Morning Digest: ನಿನ್ನೆಯ ಕೆಲ ಪ್ರಮುಖ ವಿಚಾರಗಳು, ಇಂದು ಗಮನಿಸಲೇಬೇಕಾದ ಸುದ್ದಿಗಳು

ನಿನ್ನೆ ಸಂಜೆಯ ಮೇಲೆ ನಡೆದ ಬೆಳವಣಿಗೆಗಳು, ಇಂದು ಗಮನ ಹರಿಸಲೇಬೇಕಾದ ಸುದ್ದಿಗಳು. ಅವುಗಳ ಬಗ್ಗೆ ಚಿಕ್ಕದಾಗಿ ಬರೆದು ನಿಮ್ಮ ಮುಂದಿಡುತ್ತಿದ್ದೇವೆ.

Rajesh Duggumane | news18
Updated:March 15, 2019, 8:01 AM IST
Morning Digest: ನಿನ್ನೆಯ ಕೆಲ ಪ್ರಮುಖ ವಿಚಾರಗಳು, ಇಂದು ಗಮನಿಸಲೇಬೇಕಾದ ಸುದ್ದಿಗಳು
ಸಾಂದರ್ಭಿಕ ಚಿತ್ರ
Rajesh Duggumane | news18
Updated: March 15, 2019, 8:01 AM IST
ಕೂಡಲಸಂಗಮಕ್ಕೆ ಮಾತೆ ಮಹಾದೇವಿ ಪಾರ್ಥೀವ ಶರೀರ: ಗುರುವಾರ ಲಿಂಗೈಕ್ಯರಾಗಿರುವ ಮಾತೆ ಮಹಾದೇವಿ ಅವರ ಪಾರ್ಥಿವ ಶರೀರವನ್ನು ಇಂದು ಕೂಡಲಸಂಗಮಕ್ಕೆ ಕೊಂಡೊಯ್ಯಲಾಗುತ್ತದೆ. 10 ಗಂಟೆ ಬಳಿಕ ಬೆಂಗಳೂರಿನಿಂದ ಹೊರಟು ಹಿರಿಯೂರು, ಚಳ್ಳಕೆರೆ, ನಾಯಕನಹಟ್ಟಿ, ಚಿತ್ರದುರ್ಗ ಮಾರ್ಗವಾಗಿ ಕೂಡಲಸಂಗಮಕ್ಕೆ ಪಾರ್ಥೀವ ಶರೀರ ತೆಗೆದುಕೊಂಡು ಹೋಗಲಾಗುತ್ತದೆ. ಮೊದಲು ಚಿತ್ರದುರ್ಗದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಕೂಡಲ ಸಂಗಮ ಕ್ಷೇತ್ರದ ಬಸವ ಮಹಾಮನೆಯಲ್ಲಿ ಮಾತೇ ಮಹಾದೇವಿ ಅಂತ್ಯಕ್ರಿಯೆ ನೆರವೇರಲಿದೆ.

ಮುಂಬೈನಲ್ಲಿ ಮೇಲ್ಸೇತುವೆ ಕುಸಿತ: 5 ಸಾವು, 36 ಮಂದಿಗೆ ಗಾಯ

ಮಹಾರಾಷ್ಟ್ರದ ರಾಜಧಾನಿಯ ರೈಲ್ವೆ ನಿಲ್ದಾಣದ ಕಾಲ್ಸೇತುವೆಯ ಭಾಗವೊಂದು ಕುಸಿದ ಘಟನೆ ಸಂಭವಿಸಿದೆ. ಈ ದುರಂತದಲ್ಲಿ 5ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 34ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ವರದಿ ಬಂದಿದೆ. ಮುಂಬೈನ ಮುಖ್ಯ ರೈಲ್ವೆ ನಿಲ್ದಾಣವಾದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್​ಎಂಟಿ)ಯಲ್ಲಿ ಈ ದುರ್ಘಟನೆ ನಡೆದಿದೆ. ಆಜಾದ್ ಮೈದಾನ್ ಪೊಲೀಸ್ ಠಾಣೆ ಹಾಗೂ ರೈಲ್ವೆ ನಿಲ್ದಾಣವನ್ನು ಈ ಮೇಲ್ಸೇತುವೆ ಸಂಪರ್ಕಿಸುತ್ತದೆ.

ಹಾಸನದಿಂದ ದೇವೇಗೌಡರೇ ಸ್ಪರ್ಧಿಸಲಿ- ಎ. ಮಂಜು ಒತ್ತಾಯ 

ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ತಮ್ಮ ಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್​ ರೇವಣ್ಣ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಪ್ರಜ್ವಲ್​ ಹಾಸನದಿಂದ ಲೋಕಸಭೆ ಚುನಾವಣೆ ಎದುರಿಸುವ ಬಗ್ಗೆ ಬುಧವಾರ ದೇವೇಗೌಡರೇ ಅಧಿಕೃತವಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಹಾಸನ ಮಾಜಿ ಕಾಂಗ್ರೆಸ್​ ಶಾಸಕ ಎ. ಮಂಜು ಕಾರ್ಯಕರ್ತರ ಜತೆ ಸಭೆ ನಡೆಸಿದರು. ಸಭೆಯ ನಂತರ ಮಾತನಾಡಿದ ಮಂಜು, ದೇವೇಗೌಡರೇ ಹಾಸನದಿಂದ ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡಿದರು. ಜತೆಗೆ ದೇವೇಗೌಡರು ಸ್ಪರ್ಧಿಸದಿದ್ದರೆ, 1999ರ ಚುನಾವಣೆಯ ಫಲಿತಾಂಶ ಮರುಕಳಿಸಲಿದೆ ಎಂದು ಎಚ್ಚರಿಸಿದರು.

ಐಸಿಸಿ ಟಿ20 ರ‍್ಯಾಂಕಿಂಗ್ ಪಟ್ಟಿ ಪ್ರಕಟ: ಭಾರತವನ್ನು ಹಿಂದಿಕ್ಕಿದ ಪಾಕ್
Loading...

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ಟಿ20 ರ್ಯಾಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ನೂತನ ಪಟ್ಟಿಯಲ್ಲಿ ಟೀಂ ಇಂಡಿಯಾ ದ್ವಿತೀಯಾ ಸ್ಥಾನ ಪಡೆದರೆ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಮೊದಲ ಸ್ಥಾನವನ್ನು ಅಲಂಕರಿಸಿದೆ. 135 ಪಾಯಿಂಟ್​ಗಳೊಂದಿಗೆ ಪಾಕ್​ ಮೊದಲ ಸ್ಥಾನದಲ್ಲಿದ್ದರೆ, ಭಾರತ 122 ಪಾಯಿಂಟ್ ಗಳಿಸಲು ಮಾತ್ರ ಶಕ್ತವಾಗಿದೆ. ಇನ್ನು ಆಸ್ಟ್ರೇಲಿಯಾ 120 ಪಾಯಿಂಟ್​ ಗಳಿಸಿ ಮೂರನೇ, ಇಂಗ್ಲೆಂಡ್ 199 ಪಾಯಿಂಟ್​ಗಳೊಂದಿಗೆ ನಾಲ್ಕನೇ ಹಾಗೂ ದಕ್ಷಿಣ ಆಫ್ರಿಕಾ 118 ಪಾಯಿಂಟ್ ಪಡೆದು ಐದನೇ ಸ್ಥಾನ ಪಡೆದುಕೊಂಡಿದೆ.

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626