• Home
  • »
  • News
  • »
  • state
  • »
  • Top 5 News: ಕೆರೆ ಕಾಮೇಗೌಡರು ಇನ್ನಿಲ್ಲ, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ, ಎಬೋಲಾ ಅಬ್ಬರ; ಬೆಳಗಿನ ಟಾಪ್ ನ್ಯೂಸ್

Top 5 News: ಕೆರೆ ಕಾಮೇಗೌಡರು ಇನ್ನಿಲ್ಲ, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ, ಎಬೋಲಾ ಅಬ್ಬರ; ಬೆಳಗಿನ ಟಾಪ್ ನ್ಯೂಸ್

 ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • News18 Kannada
  • Last Updated :
  • Karnataka, India
  • Share this:

1.Congress President: ತರೂರ್ ಹಾಗೂ ಖರ್ಗೆ ಇವರಲ್ಲಿ ಕಾಂಗ್ರೆಸ್​ ಅಧ್ಯಕ್ಷರಾಗೋರು ಯಾರು? ಇಂದು ಎಲೆಕ್ಷನ್!


ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ (Congress presidential election) ನಡೆಸಿದೆ. ಕಾಂಗ್ರೆಸ್‌ನ ಹಿರಿಯ ನಾಯಕ, ಕರ್ನಾಟಕ ಮೂಲದ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಹಾಗೂ ಸಂಸದ ಶಶಿ ತರೂರ್ (Shashi Tharoor) ನಡುವೆ ಸ್ಪರ್ಧೆ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ ದೇಶದ ರಾಜಕೀಯದಲ್ಲಿ ದೊಡ್ಡ ಹೆಸರು. ಅದರಲ್ಲೂ ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ ಅನುಭವವವೂ ಇದೆ. ಜೊತೆಗೆ ಹಿಂದಿನಿಂದಲೂ ಖರ್ಗೆ ಗಾಂಧಿ ಕುಟುಂಬದ (Gandhi Family) ಆಪ್ತರಲ್ಲಿ ಒಬ್ಬರು. ಹೀಗಾಗಿ ಗಾಂಧಿ ಫ್ಯಾಮಿಲಿ ಸಲಹೆಯಂತೆ ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಅಕ್ಟೋಬರ್ 19ರಂದು ಮತ ಎಣಿಕೆ (Counting) ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿದೆ.


2. Kere Kamegowda: ಆಧುನಿಕ ಕೆರೆ ನಿರ್ಮಾತೃ ಖ್ಯಾತಿಯ ಕೆರೆ ಕಾಮೇಗೌಡ ಇನ್ನಿಲ್ಲ


Kere Kamegowda: ಆಧುನಿಕ ಕೆರೆ ನಿರ್ಮಾತೃ ಖ್ಯಾತಿಯ ಕೆರೆ ಕಾಮೇಗೌಡ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮಳವಳ್ಳಿಯ ಕಲ್ಮನೆ ಕಾಮೇಗೌಡರು ಅನಾರೋಗ್ಯದಿಂದ ಬಳಲುತ್ತಿದ್ದರು. ಮಳವಳ್ಳಿ ತಾಲೂಕಿನ ದಾಸನದೊಡ್ಡಿ ನಿವಾಸದಲ್ಲಿ ಕಾಮೇಗೌಡರು ನಿಧನರಾಗಿದ್ದಾರೆ.


pond man kere kamegowda passes away mrq
ಕೆರೆ ಕಾಮೇಗೌಡರು


ರಾಜ್ಯೋತ್ಸವ ಪ್ರಶಸ್ತಿ, ಬಸವ ಪ್ರಶಸ್ತಿ, ಸೇರಿದಂತೆ ಪ್ರಧಾನಿ ಮೋದಿ ಅವರಿಂದಲೂ ಪ್ರಶಂಸೆ ಪಡೆದಿದ್ದರು. ಕುಂದೂರು ಬೆಟ್ಟದಲ್ಲಿ ಅಂತರ್ಜಲ ವೃದ್ಧಿಗಾಗಿ 15ಕ್ಕೂ ಹೆಚ್ಚು ಕೆರೆ ನಿರ್ಮಿಸಿ ಆಧುನಿಕ ಭಗೀರಥ ಎಂದೇ ಖ್ಯಾತಿ ಪಡೆದಿದ್ದರು. ಕುಂದೂರು ಬೆಟ್ಟದಲ್ಲಿ ಸಾವಿರಾರು ಮರ ಗಿಡ ನೆಟ್ಟು ಬೆಳೆಸಿದ್ದ ಪರಿಸರ ಪ್ರೇಮಿ.


3.Ebola Outbreak: ಉಗಾಂಡಾದಲ್ಲಿ ಎಬೋಲಾ ಅಬ್ಬರ, ರಾತ್ರಿ ಕರ್ಫ್ಯೂ ಜಾರಿ, ಧಾರ್ಮಿಕ ಸ್ಥಳಗಳಿಗೆ ಬೀಗ!


