Morning Digest: ಇಂದು 2nd ಪಿಯು & ಸಿಇಟಿ ರಿಸಲ್ಟ್​, ಪಂಜಾಬ್ ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ; ಬೆಳಗಿನ ಟಾಪ್​ ನ್ಯೂಸ್​ಗಳು

Top News of the day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. Karnataka Weather Today: ರಾಜ್ಯದಲ್ಲಿ ಮುಂದುವರೆಯಲಿದೆ ವರುಣನ ಆರ್ಭಟ -ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ 

  Karnataka Rains Today:ಬೆಂಗಳೂರು(ಸೆ.20):ಕಳೆದ ಒಂದು ತಿಂಗಳಿನಿಂದ ಕರ್ನಾಟಕದಲ್ಲಿ ಮುಂಗಾರು ಮಳೆಯ( Rainfall) ಅಬ್ಬರ ಹೆಚ್ಚಾಗಿದೆ. ಸೆಪ್ಟೆಂಬರ್ ಮೊದಲ ವಾರದಿಂದ ರಾಜ್ಯದ ಹಲವೆಡೆ ಭಾರೀ ಮಳೆಯಾಗಿತ್ತು. ಕಳೆದ 2 ವಾರಗಳಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ.ಆದರೆ ಈಗ 4 ದಿನಗಳಿಂದ ಕೊಂಚ ಬಿಡುವು ಪಡೆದಿದ್ದ ವರುಣನ ಆರ್ಭಟ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೆ ಸೆಪ್ಟೆಂಬರ್ 18ರಿಂದ ಭಾರೀ ಮಳೆಯ ನಿರೀಕ್ಷೆ ಇತ್ತು, ಆದರೆ ನಿರೀಕ್ಷೆಯಂತೆ ಮಳೆಯಾಗಿರಲಿಲ್ಲ.

  2.Punjab Crisis: ಇಂದು ಪಂಜಾಬಿನ ಮೊದಲ ದಲಿತ ಸಿಎಂ ಆಗಿ ಚರಣ್​ಜೀತ್ ಸಿಂಗ್ ಚನ್ನಿ ಪ್ರಮಾಣ ವಚನ ಸ್ವೀಕಾರ

  ಅಮೃತಸರ(ಸೆ. 20): ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarindar Sing) ರಾಜೀನಾಮೆಯಿಂದ ತೆರವಾಗಿರುವ ಪಂಜಾಬ್ ಮುಖ್ಯಮಂತ್ರಿ (Punjab Chief Minister) ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ಮತ್ತು ಸುಖಜಿಂದರ್ ಸಿಂಗ್ ರಾಂಧವ ಹೆಸರುಗಳು ದಟ್ಟವಾಗಿ ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ (Congress High Command) ಚರಣ್​ಜೀತ್ ಸಿಂಗ್ ಚನ್ನಿ (Charanjith Sing Channi) ಅವರನ್ನು ಆಯ್ಕೆ ಮಾಡಿದೆ. ಭಾನುವಾರ ಸಂಜೆ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ (Punjab Congress In Charge Harish Rawath) ಅವರು ಚರಣ್​ಜೀತ್ ಸಿಂಗ್ ಚನ್ನಿ ಮುಂದಿನ ಪಂಜಾಬ್ ಸಿಎಂ ಎಂದು ಹೆಸರು ಪ್ರಕಟಿಸಿದ್ದರು.‌ ಇಂದು 58 ವರ್ಷದ ಚರಣ್​ಜೀತ್ ಸಿಂಗ್ ಚನ್ನಿ ಪಂಜಾಬಿನ ಮೊದಲ ದಲಿತ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

  3.Karnataka CET Result Today: ಇಂದು ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡೋಕೆ ಹೀಗೆ ಮಾಡಿ

  ಬೆಂಗಳೂರು(ಸೆ.20): 2021-22ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ(Karnataka CET Result) ಫಲಿತಾಂಶವು ಇಂದು (ಸೆಪ್ಟೆಂಬರ್ 20) ಪ್ರಕಟವಾಗಲಿದೆ. ಹಾಗೆಯೇ ಕೌನ್ಸೆಲಿಂಗ್(Counselling ) ಪ್ರಕ್ರಿಯೆಯು ಅಕ್ಟೋಬರ್​​ನಿಂದ ಪ್ರಾರಂಭವಾಗಲಿದೆ. ಈ ವರ್ಷ ಒಟ್ಟು 2,01,834 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. 1.89 ಲಕ್ಷ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದು, ಶೇ.92.90% ಹಾಜರಾತಿ ದಾಖಲಾಗಿದೆ. ಅದೇ ರೀತಿ 1.62 ಲಕ್ಷ ವಿದ್ಯಾರ್ಥಿಗಳು ಜೀವಶಾಸ್ತ್ರ ಪರೀಕ್ಷೆ ಬರೆದಿದ್ದು ಶೇ.80.48% ಹಾಜರಾತಿ ದಾಖಲಾಗಿದೆ. 1.93 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದು ಶೇ.95.88% ಹಾಜರಾತಿ ದಾಖಲಾಗಿದೆ. 1.93 ಲಕ್ಷ ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದು ಶೇ.95.91% ಹಾಜರಾತಿ ದಾಖಲಾಗಿದೆ.

  4.Karnataka PUC Result: ಇಂದು ದ್ವಿತೀಯ ಪಿಯು ಫಲಿತಾಂಶ- ರಿಸಲ್ಟ್​ ನೋಡಲು ಇಲ್ಲಿ ಕ್ಲಿಕ್ ಮಾಡಿ.

  ಕೊರೊನಾ (Coronavirus) ಕಾರಣ ದ್ವಿತೀಯ ಪಿಯು ಪರೀಕ್ಷೆ (2nd PUC)ರದ್ದಾಗಿದ್ದ ಪಿಯುಸಿ ಫಲಿತಾಂಶವನ್ನು ಪ್ರಥಮ ಪಿಯುಸಿ ಮತ್ತು ಎಸ್​ಎಸ್​ಎಲ್ ಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂಕ ನಿಗದಿಗೊಳಿಸಲು ತೀರ್ಮಾನಿಸಲಾಗಿತ್ತು. ಜತೆಗೆ ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕಗಳು ಮತ್ತು ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಿ ಫಲಿತಾಂಶವನ್ನು ಘೋಷಣೆ ಮಾಡಲಾಗಿತ್ತು. ಆದರೆ ಹಲವಾರು ವಿದ್ಯಾರ್ಥಿಗಳು ಆ ಫಲಿತಾಂಶವನ್ನು ಒಪ್ಪಿರಲಿಲ್ಲ. ಅದನ್ನು ತಿರಸ್ಕರಿಸಿ ಪರೀಕ್ಷೆ ಬರೆದಿದ್ದರು. ಅದರ ಫಲಿತಾಂಶ ಇಂದು ಘೋಷಣೆಯಾಗಲಿದೆ.

  5.CoronaVirus| ದೇಶದಲ್ಲಿ ಶೇ.15 ರಷ್ಟು ಕುಸಿತ ಕಂಡ ಕೊರೋನಾ ಕೇಸ್, 6 ತಿಂಗಳಲ್ಲೇ ಅತೀ ಕಡಿಮೆ; ದೆಹಲಿಯಲ್ಲಿ ಶೂನ್ಯ ಸಾವು!

  ನವ ದೆಹಲಿ (ಸೆಪ್ಟೆಂಬರ್​ 20); ಭಾರತದಲ್ಲಿ ದಿನೇ ದಿನೇ ಕೊರೋನಾ (CoronaVirus) ಪ್ರಕರಣಗಳು ಇಳಿಕೆಯಾಗುತ್ತಲೇ ಇದೆ. 6 ತಿಂಗಳಲ್ಲೇ ಮೊದಲ ಬಾರಿಗೆ ಕೊರೋನಾ ಪ್ರಕರಣಗಳ ಸಂಖ್ಯೆ ಶೇ. 15 ರಷ್ಟು ಇಳಿಕೆ ಕಂಡಿದೆ. ಅಲ್ಲದೆ, ದೆಹಲಿಯಲ್ಲಿ (Delhi) ಇದೇ ಮೊದಲ ಬಾರಿಗೆ ಕೊರೋನಾದಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿಯಾಗಿದೆ. ಭಾನುವಾರ ಗಣೇಶ ಚತುರ್ಥಿಯಿಂದಾಗಿ (Ganesh Chaturthi 2021) ದೇಶವು ಹಲವಾರು ಭಾಗಗಳಲ್ಲಿ ಕೋವಿಡ್ -19 ಪ್ರೋಟೋಕಾಲ್‌ಗಳ ನಡುವೆಯೂ ಜನಸಮೂಹಕ್ಕೆ ಸಾಕ್ಷಿಯಾಗಿತ್ತು. ಹೀಗಾಗಿ ಕೊರೋನಾ ಪ್ರಕರಣಗಳ ಸಂಖ್ಯೆ ಅಧಿಕವಾಗಲಿದೆ ಎನ್ನಲಾಗಿತ್ತು. ಆದರೆ, ಈಗ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳು ಕುತೂಹಲಕ್ಕೆ ಕಾರಣವಾಗಿದೆ.
  Published by:Latha CG
  First published: