Morning Digest: ನಿನ್ನೆ ಸಂಜೆಯ ಮೇಲೆ ನಡೆದ ಬೆಳವಣಿಗೆ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ನಿನ್ನೆ ಸಂಜೆಯ ಮೇಲೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆದವು ಎನ್ನುವ ಬಗ್ಗೆ ಸಂಕ್ಷಿಪ್ತವಾಗಿ ನಾವು ಮಾಹಿತಿ ನೀಡುತ್ತಿದ್ದೇವೆ.

Rajesh Duggumane | news18
Updated:March 16, 2019, 8:04 AM IST
Morning Digest: ನಿನ್ನೆ ಸಂಜೆಯ ಮೇಲೆ ನಡೆದ ಬೆಳವಣಿಗೆ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ
ಸಾಂದರ್ಭಿಕ ಚಿತ್ರ
Rajesh Duggumane | news18
Updated: March 16, 2019, 8:04 AM IST
ನ್ಯೂಜಿಲೆಂಡ್ ಶೂಟೌಟ್​ ಪ್ರಕರಣ: ಭಾರತೀಯ ಮೂಲದ 9ಕ್ಕೂ ಹೆಚ್ಚು ವ್ಯಕ್ತಿಗಳು ಕಾಣೆ:

ನ್ಯೂಜಿಲೆಂಡ್​ನ ಕ್ರೈಸ್ಟ್​ಚರ್ಚ್​ನಲ್ಲಿರುವ ಎರಡು ಮಸೀದಿಗಳ ಮೇಲೆ ಇವತ್ತು ನಡೆದ ಉಗ್ರರ ದಾಳಿ ಘಟನೆಯಲ್ಲಿ 49 ಜನರು ಬಲಿಯಾಗಿ, 20 ಮಂದಿಗೆ ಗಾಯಗಳಾಗಿದ್ದವು. ಇನ್ನೂ ಬಹಳಷ್ಟು ಮಂದಿ ಈ ಘಟನೆಯ ನಂತರ ಕಾಣೆಯಾಗಿದ್ದು ಸುಳಿವೇ ಸಿಕ್ಕಿಲ್ಲ. ಇವರ ಪೈಕಿ ಭಾರತೀಯ ಮೂಲದವರಾದ 9ಕ್ಕೂ ಹೆಚ್ಚು ಜನರೂ ನಾಪತ್ತೆಯಾಗಿರುವ ವಿಚಾರ ತಿಳಿದುಬಂದಿದೆ. ನ್ಯೂಜಿಲೆಂಡ್​ನಲ್ಲಿ ಭಾರತದ ರಾಯಭಾರಿಯಾಗಿರುವ ಸಂಜೀವ್ ಕೊಹ್ಲಿ ಅವರೇ ಈ ಕುರಿತು ಟ್ವೀಟ್ ಮಾಡಿ, ಭಾರತೀಯ ಮೂಲದವರು ನಾಪತ್ತೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ಆದರೆ, ಎಷ್ಟು ಮಂದಿ ಭಾರತೀಯರು ಕಾಣೆಯಾಗಿದ್ದಾರೆಂಬ ನಿಖರ ಸಂಖ್ಯೆ ಸಿಕ್ಕಿಲ್ಲ.

ಕಾಂಗ್ರೆಸ್​ಗೆ ಜೆಡಿಎಸ್ ಮುಖಂಡನ ಎಚ್ಚರಿಕೆ:


ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಯಾಗಿ ಸರಕಾರ ನಡೆಸುತ್ತಿದ್ದರೂ ಸ್ಥಳೀಯ ಮಟ್ಟದಲ್ಲಿ ಎರಡೂ ಬದ್ಧವೈರಿಗಳಂತೆಯೇ ವರ್ತಿಸುತ್ತಿವೆ. ಮಂಡ್ಯದಲ್ಲಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್ಗೆ ಇದು ಬಹಳ ದೊಡ್ಡ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇದೇ ವಿಚಾರವಾಗಿ ಪ್ರವಾಸೋದ್ಯಮ ಸಚಿವ ಹಾಗೂ ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್ ಕೈ ಕೊಟ್ಟರೆ ಮೈಸೂರಿನಲ್ಲಿ ಜೆಡಿಎಸ್ ಕೂಡ ಕೈ ಕೊಡುತ್ತದೆ ಎಂದು ಸಾ.ರಾ. ಮಹೇಶ್ ಸವಾಲು ಹಾಕಿದ್ದಾರೆ. ಕೆ.ಆರ್. ನಗರದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಸಾ.ರಾ. ಮಹೇಶ್, ಮಂಡ್ಯದಲ್ಲಿ ನೀವು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತೀರೋ ಅದು ಮೈಸೂರಿನಲ್ಲೂ ಪ್ರತಿಧ್ವನಿಸಲಿದೆ. ಮಂಡ್ಯದಲ್ಲಿ ನೀವು ಒಮ್ಮೆ ತಬ್ಬಿಕೊಂಡರೆ ಮೈಸೂರಿನಲ್ಲಿ ನಿಮ್ಮನ್ನು ನಾವು ಐದು ಬಾರಿ ತಬ್ಬಿಕೊಳ್ಳುತ್ತೇವೆ. ಇದು ಈ ಚುನಾವಣೆಯಿಂದಲೇ ಪ್ರಾರಂಭವಾಗಬೇಕು ಎಂದು ಹೇಳಿದ್ದಾರೆ.

ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸಿ; ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಒತ್ತಡ:
Loading...



ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್​ ನಾಯಕರು ಆಹ್ವಾನ ನೀಡಿದ್ದಾರೆ. "ಕರ್ನಾಟಕ ಯಾವಾಗಲು ಕಾಂಗ್ರೆಸ್​ ನಾಯಕರಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಾ ಬಂದಿದೆ. ಅದು ಶ್ರೀಮತಿ ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಪ್ರಕರಣದಲ್ಲಿ ಸಾಬೀತಾಗಿದೆ. ನಮ್ಮ ಮುಂದಿನ ಪ್ರಧಾನಿ ರಾಹುಲ್​ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡಬೇಕು ಎಂಬುದು ನಮ್ಮೆಲ್ಲರ ಬಯಕೆ," ಎಂದು ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

ಸುಮಲತಾ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ:

ರೈತರ ಪರ ಕಾಳಜಿ ವ್ಯಕ್ತಪಡಿಸಿರುವ ಸುಮಲತಾ ಅಂಬರೀಷ್ ಅವರಿಗೆ ಹೆಚ್​ಡಿಕೆ ತಿರುಗೇಟು ನೀಡಿದ್ದಾರೆ. ರೈತರನ್ನು ಉದ್ದಾರ ಮಾಡಲು ಸುಮಲತಾ ಅವರು ನೀಡುವ ಸಲಹೆಗಳಿಗೆ ಕಾತರದಿಂದ ಕಾಯುತ್ತಿರುವುದಾಗಿ ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ. “ಗೌರವಾನ್ವಿತ ಸುಮಲತಾ ಅವರೇ, ನಿಮ್ಮ ರೈತರಪರ ಮಾತು ಓದಿ ಇನ್ನಿಲ್ಲದಷ್ಟು ಸಂತೋಷವಾಯಿತು. ನನಗಾಗಲೀ ನನ್ನ ತಂದೆಯವರಿಗಾಗಲೀ ರೈತರ ಬಗ್ಗೆ ಏನೇನೂ ಗೊತ್ತಿಲ್ಲ” ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ-ರೇವಣ್ಣ ಭೇಟಿ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಹೆಎಚ್​.ಡಿ. ರೇವಣ್ಣ ನಿನ್ನೆ ತಡರಾತ್ರಿ ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. "ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ. ಅವರು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ.‌ಸೌಜನ್ಯದ ಭೇಟಿ ಅಷ್ಟೇ," ಎಂದು ರೇವಣ್ಣ ಹೇಳಿದ್ದಾರೆ.

First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626