ಕೊರೋನಾ ಅಬ್ಬರಕ್ಕೆ (Coronavirus) ಇಡೀ ದೇಶ ಸುಮಾರು ಎರಡು ವರ್ಷ ನಲುಗಿದೆ. ಈಗಲೂ ಕೆಲವೊಂದು ಕೊರೋನಾ ಪ್ರಕರಣಗಳು ಸದ್ದು ಮಾಡುತ್ತಿವೆ. ಆದರೀಗ ಕೊರೋನಾ ಬೆನ್ನಲ್ಲೇ ಎಬೋಲಾ (Ebola) ಆಫ್ರಿಕಾದ ಉಗಾಂಡಾದಲ್ಲಿ (Africa's Uganda_ ಹರಡಲಾರಂಭಿಸಿದೆ. ಅದರ ಹರಡುವಿಕೆಯನ್ನು ತಡೆಗಟ್ಟಲು, ಉಗಾಂಡಾದ ಅಧ್ಯಕ್ಷ ಯೊವೆರಿ ಮುಸೆವೆನಿ ಅವರು ಪೀಡಿತ ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ (Night Curfew) ಜಾರಿಗೊಳಿಸುವುದಾಗಿ ಘೋಚಿಸಿದ್ದಾರೆ. ಎಬೋಲಾ ಪೀಡಿತ ಎರಡು ಜಿಲ್ಲೆಗಳಲ್ಲಿ ಪೂಜಾ ಸ್ಥಳಗಳು ಮತ್ತು ಮನರಂಜನಾ ಸ್ಥಳಗಳನ್ನು ಮುಚ್ಚಲಾಗುತ್ತದೆ ಮತ್ತು ಚಟುವಟಿಕೆಗಳನ್ನು 21 ದಿನಗಳವರೆಗೆ ನಿರ್ಬಂಧಿಸಲಾಗಿದೆ.


Morning Digest news 17 october 2022 have quick look of important news today mrq
ಉಗಾಂಡಾದಲ್ಲಿ ಎಬೋಲಾ ಅಬ್ಬರ


4.Gold-Silver Price Today: ಏರಿಕೆ ಹಾದಿಯಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಕೊಂಚ ಕುಸಿತ: ಇಂದಿನ ಬೆಳ್ಳಿ-ಬಂಗಾರದ ದರ ಹೀಗಿದೆ


ಬಂಗಾರ-ಬೆಳ್ಳಿ ದರದಲ್ಲಿ ಸ್ಥಿರತೆ ಕಾಣುವುದು ತುಂಬಾ ಅಪರೂಪ, ಈ ವಿದ್ಯಾಮಾನ ಯಾವಾಗಲೂ ಹಾವು-ಏಣಿ ಆಟವನ್ನು ನಡೆಸುತ್ತಲೇ ಇರುತ್ತದೆ. ನಿನ್ನೆ ಇದ್ದ ಬೆಲೆ ನಾಳೆ ಇರಲ್ಲ, ನಾಳೆ ಇದ್ದ ಬೆಲೆ ನಾಡಿದ್ದು ಇರಲ್ಲ. ಹೀಗಾಗಿ ಬೆಲೆ ಇಳಿಕೆ ದಿನವೇ ಬಂಗಾರ ಖರೀದಿಗೆ ಉತ್ತಮ ದಿನವಾಗಿದೆ. ಅಂದಹಾಗೆ ಇಂದು ಚಿನ್ನದ ಬೆಲೆ ಪ್ರತಿ ಒಂದು ಗ್ರಾಂ ಬೆಲೆ ರೂ.4,645 ಆಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.


Morning Digest news 17 october 2022 have quick look of important news today mrq
ಸಾಂದರ್ಭಿಕ ಚಿತ್ರ


ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ, ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,645 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,067 ಆಗಿದೆ. ಇದೇ ವೇಳೆ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,160 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,536 ಆಗಿದೆ.


5.Praveen Nettar: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಹಾಜರಾದ ಪ್ರವೀಣ್ ನೆಟ್ಟಾರು ಪತ್ನಿ


Praveen Nettar: ಬಿಜೆಪಿ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯ ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗದಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ.


Morning Digest news 17 october 2022 have quick look of important news today mrq
ಸಿಎಂ ಭೇಟಿ ಮಾಡಿದ ನೂತನ ಕುಮಾರಿ


ಸಿಎಂ ಬಸವರಾಜ್ ಬೊಮ್ಮಾಯಿ ಆದೇಶದ ಹಿನ್ನೆಲೆ ನೂತನ ಕುಮಾರಿ ಅವರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಗಿದೆ. ಪ್ರವೀಣ್ ನೆಟ್ಟಾರು ಕೊಲೆಯ ಬಳಿಕ ನೂತನ ಕುಮಾರಿ ಅವರಿಗೆ ಸರ್ಕಾರಿ ಕೆಲಸ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು.

Published by:Mahmadrafik K
First published: