರಕಟಿಸಿದರು. ರಾಜ್ಯದ 28 ಕ್ಷೇತ್ರಗಳ ಪೈಕಿ ಇನ್ನೂ 7 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ.

ಆಡ್ವಾಣಿ ಜಾಗಕ್ಕೆ ಅಮಿತ್ ಶಾ; ಒಂದೇ ಕ್ಷೇತ್ರದಲ್ಲಿ ಮೋದಿ:

ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಇವತ್ತು ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, 184 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕದ 21 ಕ್ಷೇತ್ರಗಳೂ ಒಳಗೊಂಡಿವೆ. ಬಹುತೇಕ ಕೇಂದ್ರ ಸಚಿವರು ಮತ್ತೊಮ್ಮೆ ಟಿಕೆಟ್ ಗಿಟ್ಟಿಸಿದ್ದಾರೆ. ನರೇಂದ್ರ ಮೋದಿ, ಸ್ಮೃತಿ ಇರಾನಿ, ವಿ.ಕೆ. ಸಿಂಗ್, ರಾಜನಾಥ್ ಸಿಂಗ್, ರಾಜ್ಯವರ್ಧನ್ ಮೊದಲಾದವರು ತಮ್ಮ ಕ್ಷೇತ್ರಗಳಲ್ಲೇ ಮುಂದುವರಿಯಲಿದ್ದಾರೆ. ಆದರೆ, ಬಿಜೆಪಿಯ ಈ ಪಟ್ಟಿಯಲ್ಲಿ ಅತೀ ಹೆಚ್ಚು ಗಮನ ಸೆಳೆದದ್ದು ಗಾಂಧಿನಗರ ಕ್ಷೇತ್ರ. ಸತತವಾಗಿ ಐದು ಬಾರಿ ಜಯಿಸಿದ್ದ ಲಾಲಕೃಷ್ಣ ಆಡ್ವಾಣಿ ಅವರ ಹೆಸರು ಈ ಬಾರಿ ಗಾಂಧಿನಗರ ಕ್ಷೇತ್ರಕ್ಕಿಲ್ಲವಾಗಿದೆ. ಅಮಿತ್ ಶಾ ಅವರು ಗಾಂಧಿನಗರದಿಂದ ಕಣಕ್ಕಿಳಿಯಲಿದ್ದಾರೆ. 91 ವರ್ಷ ವಯಸ್ಸಿನ ಆಡ್ವಾಣಿ ಇದೇ ವಯಸ್ಸಿನ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲದಿರುವ ಸಾಧ್ಯತೆ ಇದೆ. ಅಥವಾ ಅದೇ ವಯಸ್ಸಿನ ಕಾರಣಕ್ಕೆ ಬಿಜೆಪಿಯು ಆಡ್ವಾಣಿಗೆ ಟಿಕೆಟ್ ನಿರಾಕರಿಸಿರುವ ಸಾಧ್ಯತೆಯೂ ಇದೆ.

ಮುನಿಯಪ್ಪ ಹೇಳಿಕೆಗೆ ರಮೇಶ್​ಕುಮಾರ್ ವ್ಯಂಗ್ಯ:

ಸ್ಪೀಕರ್​ ರಮೇಶ್​ಕುಮಾರ್ ಮತ್ತು ಸಂಸದ ಕೆ.ಎಚ್​.ಮುನಿಯಪ್ಪ ನಡುವಿನ ಮುನಿಸು ಸದ್ಯಕ್ಕೆ ಶಮನವಾಗುವಂತೆ ಕಾಣುತ್ತಿಲ್ಲ. ಏಳು ಬಾರಿ ಗೆದ್ದಿರುವ ಮುನಿಯಪ್ಪಗೆ ಟಿಕೆಟ್ ನೀಡಬಾರದು ಎಂದು ರಮೇಶ್​ಕುಮಾರ್ ಹೈಕಮಾಂಡ್​ ಕದ ತಟ್ಟಿಬಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೆ.ಎಚ್.ಮುನಿಯಪ್ಪ, ನಮ್ಮದು ಗಂಡ-ಹೆಂಡತಿ ಸಂಬಂಧ ಎಂದು ಹೇಳಿಕೆ ನೀಡಿದ್ದರು.

ತಾನು ಯಾರ ಪರ ಎಂಬುದರ ಸುಳಿವು ನೀಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ: 


ಅಂಬರೀಶ್ ಅವರ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರನ್ನು ಚುನಾವಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡುವುದು ಬೇಡ ಎಂದು ನುಣುಚಿಕೊಂಡ ಧ್ರುವ ಸರ್ಜಾ, ತಾನು ಯಾರ ಪರವಾಗಿ ನಿಲ್ಲುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

First published:March 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